AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಬಂಧಗಳಿಲ್ಲದ ರಾಷ್ಟ್ರಗಳಿಂದ ತೈಲ ಖರೀದಿಸಲಿದೆ; ಭಾರತದ ಮೂಲಗಳಿಂದ ಸ್ಪಷ್ಟನೆ

ಸೋಮವಾರ ರಾತ್ರಿ ದಿಢೀರನೆ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಫೋನ್ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಾಗಿ ಘೋಷಿಸಿದ್ದರು. ರಷ್ಯಾದ ತೈಲ ಖರೀದಿಗಾಗಿ ಭಾರತದ ಮೇಲೆ ಹೇರಲಾಗಿದ್ದ ಶೇ. 25ರಷ್ಟು ಹೆಚ್ಚುವರಿ ಸುಂಕವನ್ನು ರದ್ದುಗೊಳಿಸಿ, ಈಗಾಗಲೇ ಇರುವ ಶೇ. 25ರಷ್ಟು ಸುಂಕವನ್ನು ಶೇ. 18ಕ್ಕೆ ಇಳಿಸುವುದಾಗಿ ಅಮೆರಿಕ ಘೋಷಿಸಿತ್ತು. ಇದರ ಬೆನ್ನಲ್ಲೇ ಅಮೆರಿಕ ಭಾರತಕ್ಕೆ ಕೆಲವು ಷರತ್ತುಗಳನ್ನು ಕೂಡ ಹಾಕಿದೆ ಎನ್ನಲಾಗಿದೆ.

ನಿರ್ಬಂಧಗಳಿಲ್ಲದ ರಾಷ್ಟ್ರಗಳಿಂದ ತೈಲ ಖರೀದಿಸಲಿದೆ; ಭಾರತದ ಮೂಲಗಳಿಂದ ಸ್ಪಷ್ಟನೆ
Trump And Modi Image Credit source: TV9
ಸುಷ್ಮಾ ಚಕ್ರೆ
|

Updated on: Feb 03, 2026 | 3:42 PM

Share

ನವದೆಹಲಿ, ಫೆಬ್ರವರಿ 3: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಪ್ರಧಾನಿ ನರೇಂದ್ರ ಮೋದಿ (PM Modi) ಅವರ ನಡುವೆ ನಡೆದ ಭಾರತ-ಯುಎಸ್ ವ್ಯಾಪಾರ ಒಪ್ಪಂದವು ಭಾರತೀಯ ರೈತರ ಹಿತಾಸಕ್ತಿಗಳಿಗೆ ಧಕ್ಕೆ ತರುವುದಿಲ್ಲ ಎಂದು ಭಾರತ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಹಾಗೇ, ಯಾವುದೇ ನಿರ್ಬಂಧಗಳಿಲ್ಲದ ದೇಶಗಳಿಂದ ಭಾರತ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರಿಸುತ್ತದೆ ಮೂಲಗಳು ಸ್ಪಷ್ಟಪಡಿಸಿವೆ.

ಭಾರತದಲ್ಲಿ ಇಲ್ಲಿಯವರೆಗೆ ರಕ್ಷಿಸಲ್ಪಟ್ಟಿರುವ ಕೃಷಿ ಮತ್ತು ಡೈರಿಯಲ್ಲಿನ ಸೂಕ್ಷ್ಮ ವಲಯಗಳನ್ನು ರಕ್ಷಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ, ವ್ಯಾಪಾರ ಒಪ್ಪಂದದ ಅಡಿಯಲ್ಲಿ ಬದ್ಧತೆಗಳ ಭಾಗವಾಗಿ ಭಾರತವು ಕೆಲವು ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶವನ್ನು ನೀಡಿತ್ತು. ಇದರ ನಡುವೆ ಭಾರತ ಇತ್ತೀಚೆಗೆ ಯುರೋಪಿಯನ್ ಒಕ್ಕೂಟಕ್ಕೆ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಕೃಷಿ ಉತ್ಪನ್ನಗಳಿಗೆ ಆಯ್ದ ಮಾರುಕಟ್ಟೆ ಪ್ರವೇಶವನ್ನು ನೀಡಿತು.

ಇದನ್ನೂ ಓದಿ: ಪ್ರಧಾನಿ ಮೋದಿ ಜತೆಗೆ ವೆನೆಜುವೆಲಾ ಅಧ್ಯಕ್ಷೆ ಒಪ್ಪಂದ: ಇಂಧನ ಬೆಲೆ ಕಡಿಮೆಯಾಗುವ ಸಾಧ್ಯತೆ?

ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲು, ಅದರ ಬದಲಿಗೆ ಅಮೆರಿಕ ಮತ್ತು ವೆನೆಜುವೆಲಾದಿಂದ ತೈಲವನ್ನು ಖರೀದಿಸಲು ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಅಮೆರಿಕ ಭಾರತೀಯ ಸರಕುಗಳ ಮೇಲಿನ ತನ್ನ ಸುಂಕವನ್ನು ಪ್ರಸ್ತುತ ಶೇ. 50ರಿಂದ ಶೇ. 18ಕ್ಕೆ ಇಳಿಸುವುದಾಗಿ ಘೋಷಿಸಿದೆ. ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇ. 25ರಷ್ಟು ದಂಡನಾತ್ಮಕ ಸುಂಕಗಳನ್ನು ವಿಧಿಸಿದ ನಂತರವೂ ಭಾರತವು ದಿನಕ್ಕೆ ಸುಮಾರು 1.5 ಮಿಲಿಯನ್ ಬ್ಯಾರೆಲ್ ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ಒಟ್ಟಾರೆ ಭಾರತೀಯ ಆಮದುಗಳ ಮೂರನೇ ಒಂದು ಭಾಗಕ್ಕಿಂತ ಹೆಚ್ಚಾಗಿದೆ.

ಈ ದರದ ಆಧಾರದ ಮೇಲೆ ಭಾರತವು ನಿರ್ಬಂಧಗಳ ಅಡಿಯಲ್ಲಿಲ್ಲದ ವಿಶ್ವದಾದ್ಯಂತದ ದೇಶಗಳಿಂದ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರಿಸುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. “ನಿರ್ಬಂಧಗಳು ಜಾರಿಯಲ್ಲಿದ್ದಾಗ ನಾವು ವೆನೆಜುವೆಲಾದಿಂದ ತೈಲ ಖರೀದಿಸಲಿಲ್ಲ. ಈಗ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ನಾವು ಈಗ ತೈಲವನ್ನು ಖರೀದಿಸುತ್ತೇವೆ” ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಏಷ್ಯನ್ ದೇಶಗಳ ಪೈಕಿ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು…

“ಪ್ರಧಾನಿ ಮೋದಿ 500 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿನ ಅಮೆರಿಕದ ಇಂಧನ, ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮತ್ತು ಇತರ ಹಲವು ಉತ್ಪನ್ನಗಳ ಖರೀದಿಗೆ ಬದ್ಧರಾಗಿದ್ದಾರೆ” ಎಂದು ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಹೇಳಿದ್ದರು. ಭಾರತದ ಜೊತೆಗಿನ ವ್ಯಾಪಾರ ಒಪ್ಪಂದದ ಬಳಿಕ ಅವರು ಈ ಘೋಷಣೆ ಮಾಡಿದ್ದರು.

“ನಮಗೆ, ನಮ್ಮ ರೈತರ ಕಲ್ಯಾಣವೇ ಅತಿ ಮುಖ್ಯ. ಭಾರತವು ತನ್ನ ರೈತರು, ಡೈರಿ ವಲಯ ಮತ್ತು ಮೀನುಗಾರರ ಯೋಗಕ್ಷೇಮದ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಅದಕ್ಕಾಗಿ ನಾನು ಭಾರೀ ಬೆಲೆಯನ್ನು ತೆರಬೇಕಾಗುತ್ತದೆ ಎಂದು ನನಗೆ ಖಂಡಿತ ತಿಳಿದಿದೆ” ಎಂದು ಪ್ರಧಾನಿ ಮೋದಿ ಕಳೆದ ವರ್ಷ ಆಗಸ್ಟ್‌ನಲ್ಲಿ ಹೇಳಿದ್ದರು. ಅದೇ ಮಾತನ್ನು ಭಾರತ ಮತ್ತೆ ಪುನರುಚ್ಛರಿಸಿದೆ. ಭಾರತ ಯಾವುದೇ ಕಾರಣಕ್ಕೂ ರೈತರ ಹಿತಾಸಕ್ತಿಯ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ. ಇಲ್ಲಿಯವರೆಗೆ ರಕ್ಷಿಸಲ್ಪಟ್ಟ ಕೃಷಿ ಮತ್ತು ಡೈರಿಯಲ್ಲಿನ ಸೂಕ್ಷ್ಮ ವಲಯಗಳನ್ನು ರಕ್ಷಿಸಲಾಗುವುದು ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?