‘ನಾನು ಹೈಡ್ರೋಜನ್​ ಬಾಂಬ್ ಸ್ಫೋಟಿಸುತ್ತೇನೆ‘-ಫಡ್ನವೀಸ್​ಗೆ ನವಾಬ್​ ಮಲ್ಲಿಕ್​ ತಿರುಗೇಟು !

ಮಹಾರಾಷ್ಟ್ರ ಪ್ರತಿಪಕ್ಷ ನಾಯಕರಾಗಿರುವ ದೇವೇಂದ್ರ ಫಡ್ನವೀಸ್​ಗೆ ಕೂಡ ಭೂಗತ ಜಗತ್ತಿನ ನಂಟು ಇದೆ ಎಂಬುದನ್ನು ನಾನು ಸಾಬೀತು ಪಡಿಸುತ್ತೇನೆ ಎಂದು ನವಾಬ್​ ಮಲ್ಲಿಕ್​ ಹೇಳಿದ್ದಾರೆ.

‘ನಾನು ಹೈಡ್ರೋಜನ್​ ಬಾಂಬ್ ಸ್ಫೋಟಿಸುತ್ತೇನೆ‘-ಫಡ್ನವೀಸ್​ಗೆ ನವಾಬ್​ ಮಲ್ಲಿಕ್​ ತಿರುಗೇಟು !
ನವಾಬ್​ ಮಲ್ಲಿಕ್​
Follow us
TV9 Web
| Updated By: Lakshmi Hegde

Updated on: Nov 09, 2021 | 5:09 PM

ಮಹಾರಾಷ್ಟ್ರ ರಾಜಕೀಯದಲ್ಲೀಗ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್​ ಮತ್ತು ಸಚಿವ ನವಾಬ್​ ಮಲ್ಲಿಕ್​ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ದೇವೇಂದ್ರ ಫಡ್ನವೀಸ್​​ಗೆ ಮಾದಕ ದ್ರವ್ಯ ಪೆಡ್ಲರ್​​ಗಳ ಜತೆ ಲಿಂಕ್​ ಇದೆ ಎಂದು ಆರೋಪ ಮಾಡಿದ್ದ ನವಾಬ್​ ಮಲ್ಲಿಕ್​ಗೆ ಇಂದು ಫಡ್ನವೀಸ್​ ಶಾಕ್​ ಕೊಟ್ಟಿದ್ದಾರೆ. ದೇವೇಂದ್ರ ಫಡ್ನವೀಸ್​ಗೆ ಭೂಗತ ಲೋಕದ ನಂಟಿದೆ ಎಂದು ಹೇಳಿ, ಅವರು ಮುಂಬೈ ಸ್ಫೋಟದ ಆರೋಪಿಗಳೊಟ್ಟಿಗೆ ಆಸ್ತಿ ವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಕೆಲವು ಸಾಕ್ಷಿಗಳನ್ನೂ ಪ್ರಸ್ತುತಪಡಿಸಿದ್ದಾರೆ. 

ಅದಕ್ಕೆ ಪ್ರತಿಕ್ರಿಯೆ ನೀಡಿರುವ ನವಾಬ್​ ಮಲ್ಲಿಕ್​, ಮಹಾರಾಷ್ಟ್ರ ಪ್ರತಿಪಕ್ಷ ನಾಯಕರಾಗಿರುವ ದೇವೇಂದ್ರ ಫಡ್ನವೀಸ್​ಗೆ ಕೂಡ ಭೂಗತ ಜಗತ್ತಿನ ನಂಟು ಇದೆ ಎಂಬುದನ್ನು ನಾನು ಸಾಬೀತು ಪಡಿಸುತ್ತೇನೆ. ಈ ಸಂಬಂಧ ಹೈಡ್ರೋಜನ್​ ಬಾಂಬ್​ ಸ್ಫೋಟಿಸುತ್ತೇನೆ ಎಂದು ಹೇಳಿದ್ದಾರೆ.  ಫಡ್ನವೀಸ್​ ಸುದ್ದಿಗೋಷ್ಠಿ ಬಳಿಕ ಮಾತನಾಡಿದ ಅವರು, ಫಡ್ನವೀಸ್​ಗೆ ಅಂಡರ್​ವರ್ಲ್ಡ್​​ ಲಿಂಕ್​ ಇರುವುದನ್ನು ನಾನೂ ಸಾಕ್ಷಿ ಸಮೇತ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿದ್ದ ದೇವೇಂದ್ರ ಫಡ್ನವೀಸ್​, ನವಾಬ್​ ಮಲ್ಲಿಕ್​ಗೆ ಭೂಗತ ಪಾತಕಿಗಳ ಸಂಪರ್ಕವಿದೆ. 1993ರಲ್ಲಿ ನಡೆದ ಮುಂಬೈ ಸ್ಫೋಟದ ಆರೋಪಿಗಳಾದ ಸಲೀಂ ಪಟೇಲ್​ ಮತ್ತು ಸರ್ದಾರ್​ ಖಾನ್​​ ಎಂಬುವರಿಂದ ಅವರು ಕುರ್ಲಾದಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ಅದಕ್ಕೆ ಗೌವಾಲಾ ಕಾಂಪೌಂಡ್​ ಎಂದು ಹೆಸರಿಡಲಾಗಿದೆ. 30 ಲಕ್ಷ ರೂಪಾಯಿ ಆಸ್ತಿಗೆ 20 ಲಕ್ಷ ರೂಪಾಯಿ ಪಾವತಿಸಲಾಗಿದೆ. ಈ ಒಪ್ಪಂದಕ್ಕೆ ಸಹಿ ಹಾಕಿದವರಲ್ಲಿ ಒಬ್ಬರು ನವಾಬ್​ ಮಲ್ಲಿಕ್ ಪುತ್ರ ಎಂದು ಆರೋಪಿಸಿದ್ದರು. ಈ ಸಲೀಂ ಪಟೇಲ್​ ಗ್ಯಾಂಗ್​ಸ್ಟರ್​ ದಾವೂದ್ ಇಬ್ರಾಹಿಂನ ಸಹಾಯಕನೇ ಆಗಿದ್ದಾನೆ. ದಾವೂಬ್​ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕಾರ್​​ ಕಾರಿನ ಡ್ರೈವರ್ ಆಗಿದ್ದ. 1993ರ ಮುಂಬೈ ಸ್ಫೋಟದ ಮಾಸ್ಟರ್​ ಮೈಂಡ್​ ಆಗಿರುವ ದಾವೂದ್​ ಇಬ್ರಾಹಿಂ ಆಪ್ತ ಸಲೀಂ ಪಟೇಲ್​ ಕೂಡ ಭೂಗತ ಜಗತ್ತಿನಲ್ಲಿ ಇದ್ದವನೇ ಆಗಿದ್ದಾನೆ.  ಈ ಸಲೀಂ ಪಟೇಲ್​ ಮತ್ತು ಹಸೀನಾ ಇಬ್ಬರೂ ಸೇರಿ ಭೂ ಮಾಫಿಯಾ ನಡೆಸುತ್ತಿದ್ದರು. ಭೂಮಿ ಕಬಳಿಸುವುದೇ ಅವರ ಕಾಯಕವಾಗಿತ್ತು ಎಂದೂ ಹೇಳಿದ್ದರು.

ಇದನ್ನೂ ಓದಿ: ಹೇಳಿದಂತೆ ನಡೆದ ದೇವೇಂದ್ರ ಫಡ್ನವೀಸ್​; ಮುಂಬೈ ಸ್ಫೋಟದ ಆರೋಪಿಗಳೊಂದಿಗೆ ನವಾಬ್​ ಮಲ್ಲಿಕ್​ ಆಸ್ತಿ ವ್ಯವಹಾರದ ಬಗ್ಗೆ ಮಾಹಿತಿ ಬಹಿರಂಗ