Covid Vaccines: ಭಾರತದಲ್ಲಿ ಬಳಕೆಯಾಗದೆ ಉಳಿದ ಕೊವಿಡ್ ಲಸಿಕೆಗಳ ಪ್ರಮಾಣ 15 ಕೋಟಿ!

ಭಾರತದಲ್ಲಿ 15 ಕೋಟಿ ಡೋಸ್ ಲಸಿಕೆ ಬಳಕೆಯಾಗದೇ ಹಾಗೇ ಉಳಿಕೆಯಾಗಿದೆ. ಕೇಂದ್ರ ಸರ್ಕಾರವು ಇದುವರೆಗೂ 116 ಕೋಟಿ ಡೋಸ್ ಲಸಿಕೆಯನ್ನು ಎಲ್ಲ ರಾಜ್ಯಗಳಿಗೆ ನೀಡಿದೆ. ಆದರೆ, ದೇಶದ ಸರ್ಕಾರಿ, ಖಾಸಗಿ ವಲಯದಲ್ಲಿ ಲಸಿಕೆ ಬಳಕೆಯಾಗದೇ ಬಾಕಿ ಉಳಿಕೆಯಾಗಿದೆ.

Covid Vaccines: ಭಾರತದಲ್ಲಿ ಬಳಕೆಯಾಗದೆ ಉಳಿದ ಕೊವಿಡ್ ಲಸಿಕೆಗಳ ಪ್ರಮಾಣ 15 ಕೋಟಿ!
ಕೊರೊನಾ ಲಸಿಕೆ ಸಾಂಕೇತಿಕ ಚಿತ್ರ
Follow us
S Chandramohan
| Updated By: ಸುಷ್ಮಾ ಚಕ್ರೆ

Updated on: Nov 09, 2021 | 4:32 PM

ನವದೆಹಲಿ: ನಮ್ಮ ಭಾರತ ದೇಶದಲ್ಲಿ ಈ ವರ್ಷದ ಪ್ರಾರಂಭದಲ್ಲಿ ಕೊರೊನಾ ಲಸಿಕೆಗಳ (Coronavirus Vaccination) ತೀವ್ರವಾದ ಕೊರತೆ ಎದುರಿಸಿತ್ತು. ವಿದೇಶಗಳಿಂದ ಲಸಿಕೆಯನ್ನು (Vaccines) ಅಮದು ಮಾಡಿಕೊಳ್ಳುವ ಅನಿವಾರ್ಯತೆ ದೇಶಕ್ಕೆ ಇತ್ತು. ಆದರೆ, ಈಗ ದೇಶದಲ್ಲಿ ಎಲ್ಲ ವಯಸ್ಕರಿಗೂ ಇನ್ನೂ ಎರಡು ಡೋಸ್ ಲಸಿಕೆಯನ್ನು ನೀಡಿಲ್ಲ. ಆದರೆ, ಈಗ ಜನರೇ ಕೊರೊನಾ ಲಸಿಕೆಯನ್ನು ಪಡೆಯಲು ಮುಂದೆ ಬರುತ್ತಿಲ್ಲ. ಇದರಿಂದಾಗಿ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಕೊರೊನಾ ಲಸಿಕೆ ಬಳಕೆಯಾಗದೆ ಹಾಗೇ ಉಳಿದಿವೆ. ಈ ಕೊರೊನಾ ಲಸಿಕೆಗಳ ಬಳಕೆಯ ಅವಧಿ ಪೂರ್ತಿಯಾಗಿ ವ್ಯರ್ಥವಾಗುವ ಭೀತಿ ಕೂಡ ಎದುರಾಗಿದೆ.

ನಮ್ಮ ದೇಶದಲ್ಲಿ ಈ ವರ್ಷದ ಪ್ರಾರಂಭದಲ್ಲಿ ಕೊರೊನಾ ಲಸಿಕೆಗಳ ತೀವ್ರವಾದ ಕೊರತೆ ಇತ್ತು. ಆದರೆ, ಈಗ ದೇಶದಲ್ಲಿ ಕೊರೊನಾ ಲಸಿಕೆಗಳು ಬಳಕೆಯಾಗದೆ ಉಳಿದಿವೆ. ಬಳಕೆಯಾಗದೇ ಇರುವ ಕೊರೊನಾ ಲಸಿಕೆಯು ಅವಧಿ ಪೂರ್ತಿಯಾಗಿ ವ್ಯರ್ಥವಾಗುವ ಭೀತಿ ಕೂಡ ಎದುರಾಗಿದೆ. ಜನರ ಜೀವ ಉಳಿಸುವ ಕೊರೊನಾ ಲಸಿಕೆಗಳನ್ನು ಬಳಕೆ ಮಾಡದೆ, ವ್ಯರ್ಥ ಮಾಡಿದರೆ ಅದೇ ದೊಡ್ಡ ನಿರ್ಲಕ್ಷ್ಯ.

ಭಾರತದಲ್ಲಿ 15 ಕೋಟಿ ಡೋಸ್ ಲಸಿಕೆ ಬಳಕೆಯಾಗದೇ ಹಾಗೇ ಉಳಿಕೆಯಾಗಿದೆ. ಕೇಂದ್ರ ಸರ್ಕಾರವು ಇದುವರೆಗೂ 116 ಕೋಟಿ ಡೋಸ್ ಲಸಿಕೆಯನ್ನು ಎಲ್ಲ ರಾಜ್ಯಗಳಿಗೆ ನೀಡಿದೆ. ಆದರೆ, ದೇಶದ ಸರ್ಕಾರಿ, ಖಾಸಗಿ ವಲಯದಲ್ಲಿ ಲಸಿಕೆ ಬಳಕೆಯಾಗದೇ ಬಾಕಿ ಉಳಿಕೆಯಾಗಿದೆ. ಮುಂಬೈನ ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ಬಳಕೆಗೆ ಬಾಕಿಯಾಗಿದೆ. ಮುಂಬೈನ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 85ರಷ್ಟು ಲಸಿಕೆ ಬಳಕೆಯಾಗಿಲ್ಲ. ಕೊವಿಡ್ ಲಸಿಕೆಯನ್ನು ಶೇ. 10-30ರ ರಿಯಾಯಿತಿ ದರದಲ್ಲಿ ನೀಡಲು ಖಾಸಗಿ ಆಸ್ಪತ್ರೆಗಳು ಸಿದ್ದವಾಗಿವೆ.

ಕೊರೊನಾ ಲಸಿಕೆಯನ್ನು ವಾಪಾಸ್ ನೀಡಲು ಲಸಿಕೆ ಉತ್ಪಾದಕರನ್ನು ಆಸ್ಪತ್ರೆಗಳು ಸಂಪರ್ಕಿಸಿದರೂ ಮಹಾರಾಷ್ಟ್ರ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಖರೀದಿಗೆ ಸಿದ್ಧವಿಲ್ಲ. ಮುಂಬೈನ ಮಲಾಡ್ ನ ಸಂಜೀವಿನಿ ಆಸ್ಪತ್ರೆ, ಆಸ್ಕರ್ ಆಸ್ಪತ್ರೆ‌ ಸೇರಿದಂತೆ ಅನೇಕ ಆಸ್ಪತ್ರೆಗಳಲ್ಲಿ ಲಸಿಕೆ ಮಾರಾಟ ಆಗಿಲ್ಲ. ಎರಡು ಡೋಸ್ ಅವಧಿ ಇಳಿಕೆಗೆ ಖಾಸಗಿ ಆಸ್ಪತ್ರೆಗಳು ಒತ್ತಾಯಿಸಿವೆ. ಆದರೆ, ಎರಡು ಡೋಸ್ ಅವಧಿಯನ್ನು ಇಳಿಕೆ ಮಾಡುವುದಿಲ್ಲ ಎಂದು NTAGI ಮುಖ್ಯಸ್ಥ ಡಾ. ಎನ್. ಕೆ. ಅರೋರಾ ಹೇಳಿದ್ದಾರೆ.

ದೇಶದ ಖಾಸಗಿ ವಲಯದಲ್ಲಿ ಕೋವಿಡ್ ಲಸಿಕೆ ಡೋಸ್‌ಗಳು ಮಾರಾಟವಾಗದೆ ಬಾಕಿ ಉಳಿದಿವೆ. ಕೋಟಿಗಟ್ಟಲೆ ಮೌಲ್ಯದ ಡೋಸ್‌ಗಳು ಬಳಕೆಯ ಅವಧಿ ಪೂರ್ತಿಯಾಗುತ್ತಿದ್ದು ವ್ಯರ್ಥವಾಗುವ ಭೀತಿ ಕೂಡ ಎದುರಾಗಿದೆ. ಖಾಸಗಿ ಆಸ್ಪತ್ರೆಗಳು ಲಸಿಕೆಗಳನ್ನು ಬೃಹತ್ ಪ್ರಮಾಣದಲ್ಲಿ ಖರೀದಿ ಮಾಡುವವರಿಗೆ ಶೇ. 10-30ರಷ್ಟು ರಿಯಾಯಿತಿ ದರದಲ್ಲಿ ತಮ್ಮ ಸ್ಟಾಕ್‌ಗಳನ್ನು ನೀಡಲು ಪ್ರಾರಂಭಿಸಿವೆ. ಏತನ್ಮಧ್ಯೆ, ಹಲವಾರು ಆಸ್ಪತ್ರೆಗಳು ಮಾರಾಟವಾಗದ ದಾಸ್ತಾನುಗಳನ್ನು ಹಿಂದಿರುಗಿಸಲು ಲಸಿಕೆ ಉತ್ಪಾದಕ ಕಂಪನಿಗಳನ್ನು ಸಂಪರ್ಕಿಸಿವೆ.

ಮುಂಬೈ ಆಸ್ಪತ್ರೆಗಳಲ್ಲಿ ಪ್ರಸ್ತುತ ಶೇ. 85ಕ್ಕಿಂತ ಹೆಚ್ಚು ಮಾರಾಟವಾಗದ ಡೋಸ್‌ಗಳು ಬಾಕಿ ಉಳಿದಿವೆ. ಮೇ- ಜೂನ್‌ನಲ್ಲಿ ಖಾಸಗಿ ಆಸ್ಪತ್ರೆಗಳು ಕೊರತೆಯ ಬಿಕ್ಕಟ್ಟನ್ನು ಎದುರಿಸಿದ್ದಕ್ಕಿಂತ ಈಗ ಪರಿಸ್ಥಿತಿ ಭಿನ್ನವಾಗಿದೆ. ಅಕ್ಟೋಬರ್ ವೇಳೆಗೆ ಅವರು 47 ಲಕ್ಷಕ್ಕೂ ಹೆಚ್ಚು ಡೋಸ್‌ಗಳು ಖಾಸಗಿ ಆಸ್ಪತ್ರೆಗಳಲ್ಲಿ ಮಾರಾಟವಾಗದೇ ಬಾಕಿ ಉಳಿದಿದ್ದವು. ಮುಂಬೈ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಅಕ್ಟೋಬರ್‌ನಲ್ಲಿ 3 ಲಕ್ಷಕ್ಕಿಂತ ಕಡಿಮೆ ಕೊರೊನಾ ಲಸಿಕೆ ಡೋಸ್​ಗಳನ್ನು ಜನರಿಗೆ ನೀಡಲಾಗಿದೆ.

ವರದಿಯ ಪ್ರಕಾರ, ಮುಂಬೈನ ಮಲಾಡ್‌ನ ಸಂಜೀವಿನಿ ಆಸ್ಪತ್ರೆಯಲ್ಲಿ 44 ಲಕ್ಷ ರೂಪಾಯಿ ಮೌಲ್ಯದ 7,000 ಡೋಸ್ ಕೋವಿಶೀಲ್ಡ್‌ ಲಸಿಕೆಗಳಿವೆ, ಇಲ್ಲಿಯವರೆಗೆ ಯಾವುದೇ ಖರೀದಿದಾರರು ಸಿಕ್ಕಿಲ್ಲ “ನಾನು ತಯಾರಕರು ಮತ್ತು BMC ಎರಡನ್ನೂ ಸಂಪರ್ಕಿಸಿದ್ದೇನೆ, ಆದರೆ ಯಾರೂ ಲಸಿಕೆಗಳನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ” ಎಂದು ಆಸ್ಪತ್ರೆಯ ನಿರ್ದೇಶಕ ಡಾ ಸುನಿಲ್ ಅಗರ್ವಾಲ್ ಮಾಧ್ಯಮಗಳಿಗೆ ತಿಳಿಸಿದರು. ನಾವು ಅದನ್ನು ಶೇಕಡಾ 30 ರ ರಿಯಾಯಿತಿಯಲ್ಲಿ ಮಾರಾಟ ಮಾಡಲು ಸಿದ್ಧರಿದ್ದೇವೆ, ಇದು ಒಟ್ಟಾರೆಯಾಗಿ ವ್ಯರ್ಥವಾಗುವ ಡೋಸ್‌ಗಳಿಗಿಂತ ಉತ್ತಮವಾಗಿದೆ ಎಂದು ಅವರು ಹೇಳಿದರು.

ವ್ಯಾಕ್ಸಿನೇಷನ್‌ಗಾಗಿ ಆಸ್ಪತ್ರೆಗಳಿಗೆ ಪ್ರತಿ ನಿತ್ಯ ಭೇಟಿ ನೀಡುವವರ ಸಂಖ್ಯೆ 20-25 ಜನರಿಗೆ ಇಳಿದಿದೆ. ಈ ಹಿಂದೆ ನಿತ್ಯ 1,000 ಜನರು ಆಸ್ಪತ್ರೆಗೆ ಲಸಿಕೆ ಪಡೆಯಲು ಭೇಟಿ ನೀಡುತ್ತಿದ್ದರು.

ಅದೇ ರೀತಿ, ಆರ್ಥಿಕ ರಾಜಧಾನಿಯ ಪಶ್ಚಿಮ ಉಪನಗರಗಳಲ್ಲಿರುವ ಆಸ್ಕರ್ ಆಸ್ಪತ್ರೆಯು ಸುಮಾರು 25,000 ಹೆಚ್ಚುವರಿ ಡೋಸ್ ಲಸಿಕೆಗಳನ್ನು ಹೊಂದಿದೆ. “ನಮ್ಮಲ್ಲಿ ಕೋವಿಶೀಲ್ಡ್, ಕೋವಾಕ್ಸಿನ್ ಮತ್ತು ಸ್ಪುಟ್ನಿಕ್ ಮೂರೂ ಇದೆ, ಆದರೆ ಯಾವುದೇ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ” ಎಂದು ಡಾಕ್ಟರ್ ಪವಾರ್ ಹೇಳಿದ್ದಾರೆ.

ಆಸ್ಕರ್, ಅನೇಕ ಇತರ ಆಸ್ಪತ್ರೆಗಳಂತೆ, ಸರ್ಕಾರವು ಬೂಸ್ಟರ್ ಶಾಟ್ ಅನ್ನು ಅನುಮೋದಿಸುವ ಭರವಸೆಯನ್ನು ಹೊಂದಿದೆ. ಎರಡು ಡೋಸ್ ಗಳ ನಡುವಿನ ಮಧ್ಯಂತರ ಅವಧಿಯನ್ನು ಕಡಿಮೆಗೊಳಿಸಿದರೆ ನಾವು ಬೇಡಿಕೆಯು ಹೆಚ್ಚಾಗುವುದನ್ನು ನೋಡಬಹುದು ಎಂದು ಅವರು ಹೇಳಿದರು. 84 ದಿನಗಳ ಮಧ್ಯಂತರವನ್ನು ಕಡಿತಗೊಳಿಸಿದರೆ 22 ಲಕ್ಷಕ್ಕೂ ಹೆಚ್ಚು ಜನರು ತಕ್ಷಣವೇ ಲಸಿಕೆಗೆ ಅರ್ಹರಾಗುತ್ತಾರೆ ಎಂದು ಮುಂಬೈ ಪಾಲಿಕೆಯು ಹೇಳಿದೆ.

ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಲಸಿಕೆಗಳನ್ನು ನೀಡಲು ಸಿದ್ದವಾಗಿವೆ ಎಂದು ಮಹಾರಾಷ್ಟ್ರ ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಆದರೆ ಕೇಂದ್ರದಿಂದ ಹೇರಳವಾದ ಪೂರೈಕೆ ಇರುವಾಗ ನಾವು ಖಾಸಗಿ ವಲಯದಿಂದ ಖರೀದಿಸಲು ಸಾಧ್ಯವಿಲ್ಲ” ಎಂದು ಅಧಿಕಾರಿ ಹೇಳಿದ್ದಾರೆ. ಕುತೂಹಲಕಾರಿ ಅಂದರೇ, ಮಿತಿಮೀರಿದ ಪೂರೈಕೆಯ ಹೊರತಾಗಿಯೂ ಯಾವುದೇ ಆಸ್ಪತ್ರೆಯು ಕೊರೊನಾ ಲಸಿಕೆಯ ದರವನ್ನು ಕಡಿತಗೊಳಿಸಿಲ್ಲ.

ದೇಶದಲ್ಲಿ ಕೇಂದ್ರ ಸರ್ಕಾರವು 116 ಕೋಟಿ ಕೊವಿಡ್ ಡೋಸ್ ಕೊರೊನಾ ಲಸಿಕೆಯನ್ನು ಎಲ್ಲ ರಾಜ್ಯಗಳಿಗೆ ನೀಡಿದೆ. ಆದರೇ, ಇದರ ಪೈಕಿ 15.6 ಕೋಟಿ ಡೋಸ್ ಲಸಿಕೆಯು ಬಳಕೆಯಾಗದೇ ಹಾಗೇ ಉಳಿದಿದೆ. ಇದರ ಬಳಕೆ ದಿನಾಂಕ ಮುಗಿಯುವ ಮುನ್ನವೇ ಲಸಿಕೆಯನ್ನು ಜನರಿಗೆ ನೀಡಬೇಕಾಗಿದೆ. ದೇಶದಲ್ಲಿ ಇದುವರೆಗೂ ಶೇ.79 ರಷ್ಟು ಜನರಿಗೆ ಒಂದು ಡೋಸ್ ಲಸಿಕೆ ನೀಡಲಾಗಿದೆ. ಶೇ.37 ರಷ್ಟು ವಯಸ್ಕರಿಗೆ ಎರಡು ಡೋಸ್ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ ಹೊಸ ಕೊವಿಡ್ ನಿಯಮಾವಳಿಗಳು ಇಲ್ಲಿವೆ

Coronavirus cases in India: ದೇಶದಲ್ಲಿ 10,126 ಹೊಸ ಕೊವಿಡ್ ಪ್ರಕರಣ ಪತ್ತೆ, 332 ಮಂದಿ ಸಾವು