WITT TV9 Global Summit 2024: ರೈತರಿಗೆ ಎಂಎಸ್​​ಪಿ ನೀಡಬೇಕು: ಭಗವಂತ್ ಮಾನ್

ಬೇರೆ ದೇಶಗಳಿಂದ ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಪಂಜಾಬ್‌ನ ರೈತ ಹೆಚ್ಚಿನದನ್ನು ಉತ್ಪಾದಿಸಬಹುದು, ಆದರೆ ಅದಕ್ಕಾಗಿ ಅವರಿಗೆ MSP ಅಗತ್ಯವಿದೆ. ರೈತರಿಗೆ ಎಂಎಸ್‌ಪಿ ನೀಡುವುದು ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂದು ಟಿವಿ9 ನೆಟ್‌ವರ್ಕ್‌ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಜಾಗತಿಕ ಸಮ್ಮೇಳನದಲ್ಲಿ ಮಾತನಾಡಿದ ಪಂಜಾಬ್ ಸಿಎಂ ಭಗವಂತ್ ಮಾನ್ ಹೇಳಿದ್ದಾರೆ.

WITT TV9 Global Summit 2024: ರೈತರಿಗೆ ಎಂಎಸ್​​ಪಿ ನೀಡಬೇಕು: ಭಗವಂತ್ ಮಾನ್
ಭಗವಂತ್ ಮಾನ್
Follow us
|

Updated on: Feb 27, 2024 | 5:22 PM

ದೆಹಲಿ ಫೆಬ್ರವರಿ 27: ಟಿವಿ9 ನೆಟ್‌ವರ್ಕ್‌ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಪವರ್ ಕಾನ್ಫರೆನ್ಸ್‌ನಲ್ಲಿ ( What India Thinks Today Global Summit) ಮಾತನಾಡಿದ ಪಂಜಾಬ್ ಸಿಎಂ ಭಗವಂತ್ ಮಾನ್ (Bhagwant Mann) ತಮ್ಮ ಸರ್ಕಾರವನ್ನು ಹೊಗಳಿಕೊಂಡು ರೈತರ ಸಮಸ್ಯೆಯಲ್ಲಿ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಪಂಜಾಬ್‌ನ (Punjab) ರೈತರು ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ ಆದರೆ ಅವರನ್ನು ದೆಹಲಿಗೆ ಪ್ರವೇಶಿಸಲು ಸಹ ಅನುಮತಿಸುತ್ತಿಲ್ಲ. ಈ ಸಂದರ್ಭದಲ್ಲಿ ಅವರು, ಕೇಂದ್ರ ಸರ್ಕಾರವು ಪಾಕಿಸ್ತಾನದ ಗಡಿಯಲ್ಲಿ ಅಳವಡಿಸಿರುವ ಬ್ಯಾರಿಕೇಡ್‌ಗಳಿಗಿಂತ ಹೆಚ್ಚಿನ ಬ್ಯಾರಿಕೇಡ್‌ಗಳನ್ನು ರೈತರನ್ನು ತಡೆಯಲು ಹಾಕಿದೆ ಎಂದು ಮಾನ್ ಹೇಳಿದ್ದಾರೆ.

ರೈತರ ಸಮಸ್ಯೆಗೆ ಸಂಬಂಧಿಸಿದಂತೆ ತಮ್ಮ ಸರ್ಕಾರವು ರೈತರಿಗೆ ಏನು ಮಾಡಬಹುದೋ ಅದನ್ನು ಮಾಡುತ್ತಿದೆ ಆದರೆ ಅವರಿಗೆ ಎಂಎಸ್‌ಪಿ ನೀಡಬೇಕು ಎಂದು ಮಾನ್ ಹೇಳಿದ್ದಾರೆ. ಬೇರೆ ದೇಶಗಳಿಂದ ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಪಂಜಾಬ್‌ನ ರೈತ ಹೆಚ್ಚಿನದನ್ನು ಉತ್ಪಾದಿಸಬಹುದು, ಆದರೆ ಅದಕ್ಕಾಗಿ ಅವರಿಗೆ MSP ಅಗತ್ಯವಿದೆ. ರೈತರಿಗೆ ಎಂಎಸ್‌ಪಿ ನೀಡುವುದು ಕೇಂದ್ರ ಸರ್ಕಾರದ ಕೈಯಲ್ಲಿದೆ. ಇದಕ್ಕೆ ಕಾನೂನು ರೂಪಿಸಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರಬೇಕು ಎಂದು ಮಾನ್ ಒತ್ತಾಯಿಸಿದ್ದಾರೆ.

ಸಿಧು ನಮ್ಮ ಪಕ್ಷ  ಸೇರುತ್ತಿಲ್ಲ

TV9 ಭಾರತವರ್ಷ್‌ನ ಸತ್ತಾ ಸಮ್ಮೇಳನದಲ್ಲಿ  ನವಜೋತ್ ಸಿಂಗ್ ಸಿಧು ಆಮ್ ಆದ್ಮಿ ಪಕ್ಷಕ್ಕೆ ಪ್ರವೇಶದ ಕುರಿತು ಪ್ರಶ್ನೆಯನ್ನು ಕೇಳಿದಾಗ, ಭಗವಂತ್ ಮಾನ್ ಅದನ್ನು ಸ್ಪಷ್ಟವಾಗಿ ನಿರಾಕರಿಸಿದರು. ನವಜೋತ್ ಸಿಂಗ್ ಸಿಧು ಅವರು ಭವಿಷ್ಯದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಲು ಬಯಸಿದರೆ, ಆಮ್ ಆದ್ಮಿ ಪಕ್ಷ ಅವರನ್ನು ಒಪ್ಪಿಕೊಳ್ಳುತ್ತದೆಯೇ? ಎಂದು ಪ್ರಶ್ನೆ ಕೇಳಿದಾಗ ಭಗವಂತ್ ಮಾನ್ ಇಲ್ಲ ಎಂದು ಉತ್ತರಿಸಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ ನವಜೋತ್ ಸಿಂಗ್ ಸಿಧು ಅವರನ್ನು ಸಂಪರ್ಕಿಸಲಾಗಿತ್ತು. ಆದರೆ, ಅವರು ಪ್ರಸ್ತಾಪವನ್ನು ತಿರಸ್ಕರಿಸಿದರು ಎಂದು ಪಂಜಾಬ್ ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: ವಿಪಕ್ಷಗಳ ನಾಯಕರು ಬಿಜೆಪಿಗೆ ವಲಸೆ ಬರಲು ಏನು ಕಾರಣ? ಸಚಿವ ಶೆಖಾವತ್ ಹೇಳುವುದಿದು

ಸೇವೆ ಮಾಡಲು ಬಂದಿರುವೆ

ನಾನು ಆಮ್ ಆದ್ಮಿ ಪಕ್ಷಕ್ಕೆ ನಾಯಕನಾಗಲು ಅಥವಾ ಯಾವುದೇ ಹುದ್ದೆಯನ್ನು ಅಲಂಕರಿಸಲು ಬಂದಿಲ್ಲ. ಬೇರೆಯವರಿಗೆ ಒಳಿತಾಗಲಿ ಎಂದು ನಾನು ಇಲ್ಲಿದ್ದೇನೆ. ಜನರಿಗಾಗಿ ಕೆಲಸ ಮಾಡಲು, ಅವರ ನೋವು ಮತ್ತು ಸಂಕಟಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ಕಡಿಮೆ ಮಾಡಲು ಅಥವಾ ತೊಡೆದುಹಾಕಲು ನಾನು ಪ್ರಯತ್ನಿಸುತ್ತೇನೆ. ಈ ವೇಳೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೆಸರನ್ನೂ ಉಲ್ಲೇಖಿಸಿದ ಅವರು ತಾವು ಐಆರ್‌ಎಸ್ ಆಗಿದ್ದು, ಬೇಕಿದ್ದರೆ ಲಕ್ಷ ಕೋಟಿ ಗಳಿಸಬಹುದಿತ್ತು. ಆದರೆ ಸಾರ್ವಜನಿಕರ ಪರ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಪಕ್ಷದಲ್ಲಿದ್ದೇನೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ