WITT TV9 Global Summit 2024: ಕುಟುಂಬದಿಂದ ನಡೆಸುವ ಪಕ್ಷಗಳು ಹೊಸ ಊಳಿಗಮಾನ್ಯ ಪದ್ಧತಿ ಹುಟ್ಟುಹಾಕುತ್ತಿವೆ, ಅವರನ್ನು ಸೋಲಿಸುವುದು ಅಗತ್ಯ: ಭೂಪೇಂದ್ರ ಯಾದವ್

ಕಾಂಗ್ರೆಸ್ ಮತ್ತು ಬಿಜೆಪಿಯ ಸ್ಥಾನಗಳು ಕಡಿಮೆಯಾಗುತ್ತಿರುವ ಬಗ್ಗೆ ಕಾಂಗ್ರೆಸ್ ಮಾಡಿರುವ ಆರೋಪಗಳಿಗೆ ಉತ್ತರಿಸಿದ ಭೂಪೇಂದ್ರ ಯಾದವ್, ದೇಶದಲ್ಲಿ ಒಳ್ಳೆಯ ಸಂಗತಿಗಳು ನಡೆದರೂ ರಾಹುಲ್ ಗಾಂಧಿ ಅದನ್ನು ವಿರೋಧಿಸುತ್ತಾರೆ. ಇದು ಹೊಸ ಸಂಸತ್ತಿನ ನಿರ್ಮಾಣ, ಅದರಲ್ಲಿ ಸೆಂಗೋಲ್ ಅನ್ನು ಇರಿಸುವುದೂ ಅವರಿಗೆ ಸಮಸ್ಯೆ ಆಗಿದೆ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.

WITT TV9 Global Summit 2024: ಕುಟುಂಬದಿಂದ ನಡೆಸುವ ಪಕ್ಷಗಳು ಹೊಸ ಊಳಿಗಮಾನ್ಯ ಪದ್ಧತಿ ಹುಟ್ಟುಹಾಕುತ್ತಿವೆ, ಅವರನ್ನು ಸೋಲಿಸುವುದು ಅಗತ್ಯ: ಭೂಪೇಂದ್ರ ಯಾದವ್
ಭೂಪೇಂದ್ರ ಯಾದವ್
Follow us
ರಶ್ಮಿ ಕಲ್ಲಕಟ್ಟ
|

Updated on: Feb 27, 2024 | 7:08 PM

ದೆಹಲಿ ಫೆಬ್ರವರಿ 27: ಟಿವಿ9 ಭಾರತವರ್ಷದ ವಾಟ್ ಇಂಡಿಯಾ ಥಿಂಕ್ಸ್ ಟುಡೇ(WITT TV9 Global Summit 2024:) ಸತ್ತಾ ಸಮ್ಮೇಳನದಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ತಂತ್ರಜ್ಞ ಭೂಪೇಂದ್ರ ಯಾದವ್  (Bhupendra Yadav)ಅವರು ಹಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ‘ಇಸ್ ಬಾರ್ 400 ಪಾರ್’ ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರಿ ಪ್ರತಿಪಕ್ಷಗಳು ಮತ್ತು ಕುಟುಂಬ ರಾಜಕಾರಣದಲ್ಲಿ ತೊಡಗಿರುವ ಪಕ್ಷಗಳನ್ನು ಟೀಕಿಸಿದ್ದಾರೆ. ಒಂದೇ ಕುಟುಂಬದಿಂದ ನಡೆಯುತ್ತಿರುವ ಎಲ್ಲಾ ಪಕ್ಷಗಳು ರಾಜಕೀಯದಲ್ಲಿ ಹೊಸ ಊಳಿಗಮಾನ್ಯ ಪದ್ಧತಿಯನ್ನು ಹುಟ್ಟುಹಾಕುತ್ತಿವೆ ಎಂದಿದ್ದಾರೆ ಯಾದವ್.

ಭೂಪೇಂದ್ರ ಯಾದವ್ ಅವರು ದಕ್ಷಿಣ ಭಾರತದಿಂದ ಹಿಡಿದು ಈಶಾನ್ಯ ರಾಜ್ಯಗಳ ಬಗ್ಗೆಯೂ ಚರ್ಚಿಸಿದ್ದು, ಬಿಜೆಪಿಯ ಬೆಳೆಯುತ್ತಿರುವ ಬೆಂಬಲದ ಆಧಾರದ ಮೇಲೆ ವಿಶ್ವಾಸ ವ್ಯಕ್ತಪಡಿಸಿದರು. ತಾನು ವಯನಾಡ್‌ಗೆ ಹೋಗಿದ್ದಾಗ 10 ವರ್ಷದ ಬಾಲಕಿಯೊಬ್ಬಳು ಪ್ರಧಾನಿ ಮೋದಿ ಮೇಲೆ ನಂಬಿಕೆ ಇಟ್ಟಿರುವುದಾಗಿ ಹೇಳಿದ್ದಳು. ದಕ್ಷಿಣಕ್ಕೆ ಪ್ರವೇಶವಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಭೂಪೇಂದ್ರ, ಈಶಾನ್ಯ ಭಾಗದ ಜನರು ಬಿಜೆಪಿ ಎಂದಿಗೂ ಅಲ್ಲಿಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಆದರೆ, ಕಾಲಾನಂತರದಲ್ಲಿ, ಈಶಾನ್ಯದ ಹೆಚ್ಚಿನ ರಾಜ್ಯಗಳು ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳ ಸರ್ಕಾರದ ಅಡಿಯಲ್ಲಿವೆ.

ಸ್ವಜನಪಕ್ಷಪಾತ ಸರಿಯಲ್ಲ

ಬಿಹಾರದಲ್ಲಿ ಆರ್‌ಜೆಡಿ ಶಾಸಕರು ಬಿಜೆಪಿ ಸೇರುವ ಪ್ರಶ್ನೆಗೆ ಉತ್ತರಿಸಿದ ಭೂಪೇಂದ್ರ ಯಾದವ್, ಬಿಜೆಪಿಯ ದಕ್ಷ ನಾಯಕತ್ವವನ್ನು ಅನೇಕ ಜನರು ನಿರಂತರವಾಗಿ ನಂಬುತ್ತಿದ್ದಾರೆ. ಆದ್ದರಿಂದ ಬಿಜೆಪಿ ಸೇರುತ್ತಿದ್ದಾರೆ ಎಂದು ಹೇಳಿದರು. ಆದರೆ, ಆರ್‌ಜೆಡಿ ಪಕ್ಷವನ್ನು ಗುರಿಯಾಗಿಸಿ ಮಾತನಾಡಿದ ಅವರು, ಆರ್‌ಜೆಡಿ ಕಾರ್ಯಕರ್ತರು ಭಯಗೊಂಡಿದ್ದಾರೆ. ಏಕೆಂದರೆ ಈ ಪಕ್ಷವನ್ನು ಒಂದು ಕುಟುಂಬ ನಡೆಸುತ್ತಿದೆ. ಪಕ್ಷಗಳಲ್ಲಿ ಕುಟುಂಬಗಳ ಪ್ರಾಬಲ್ಯದ ಬಗ್ಗೆ ಮಾತನಾಡಿದ ಅವರು ಅಂಥಾ ಪಕ್ಷಗಳು ರಾಜಕೀಯದಲ್ಲಿ ಪ್ರಜಾಪ್ರಭುತ್ವದಲ್ಲಿ ಊಳಿಗಮಾನ್ಯ ಪದ್ಧತಿ ಹುಟ್ಟುಹಾಕುತ್ತಿವೆ. ಆದ್ದರಿಂದ ಈ ಪಕ್ಷಗಳು ಸೋಲುವುದು ಅನಿವಾರ್ಯವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: 10 ವರ್ಷ ಅಧಿಕಾರದಲ್ಲಿದ್ದರೂ ಎಂಎಸ್​ಪಿ ಗ್ಯಾರಂಟಿ ಯಾಕೆ ಕೊಡಲಿಲ್ಲ? ರಾಹುಲ್ ಗಾಂಧಿಗೆ ಸಚಿವ ಧರ್ಮೇಂದ್ರ ಪ್ರಧಾನ್ ಪ್ರಶ್ನೆ

ಅದೇ ಕುಟುಂಬ, ಅದೇ ಶಕ್ತಿ

ಕಾಂಗ್ರೆಸ್ ಮತ್ತು ಬಿಜೆಪಿಯ ಸ್ಥಾನಗಳು ಕಡಿಮೆಯಾಗುತ್ತಿರುವ ಬಗ್ಗೆ ಕಾಂಗ್ರೆಸ್ ಮಾಡಿರುವ ಆರೋಪಗಳಿಗೆ ಉತ್ತರಿಸಿದ ಭೂಪೇಂದ್ರ ಯಾದವ್, ದೇಶದಲ್ಲಿ ಒಳ್ಳೆಯ ಸಂಗತಿಗಳು ನಡೆದರೂ ರಾಹುಲ್ ಗಾಂಧಿ ಅದನ್ನು ವಿರೋಧಿಸುತ್ತಾರೆ. ಇದು ಹೊಸ ಸಂಸತ್ತಿನ ನಿರ್ಮಾಣ, ಅದರಲ್ಲಿ ಸೆಂಗೋಲ್ ಅನ್ನು ಇರಿಸುವುದೂ ಅವರಿಗೆ ಸಮಸ್ಯೆ ಆಗಿದೆ. ಇಡೀ ದೇಶವನ್ನು ಒಂದೇ ಕುಟುಂಬದವರು ಆಳಬೇಕು ಮತ್ತು ಇಡೀ ದೇಶವು ತನ್ನ ಆಳ್ವಿಕೆಯಲ್ಲಿ ಇರಬೇಕೆಂದು ಕಾಂಗ್ರೆಸ್ ಬಯಸುತ್ತದೆ ಎಂದು ಯಾದವ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು