ಇಂಡಿಯಾ ಬಣದ ಪಕ್ಷಗಳು ಸೋಲೊಪ್ಪಿಕೊಂಡಿವೆ: ತಮಿಳುನಾಡಿನಲ್ಲಿ ಪ್ರಧಾನಿ ಮೋದಿ

'ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲದಿದ್ದರೂ ರಾಜ್ಯ ಬಿಜೆಪಿಯ ಹೃದಯದಲ್ಲಿ ಸದಾ ನೆಲೆಸಿದೆ, ನನ್ನ ಎಲ್ಲಾ ತಮಿಳು ಸಹೋದರ ಸಹೋದರಿಯರಿಗೆ ಇದು ಅರ್ಥವಾಗಿದೆ ಮತ್ತು ಅರಿವಿದೆ. ಹಾಗಾಗಿ ರಾಜ್ಯವನ್ನು ದಶಕಗಳಿಂದ ಲೂಟಿ ಮಾಡಿದವರಿಗೆ ಬಿಜೆಪಿಯ ಹೆಚ್ಚುತ್ತಿರುವ ಒಲವಿನ ಬಗ್ಗೆ ಭಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂಡಿಯಾ ಬಣದ ಪಕ್ಷಗಳು ಸೋಲೊಪ್ಪಿಕೊಂಡಿವೆ: ತಮಿಳುನಾಡಿನಲ್ಲಿ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Feb 27, 2024 | 8:08 PM

ಚೆನ್ನೈ ಫೆಬ್ರವರಿ  27: ತಮಿಳುನಾಡಿನ (Tamil Nadu) ತಿರುಪ್ಪೂರ್‌ನಲ್ಲಿಂದು (Tiruppur) ಬಿಜೆಪಿಯ ‘ಎನ್ ಮಣ್ಣ್ ಎನ್ ಮಕ್ಕಳ್’ (En Mann Ek Makkal)ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಇಂಡಿಯಾ ಬಣದ ಘಟಕಗಳು ಸೋಲನ್ನು ಒಪ್ಪಿಕೊಂಡಿದ್ದಾರೆ. ಆದರೆ ತಮಿಳುನಾಡನ್ನು ಲೂಟಿ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿಯ ತಮಿಳುನಾಡು ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಕಳೆದ ವರ್ಷ ಜುಲೈ 28ರಂದು ರಾಮೇಶ್ವರಂನಿಂದ ಪಾದಯಾತ್ರೆ ಆರಂಭಿಸಿದ್ದರು. ಆರು ತಿಂಗಳ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದರು. ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯ ಜಿಲ್ಲಾ ಸಂಘದ ಪದಾಧಿಕಾರಿಗಳು, ಪಕ್ಷದ ಸದಸ್ಯರು ಮತ್ತು ಸಾರ್ವಜನಿರು ಭಾಗವಹಿಸಿದ್ದರು. ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಪೂರ್ವಭಾವಿಯಾಗಿ ಬಿಜೆಪಿ 2023 ರಲ್ಲಿ ಬೃಹತ್ ಸಾರ್ವಜನಿಕ ಸಂಪರ್ಕ ಪಾದಯಾತ್ರೆಯನ್ನು ಪ್ರಾರಂಭಿಸಿತ್ತು.

ರ‍್ಯಾಲಿ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಮಂಗಳವಾರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತಮಿಳುನಾಡು ಯಾವಾಗಲೂ ಬಿಜೆಪಿಯ ಹೃದಯದಲ್ಲಿದೆ, ಆದರೆ ರಾಜ್ಯದಲ್ಲಿ ಪಕ್ಷವು ಎಂದಿಗೂ ಅಧಿಕಾರದಲ್ಲಿಲ್ಲ. ದಕ್ಷಿಣ ರಾಜ್ಯದಲ್ಲಿ ಬಿಜೆಪಿಯ ಶಕ್ತಿ ಹೆಚ್ಚುತ್ತಿದೆ ಎಂದು ರಾಜ್ಯದಲ್ಲಿ ಆಡಳಿತ ಪಕ್ಷಗಳು ಹೆದರುತ್ತಿವೆ ಎಂದು ಹೇಳಿದರು.

ಮೋದಿ ಭಾಷಣ

”ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲದಿದ್ದರೂ ರಾಜ್ಯ ಬಿಜೆಪಿಯ ಹೃದಯದಲ್ಲಿ ಸದಾ ನೆಲೆಸಿದೆ, ನನ್ನ ಎಲ್ಲಾ ತಮಿಳು ಸಹೋದರ ಸಹೋದರಿಯರಿಗೆ ಇದು ಅರ್ಥವಾಗಿದೆ ಮತ್ತು ಅರಿವಿದೆ. ಹಾಗಾಗಿ ರಾಜ್ಯವನ್ನು ದಶಕಗಳಿಂದ ಲೂಟಿ ಮಾಡಿದವರಿಗೆ ಬಿಜೆಪಿಯ ಹೆಚ್ಚುತ್ತಿರುವ ಒಲವಿನ ಬಗ್ಗೆ ಭಯವಿದೆ” ಎಂದು ಅವರು ಹೇಳಿದರು.

ದೇಶದ ಅಖಂಡತೆಯನ್ನು ಒಡೆಯುವ ಕನಸು ಕಾಣುತ್ತಿರುವವರು ತಮಿಳುನಾಡು ಭಾರತದ ಭವಿಷ್ಯವನ್ನು ರೂಪಿಸುವುದನ್ನು ನೋಡಬೇಕಾಗಿದೆ ಎಂದು ಪ್ರಧಾನಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ದೆಹಲಿಯ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ದೇಶದ ಅಖಂಡತೆಯನ್ನು ಒಡೆಯುವ ಕನಸು ಕಾಣುವ ಜನರು ಇಲ್ಲಿಗೆ ಬಂದು ತಮಿಳುನಾಡು ಭಾರತದ ಭವಿಷ್ಯವನ್ನು ರೂಪಿಸುತ್ತಿರುವುದನ್ನು ಕಣ್ಣಾರೆ ನೋಡಬೇಕು ಎಂದು ಮೋದಿ ಹೇಳಿದ್ದಾರೆ.

ತಮಿಳುನಾಡಿಗೆ ನಿಧಿ

ಕೇಂದ್ರದ ತಮ್ಮ ಸರ್ಕಾರ ಕಳೆದ 10 ವರ್ಷಗಳಲ್ಲಿ ತಮಿಳುನಾಡಿನ ಕಲ್ಯಾಣಕ್ಕಾಗಿ ಈ ಹಿಂದೆ ಯಾವುದೇ ಸರ್ಕಾರಕ್ಕಿಂತ ಹೆಚ್ಚಿನ ಹಣವನ್ನು ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕಳೆದ 10 ವರ್ಷಗಳಲ್ಲಿ ಕೇಂದ್ರವು ತಮಿಳುನಾಡಿಗೆ ಹಿಂದಿಗಿಂತ ಹೆಚ್ಚಿನ ಅನುದಾನ ನೀಡಿದೆ, ಮೋದಿ ಕೆಲಸ ಮಾಡಿದಾಗ ಎಲ್ಲರಿಗಾಗಿ ಕೆಲಸ ಮಾಡುತ್ತಾರೆ ಎಂದರು. ತಮಿಳುನಾಡು ಅಭಿವೃದ್ಧಿಯ ರಾಜಕಾರಣದ ಹೊಸ ಕೇಂದ್ರವಾಗಲಿದೆ ಎಂದು ಪ್ರಧಾನಿ ಹೇಳಿದರು.

2024 ರಲ್ಲಿ ತಮಿಳುನಾಡು ಹೆಚ್ಚು ಚರ್ಚೆಯಾಗಿದೆ ಏಕೆಂದರೆ, ದೇಶದಲ್ಲಿ, ತಮಿಳುನಾಡು ಅಭಿವೃದ್ಧಿಯ ರಾಜಕೀಯದ ಹೊಸ ಕೇಂದ್ರವಾಗಲಿದೆ. 2024 ರಲ್ಲಿ ತಮಿಳುನಾಡು ಇತಿಹಾಸವನ್ನು ಸೃಷ್ಟಿಸಲಿದೆ. ಐತಿಹಾಸಿಕ ‘ಎನ್ ಮಣ್ಣ್ ಎನ್ ಮಕ್ಕಳ್ ಇಂದು ಪೂರ್ಣಗೊಂಡಿರುವ ಪಾದಯಾತ್ರೆಯೇ ಇದಕ್ಕೆ ಬಹುದೊಡ್ಡ ಸಾಕ್ಷಿಯಾಗಿದೆ ಎಂದರು.

ತಿರುಪ್ಪೂರ್​​ಗೆ ಆಗಮಿಸಿದ ಮೋದಿ

ಪಾದಯಾತ್ರೆಯ ಉದ್ದೇಶ

ತಮಿಳುನಾಡನ್ನು ಕುಟುಂಬ ವಂಶದ ರಾಜಕೀಯ ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸುಧಾರಿಸಲು ‘ಎನ್ ಮಣ್ಣ್ ಎನ್ ಮಕ್ಕಳ್ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಯಾತ್ರೆಗೆ ಚಾಲನೆ ನೀಡಿದ್ದ ಅಮಿತ್ ಶಾ ಹೇಳಿದ್ದರು.

“ಈ ಯಾತ್ರೆಯು ರಾಜಕೀಯ ಯಾತ್ರೆ ಮಾತ್ರವಲ್ಲ; “‘ಎನ್ ಮಣ್ಣ್ ಎನ್ ಮಕ್ಕಳ್ ” (ನನ್ನ ಭೂಮಿ, ನನ್ನ ಜನರು) ಯಾತ್ರೆಯು ತಮಿಳು ಭಾಷೆಯನ್ನು ವಿಶ್ವಾದ್ಯಂತ ಹರಡುವ ಯಾತ್ರೆಯಾಗಿದೆ. ಇದು ತಮಿಳುನಾಡನ್ನು ಕುಟುಂಬ ರಾಜವಂಶದ ರಾಜಕೀಯ ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿ, ಭ್ರಷ್ಟಾಚಾರವನ್ನು ಕೊನೆಗಾಣಿಸಿ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸುವ ಯಾತ್ರೆ ಇದಾಗಿದೆ ಎಂದು ಶಾ ಹೇಳಿದ್ದಾರೆ.

ಇದನ್ನೂ ಓದಿ: ಕುಟುಂಬದಿಂದ ನಡೆಸುವ ಪಕ್ಷಗಳು ಹೊಸ ಊಳಿಗಮಾನ್ಯ ಪದ್ಧತಿ ಹುಟ್ಟುಹಾಕುತ್ತಿವೆ, ಅವರನ್ನು ಸೋಲಿಸುವುದು ಅಗತ್ಯ: ಭೂಪೇಂದ್ರ ಯಾದವ್

ಡಿಜಿಟಲ್ ಮೊಬಿಲಿಟಿ ಇನಿಶಿಯೇಟಿವ್‌ನಲ್ಲಿ ಪ್ರಧಾನಿ ಮೋದಿ

ಮಧುರೈನಲ್ಲಿ ನಡೆದ ಆಟೋಮೋಟಿವ್ ಎಂಎಸ್‌ಎಂಇಗಳ ಡಿಜಿಟಲ್ ಮೊಬಿಲಿಟಿ ಇನಿಶಿಯೇಟಿವ್‌ನಲ್ಲಿಯೂ ಪ್ರಧಾನಿ ಮೋದಿ ಭಾಗವಹಿಸಿದ್ದರು.

ತಮಿಳುನಾಡಿನಲ್ಲಿ ಮೋದಿಗೆ ಅದ್ದೂರಿ ಸ್ವಾಗತ

ಇಂದು ಪಲ್ಲಡಂನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಅರಿಶಿನ ಮಂಡಳಿಯನ್ನು ಸ್ಥಾಪಿಸಿದ್ದಕ್ಕಾಗಿ ಪ್ರಧಾನಿ ಅವರಿಗೆ ಧನ್ಯವಾದ ಅರ್ಪಿಸಲು ಈರೋಡ್‌ನ ಜನರು 67 ಕೆಜಿ ಅರಿಶಿನ ಮಾಲೆಯನ್ನು ಉಡುಗೊರೆಯಾಗಿ ನೀಡಿದರು. ಈರೋಡ್ ಪ್ರದೇಶವು ಅರಿಶಿನ ಕೃಷಿಗೆ ಹೆಸರುವಾಸಿಯಾಗಿದೆ. ಮಂಡಳಿಯನ್ನು ಸ್ಥಾಪಿಸುವ ಎನ್‌ಡಿಎ ಸರ್ಕಾರದ ನಿರ್ಧಾರವು ರಫ್ತುಗಳನ್ನು ಉತ್ತೇಜಿಸುತ್ತದೆ ಎಂದು ಅಲ್ಲಿನ ರೈತರು ಭಾವಿಸುತ್ತಾರೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಪ್ರಧಾನಮಂತ್ರಿಯವರು ಒತ್ತು ನೀಡಿದ ಕಾರಣಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ನೀಲಗಿರಿಯ ಥೋಡಾ ಬುಡಕಟ್ಟು ಸಮುದಾಯದ ಕೈಯಿಂದ ಮಾಡಿದ ಶಾಲನ್ನು ಪ್ರಧಾನಮಂತ್ರಿ ಅವರಿಗೆ ನೀಡಲಾಯಿತು. ಇದರಿಂದ ಶಾಲು ಮಾರಾಟ ಗಣನೀಯವಾಗಿ ಏರಿಕೆಯಾಗುವ ಆಶಾವಾದವಿದೆ. ಡಿಎಂಕೆ ಸಹ ಪಾಲುದಾರರಾಗಿದ್ದ ಯುಪಿಎ ಅವಧಿಯಲ್ಲಿ ಕಾಂಗ್ರೆಸ್ ಜಲ್ಲಿಕಟ್ಟು ನಿಷೇಧಿಸಿದ ನಂತರ ಜಲ್ಲಿಕಟ್ಟು ಮರಳಿ ತಂದದ್ದಕ್ಕೆ ಧನ್ಯವಾದ ಸಂಕೇತವಾಗಿ ಜಲ್ಲಿಕಟ್ಟು ಬುಲ್‌ನ ಪ್ರತಿಕೃತಿಯನ್ನು ಪ್ರಧಾನಿಗೆ ನೀಡಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ