Rajya Sabha Poll: ಕೈ ಹಿಡಿಯದ ಅದೃಷ್ಟ; ಹಿಮಾಚಲದಲ್ಲಿ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿಗೆ ಸೋಲು
ಹಿಮಾಚಲ ಪ್ರದೇಶದಲ್ಲಿಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಒಟ್ಟು 68 ಮತಗಳ ಪೈಕಿ 34 ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಪರವಾಗಿದ್ದರೆ, ಉಳಿದ 34 ಮತಗಳು ಬಿಜೆಪಿಯ ಹರ್ಷ್ ಮಹಾಜನ್ ಪರವಾಗಿತ್ತು. ಮತ ಎಣಿಕೆಯ ನಂತರ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಚೀಟಿಯಲ್ಲಿ ಬರೆದು ಆಯ್ಕೆ ಮಾಡಲಾಗಿದೆ. ಚೀಟಿ ಎತ್ತಿದಾಗ ಅದರಲ್ಲಿ ಹರ್ಷ್ ಮಹಾಜನ್ ಹೆಸರಿದ್ದು , ಅವರನ್ನು ವಿಜೇತರೆಂದು ಘೋಷಿಸಲಾಯಿತು.

ದೆಹಲಿ ಫೆಬ್ರವರಿ 27: ಹಿಮಾಚಲ ಪ್ರದೇಶದಲ್ಲಿ(Himachal Pradesh) ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ (Rajya Sabha election) ಬಿಜೆಪಿಯ ಹರ್ಷ ಮಹಾಜನ್ ಅವರು ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ (Abhishek Manu Singhvi) ವಿರುದ್ಧ ವಿಜಯಶಾಲಿಯಾಗಿದ್ದಾರೆ. ಚುನಾವಣಾಧಿಕಾರಿಗಳು ಚೀಟಿ ಎತ್ತುವ ಮೂಲಕ ಫಲಿತಾಂಶ ಘೋಷಿಸಿದ್ದಾರೆ. ಚುನಾವಣಾ ಫಲಿತಾಂಶದ ನಂತರ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರು ಹರ್ಷ್ ಮಹಾಜನ್ ಅವರ ಗೆಲುವಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದು ಚುನಾವಣಾ ಫಲಿತಾಂಶದ ಬಗ್ಗೆ ಬಿಜೆಪಿಯನ್ನು ಟೀಕಿಸಿದರು.
“ಮೊದಲನೆಯದಾಗಿ, ಹರ್ಷ್ ಮಹಾಜನ್ ಅವರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಅವರು ಗೆದ್ದಿದ್ದಾರೆ. ಅವರು ನನ್ನ ಅಭಿನಂದನೆಗೆ ಅರ್ಹರು. ಆತ್ಮಾವಲೋಕನ ಮಾಡಿ ಮತ್ತು ಯೋಚಿಸಿ ಎಂದು ನಾನು ಅವರ ಪಕ್ಷಕ್ಕೆ ಹೇಳಲು ಬಯಸುತ್ತೇನೆ. 25 ಸದಸ್ಯರ ಪಕ್ಷವು 43 ಸದಸ್ಯರ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸಿದಾಗ ಅದರಲ್ಲಿರುವುದು ಒಂದೇ ಸಂದೇಶ. ಅದೇನೆಂದರೆ ಕಾನೂನಿನಿಂದ ಅನುಮತಿಸದ ಕೆಲಸವನ್ನು ನಾವು ನಿರ್ಲಜ್ಜವಾಗಿ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಂಘ್ವಿ ಮಾತು
VIDEO | Here’s what Congress leader Abhishek Manu Singhvi (@DrAMSinghvi) said on Congress losing the lone Rajya Sabha seat in Himachal Pradesh to BJP’s Harsh Mahajan.
“I want to give my heartiest congratulations to Harsh Mahajan, he has won. I want to say one thing to his party,… pic.twitter.com/DHzH8NwjEU
— Press Trust of India (@PTI_News) February 27, 2024
ಒಟ್ಟು 68 ಮತಗಳ ಪೈಕಿ 34 ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಪರವಾಗಿದ್ದರೆ, ಉಳಿದ 34 ಮತಗಳು ಬಿಜೆಪಿಯ ಹರ್ಷ್ ಮಹಾಜನ್ ಪರವಾಗಿತ್ತು. ಮತ ಎಣಿಕೆಯ ನಂತರ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಚೀಟಿಯಲ್ಲಿ ಬರೆದು ಆಯ್ಕೆ ಮಾಡಲಾಗಿದೆ. ಚೀಟಿ ಎತ್ತಿದಾಗ ಅದರಲ್ಲಿ ಹರ್ಷ್ ಮಹಾಜನ್ ಹೆಸರಿದ್ದು , ಅವರನ್ನು ವಿಜೇತರೆಂದು ಘೋಷಿಸಲಾಯಿತು. ಹರ್ಷ್ ಮಹಾಜನ್ ಈಗ ರಾಜ್ಯಸಭೆಯಲ್ಲಿ ಹಿಮಾಚಲ ಪ್ರದೇಶವನ್ನು ಪ್ರತಿನಿಧಿಸಲು ಮುಂದುವರಿಯುತ್ತಾರೆ, ಸಂಸತ್ ಸದಸ್ಯರಾಗಿ ದೆಹಲಿಗೆ ಹೋಗುತ್ತಾರೆ.
ಇದನ್ನೂ ಓದಿ: ಇಂಡಿಯಾ ಬಣದ ಪಕ್ಷಗಳು ಸೋಲೊಪ್ಪಿಕೊಂಡಿವೆ: ತಮಿಳುನಾಡಿನಲ್ಲಿ ಪ್ರಧಾನಿ ಮೋದಿ
ಅವರಿಗಿಂತ ಮೊದಲು ಇಂದು ಗೋಸ್ವಾಮಿ ಮತ್ತು ಪ್ರೊಫೆಸರ್ ಸಿಕಂದರ್ ಕುಮಾರ್ ಹಿಮಾಚಲ ಪ್ರದೇಶವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿದ್ದರು. ತಮ್ಮ ವಿಜಯದ ಘೋಷಣೆಯ ನಂತರ, ಹರ್ಷ್ ಮಹಾಜನ್ ಅವರು ರಾಜ್ಯದ ರಾಜಧಾನಿ ಶಿಮ್ಲಾದಲ್ಲಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ, “ಇದು ಬಿಜೆಪಿಯ ಗೆಲುವು, ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವು ಮತ್ತು ಗೃಹ ಸಚಿವ ಅಮಿತ್ ಶಾ ಅವರ ಗೆಲುವು” ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



