WITT Satta Sammelan: 10 ವರ್ಷ ಅಧಿಕಾರದಲ್ಲಿದ್ದರೂ ಎಂಎಸ್​ಪಿ ಗ್ಯಾರಂಟಿ ಯಾಕೆ ಕೊಡಲಿಲ್ಲ? ರಾಹುಲ್ ಗಾಂಧಿಗೆ ಸಚಿವ ಧರ್ಮೇಂದ್ರ ಪ್ರಧಾನ್ ಪ್ರಶ್ನೆ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 27, 2024 | 5:28 PM

What India Thinks Today Global Summit: ಟಿವಿ 9 ನೆಟ್ವರ್ಕ್ ವತಿಯಿಂದ ಆಯೋಜಿಸಲಾದ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT) ಗ್ಲೋಬಲ್ ಸಮಿಟ್ ಸಭೆಯ ಭಾಗವಾಗಿ ಇಂದು ನಡೆದ ಸತ್ತಾ ಸಮ್ಮೇಳನದಲ್ಲಿ (ಪವರ್ ಕಾನ್ಫರೆನ್ಸ್‌), ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವಿಪಕ್ಷ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಂಎಸ್​ಪಿಯನ್ನು ಕಾನೂನುಬದ್ಧ ಖಾತ್ರಿಯಾಗಿ ಮಾಡುವುದೂ ಸೇರಿದಂತೆ ವಿವಿಧ ಭರವಸೆಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿಯನ್ನು ಕುಟುಕುದ್ದಾರೆ ಧರ್ಮೇಂದ್ರ ಪ್ರಧಾನ್.

WITT Satta Sammelan: 10 ವರ್ಷ ಅಧಿಕಾರದಲ್ಲಿದ್ದರೂ ಎಂಎಸ್​ಪಿ ಗ್ಯಾರಂಟಿ ಯಾಕೆ ಕೊಡಲಿಲ್ಲ? ರಾಹುಲ್ ಗಾಂಧಿಗೆ ಸಚಿವ ಧರ್ಮೇಂದ್ರ ಪ್ರಧಾನ್ ಪ್ರಶ್ನೆ
ಧರ್ಮೇಂದ್ರ ಪ್ರಧಾನ್
Follow us on

WITT What India Thinks Today: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಂಗಳವಾರ (ಫೆ. 27) ಟಿವಿ 9 ನ WITT ಸತ್ತಾ ಸಮ್ಮೇಳನದಲ್ಲಿ (Satta Sammelan) ಭಾಗವಹಿಸಿದ್ದರು. ಸಮಾವೇಶದಲ್ಲಿ ಧರ್ಮೇಂದ್ರ ಪ್ರಧಾನ್ ಅವರು ಮೋದಿ ಸರ್ಕಾರಕ್ಕೆ ಸಂಬಂಧಿಸಿದ ಪ್ರಶ್ನೆಗಳ ಜೊತೆಗೆ ರೈತರಿಗೆ ಎಂಎಸ್‌ಪಿಯ ಕಾನೂನು ಖಾತರಿ ನೀಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆಶ್ವಾಸನೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಈಗಾಗಲೇ ಮೋದಿ ಸರಕಾರ ರೈತರಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುತ್ತಿದೆ (ಪಿಎಂ ಕಿಸಾನ್ ಮತ್ತಿತರ ಯೋಜನೆ) ಎಂದು ಹೇಳಿದರು.

ಎಂಎಸ್‌ಪಿಗೆ ಲೀಗಲ್ ಗ್ಯಾರಂಟಿ ನೀಡುವ ರಾಹುಲ್ ಗಾಂಧಿಯವರ ಭರವಸೆ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದರು. ‘ಹೇಳುವುದಕ್ಕೇನು, ಯಾರು ಬೇಕಾದರೂ ಅಸಂಬದ್ಧವಾಗಿ ಮಾತನಾಡಬಹುದು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಕಿಸಾನ್ ನಿಧಿಗೆ ಮೋದಿ ಸರ್ಕಾರ ನೀಡಿದ ಹಣದ ಮೊತ್ತ ಸಣ್ಣದಲ್ಲ’ ಎಂದರು.

ಇದನ್ನೂ ಓದಿ: ಲಾರ್ಡ್ ಮೆಕಾಲೆ ಅವರ ನೀತಿಗಳ ಬಗ್ಗೆ ರಾಮ್‌ದೇವ್ ಹೇಳಿದ್ದೇನು?

‘ರೈತರಿಗೆ ಹಲವು ರೀತಿಯ ಸವಲತ್ತುಗಳು ಸಿಗುತ್ತಿವೆ’

‘ಇಂದು ರೈತರು ಮಾತ್ರವಲ್ಲದೆ ಹಾಲು ಉತ್ಪಾದಕರು, ಜಾನುವಾರು ಸಾಕುವವರು, ಮೀನುಗಾರರು ಕೂಡ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಪ್ರಯೋಜನ ಪಡೆಯುತ್ತಿದ್ದಾರೆ ಪ್ರಧಾನಿ ಮೋದಿಯನ್ನು ಸಹಿಸದ ಜನರು ಇಂತಹ ಆಧಾರರಹಿತ ಮಾತುಗಳನ್ನಾಡುತ್ತಿದ್ದಾರೆ. ಇಷ್ಟೇ ಆಗಿದ್ದರೆ ಹಲವು ದಶಕಗಳಿಂದ ಅಧಿಕಾರ ಹೊಂದಿದ್ದ ಅವರು ಎಂಎಸ್‌ಪಿಗೆ ಏಕೆ ಕಾನೂನು ಖಾತರಿ ನೀಡಲಿಲ್ಲ’ ಎಂದು ಕೇಂದ್ರ ಸಚಿವರು ಹೇಳಿದರು.

ಮೀಸಲಾತಿ ಮಿತಿ ತೆಗೆದುಹಾಕುವ ಭರವಸೆ ಬಗ್ಗೆ…

ಇದೇ ವೇಳೆ, ಶೇ. 50ರ ಮೀಸಲಾತಿಯ ಮಿತಿಯನ್ನು ರದ್ದುಪಡಿಸುವುದಾಗಿ ರಾಹುಲ್ ಗಾಂಧಿ ನೀಡಿರುವ ಭರವಸೆ ಬಗ್ಗೆ ಕೇಂದ್ರ ಸಚಿವರು ವ್ಯಂಗ್ಯ ಮಾಡಿದರು.

ಇದನ್ನೂ ಓದಿ: ರೈತರಿಗೆ ಎಂಎಸ್​​ಪಿ ನೀಡಬೇಕು: ಭಗವಂತ್ ಮಾನ್

‘ಕಾಂಗ್ರೆಸ್ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ, ಅಥವಾ ಇತ್ತೀಚೆಗೆ ಅಧಿಕಾರದಲ್ಲಿ ಇದ್ದ ರಾಜ್ಯಗಳಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿತ್ತಾ? ಅದು ಆಗಿಲ್ಲ. ವಿ.ಪಿ. ಸಿಂಗ್ ಅವರ ಅವಧಿಯಲ್ಲಿ ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿದಾಗ ರಾಜೀವ್ ಗಾಂಧಿ ಏನು ಹೇಳಿದ್ದರು ಎಂಬುದು ರಾಹುಲ್ ಗಾಂಧಿಗೆ ತಿಳಿಯಬೇಕು. ಇತ್ತೀಚಿನ ದಿನಗಳಲ್ಲಿ ಜನರು ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ’ ಎಂದು ಧರ್ಮೇಂದ್ರ ಪ್ರಧಾನ್ ಲೇವಡಿ ಮಾಡಿದರು.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ