ರೈಲಿನೊಳಗೆ ಮ್ಯಾಗಿ ಬೇಯಿಸಿ, ಚಹಾ ಮಾಡಿದ ಮಹಿಳೆ! ರೈಲ್ವೆ ಇಲಾಖೆ ಎಚ್ಚರಿಕೆ

ರೈಲಿನಲ್ಲಿ ವಿದ್ಯುತ್ ಕೆಟಲ್ ಬಳಸಿ ಮ್ಯಾಗಿ ಅಡುಗೆ ಮಾಡುತ್ತಿರುವ ಮಹಿಳೆಯ ವಿರುದ್ಧ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ. ಆ ಮಹಿಳೆಯ ಈ ಕೃತ್ಯ ಗಂಭೀರ ಸುರಕ್ಷತಾ ಕಾಳಜಿಯನ್ನು ಹುಟ್ಟುಹಾಕಿದೆ. ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಿಳೆ ನೀರಿನ ಕೆಟಲ್ ಬಳಸಿ ಮ್ಯಾಗಿ ಅಡುಗೆ ಮಾಡುತ್ತಿರುವುದನ್ನು ವೈರಲ್ ವೀಡಿಯೊದಲ್ಲಿ ನೋಡಬಹುದು. ಇದಕ್ಕೆ ನೆಟ್ಟಿಗರು ಕೂಡ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈಲಿನ ಇತರೆ ಪ್ರಯಾಣಿಕರ ಸುರಕ್ಷತೆಯೊಂದಿಗೆ ಈ ಮಹಿಳೆ ಆಟವಾಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸಿದ್ದಾರೆ.

ರೈಲಿನೊಳಗೆ ಮ್ಯಾಗಿ ಬೇಯಿಸಿ, ಚಹಾ ಮಾಡಿದ ಮಹಿಳೆ! ರೈಲ್ವೆ ಇಲಾಖೆ ಎಚ್ಚರಿಕೆ
Woman Cooks Maggi In Train

Updated on: Nov 21, 2025 | 10:24 PM

ಮುಂಬೈ, ನವೆಂಬರ್ 21: ಭಾರತೀಯ ಎಕ್ಸ್​​ಪ್ರೆಸ್ ರೈಲಿನ ಎಸಿ ಕೋಚ್‌ನೊಳಗೆ ವಿದ್ಯುತ್ ಕೆಟಲ್ ಬಳಸಿ ಮ್ಯಾಗಿ ಬೇಯಿಸಿದ್ದಾರೆ. ಮಹಾರಾಷ್ಟ್ರದ (Maharashtra) ರೈಲಿನಲ್ಲಿ ಈ ಘಟನೆ ನಡೆದಿದೆ. ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ರೈಲಿನೊಳಗೆ ಇರುವ ಪವರ್ ಸಾಕೆಟ್‌ಗೆ ಎಲೆಕ್ಟ್ರಿಕ್ ಕೆಟಲ್ ಅನ್ನು ಪ್ಲಗ್ ಮಾಡಿ ಅದರಲ್ಲಿ ನೀರು ಹಾಕಿ ಮ್ಯಾಗಿ ತಯಾರಿಸಿದ್ದಾರೆ. ನಂತರ ಚಹಾವನ್ನು ಕೂಡ ತಯಾರಿಸಿದ್ದಾರೆ. ಸಾಮಾನ್ಯವಾಗಿ ರೈಲಿನೊಳಗೆ ಇದನ್ನು ಪ್ರಯಾಣಿಕರಿಗೆ ಚಾರ್ಜಿಂಗ್ ಪಾಯಿಂಟ್ ಆಗಿ ಬಳಸಲಾಗುತ್ತದೆ.

ಈ ಪವರ್ ಸಾಕೆಟ್‌ಗಳನ್ನು ಮೊಬೈಲ್ ಚಾರ್ಜರ್‌ಗಳಂತಹ ಕಡಿಮೆ ವ್ಯಾಟೇಜ್ ಸಾಧನಗಳಿಗೆ ಮಾತ್ರ ವಿನ್ಯಾಸಗೊಳಿಸಲಾಗಿದೆಯೇ ಹೊರತು ಕೆಟಲ್‌ಗಳಂತಹ ಹೆಚ್ಚಿನ ಪವರ್ ಉಪಕರಣಗಳಿಗೆ ಅಲ್ಲ. ರೈಲಿನೊಳಗೆ ಇಂತಹ ಸಾಧನಗಳನ್ನು ಬಳಸುವುದರಿಂದ ಅಧಿಕ ಬಿಸಿಯಾಗುವುದು ಅಥವಾ ಶಾರ್ಟ್ ಸರ್ಕ್ಯೂಟ್ ಕೂಡ ಸಂಭವಿಸಬಹುದು. ಈ ರೀತಿ ರೈಲಿನೊಳಗೆ ಹೆಚ್ಚಿನ ವ್ಯಾಟ್ ಇರುವ ಸಾಧನಗಳನ್ನು ಬಳಸುವುದು ಕಾನೂನುಬಾಹಿರ ಮತ್ತು ಗಂಭೀರ ಬೆಂಕಿಯ ಅಪಾಯವಾಗಿದೆ.

ಇದನ್ನೂ ಓದಿ: Video: ರೈಲಿನಲ್ಲಿ ಪ್ರಯಾಣಿಕರು ತಿಂದು ಬಿಸಾಡಿದ್ದ ಬಾಕ್ಸ್​​ ತೊಳೆಯುವಾಗ ಸಿಕ್ಕಿಬಿದ್ದ ರೈಲ್ವೆ ಕ್ಯಾಂಟೀನ್ ಸಿಬ್ಬಂದಿ

ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ವೈರಲ್ ವೀಡಿಯೊವು ಭಾರತೀಯ ರೈಲ್ವೆ ರೈಲುಗಳಲ್ಲಿನ ಪ್ರಯಾಣಿಕರ ನಡವಳಿಕೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ರೆಕಾರ್ಡ್ ಮಾಡಲಾದ ಕ್ಲಿಪ್‌ನಲ್ಲಿ, ಮಹಿಳೆಯೊಬ್ಬರು ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಿದ ಎಲೆಕ್ಟ್ರಿಕ್ ಕೆಟಲ್ ಬಳಸಿ ಮ್ಯಾಗಿ ನೂಡಲ್ಸ್ ತಯಾರಿಸುತ್ತಿರುವುದನ್ನು ತೋರಿಸುತ್ತದೆ.


ವೈರಲ್ ಆಗಿರುವ ವಿಡಿಯೋದಲ್ಲಿ ಆ ಮಹಿಳೆ “ನನಗೆ ರಜೆಯೆಂಬುದೇ ಇಲ್ಲ, ಪ್ರವಾಸಕ್ಕೆ ಹೊರಟಾಗಲೂ ಎಲ್ಲ ಕಡೆಯೂ ಅಡುಗೆಮನೆ ನನ್ನನ್ನು ಕರೆಯುತ್ತದೆ. ನಾನು ಇದ್ದಲ್ಲೇ ಅಡುಗೆಮನೆಯನ್ನು ರೆಡಿ ಮಾಡಿಕೊಳ್ಳುತ್ತೇನೆ” ಎಂದು ಹರ್ಷದಿಂದ ಹೇಳಿದ್ದಾರೆ. ಮ್ಯಾಗಿ ಮಾಡಿದ ನಂತರ ಅದೇ ವಿದ್ಯುತ್ ಕೆಟಲ್ ಬಳಸಿ 15 ಜನರಿಗೆ ಚಹಾ ತಯಾರಿಸಲು ಯೋಜಿಸುತ್ತಿರುವುದಾಗಿ ಆ ಮಹಿಳೆ ಹೇಳಿದ್ದಾರೆ.

ಇದನ್ನೂ ಓದಿ: ದೇವಸ್ಥಾನದೊಳಗೆ ಕುಸಿದು ಬಿದ್ದು ಪ್ರಾಣಬಿಟ್ಟ ವ್ಯಕ್ತಿ; ವಿಡಿಯೋ ವೈರಲ್​

ರೈಲ್ವೆ ಇಲಾಖೆ ಹೇಳಿದ್ದೇನು?:

ಮಹಿಳೆ ರೈಲಿನಲ್ಲಿ ಮ್ಯಾಗಿ ಮತ್ತು ಟೀ ಮಾಡಿದ ಘಟನೆಗೆ ಭಾರತೀಯ ರೈಲ್ವೆ ಪ್ರತಿಕ್ರಿಯಿಸಿದ್ದು, ಆಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ. ಸೆಂಟ್ರಲ್ ರೈಲ್ವೆ ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದು, “ಆ ಮಹಿಳೆಯ ಯೂಟ್ಯೂಬ್ ಚಾನೆಲ್ ಮತ್ತು ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ರೈಲುಗಳ ಒಳಗೆ ಎಲೆಕ್ಟ್ರಾನಿಕ್ ಕೆಟಲ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದು ಅಸುರಕ್ಷಿತ, ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧ” ಎಂದು ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ