ಕಾಳಹಸ್ತಿಯಲ್ಲಿ‌ ಕೊರೊನಾ ಮಹಿಳಾ ವಾರಿಯರ್​ ಮನೆಗೆ ಬೀಗ ಹಾಕಿದ ಮಾಲೀಕ!

|

Updated on: May 06, 2020 | 4:17 PM

ಹೈದರಾಬಾದ್: ಕೊರೊನಾ‌ ಸೋಂಕು ವಿರುದ್ಧದ ಸಮರ ಕಾಲದಲ್ಲಿ ತುರ್ತು ಕಾರ್ಯಗಳಲ್ಲಿ‌ ತೊಡಗಿಸಿಕೊಂಡಿರೋ ಕಂದಾಯ ಇಲಾಖೆಯ ಮಹಿಳಾ ಉದ್ಯೋಗಿಯೊಬ್ಬರು ಬಾಡಿಗೆ ಮನೆಯಲ್ಲಿದ್ದರು. ಆದ್ರೆ ಆ ಮನೆಯ ಮಾಲೀಕ ತಾನು ಬಾಡಿಗೆಗೆ ನೀಡಿದ್ದ ಮನೆಗೆ ಬೀಗ ಹಾಕಿಕೊಂಡು ಹೋಗಿರೋ ಘಟನೆ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಜರುಗಿದೆ. ಚಿತ್ತೂರು ಜಿಲ್ಲಾ ಕಾಳಹಸ್ತಿಯಲ್ಲಿ‌ ಈ ಘಟನೆ ನಡೆದಿದ್ದು, ಮನೆಯ‌ ಮಾಲೀಕನ ಈ ಕೃತ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೊರೊನಾ ತುರ್ತು ಕಾರ್ಯಗಳಿಂದಾಗಿ ಮನೆಯಿಂದ ಹೊರಗಡೆ ಕೆಲಸಕ್ಕೆ ಹೋಗಿದ್ದರು. ಇದರಿಂದಾಗಿ ಮಹಿಳೆಗೆ ಕೊರೊನಾ ಸೋಂಕು […]

ಕಾಳಹಸ್ತಿಯಲ್ಲಿ‌ ಕೊರೊನಾ ಮಹಿಳಾ ವಾರಿಯರ್​ ಮನೆಗೆ ಬೀಗ ಹಾಕಿದ ಮಾಲೀಕ!
Follow us on

ಹೈದರಾಬಾದ್: ಕೊರೊನಾ‌ ಸೋಂಕು ವಿರುದ್ಧದ ಸಮರ ಕಾಲದಲ್ಲಿ ತುರ್ತು ಕಾರ್ಯಗಳಲ್ಲಿ‌ ತೊಡಗಿಸಿಕೊಂಡಿರೋ ಕಂದಾಯ ಇಲಾಖೆಯ ಮಹಿಳಾ ಉದ್ಯೋಗಿಯೊಬ್ಬರು ಬಾಡಿಗೆ ಮನೆಯಲ್ಲಿದ್ದರು. ಆದ್ರೆ ಆ ಮನೆಯ ಮಾಲೀಕ ತಾನು ಬಾಡಿಗೆಗೆ ನೀಡಿದ್ದ ಮನೆಗೆ ಬೀಗ ಹಾಕಿಕೊಂಡು ಹೋಗಿರೋ ಘಟನೆ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಜರುಗಿದೆ.

ಚಿತ್ತೂರು ಜಿಲ್ಲಾ ಕಾಳಹಸ್ತಿಯಲ್ಲಿ‌ ಈ ಘಟನೆ ನಡೆದಿದ್ದು, ಮನೆಯ‌ ಮಾಲೀಕನ ಈ ಕೃತ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೊರೊನಾ ತುರ್ತು ಕಾರ್ಯಗಳಿಂದಾಗಿ ಮನೆಯಿಂದ ಹೊರಗಡೆ ಕೆಲಸಕ್ಕೆ ಹೋಗಿದ್ದರು. ಇದರಿಂದಾಗಿ ಮಹಿಳೆಗೆ ಕೊರೊನಾ ಸೋಂಕು ತಗುಲಿತ್ತು. ನಂತರ ಐಸೋಲೇಷನ್ ವಾರ್ಡನಲ್ಲಿದ್ದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಐಸೋಲೇಷನ್ ಅವಧಿ ಮುಗಿದ ನಂತರ ಮನೆಗೆ ಹೋದಾಗ ಮನೆಯ ಮಾಲೀಕ ಮನೆಗೆ ಬೀಗ ಹಾಕಿರುವುದು ಕಂಡು ಬಂದಿದೆ. ಈ ಬಗ್ಗೆ ಕೇಳಿದಾಗ ಮನೆಯ ಮಾಲೀಕ ಮನೆಯನ್ನು ಖಾಲಿ ಮಾಡುವಂತೆ ಒತ್ತಾಯಿಸಿದ್ದಾನೆ. ಮನೆಯೊಳಕ್ಕೆ‌ ಕಾಲಿಡದಂತೆ ಎಚ್ಚರಿಸಿದ್ದಾನೆ. ಮನೆಗೆ ಹೋಗದಂತೆ ತಡೆದಿದ್ದಾನೆ.

ಮನೆ ಮಾಲೀಕನ‌ ಈ ವರ್ತನೆಯಿಂದ‌ ತಹಶೀಲ್ದಾರ್ ಕಚೇರಿ ಉದ್ಯೋಗಿಯಾದ ಸದರಿ ಮಹಿಳೆ ಕಣ್ಣೀರು ಹಾಕಿದ್ದಾರೆ. ತಮ್ಮ ಉದ್ಯೋಗಿಗೆ ಪರಿಸ್ಥಿತಿ ಗಮನಿಸಿದ ಶ್ರೀಕಾಕುಳಂ ತಹಶೀಲ್ದಾರ್ ಅವರಿಗೆ ಸದ್ಯಕ್ಕೆ ಬೇರೆ ಕಡೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ. ಆದ್ರೆ, ಕೊರೊನಾ ನಿವಾರಣೆಗಾಗಿ ಜನರ ಸೇವೆ ಮಾಡುತ್ತಿರುವವರಿಗೆ ಕೆಲವರು ಈ ರೀತಿಯಾಗಿ ವರ್ತಿಸಿರೋದು ಎಷ್ಟು ಸರಿ ಅನ್ನೋದನ್ನ ಯೋಚಿಸಬೇಕಿದೆ.