ಕೊರೊನಾ ಮದ್ದಿಗಾಗಿ 100ಕ್ಕೂ ಹೆಚ್ಚು ಪ್ರಯತ್ನ, ಯಾವುದು ಸಫಲ? ಯಾವುದು ವಿಫಲ?

ದೆಹಲಿ: ಹೆಮ್ಮಾರಿ ಕೊರೊನಾಗೆ ಬ್ರೇಕ್ ಹಾಕಲು ಅದೆಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗ್ತಿಲ್ಲ. ಈ ಸಂಬಂಧ ಸಂಶೋಧಕರು, ವೈದ್ಯರು ಹಗಲಿರುಳು ಪ್ರಯತ್ನಿಸಿದರೂ ಫಲಿತಾಂಶ ಸಿಗ್ತಿಲ್ಲ. ಎಲ್ಲಿಂದಲೋ ಬಂದು, ಇಡೀ ಜಗತ್ತಿಗೆ ಆವರಿಸಿರುವ ಈ ಡೆಡ್ಲಿ ವೈರಸ್ ಲಕ್ಷಾಂತರ ಜನರನ್ನ ಬಲಿ ಪಡೆದಿದೆ. ಇಂಥ ಹೊತ್ತಲ್ಲೇ ಜಗತ್ತಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಜಗತ್ತಿನ ಬಹುತೇಕ ಸೋಂಕುಗಳಿಗೆ ಸೂಕ್ತ ಮದ್ದು ಸಿಗದೆ ಸಾವಿರಾರು ಜನ ಸಾವಿನ ಮನೆ ಬಾಗಿಲು ತಟ್ತಿದ್ದಾರೆ. ಅದರಲ್ಲೂ ಕೆಲ ಮಾರಣಾಂತಿಕ ಕಾಯಿಲೆಗಳಿಗೆ ಇವತ್ತಿಗೂ ಸರಿಯಾದ ವ್ಯಾಕ್ಸಿನ್ ಲಭ್ಯವಿಲ್ಲ. […]

ಕೊರೊನಾ ಮದ್ದಿಗಾಗಿ 100ಕ್ಕೂ ಹೆಚ್ಚು ಪ್ರಯತ್ನ, ಯಾವುದು ಸಫಲ? ಯಾವುದು ವಿಫಲ?
sadhu srinath

|

May 06, 2020 | 2:56 PM

ದೆಹಲಿ: ಹೆಮ್ಮಾರಿ ಕೊರೊನಾಗೆ ಬ್ರೇಕ್ ಹಾಕಲು ಅದೆಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗ್ತಿಲ್ಲ. ಈ ಸಂಬಂಧ ಸಂಶೋಧಕರು, ವೈದ್ಯರು ಹಗಲಿರುಳು ಪ್ರಯತ್ನಿಸಿದರೂ ಫಲಿತಾಂಶ ಸಿಗ್ತಿಲ್ಲ. ಎಲ್ಲಿಂದಲೋ ಬಂದು, ಇಡೀ ಜಗತ್ತಿಗೆ ಆವರಿಸಿರುವ ಈ ಡೆಡ್ಲಿ ವೈರಸ್ ಲಕ್ಷಾಂತರ ಜನರನ್ನ ಬಲಿ ಪಡೆದಿದೆ. ಇಂಥ ಹೊತ್ತಲ್ಲೇ ಜಗತ್ತಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ.

ಜಗತ್ತಿನ ಬಹುತೇಕ ಸೋಂಕುಗಳಿಗೆ ಸೂಕ್ತ ಮದ್ದು ಸಿಗದೆ ಸಾವಿರಾರು ಜನ ಸಾವಿನ ಮನೆ ಬಾಗಿಲು ತಟ್ತಿದ್ದಾರೆ. ಅದರಲ್ಲೂ ಕೆಲ ಮಾರಣಾಂತಿಕ ಕಾಯಿಲೆಗಳಿಗೆ ಇವತ್ತಿಗೂ ಸರಿಯಾದ ವ್ಯಾಕ್ಸಿನ್ ಲಭ್ಯವಿಲ್ಲ. ಇದೇ ರೀತಿ ಕೊರೊನಾ ವೈರಸ್​ಗೆ ಔಷಧ ಲಭ್ಯವಾಗದೇ ಇರುವುದು ಜಗತ್ತಿನ ನಿದ್ದೆಗೆಡಿಸಿದ್ದು, ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ.

ಕೊರೊನಾಗೆ ಮದ್ದು ಕಂಡುಹಿಡಿಯಲು ಸರ್ಕಸ್! ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ಜಗತ್ತಿಗೇ ಜಗತ್ತೇ ಹೈರಾಣಾಗಿದೆ. ಅದರಲ್ಲೂ ಶ್ರೀಮಂತ ರಾಷ್ಟ್ರಗಳು ಕೊರೊನಾ ವೈರಸ್ ಕಾಟಕ್ಕೆ ಬೆಚ್ಚಿಬಿದ್ದಿವೆ. ಆರ್ಥಿವಾಗಿ ಉತ್ತುಂಗಕ್ಕೆ ಏರಿದ್ದ ರಾಷ್ಟ್ರಗಳೆಲ್ಲಾ ಬೀದಿಗೆ ಬೀಳುವ ಆಪತ್ತು ಎದುರಾಗಿದೆ. ಇಂತಹ ಹೊತ್ತಲ್ಲೇ ಕೊರೊನಾಗೆ ಮದ್ದು ಕಂಡುಹಿಡಿಯಲು ಸರ್ಕಸ್ ಮುಂದುವರಿದಿದೆ.

ಆದ್ರೂ ಈ ಪ್ರಯತ್ನದಲ್ಲಿ ಸಕ್ಸಸ್ ಸಿಗ್ತಿಲ್ಲ. ಈಗಾಗ್ಲೇ ಹಲವು ವ್ಯಾಕ್ಸಿನ್​ಗಳು ಫ್ಲಾಪ್ ಆಗಿದ್ದು ನೂರಾರು ಔಷಧ ಸಂಸ್ಥೆಗಳು ಕ್ರೂರಿಗೆ ಮದ್ದು ಕಂಡುಹಿಡಿಯುವ ಪ್ರಯತ್ನದಲ್ಲಿವೆ. ಇದಕ್ಕೂ ಮೊದ್ಲು ವ್ಯಾಕ್ಸಿನ್ ಟ್ರಯಲ್ ಮಾಡಿದ ಸಂಶೋಧಕರು ಫ್ಲಾಪ್ ಆಗಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮತ್ತಷ್ಟು ಭೀಕರ ಸ್ವರೂಪ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ವ್ಯಾಕ್ಸಿನ್ ಸಿಗದಿದ್ದರೆ ಸಾವಿರಾರು ಸಮಸ್ಯೆ! ಎಲ್ಲರಿಗೂ ಗೊತ್ತಿರುವಂತೆ ಹೆಚ್​ಐವಿ, ಡೆಂಘಿ ಸೇರಿದಂತೆ ಹಲವಾರು ಮಾರಣಾಂತಿಕ ರೋಗಗಳಿಗೆ ಇವತ್ತಿಗೂ ಸೂಕ್ತ ಮದ್ದು ಇಲ್ಲ. ಇದರ ಪರಿಣಾಮ ಲಕ್ಷಾಂತರ ಜನ ಪ್ರತಿವರ್ಷ ಮಾರಣಾಂತಿಕ ರೋಗಗಳಿಗೆ ಜೀವ ಬಿಡ್ತಿದ್ದಾರೆ. ಇದೇ ರೀತಿ ಕೊರೊನಾಗೂ ಸೂಕ್ತವಾದ ವ್ಯಾಕ್ಸಿನ್ ಸಿಗದಿದ್ದರೆ ಅದರ ಪರಿಣಾಮ ತೀರಾ ಅಪಾಯಕಾರಿಯಾಗಲಿದೆ.

ಇದೇ ಕಾರಣಕ್ಕೆ ಜಗತ್ತಿನ ಘಟಾನುಘಟಿ ಔಷಧ ಕಂಪನಿಗಳು ವ್ಯಕ್ಸಿನ್ ತಯಾರಿಕೆಗೆ ಚಡಪಡಿಸುತ್ತಿದ್ದರೂ ಯಾವುದೇ ರೀತಿಯ ಸಕ್ಸಸ್ ಕಾಣ್ತಿಲ್ಲ. ಈ ಬೆಳವಣಿಗೆಗಳು ಭವಿಷ್ಯದ ದೃಷ್ಟಿಯಿಂದ ಭಾರಿ ಆತಂಕ ಸೃಷ್ಟಿ ಮಾಡುತ್ತಿವೆ.

ಒಟ್ನಲ್ಲಿ ಸದ್ಯದ ಪರಿಸ್ಥಿತಿ ಗಮನಿಸಿದ್ರೆ ಕೊರೊನಾ ವಿಚಾರದಲ್ಲಿ ಎಲ್ಲವೂ ಅಯೋಮಯವಾಗ್ತಿದೆ. ಈಗಾಗಲೇ ಎರಡೂವರೆ ಲಕ್ಷ ಸೋಂಕಿತರು ಕೊರೊನಾಗೆ ಬಲಿಯಾಗಿದ್ದು, 40 ಲಕ್ಷಕ್ಕೂ ಹೆಚ್ಚು ಜನರನ್ನ ಕೊರೊನಾ ಬಾಧಿಸಿದೆ. ಮುಂದೆ ಸೋಂಕು ಮನ್ನಷ್ಟು ಭೀಕರ ಸ್ವರೂಪ ತಾಳುವ ಸಾಧ್ಯತೆ ಇದ್ದು, ಇಡೀ ಜಗತ್ತು ಇದಕ್ಕೆ ಸಜ್ಜಾಗಿ ನಿಲ್ಲಬೇಕಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada