ಟಿ-ಶರ್ಟ್​ ಮೇಲೆ ನನ್ನ ಫೋಟೊ ಹಾಕೋಕೆ ಯಾರ್ರೀ ಪರ್ಮಿಷನ್ ಕೊಟ್ಟೋರು? ಪ್ರಿಯಾಂಕಾ ವಿರುದ್ಧ ಮಿಂಟಾ ದೇವಿ ವಾಗ್ದಾಳಿ

ಟಿ-ಶರ್ಟ್​ ಮೇಲೆ ನನ್ನ ಹೆಸರು, ಫೋಟೊ ಹಾಕೋಕೆ ಯಾರ್ರೀ ಪರ್ಮಿಷನ್ ಕೊಟ್ಟೋರು ಎಂದು ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ವಿರುದ್ಧ ಮಿಂಟಾ ದೇವಿ ವಾಗ್ದಾಳಿ ನಡೆಸಿದ್ದಾರೆ. ಬಿಹಾರದ ಸಿವಾನ್‌ನ ಮಿಂಟಾ ದೇವಿ ಅವರು ದೆಹಲಿಯಲ್ಲಿ ಮಿಂಟಾ ದೇವಿ ಹೆಸರಿರುವ ಟಿ-ಶರ್ಟ್ ಧರಿಸಿ ಪ್ರತಿಭಟನೆ ನಡೆಸುತ್ತಿದ್ದರಿಂದ ಇದ್ದಕ್ಕಿದ್ದಂತೆ ಸುದ್ದಿಯಾದರು. ಆದರೆ ತನ್ನ ಯಾಕೆ ನೀವು ರಾಜಕೀಯಕ್ಕೆ ಎಳೆಯುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಟಿ-ಶರ್ಟ್​ ಮೇಲೆ ನನ್ನ ಫೋಟೊ ಹಾಕೋಕೆ ಯಾರ್ರೀ ಪರ್ಮಿಷನ್ ಕೊಟ್ಟೋರು? ಪ್ರಿಯಾಂಕಾ ವಿರುದ್ಧ ಮಿಂಟಾ ದೇವಿ ವಾಗ್ದಾಳಿ
ಪ್ರಿಯಾಂಕಾ ಗಾಂಧಿ
Image Credit source: Hindustan Times

Updated on: Aug 13, 2025 | 2:54 PM

ಪಾಟ್ನಾ, ಆಗಸ್ಟ್​ 13: ಟಿ-ಶರ್ಟ್​ ಮೇಲೆ ನನ್ನ ಹೆಸರು, ಫೋಟೊ ಹಾಕೋಕೆ ಯಾರ್ರೀ ಪರ್ಮಿಷನ್ ಕೊಟ್ಟೋರು ಎಂದು ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ(Priyanka Gandhi) ವಿರುದ್ಧ ಮಿಂಟಾ ದೇವಿ ವಾಗ್ದಾಳಿ ನಡೆಸಿದ್ದಾರೆ. ಬಿಹಾರದ ಸಿವಾನ್‌ನ ಮಿಂಟಾ ದೇವಿ ಅವರು ದೆಹಲಿಯಲ್ಲಿ ಮಿಂಟಾ ದೇವಿ ಹೆಸರಿರುವ ಟಿ-ಶರ್ಟ್ ಧರಿಸಿ ಪ್ರತಿಭಟನೆ ನಡೆಸುತ್ತಿದ್ದರಿಂದ ಇದ್ದಕ್ಕಿದ್ದಂತೆ ಸುದ್ದಿಯಾದರು. ಆದರೆ ತನ್ನ ಯಾಕೆ ನೀವು ರಾಜಕೀಯಕ್ಕೆ ಎಳೆಯುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕರು ಮಿಂಟಾ ದೇವಿಯನ್ನು ನಕಲಿ ಮತದಾರರು ಎಂದು ಕರೆದು ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣಾ ಪ್ರಕ್ರಿಯೆಯ ಬಗ್ಗೆ ಗದ್ದಲ ಸೃಷ್ಟಿಸಿದರು.ಈಗ ಮಿಂಟಾ ದೇವಿಗೆ ಈ ವಿಷಯ ತಿಳಿದಾಗ ಅವರು ಕೋಪಗೊಂಡರು. ನನಗೆ ಪ್ರಿಯಾಂಕಾ ಗಾಂಧಿ ಅಥವಾ ರಾಹುಲ್ ಗಾಂಧಿ ಯಾರು? ನನ್ನ ಚಿತ್ರವಿರುವ ಟಿ-ಶರ್ಟ್ ಧರಿಸುವ ಹಕ್ಕನ್ನು ಅವರಿಗೆ ಯಾರು ಕೊಟ್ಟರು? ಎಂದು ಪ್ರಶ್ನಿಸಿದ್ದಾರೆ.

ಎರಡು-ನಾಲ್ಕು ದಿನಗಳ ಹಿಂದೆ ನನಗೆ ಇದರ ಬಗ್ಗೆ ತಿಳಿಯಿತು, ತನಗೆ ಯಾವುದೇ ಆಡಳಿತ ಅಧಿಕಾರಿಯಿಂದ ಇದುವರೆಗೂ ಕರೆ ಬಂದಿಲ್ಲ.ಸರ್ಕಾರದ ದೃಷ್ಟಿಯಲ್ಲಿ ನನಗೆ 124 ವರ್ಷವಾಗಿದ್ದರೆ, ಸರ್ಕಾರ ನನಗೆ ವೃದ್ಧಾಪ್ಯ ಪಿಂಚಣಿ ನೀಡುತ್ತಿಲ್ಲ ಏಕೆ?124 ವರ್ಷ ವಯಸ್ಸಿನವರಿಗೆ ನೀಡಬೇಕಾದ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಸರ್ಕಾರ ನನಗೆ ನೀಡಬೇಕು ಅಥವಾ ಮತದಾರರ ಗುರುತಿನ ಚೀಟಿಯಲ್ಲಿ ನನ್ನ ವಿವರಗಳನ್ನು ಸರಿಪಡಿಸಬೇಕು ಎಂದು ಮಿಂಟಾ ದೇವಿ ಒತ್ತಾಯಿಸಿದ್ದಾರೆ.

ಮತ್ತಷ್ಟು ಓದಿ: ‘ಆಧಾರ್ ಪೌರತ್ವದ ದಾಖಲೆಯಲ್ಲ’; ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಬೆಂಬಲ

ಸಿವಾನ್‌ನ ಉಪ ಚುನಾವಣಾ ಅಧಿಕಾರಿ ಸೊಹೈಲ್ ಅಹ್ಮದ್ ಅವರು, ಫಾರ್ಮ್ ಆರರ ಅಡಿಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಆನ್‌ಲೈನ್ ಅರ್ಜಿಯಲ್ಲಿ ಮಿಂಟಾ ದೇವಿ ಅವರೇ ಜನ್ಮ ದಿನಾಂಕದಲ್ಲಿ ತಮ್ಮ ವರ್ಷವನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾರೆ.

ಈ ದೋಷವನ್ನು ಬಿಎಲ್‌ಒ ಗಮನಿಸಿದಾಗ, ಅವರು ಮಿಂಟಾ ದೇವಿ ಅವರನ್ನು ಸಂಪರ್ಕಿಸಿ ಆಗಸ್ಟ್ 10 ರಂದು ತಿದ್ದುಪಡಿಗಾಗಿ ಅರ್ಜಿಯನ್ನು ಪಡೆದರು. ನನ್ನ ಮತದಾರರ ಗುರುತಿನ ಚೀಟಿಯನ್ನು ಸರಿಪಡಿಸಬೇಕು ಎಂಬುದು ಒಂದೇ ವಿನಂತಿ ಎಂದು ಅವರು ಹೇಳಿದರು. ಈ ತಪ್ಪಿನಿಂದಾಗಿ ಇಡೀ ಕುಟುಂಬ ಒತ್ತಡದಲ್ಲಿದೆ. ಅವರು ಸಿವಾನ್ ಮೂಲದವರಾಗಿದ್ದು, ಪ್ರಸ್ತುತ ಚಪ್ರಾದ ಮುಫಾಸಿಲ್ ಪೊಲೀಸ್ ಠಾಣೆ ಪ್ರದೇಶದ ಪ್ರಭುನಾಥ ನಗರದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ