ಆನ್‌ಲೈನ್‌ನಲ್ಲಿ ವಿದ್ಯುತ್ ಬಿಲ್(Electricity Bill) ಪಾವತಿ ಮಾಡಲು ಸಹಾಯ ಮಾಡುವ ನೆಪದಲ್ಲಿ ಸೈಬರ್ ವಂಚಕನೊಬ್ಬ ಮಹಿಳೆಗೆ 1.37 ಲಕ್ಷ ರೂ. ವಂಚಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಅಂಧೇರಿಯಲ್ಲಿ ಮಹಿಳೆಯೊಬ್ಬರು ತಮ್ಮ ವೃದ್ಧ ತಾಯಿಯ ಜತೆ ವಾಸವಾಗಿದ್ದರು, ಅವರ ತಾಯಿಯ ಮೊಬೈಲ್ಗೆ ಒಂದು ಸಂದೇಶ ಬಂದಿತ್ತು, ವಿದ್ಯುತ್ ಬಿಲ್ ಕಟ್ಟದಿದ್ದರೆ ರಾತ್ರಿ 9.30ಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಸಂದೇಶದಲ್ಲಿ ಬರೆಯಲಾಗಿತ್ತು. ಸಂದೇಶದ ನಂತರ ತಾಯಿಗೆ ಸೈಬರ್ ವಂಚಕನಿಂದ ಕರೆ ಬಂದಿತ್ತು, ಬಳಿಕ ಆತಂಕಗೊಂಡಿದ್ದರು.
ಸೈಬರ್ ವಂಚಕ ದೂರುದಾರರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ವಿಡಿಯೋ ಕರೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಸಹಾಯ ಮಾಡಲು ವಂಚಕನು ಮುಂದಾಗಿದ್ದಾನೆ. ದೂರುದಾರರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಕರು ಅನಧಿಕೃತವಾಗಿ ಡೆಬಿಟ್ ಕಾರ್ಡ್‌ನ ಪ್ರಮುಖ ವಿವರಗಳನ್ನು ಪಡೆದು ಒಟ್ಟು 1.37 ಲಕ್ಷ ರೂ. ವಂಚನೆ ಮಾಡಿದ್ದಾನೆ.
ಮತ್ತಷ್ಟು ಓದಿ: ಗ್ಯಾಸ್ ಕಂಪನಿಯ ಡೀಲರ್ ಶಿಪ್ ಸಿಗುತ್ತೆಂದು ನಂಬಿ 45 ಲಕ್ಷ ರೂ. ಕಳೆದುಕೊಂಡ ನಿವೃತ್ತ ಪ್ರಾಂಶುಪಾಲ
ಮಹಿಳೆಯ ದೂರಿನ ಆಧಾರದ ಮೇಲೆ ಇದೀಗ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಮೇ ತಿಂಗಳಲ್ಲಿ ಇದೇ ರೀತಿ ಘಟನೆಯೊಂದು ನಡೆದಿತ್ತು, 76 ವರ್ಷದ ಉಷಾ ಎಂಬುವವರು ಕೇವಲ 4 ನಿಮಿಷಗಳಲ್ಲಿ 9.48 ಲಕ್ಷ ರೂ. ಕಳೆದುಕೊಂಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:01 pm, Tue, 3 October 23