ಖಾಕಿಯನ್ನೂ ಬಿಡದ ಸೈಬರ್ ವಂಚಕರು, ಕಾನ್ಸ್​ಟೇಬಲ್​ಗೆ 73 ಸಾವಿರ ಪಂಗನಾಮ; ಪೊಲೀಸರಿಗೂ ಕಗ್ಗಂಟಾದ ಸೈಬರ್ ಖದೀಮರು

ಒಬ್ಬೊಬ್ಬ ಸೈಬರ್ ವಂಚಕನ ಬಳಿ 100-200 ಸಿಮ್​ಗಳಿವೆ. ಒಂದು ವಂಚನೆ ಸಕ್ಸಸ್ ಆಗುತ್ತಿದ್ದಂತೆ ಆ ವಂಚನೆಗೆ ಬಳಸಲಾಗಿದ್ದ ಸಿಮ್ ಕಾರ್ಡ್ ಬಿಸಾಡಲಾಗುತ್ತೆ.

ಖಾಕಿಯನ್ನೂ ಬಿಡದ ಸೈಬರ್ ವಂಚಕರು, ಕಾನ್ಸ್​ಟೇಬಲ್​ಗೆ 73 ಸಾವಿರ ಪಂಗನಾಮ; ಪೊಲೀಸರಿಗೂ ಕಗ್ಗಂಟಾದ ಸೈಬರ್ ಖದೀಮರು
ಸೈಬರ್ ವಂಚಕರು ಬಳಸಿದ ಸಿಮ್ ಕಾರ್ಡ್​ಗಳು
Follow us
| Updated By: ಆಯೇಷಾ ಬಾನು

Updated on:Feb 28, 2023 | 9:06 AM

ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಸೈಬರ್ ವಂಚಕರ ಹಾವಳಿ ಮಿತಿಮೀರಿದೆ. ಅದರಲ್ಲೂ ಈ ಖದೀಮರು ಪೊಲೀಸರನ್ನೂ ಬಿಡದೆ ವಂಚನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪೊಲೀಸ್​ ಕಾನ್ಸ್​ಟೇಬಲ್​ ಭದ್ರಯ್ಯ ಎಂಬುವವರಿಗೆ ಬ್ಯಾಂಕ್ ಖಾತೆ ಬ್ಲಾಕ್​ ಆಗಿದೆ ಅಂತಾ ಹೇಳಿ 73 ಸಾವಿರ ವಂಚನೆ ಮಾಡಿದ್ದಾರೆ.

ಕಾನ್ಸ್​ಟೇಬಲ್​ ಭದ್ರಯ್ಯ ಅವರಿಗೆ ಕರೆ ಮಾಡಿದ್ದ ವಂಚಕರು, ನಿಮ್ಮ ಎಸ್​ಬಿಐ ಅಕೌಂಟ್ ಬ್ಲಾಕ್ ಆಗಿದೆ, ಪಾನ್​ಕಾರ್ಡ್ ಅಪ್ಡೇಟ್ ಮಾಡಬೇಕೆಂದು ಹೇಳಿದ್ದಾರೆ. ಬಳಿಕ ಭದ್ರಯ್ಯ ಮೊಬೈಲ್​ ವಾಟ್ಸಾಪ್​ಗೆ ಲಿಂಕ್ ಕಳಿಸಿದ್ದಾರೆ. ಲಿಂಕ್ ಕ್ಲಿಕ್ ಮಾಡಿದಾಗ ಎರಡು ಖಾತೆಯಲ್ಲಿದ್ದ ಹಣ ವರ್ಗಾವಣೆಯಾಗಿದೆ. SBI ಕಸ್ಟಮರ್ ಕೇರ್​ನಿಂದ ಕರೆ ಮಾಡಿರುವುದಾಗಿ ನಂಬಿಸಿ ವಂಚನೆ ಮಾಡಲಾಗಿದೆ. ಅದರಲ್ಲೂ ಭದ್ರಯ್ಯ ಎರಡು ಖಾತೆಗೂ ಒಂದೇ ನಂಬರ್ ಲಿಂಕ್ ಮಾಡಿಸಿದ್ದರಿಂದ ಎರಡು ಖಾತೆಯ ಹಣವೂ ವರ್ಗಾವಣೆಯಾಗಿದೆ. ಎರಡು ಖಾತೆಯಲ್ಲಿದ್ದ ಸುಮಾರು 75 ಸಾವಿರ ಮಂಗಮಾಯವಾಗಿದೆ. ಸದ್ಯ ಸಿಎಆರ್ ಪೊಲೀಸ್ ಕಾನ್ಸ್​ಟೇಬಲ್​ ಭದ್ರಯ್ಯ ಈ ಬಗ್ಗೆ ಆಗ್ನೇಯ ವಿಭಾಗದ ಸಿಇಎನ್​ ಠಾಣೆಗೆ ದೂರು ನೀಡಿದ್ದಾರೆ.

ಸೈಬರ್ ವಂಚಕರನ್ನು ಹಿಡಿಯಲು ಪೊಲೀಸರು ವಿಫಲವಾಗಲು ಕಾರಣವೇನು?

ಒಬ್ಬೊಬ್ಬ ಸೈಬರ್ ವಂಚಕನ ಬಳಿ 100-200 ಸಿಮ್​ಗಳಿವೆ. ಒಂದು ವಂಚನೆ ಸಕ್ಸಸ್ ಆಗುತ್ತಿದ್ದಂತೆ ಆ ವಂಚನೆಗೆ ಬಳಸಲಾಗಿದ್ದ ಸಿಮ್ ಕಾರ್ಡ್ ಬಿಸಾಡಲಾಗುತ್ತೆ. ಇಂತಹ ನಯವಂಚಕರಿಗೆ ಸಿಮ್ ಕಾರ್ಡ್​ಗಳು ಬರ್ತಾ ಇರೋದು ರಾಜಸ್ತಾನದ ಭರತ್ ಪುರ್ ನಿಂದ. ಒಬ್ಬೊಬ್ಬರಿಗೆ ಕೊರಿಯರ್ ಮೂಲಕ 100-200 ಸಿಮ್​ಗಳು ಬರುತ್ತಿವೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: TMC Twitter Account Hacked: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ನ ಟ್ವಿಟ್ಟರ್ ಖಾತೆ ಹ್ಯಾಕ್

ಸಿಮ್ ಕಾರ್ಡ್​ಗಳ ಮಾಫಿಯಾ ಹೇಗೆಲ್ಲಾ ನಡೀಯುತ್ತೆ ಗೊತ್ತಾ?

ಖದೀಮರು ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಜಾರ್ಖಂಡ್, ರಾಜಸ್ತಾನ ಹಾಗೂ ದೆಹಲಿಯ ಹೆಸರಿನಲ್ಲಿ ಸಿಮ್ ಕಾರ್ಡ್​ಗಳನ್ನು ಖರೀದಿಸಿ ವಂಚನೆ ಮಾಡುತ್ತಿದ್ದಾರೆ. ವಂಚನೆ ಆದ ಬಳಿಕ ಸಿಮ್ ಕಾರ್ಡ್ ಹಿಡಿದು ಹೋದ್ರೆ ಅಮಾಯಕರು ಸಿಕ್ತಾ ಇದ್ದಾರೆ. ಅದು ಎಂತವರು ಅಂದ್ರೆ ಒಂದು ಹೊತ್ತಿಗೂ ಊಟಕ್ಕೆ ಗತಿ ಇಲ್ಲದವರು ಎಂದು ಡಿಸಿಪಿ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಆಧಾರ್ ಕಾರ್ಡ್, ವೋಟರ್ ಐಡಿ ರಿನೀವಲ್ ಹೆಸರಲ್ಲಿ ಸೈಬರ್ ವಂಚಕರು ಮನೆ ಮನೆಗೂ ಭೇಟಿ ನೀಡುತ್ತಿದ್ದಾರೆ. ಒಂದು ಮಿಷನ್ ತಗೊಂಡು ಹೋಗಿ ಅದರಲ್ಲಿ ಅವರ ಫಿಂಗರ್ ಕಲೆಕ್ಟ್ ಮಾಡಿಕೊಳ್ಳುತ್ತಿದ್ದಾರೆ. ನಂತರ ಅದೇ ಫಿಂಗರ್ ಬಳಸಿ ಅವರಿಗೆ ಗೊತ್ತಾಗದ ಹಾಗೆ 10-15 ಸಿಮ್ ಖರೀದಿ ಮಾಡುತ್ತಾರೆ. ಒಂದು ವೇಳೆ ಪೊಲೀಸರು ಅಡ್ರಸ್ ಟ್ರೇಸ್ ಮಾಡಿದರೂ ತಾವು ಸಿಕ್ಕಿ ಬೀಳದ ಹಾಗೆ ಸೈಬರ್ ವಂಚಕರು ಫ್ಲ್ಯಾನ್ ಮಾಡಿಕೊಳ್ಳುತ್ತಾರೆ. ಇದಿಷ್ಟೇ ಅಲ್ಲದೆ ಇದೇ ತರ ಹತ್ತಾರು ನಕಲಿ ದಾಖಲೆ ನೀಡಿ ಬ್ಯಾಂಕ್ ಅಕೌಂಟ್​ಗಳನ್ನು ಸಹ ಓಪನ್ ಮಾಡಿಕೊಂಡಿದ್ದಾರೆ. ಒಂದು ಕೇಸ್ ಠಾಣೆಯಲ್ಲಿ ದಾಖಲಾಗಿದ್ದೇ ತಡ ನಂಬರ್ ಹಾಗೂ ಅಡ್ರಸ್ ಜಾಡು ಹಿಡಿದು ಪೊಲೀಸರು ತನಿಖೆಗೆ ಮುಂದಾಗುತ್ತಾರೆ. ಆದ್ರೆ ಅಲ್ಲಿ ಹೋದರು ಬಿರಿಗೈಲಿ ವಾಪಸ್ ಆಗುಬೇಕಾಗುತ್ತೆ. ಯಾವುದೇ ವಂಚಕರು ಸಿಗ್ತಿಲ್ಲ. ಹೀಗಾಗಿ ನಕಲಿ ಸಿಮ್ ಕಾರ್ಡ್ ಹಾಗೂ ನಕಲಿ ಅಕೌಂಟ್ ಎರಡು ನಮಗೆ ಚ್ಯಾಲೆಂಜಿಂಗ್ ಆಗಿದೆ. ಇದೇ ಕಾರಣಕ್ಕೆ ಶೇ 60-70 ರಷ್ಟು ಸೈಬರ್ ಕೇಸ್ ಪತ್ತೆ ಮಾಡಲು ಆಗ್ತಿಲ್ಲ ಎಂದು ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:06 am, Tue, 28 February 23

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್