AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಜೀವನದಲ್ಲಿ ಯಶಸ್ಸು ಕಾಣಬೇಕೆಂದರೆ ಈ ಐದು ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

ಡಾ. ಬಸವರಾಜ ಗುರೂಜಿ ಅವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಐದು ವಿಷಯಗಳನ್ನು ಯಾರಿಗೂ ಹೇಳಬಾರದು ಎಂದು ಸಲಹೆ ನೀಡಿದ್ದಾರೆ. ಅವುಗಳೆಂದರೆ ಆರ್ಥಿಕ ನಷ್ಟ, ಮನಸ್ತಾಪಗಳು, ಮನೆಯಲ್ಲಿನ ದುಶ್ಚರಿತಗಳು, ವಂಚನೆ ಮತ್ತು ಅಪಮಾನಗಳು. ಈ ವಿಷಯಗಳನ್ನು ಗುಪ್ತವಾಗಿಟ್ಟುಕೊಳ್ಳುವುದರಿಂದ ಜೀವನದಲ್ಲಿ ಪ್ರಗತಿ ಮತ್ತು ಶ್ರೇಯಸ್ಸು ಸಾಧಿಸಲು ಸಹಾಯವಾಗುತ್ತದೆ ಎಂದು ಗುರೂಜಿ ಎಚ್ಚರಿಸಿದ್ದಾರೆ.

Daily Devotional: ಜೀವನದಲ್ಲಿ ಯಶಸ್ಸು ಕಾಣಬೇಕೆಂದರೆ ಈ ಐದು ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
Five Secrets To Keep To Yourself
ಅಕ್ಷತಾ ವರ್ಕಾಡಿ
|

Updated on:Jun 20, 2025 | 10:23 AM

Share

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ ಬಸವರಾಜ ಗುರೂಜಿ ಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಜೀವನದಲ್ಲಿ ಯಶಸ್ಸು ಮತ್ತು ಶಾಂತಿಯನ್ನು ಪಡೆಯಲು ಐದು ವಿಷಯಗಳನ್ನು ಎಂದಿಗೂ ಹಂಚಿಕೊಳ್ಳಬಾರದು ಎಂದು ಒತ್ತಿ ಹೇಳಿದ್ದಾರೆ. ಈ ವಿಷಯಗಳನ್ನು ಹಂಚಿಕೊಳ್ಳುವುದರಿಂದ ವ್ಯಕ್ತಿಯ ಖ್ಯಾತಿ ಮತ್ತು ಮಾನಸಿಕ ಶಾಂತಿಗೆ ಹಾನಿಯಾಗಬಹುದು. ಈ ಐದು ವಿಷಯಗಳನ್ನು “ಪಂಚ ವಿಷಯಗಳು” ಎಂದು ಕರೆಯಲಾಗುತ್ತದೆ ಮತ್ತು ಅವುಗಳನ್ನು ಗೌಪ್ಯವಾಗಿಟ್ಟುಕೊಳ್ಳುವುದು ಪುರಾಣ ಮತ್ತು ಧರ್ಮಶಾಸ್ತ್ರಗಳಲ್ಲಿಯೂ ಉಲ್ಲೇಖಿಸಲಾಗಿದೆ. ಇದು ಕೇವಲ ಸಲಹೆಯಲ್ಲ, ಇದು ಜೀವನದ ಅನುಭವಗಳಿಂದ ಪಡೆದ ಜ್ಞಾನ ಎಂದು ಗುರೂಜಿ ವಿವರಸಿದ್ದಾರೆ.

ಆರ್ಥಿಕ ನಷ್ಟ ಅಥವಾ ಹಣಕಾಸಿನ ಸಮಸ್ಯೆ:

ಮೊದಲನೆಯದಾಗಿ, ಆರ್ಥಿಕ ನಷ್ಟ ಅಥವಾ ಹಣಕಾಸಿನ ಸಮಸ್ಯೆಗಳನ್ನು ಸಮಾಜದಲ್ಲಿ ಹಂಚಿಕೊಳ್ಳುವುದು ವ್ಯಕ್ತಿಯನ್ನು ದುರ್ಬಲವಾಗಿಸುತ್ತದೆ. ಹಣಕಾಸಿನ ಸಮಸ್ಯೆಗಳು ವೈಯಕ್ತಿಕ ಮತ್ತು ಸೂಕ್ಷ್ಮವಾದ ವಿಷಯವಾಗಿದ್ದು, ಅದನ್ನು ಗೌಪ್ಯವಾಗಿಟ್ಟುಕೊಳ್ಳುವುದು ಉತ್ತಮ.

ಕುಟುಂಬ ಸದಸ್ಯರೊಂದಿಗಿನ ಮನಸ್ತಾಪ:

ಎರಡನೆಯದಾಗಿ, ಕುಟುಂಬ ಸದಸ್ಯರೊಂದಿಗಿನ ಮನಸ್ತಾಪಗಳು ಅಥವಾ ಜಗಳಗಳ ಬಗ್ಗೆ ಹೊರಗಿನವರಿಗೆ ಹೇಳುವುದು ಸಂಬಂಧಗಳಿಗೆ ಹಾನಿ ಮಾಡಬಹುದು. ಈ ವಿಷಯಗಳನ್ನು ಕುಟುಂಬದೊಳಗೆ ಬಗೆಹರಿಸಿಕೊಳ್ಳುವುದು ಹೆಚ್ಚು ಸೂಕ್ತ ಎಂದು ಗುರೂಜಿ ಎಚ್ಚರಿಸಿದ್ದಾರೆ

ವಿಡಿಯೋ ಇಲ್ಲಿದೆ ನೋಡಿ:

ಅಹಿತಕರ ಘಟನೆ:

ಮೂರನೆಯದಾಗಿ, ಮನೆಯಲ್ಲಿ ನಡೆದ ದುಶ್ಚರಿತಗಳು ಅಥವಾ ಅಹಿತಕರ ಘಟನೆಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರುವುದು ಮನೆಯ ಶಾಂತಿಯನ್ನು ಕಾಪಾಡುತ್ತದೆ. ಇಂತಹ ವಿಷಯಗಳನ್ನು ಹಂಚಿಕೊಳ್ಳುವುದು ಅನಗತ್ಯ ಚರ್ಚೆ ಮತ್ತು ಅಪನಂಬಿಕೆಗೆ ಕಾರಣವಾಗಬಹುದು.

ಇದನ್ನೂ ಓದಿ: ಸಂಖ್ಯೆ 7ರ ಹಿಂದಿನ ರಹಸ್ಯಗಳು; ಇದು ಶುಭವೋ, ಅಶುಭವೋ?

ವಂಚನೆ ಅಥವಾ ಮೋಸ:

ನಾಲ್ಕನೆಯದಾಗಿ, ಇತರರಿಂದ ಆದ ವಂಚನೆ ಅಥವಾ ಮೋಸಗಳ ಬಗ್ಗೆ ಹೇಳಿಕೊಳ್ಳುವುದು ನಮ್ಮ ಗೌರವವನ್ನು ಕಡಿಮೆ ಮಾಡಬಹುದು. ಈ ವಿಷಯಗಳನ್ನು ಸೂಕ್ತವಾದ ಕಾನೂನು ಕ್ರಮಗಳ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ.

ಅಪಮಾನ ಮತ್ತು ನೋವು:

ಅಂತಿಮವಾಗಿ, ಅಪಮಾನಗಳು ಮತ್ತು ನೋವುಗಳನ್ನು ಹಂಚಿಕೊಳ್ಳುವುದರಿಂದ ವ್ಯಕ್ತಿಯ ಮಾನಸಿಕ ಆರೋಗ್ಯಕ್ಕೆ ಹಾನಿಯಾಗಬಹುದು. ಈ ನೋವುಗಳಿಂದ ಮುಂದುವರೆಯಲು ಮತ್ತು ಬಲಶಾಲಿಯಾಗಲು ಪ್ರಯತ್ನಿಸುವುದು ಉತ್ತಮ. ಈ ಐದು ವಿಷಯಗಳನ್ನು ಗೌಪ್ಯವಾಗಿಟ್ಟುಕೊಳ್ಳುವುದು ವ್ಯಕ್ತಿಯ ಒಳ್ಳೆಯದಕ್ಕಾಗಿ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:43 am, Fri, 20 June 25