Pampa Award: 2022-23ನೇ ಸಾಲಿ‌ನ ಪಂಪ ಪ್ರಶಸ್ತಿಗೆ ಡಾ.ಎಸ್.ಆರ್.ರಾಮಸ್ವಾಮಿ ಆಯ್ಕೆ

ಕರ್ನಾಟಕ ಸರ್ಕಾರದಿಂದ ಕೊಡಮಾಡಲ್ಪಡುವ 2022-23ನೇ ಸಾಲಿ‌ನ ಪಂಪ ಪ್ರಶಸ್ತಿಗೆ ಡಾ.ಎಸ್.ಆರ್.ರಾಮಸ್ವಾಮಿ ಅವರು ಆಯ್ಕೆಯಾಗಿದ್ದಾರೆ.

Pampa Award: 2022-23ನೇ ಸಾಲಿ‌ನ ಪಂಪ ಪ್ರಶಸ್ತಿಗೆ ಡಾ.ಎಸ್.ಆರ್.ರಾಮಸ್ವಾಮಿ ಆಯ್ಕೆ
ಡಾ.ಎಸ್.ಆರ್.ರಾಮಸ್ವಾಮಿ
Follow us
Rakesh Nayak Manchi
|

Updated on:Feb 27, 2023 | 11:12 PM

ಬೆಂಗಳೂರು: ಕರ್ನಾಟಕ ಸರ್ಕಾರದಿಂದ ಕೊಡಮಾಡಲ್ಪಡುವ 2022-23ನೇ ಸಾಲಿ‌ನ ಪಂಪ ಪ್ರಶಸ್ತಿಗೆ (Pampa Award) ಡಾ.ಎಸ್.ಆರ್.ರಾಮಸ್ವಾಮಿ (Dr. S. R. Ramaswamy) ಅವರು ಆಯ್ಕೆಯಾಗಿದ್ದಾರೆ. ಹಿರಿಯ ಪತ್ರಕರ್ತ, ಆರ್​ಎಸ್​ಎಸ್​ ವಿಚಾರವಾದಿಯಾಗಿರುವ ಇವರು 1979 ರಿಂದ 4 ದಶಕಗಳಿಂದ ರಾಷ್ಟ್ರೋತ್ಥಾನ ಪರಿಷತ್ತು ಪ್ರಕಟಿಸುವ ಜನಪ್ರಿಯ ಮಾಸಿಕ ಉತ್ಥಾನದ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ.ಎಸ್.ಆರ್.ರಾಮಸ್ವಾಮಿ ಅವರು ನಾಲ್ಕು ದಶಕಗಳಿಂದ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸುಮಾರು 30 ಪ್ರಮುಖ ಪುಸ್ತಕಗಳ ಲೇಖಕರಾಗಿದ್ದಾರೆ ಮತ್ತು ಸಾಹಿತ್ಯಿಕ, ಸಾಂಸ್ಕೃತಿಕ, ರಾಷ್ಟ್ರೀಯತಾವಾದಿ ಮತ್ತು ಅಭಿವೃದ್ಧಿ ವಿಷಯಗಳ ಕುರಿತು 1,000 ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ.

Published On - 11:12 pm, Mon, 27 February 23