AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್​ಸ್ಟಾಗ್ರಾಂನಿಂದ ಹುಟ್ಟಿದ ಸ್ನೇಹ, ಮಹಿಳೆಗೆ ಕೆಲಸ ಕೊಡಿಸುವುದಾಗಿ ಕರೆದೊಯ್ದು ಹೋಟೆಲ್​ನಲ್ಲಿ ಸಾಮೂಹಿಕ ಅತ್ಯಾಚಾರ

ಇನ್​ಸ್ಟಾಗ್ರಾಂನಿಂದ ಪರಿಚಯವಾದ ವ್ಯಕ್ತಿಯೊಬ್ಬ ಕೆಲಸ ಕೊಡಿವುದಾಗಿ ಕರೆಸಿಕೊಂಡು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಇನ್​ಸ್ಟಾಗ್ರಾಂನಿಂದ ಹುಟ್ಟಿದ ಸ್ನೇಹ, ಮಹಿಳೆಗೆ ಕೆಲಸ ಕೊಡಿಸುವುದಾಗಿ ಕರೆದೊಯ್ದು ಹೋಟೆಲ್​ನಲ್ಲಿ ಸಾಮೂಹಿಕ ಅತ್ಯಾಚಾರ
ನಯನಾ ರಾಜೀವ್
|

Updated on: Jun 17, 2024 | 8:39 AM

Share

ಕೆಲಸ ಕೊಡಿಸುವುದಾಗಿ ಮಹಿಳೆಯನ್ನು ಕರೆಸಿಕೊಂಡು ಹೋಟೆಲ್​ನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇನ್​ಸ್ಟಾಗ್ರಾಂನಲ್ಲಿ ಪರಿಚಿತವಾದ ವ್ಯಕ್ತಿಯನ್ನು ನಂಬಿ ಹೋಟೆಲ್​ಗೆ ಹೋಗಿ ಮಹಿಳೆ ಮೋಸ ಹೋಗಿರುವ ಘಟನೆ ಇದಾಗಿದೆ.

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ, ತಂಪು ಪಾನೀಯಕ್ಕೆ ನಿದ್ರೆ ಮಾತ್ರೆ ಬೆರೆಸಿ ಇಬ್ಬರು ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾರೆ.

ಆಕೆಗೆ ಬ್ಯಾಂಕ್​ನಲ್ಲಿ ಕೆಲಸ ಕೊಡಿವುದಾಗಿ ಕರೆದೊಯ್ದಿದ್ದ, ಆರೋಪಿಯು ತನ್ನ ಸ್ನೇಹಿತನನ್ನು ಕಳುಹಿಸಿ ಉದ್ಯೋಗ ಕೊಡಿಸುವ ಭರವಸೆಯ ಮೇರೆಗೆ ಮಹಿಳೆಯನ್ನು ತನ್ನೊಂದಿಗೆ ಡೆಹ್ರಾಡೂನ್‌ಗೆ ಬರುವಂತೆ ಹೇಳಿದ್ದ ಎನ್ನಲಾಗಿದೆ. ಆದರೆ ಅಲ್ಲಿ ಅವರನ್ನು ಭೇಟಿಯಾಗಿರಲಿಲ್ಲ, ಬಳಿಕ ಅಲ್ಲಿಂದ ಉತ್ತರ ಪ್ರದೇಶದ ಯಾವುದೋ ಒಂದು ಪ್ರದೇಶಕ್ಕೆ ಬರಲು ಹೇಳಿದ್ದರು.

ಮತ್ತಷ್ಟು ಓದಿ: ಅತ್ಯಾಚಾರ, ಗರ್ಭಪಾತ ಆರೋಪ, ಕಾನ್​ಸ್ಟೆಬಲ್​ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿನಿ

ನಂತರ ಹೋಟೆಲ್​ಗೆ ಕರೆದೊಯ್ದು ತಂಪು ಪಾನೀಯ ನೀಡಿ ಬಳಿಕ ಅತ್ಯಾಚಾರ ಮಾಡಿದ್ದಾರೆ, ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಐವರು ಆರೋಪಿಗಳ ಬಂಧನ ಮಧ್ಯಪ್ರದೇಶದ ಶಾಹದೋಲ್ (Shahdol) ಜಿಲ್ಲೆಯಲ್ಲಿ 15 ವರ್ಷದ ಬಾಲಕಿಯ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ (Gang Rape). ಈ ಹಿನ್ನೆಲೆಯಲ್ಲಿ ಆ ಐವರನ್ನು ಬಂಧಿಸಲಾಗಿದ್ದು, ಅವರು ಅಕ್ರಮವಾಗಿ ನಿರ್ಮಿಸಿದ ಮನೆಗಳನ್ನು ಶಾಹದೋಲ್ ಜಿಲ್ಲಾಡಳಿತ ಕೆಡವಿದೆ.

ಶಾಹದೋಲ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಡಿ. ಸಿ ಸಾಗರ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಘಟನೆ ನಡೆದ 24 ಗಂಟೆಗಳ ಒಳಗೆ ಎಲ್ಲಾ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಅತ್ಯಾಚಾರ ನಡೆಸಿ ಬಂಧನಕ್ಕೊಳಗಾದವರನ್ನು ಐಶ್ವರ್ಯ ನಿಧಿ ಗುಪ್ತಾ (36), ಸಲೀಂ ಖುರೇಷಿ (22), ಕೈಲಾಶ್ ಪಣಿಕಾ (29), ಸಲೀಂ (18) ಮತ್ತು ಅಫ್ಜಲ್ ಅನ್ಸಾರಿ (28) ಎಂದು ಗುರುತಿಸಲಾಗಿದೆ.

ತನ್ನ ಗೆಳೆಯನ ಜೊತೆ 15 ವರ್ಷದ ಬಾಲಕಿ ಟ್ಯೂಷನ್ ತರಗತಿಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಅರಣ್ಯ ಪ್ರದೇಶದ ಬಳಿ ಆರೋಪಿಗಳು ಅವರನ್ನು ತಡೆದಿದ್ದಾರೆ. ಅವರಲ್ಲಿ ಕೆಲವರು ಹುಡುಗನನ್ನು ಗಟ್ಟಿಯಾಗಿ ಹಿಡಿದಿದ್ದರೆ, ಇತರರು ಹುಡುಗಿಯನ್ನು ಕಾಡಿನೊಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ