AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗುವುದಾಗಿ ನಂಬಿಸಿ ಪ್ರೇಯಸಿ ಮೇಲೆ ಅತ್ಯಾಚಾರ: ಪೊಲೀಸ್ ಠಾಣೆ​ ಎದುರು ಯುವತಿ ಧರಣಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ದ್ವೀತಿಯ ಪಿಯುಸಿ ಓದುತ್ತಿದ್ದ ಯುವತಿಯನ್ನು ಪರಿಚಯಿಸಿಕೊಂಡು ಬಳಿಕ ಆಕೆಯನ್ನು ತನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡಿದ್ದಾನೆ. ನಂತರ, ನಿನ್ನೇ ಮದುವೆ ಆಗುತ್ತೇನೆ ಅಂತ ಪ್ರೇಯಸಿಯ ಮತ್ತು ತನ್ನ ಪೋಷಕರ ಬಳಿ ಮಾತನಾಡಿ ವಿವಾಹಕ್ಕೆ ಒಪ್ಪಿಸಿದ್ದಾನೆ. ವಿವಾಹ ನಿಶ್ಚಯವಾದ ಮೇಲೆ ಒಂದು ದಿನ ಪ್ರೇಯಸಿ ಮನೆಗೆ ಬಂದ ಪ್ರಿಯಕರ ರವಿರಾಜ್​ ಎಸಗಿದ ನೀಚ ಕೃತ್ಯ.

ಮದುವೆಯಾಗುವುದಾಗಿ ನಂಬಿಸಿ ಪ್ರೇಯಸಿ ಮೇಲೆ ಅತ್ಯಾಚಾರ: ಪೊಲೀಸ್ ಠಾಣೆ​ ಎದುರು ಯುವತಿ ಧರಣಿ
ಆರೋಪಿ ರವಿರಾಜ್​
ಸಂಜಯ್ಯಾ ಚಿಕ್ಕಮಠ
| Updated By: ವಿವೇಕ ಬಿರಾದಾರ|

Updated on:Jun 07, 2024 | 9:48 AM

Share

ಕೊಪ್ಪಳ, ಜೂನ್​ 07: ಮದುವೆಯಾಗುವುದಾಗಿ (Marriage) ನಂಬಿಸಿ ಪ್ರಿಯತಮೆ (Lover) ಮೇಲೆ ಅತ್ಯಾಚಾರವೆಸಗಿ ಪರಾರಿಯಾದ ಪ್ರಿಯಕರನ ವಿರುದ್ಧ ಕಾರಟಗಿ ಪೊಲೀಸ್​ ಠಾಣೆಯಲ್ಲಿ (Kartagi Police Station) ಪ್ರಕರಣ ದಾಖಲಾಗಿದೆ. ಗಂಗಾವತಿ (Gangavati) ತಾಲೂಕು ನಿವಾಸಿ ರವಿರಾಜ್ ಅತ್ಯಾಚಾರ ಎಸಗಿದ ಆರೋಪಿ. ಆರೋಪಿ ರವಿರಾಜ್​​ನನ್ನು ಬಂಧಿಸಿ, ನನ್ನ ಜೊತೆ ಮದುವೆ ಮಾಡಿಸಿ ಎಂದು ಸಂತ್ರಸ್ತೆ ಪೊಲೀಸ್ ಠಾಣೆ ಎದುರು ಧರಣಿ ಕುಳಿತಿದ್ದಾಳೆ. 2020ರಲ್ಲಿ ಸಂತ್ರಸ್ತೆ ದ್ವೀತಿಯ ಪಿಯುಸಿ ಓದುವಾಗ ರವಿರಾಜ್​ ಪರಿಚಯವಾಗಿದ್ದಾನೆ. ಪರಿಚಹ ಸ್ನೇಹ, ಸ್ನೇಹ ಪ್ರೀತಿಯಾಗಿ ಬದಾಲಗಿದೆ. ಇಬ್ಬರೂ 2021ರಿಂದ ಪರಸ್ಪರ ಪ್ರೀತಿಸಲು ಆರಂಭಿಸಿದ್ದಾರೆ.

ಈ ವಿಚಾರ ಪ್ರೇಮಿಗಳ ಮನೆಯಲ್ಲಿ ಗೊತ್ತಾಗಿದ್ದು, ಇಬ್ಬರ ಮನೆಯಲ್ಲೂ ವಿರೋಧ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ಸಂತ್ರಸ್ತೆ ಪ್ರೀತಿ ಬೇಡ ಅಂತ ರವಿರಾಜ್​ನಿಂದ ದೂರು ಉಳಿಯಲು ಆರಂಭಿಸಿದ್ದಾಳೆ. ಆದರೆ ರವಿರಾಜ್​ ಸಂತ್ರಸ್ತೆ ಮೆನೆಯವರ ಮತ್ತು ತನ್ನ ಪೋಷಕರ ಜೊತೆ ಮಾತನಾಡಿ ಮದುವೆಗೆ ಒಪ್ಪಿಸಿದ್ದಾನೆ.

ಬಳಿಕ ರವಿರಾಜ್​ 2021ರ ಮಾರ್ಚ್​​ 17 ರಂದು ರಾತ್ರಿ 8 ಗಂಟೆ ಸುಮಾರಿಗೆ ಸಂತ್ರಸ್ತೆ ಮನೆಗೆ ಹೋಗಿ ಅತ್ಯಾಚಾರ ಎಸಗಿದ್ದಾನೆ. ಇದಾದ ಬಳಿಕ ತಾವು ಇಬ್ಬರೇ ಇರುವ ಖಾಸಗಿ ವಿಡಿಯೋವನ್ನು ಇಟ್ಟುಕೊಂಡು, ರವಿವಾರಜ್​ ಬ್ಲ್ಯಾಕ್​ಮೇಲ್​ ಮಾಡಲು ಆರಂಭಿಸಿದ್ದಾರೆ. ನಂತರ ಅನೇಕ ಸಲ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಸಂತ್ರಸ್ತೆ ಗರ್ಭಿಣಿಯಾಗಿದ್ದಾಳೆ. ಆಗ, ರವಿರಾಜ್​ ಗರ್ಭಪಾತ ಮಾಡಿಸಿದ್ದಾನೆ. ಬಳಿಕ ಸಂತ್ರಸ್ತೆ ಮದುವೆ ಮಾಡಿಕೊ ಎಂದು ದುಂಬಾಲು ಬಿದ್ದಿದ್ದಾಳೆ.

ಇದನ್ನೂ ಓದಿ: ಲವರ್​​ ಜೊತೆ ಸೇರಿ ತಂದೆ, ತಮ್ಮನನ್ನು ಕೊಚ್ಚಿ ಕೊಂದು ಫ್ರೀಜರ್‌ನಲ್ಲಿಟ್ಟಿದ್ದ 16 ರ ಬಾಲಕಿಯ ಬಂಧನ

ಆದರೆ, ರವಿವಾರ್​ ಮದುವೆ ಮಾಡಿಕೊಳ್ಳಲು ಒಪ್ಪಲಿಲ್ಲ. ಆಗ, ಸಂತ್ರಸ್ತೆ ಈ ವಿಚಾರವನ್ನು ಸಂತ್ರಸ್ತೆ ತನ್ನ ಮನೆಯವರಿಗೆ ಮತ್ತು ರವಿರಾಜ್​ ಮನೆಯವರಿಗೆ ತಿಳಿಸಿದ್ದಾಳೆ. ಆಗ, ಎರಡೂ ಮನೆಯವರು ಸೇರಿ ಪಂಚಾಯಿತಿ ಮಾಡಿ, ರವಿರಾಜ್​ಗೆ ಮದುವೆಯಾಗುವಂತೆ ಹೇಳಿದ್ದಾರೆ. ಆದರೂ ಕೂಡ ರವಿರಾಜ್​ ಮದುವೆಯಾಗಲು ಒಪ್ಪಲಿಲ್ಲ. ಇದರಿಂದ ಸಂತ್ರಸ್ತೆ ಮಾನಸಿಕವಾಗಿ ನೊಂದು, ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ​

ಪ್ರಕರಣ ಸಂಬಂಧ ಸಂತ್ರಸ್ತೆ ಮಾತನಾಡಿ ” ನಾವಿಬ್ಬರು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದೇವು. ನಮ್ಮ ಮನೆಗೆ ಬಂದು ಮದುವೆ ಆಗುತ್ತೇನೆ ಅಂತ ನಮ್ಮ ಹೆತ್ತವರಿಗೆ ಹೇಳಿ ಒಪ್ಪಿಸಿದ್ದನು. ಇಬ್ಬರ ಮದುವೆ ಕೂಡ ನಿಶ್ಚಯವಾಗಿತ್ತು. ಒಂದು ದಿನ ಮನೆಗೆ ಬಂದು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮದುವೆ ಆಗುತ್ತೇನೆ ಅಂತ ನಂಬಿಸಿ ಸತತ ಎರಡು ವರ್ಷದಿಂದ ನನ್ನ ಅತ್ಯಾಚಾರವೆಸಗಿದ್ದಾನೆ. ಈ ಸಮಯದಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ. ನನ್ನ ವಿಡಿಯೋ ಇಟ್ಕೊಂಡು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಕೊಪ್ಪಳ ನಗರದಲ್ಲಿ ಅವರ ಸಂಬಂಧಿಯ ಪೊಲೀಸ್ ಕ್ವಾಟರ್ಸ್​ನಲ್ಲಿ ಕೂಡಾ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ನಂತರ 3-4 ಸಲ ಗರ್ಭಪಾತ ಮಾಡಿಸಿದ್ದಾನೆ. ಇದೀಗ ದೂರು ದಾಖಲಿಸಿದರೂ ಆತನನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ” ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ.

ಇದೀಗ, ಆರೋಪಿ ರವಿರಾಜ್​​ನನ್ನು ಬಂಧಿಸಿ, ನನ್ನ ಜೊತೆ ಮದುವೆ ಮಾಡಿಸಿ ಎಂದು ಸಂತ್ರಸ್ತೆ ಮತ್ತು ಆಕೆಯ ಪೋಷಕರು ಪೊಲೀಸ್ ಠಾಣೆ ಎದುರು ಧರಣಿ ಕೂತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:45 am, Fri, 7 June 24