ತಾನು ನೋಡಿದ ಹುಡುಗನನ್ನು ಮದುವೆಯಾಗಲು ಒಲ್ಲೆ ಎಂದಿದ್ದಕ್ಕೆ ತಾಯಿಯೊಬ್ಬಳು ಮಗಳನ್ನೇ ಹತ್ಯೆಮಾಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ರಾಚಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೈದರಾಬಾದ್‌ನ ಹೊರವಲಯದಲ್ಲಿರುವ ಇಬ್ರಾಹಿಂಪಟ್ಟಣಂನಲ್ಲಿ ಈ ಘಟನೆ ನಡೆದಿದೆ. ಮೋಟೆ ಜಂಗಮ್ಮ ಎಂಬ ಮಹಿಳೆ ತನ್ನ ಮಗಳು ಮೋಟೆ ಭಾರ್ಗವಿ (20) ಅನ್ನು ಕೊಂದು ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾಳೆ. ಆದರೆ, ಮಹಿಳೆಯ ಗಂಟಲಿನ ಮೇಲಿದ್ದ ಗಾಯಗಳು ಭಾರ್ಗವಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎನ್ನುವ ಅನುಮಾನವನ್ನು ಹುಟ್ಟಿಸುವಂತಿತ್ತು.
ಮೃತ ಯುವತಿ ತನ್ನ ತಾಯಿ, ತಂದೆ ಮಲ್ಲಯ್ಯ ಮತ್ತು ಸಹೋದರ ಚರಣ್ ಜೊತೆ ವಾಸಿಸುತ್ತಿದ್ದಳು. ಪ್ರಕರಣದ ತನಿಖೆ ನಡೆಯುತ್ತಿದೆ. ಹತ್ಯೆಯ ಹಿಂದಿನ ಉದ್ದೇಶ ಸೇರಿದಂತೆ ಎಲ್ಲಾ ಆಯಾಮಗಳ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಭಾರ್ಗವಿ ತಂದೆ ಐಲಯ್ಯ ಟೈಲರ್ ಕೆಲಸ ಮಾಡುತ್ತಾರೆ.
ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಈ ಹಿಂದೆ ಮುಂಬೈನಲ್ಲೂ ಇಂತಹದ್ದೇ ಘಟನೆ ಬೆಳಕಿಗೆ ಬಂದಿತ್ತು. ಇಲ್ಲೂ ಕೂಡ 19 ವರ್ಷದ ಮಗಳನ್ನು ಕೊಂದ 40 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಜೀವನ ಸಂಗಾತಿಯ ಆಯ್ಕೆ ವಿಚಾರವಾಗಿ ನಡೆದ ಜಗಳದಲ್ಲಿ ಮಹಿಳೆ ತನ್ನ ಮಗಳನ್ನು ಕೊಂದಿದ್ದಳು.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಗೆ ಹಿಂತಿರುಗಿದ ಬಾಲಕಿಯ ತಾಯಿ ಜಂಗಮ್ಮ, ಮಗಳು ಭಾರ್ಗವಿ ತನ್ನ ಪ್ರಿಯಕರನೊಂದಿಗೆ ಮಾತನಾಡುತ್ತಿದ್ದುದನ್ನು ಕಂಡು ಕೋಪಗೊಂಡು ಬೈಯಲು ಶುರು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿಯ ತಾಯಿಯನ್ನು ನೋಡಿದ ಹುಡುಗ ಅಲ್ಲಿಂದ ಕಾಲ್ಕಿತ್ತಿದ್ದ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Wed, 20 March 24