58ರ ಹರೆಯದಲ್ಲಿ ಐವಿಎಫ್ ಚಿಕಿತ್ಸೆ ಪಡೆದು ಮಗು ಹೆತ್ತ ಸಿಧು ಮೂಸೆವಾಲಾ ತಾಯಿ: ಪಂಜಾಬ್‌ಗೆ ಕೇಂದ್ರದ ನೋಟಿಸ್

ಮಾರ್ಚ್ 18 ರಂದು, ಪಂಜಾಬ್‌ನಲ್ಲಿ ಸಿಧು ಮೂಸೆವಾಲಾ ಗುಂಡೇಟಿಗೆ ಬಲಿಯಾದ ಸುಮಾರು 22 ತಿಂಗಳ ನಂತರ, ಹಿರಿಯ ದಂಪತಿಗಳಿಗೆ ಗಂಡು ಮಗು ಜನಿಸಿದೆ. ಏತನ್ಮಧ್ಯೆ,ಐವಿಎಫ್ ಚಿಕಿತ್ಸೆ ಮೂಲಕ ಜನಿಸಿದ ಶಿಶುಗಳ ಕಾನೂನಿಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಪಂಜಾಬ್ ಸರ್ಕಾರದಿಂದ ವರದಿ ಕೇಳಿದೆ.

58ರ ಹರೆಯದಲ್ಲಿ ಐವಿಎಫ್ ಚಿಕಿತ್ಸೆ ಪಡೆದು ಮಗು ಹೆತ್ತ ಸಿಧು ಮೂಸೆವಾಲಾ ತಾಯಿ: ಪಂಜಾಬ್‌ಗೆ ಕೇಂದ್ರದ ನೋಟಿಸ್
ಮಗು ಜತೆಸಿಧು ಮೂಸೆವಾಲಾರ ಅಪ್ಪ
Follow us
ರಶ್ಮಿ ಕಲ್ಲಕಟ್ಟ
|

Updated on: Mar 20, 2024 | 2:06 PM

ಚಂಡೀಗಢ ಮಾರ್ಚ್ 20: ಐವಿಎಫ್  (IVF) ಚಿಕಿತ್ಸೆ ಮೂಲಕ ಜನಿಸಿದ ಶಿಶುಗಳ ಕಾನೂನಿಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಪಂಜಾಬ್ (Punjab) ಸರ್ಕಾರದಿಂದ ವರದಿ ಕೇಳಿದೆ. ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ (Sidhu Moosewala) ಅವರ ತಾಯಿಯ ಐವಿಎಫ್ ಚಿಕಿತ್ಸೆ ಮೂಲಕ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದರು. ಮೂಸೆವಾಲಾ ಅವರ ತಾಯಿ ಚರಣ್ ಕೌರ್ ಅವರು 58 ನೇ ವಯಸ್ಸಿನಲ್ಲಿ ಐವಿಎಫ್ ಚಿಕಿತ್ಸೆಗೆ ಒಳಗಾಗಿದ್ದ್ದು, ಮಗುವನ್ನು ಗರ್ಭಧರಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದ್ದು ಈ ವರದಿಯನ್ನು ಸಚಿವಾಲಯ ಉಲ್ಲೇಖಿಸಿದೆ. ಮಾರ್ಚ್ 18 ರಂದು, ಪಂಜಾಬ್‌ನಲ್ಲಿ ಸಿಧು ಮೂಸೆವಾಲಾ ಗುಂಡೇಟಿಗೆ ಬಲಿಯಾದ ಸುಮಾರು 22 ತಿಂಗಳ ನಂತರ, ಹಿರಿಯ ದಂಪತಿಗಳಿಗೆ ಗಂಡು ಮಗು ಜನಿಸಿದೆ.

“ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯಿದೆ, 2021 ರ ವಿಭಾಗ 21(g) ಅಡಿಯಲ್ಲಿ, ART ಸೇವೆಗಳ ಅಡಿಯಲ್ಲಿ ಚಿಕಿತ್ಸೆ ಪಡೆಯುವ ಮಹಿಳೆಗೆ ವಯಸ್ಸಿನ ಮಿತಿಯನ್ನು 21-50 ವರ್ಷಗಳ ನಡುವೆ ನಿಗದಿಪಡಿಸಲಾಗಿದೆ. ಆದ್ದರಿಂದ, ಈ ವಿಷಯವನ್ನು ಪರಿಶೀಲಿಸಲು ಮತ್ತು ಎಆರ್‌ಟಿ (ನಿಯಂತ್ರಣ) ಕಾಯಿದೆ, 2021 ರ ಪ್ರಕಾರ ಈ ಪ್ರಕರಣದಲ್ಲಿ ತೆಗೆದುಕೊಂಡ ಕ್ರಮಗಳ ವರದಿಯನ್ನು ಈ ಇಲಾಖೆಗೆ ಸಲ್ಲಿಸಲು ನಿಮ್ಮನ್ನು ವಿನಂತಿಸಲಾಗಿದೆ ”ಎಂದು ಆರೋಗ್ಯ ಸಚಿವಾಲಯದ ಪತ್ರದಲ್ಲಿ ಹೇಳಲಾಗಿದೆ.

ಸಚಿವಾಲಯದ ಪತ್ರ

ಶುಭದೀಪ್‌ನನ್ನು ಪ್ರೀತಿಸುವ  ಕೋಟಿ ಜನರ ಆಶೀರ್ವಾದದೊಂದಿಗೆ ಸರ್ವಶಕ್ತನು ಶುಭ್‌ನ ಚಿಕ್ಕ ಸಹೋದರನೊಂದಿಗೆ ನಮಗೆ ಆಶೀರ್ವದಿಸಿದ್ದಾನೆ ಎಂದು ಸಿಧು ಅವರ ತಂದೆ ಬಲ್ಕೌರ್ ಸಿಂಗ್ ಫೇಸ್‌ಬುಕ್‌ನಲ್ಲಿ ಪಂಜಾಬಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಸಿಧು ಮೂಸೆವಾಲಾ ಅವರ ಪೂರ್ಣ ಹೆಸರು ಶುಭದೀಪ್ ಸಿಂಗ್ ಸಿಧು.

ತಮ್ಮ ಪೋಸ್ಟ್‌ನಲ್ಲಿ, ಸಿಂಗ್ ಕೇಕ್ ಜೊತೆಗೆ ಮಗುವನ್ನು ಕೈಯಲ್ಲಿ ಹಿಡಿದಿರುವ ಚಿತ್ರವನ್ನು ಮತ್ತು ಹಿನ್ನೆಲೆಯಲ್ಲಿ ಮೂಸೆವಾಲಾ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ.

ಮೂಸೆವಾಲಾ ಅವರನ್ನು ಮೇ 29, 2022 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಗಾಯಕ-ರ‍್ಯಾಪರ್ 2022 ರಲ್ಲಿ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಮಾನ್ಸಾದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ  ಸ್ಪರ್ಧಿಸಿ ಸೋತಿದ್ದರು. ಏತನ್ಮಧ್ಯೆ, ಮೂಸೆವಾಲಾ ಅವರ ಪೋಷಕರು ಪಂಜಾಬ್ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಅವರು ಪಂಜಾಬ್ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. “”ವಾಹೆಗುರು ಅವರ ಆಶೀರ್ವಾದದಿಂದ ನಾವು ನಮ್ಮ ಶುಭದೀಪ್ (ಸಿಧು ಮೂಸೆವಾಲ) ಅವರನ್ನು ಮರಳಿ ಪಡೆದಿದ್ದೇವೆ. ಆದರೆ, ಮಗುವಿನ ದಾಖಲೆಗಳನ್ನು ನೀಡುವಂತೆ ಸರ್ಕಾರ ಬೆಳಗ್ಗೆಯಿಂದ ನನಗೆ ಕಿರುಕುಳ ನೀಡುತ್ತಿದೆ. ಈ ಮಗು ಕಾನೂನುಬದ್ಧವಾಗಿದೆ ಎಂದು ಸಾಬೀತುಪಡಿಸಲು ಅವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ ಎಂದು ಅವರು ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿಬಿಜೆಪಿ ಟಿಕೆಟ್ ಕೈತಪ್ಪಿದರೆ ವರುಣ್​ ಗಾಂಧಿ ಸ್ವತಂತ್ರ ಸ್ಪರ್ಧೆ ಸಾಧ್ಯತೆ

ಎಎಪಿ ತಿರುಗೇಟು

ಆರೋಗ್ಯ ಸಚಿವಾಲಯದ ಪತ್ರಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಘಟಕವು ಬಿಜೆಪಿ ಆಡಳಿತದ ಕೇಂದ್ರ ಸರ್ಕಾರವು ಶ್ರೀಮತಿ ಚರಣ್ ಸಿಂಗ್ (ದಿವಂಗತ ಸಿಧು ಮೂಸೆವಾಲಾ ಅವರ ತಾಯಿ) ಅವರ IVF ಚಿಕಿತ್ಸೆಗೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರದಿಂದ ವರದಿಯನ್ನು ಕೇಳಿದೆ. ಸಿಎಂ ಭಗವಂತ್ ಮಾನ್ ಯಾವಾಗಲೂ ಪಂಜಾಬಿಗಳ ಭಾವನೆಗಳು ಮತ್ತು ಘನತೆಯನ್ನು ಗೌರವಿಸುತ್ತಾರೆ, ಇದು ಕೇಂದ್ರ ಸರ್ಕಾರವೇ ದಾಖಲೆಗಳನ್ನು ಕೇಳಿದೆ. “ಜನರು ಸತ್ಯಗಳನ್ನು ನಂಬಿ, ಯಾವುದೇ ವದಂತಿಗಳನ್ನು ನಂಬಬೇಡಿ” ಎಂದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!