ಅಮೆರಿಕದಲ್ಲಿ ಹೈದರಾಬಾದ್‌ ಮೂಲದ ವಿದ್ಯಾರ್ಥಿ ನಾಪತ್ತೆ; 1,200 ಡಾಲರ್ ಹಣ ನೀಡುವಂತೆ ಅಪಹರಣಕಾರರಿಂದ ಪೋಷಕರಿಗೆ ಫೋನ್ ಕರೆ

ಅಬ್ದುಲ್‌ನ ತಂದೆ ಮೊಹಮ್ಮದ್ ಸಲೀಮ್‌ಗೆ ಕಳೆದ ವಾರ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ತನ್ನ ಮಗನನ್ನು ಕ್ಲೀವ್‌ಲ್ಯಾಂಡ್‌ನಲ್ಲಿ ಡ್ರಗ್ ಮಾರಾಟಗಾರರು ಅಪಹರಿಸಿದ್ದಾರೆ ಎಂದು ತಿಳಿಸಿದ್ದರು.  ಅಪರಿಚಿತ ಕರೆ ಮಾಡಿದವರು ಅವನನ್ನು ಬಿಡುಗಡೆ ಮಾಡಲು $1200 ಬೇಡಿಕೆಯಿಟ್ಟರು. ಆದರೆ ಪಾವತಿಯ ವಿಧಾನವನ್ನು ನಿರ್ದಿಷ್ಟಪಡಿಸಲಿಲ್ಲ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಹೈದರಾಬಾದ್‌ ಮೂಲದ ವಿದ್ಯಾರ್ಥಿ ನಾಪತ್ತೆ; 1,200 ಡಾಲರ್ ಹಣ ನೀಡುವಂತೆ ಅಪಹರಣಕಾರರಿಂದ ಪೋಷಕರಿಗೆ ಫೋನ್ ಕರೆ
ಅಬ್ದುಲ್ ಮೊಹಮ್ಮದ್
Follow us
ರಶ್ಮಿ ಕಲ್ಲಕಟ್ಟ
|

Updated on: Mar 20, 2024 | 3:54 PM

ಹೈದರಾಬಾದ್ ಮಾರ್ಚ್ 20 : ಹೈದರಾಬಾದ್ (Hyderabad) ಮೂಲದ ವಿದ್ಯಾರ್ಥಿ ಅಮೆರಿಕದಲ್ಲಿ (US) ನಾಪತ್ತೆಯಾಗಿದ್ದು, 1200 ಡಾಲರ್ ಹಣ ನೀಡುವಂತೆ ವಿದ್ಯಾರ್ಥಿಯ ಪೋಷಕರಿಗೆ ಫೋನ್ ಕರೆ (ransom call)ಬಂದಿದೆ. ಕರೆ ಮಾಡಿದ ಅಪರಿಚಿತ ವ್ಯಕ್ತಿ ನಿಮ್ಮ ಮಗನನ್ನು ಅಪಹರಿಸಿ ಕಿಡ್ನಿ ಮಾರಾಟ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ. ಹೈದರಾಬಾದ್‌ನ 25 ವರ್ಷದ ಅಬ್ದುಲ್ ಮೊಹಮ್ಮದ್ ಅರ್ಫಾತ್‌, ಒಹಾಯೋದ ಕ್ಲೀವ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಕಳೆದ ಮೇ ತಿಂಗಳಲ್ಲಿ ಅಮೆರಿಕಕ್ಕೆ ಹೋಗಿದ್ದರು. ಮಾರ್ಚ್ 7 ರಿಂದ ಅವರು ತಮ್ಮೊಂದಿಗೆ ಮಾತನಾಡಿಲ್ಲ ಎಂದು ಅವರ ಕುಟುಂಬ ಹೇಳಿದೆ.

ಅಬ್ದುಲ್‌ನ ತಂದೆ ಮೊಹಮ್ಮದ್ ಸಲೀಮ್‌ಗೆ ಕಳೆದ ವಾರ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ತನ್ನ ಮಗನನ್ನು ಕ್ಲೀವ್‌ಲ್ಯಾಂಡ್‌ನಲ್ಲಿ ಡ್ರಗ್ ಮಾರಾಟಗಾರರು ಅಪಹರಿಸಿದ್ದಾರೆ ಎಂದು ತಿಳಿಸಿದ್ದರು.  ಅಪರಿಚಿತ ಕರೆ ಮಾಡಿದವರು ಅವನನ್ನು ಬಿಡುಗಡೆ ಮಾಡಲು $1200 ಬೇಡಿಕೆಯಿಟ್ಟರು. ಆದರೆ ಪಾವತಿಯ ವಿಧಾನವನ್ನು ನಿರ್ದಿಷ್ಟಪಡಿಸಲಿಲ್ಲ. ಹಣ ಕೊಡಲು ನಿರಾಕರಿಸಿದರೆ ವಿದ್ಯಾರ್ಥಿಯ ಕಿಡ್ನಿಯನ್ನು ಮಾಫಿಯಾಗೆ ಮಾರಾಟ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ವಿದ್ಯಾರ್ಥಿಯ ಕುಟುಂಬದವರು ತಿಳಿಸಿದ್ದಾರೆ.

ತೆಲಂಗಾಣ ಮೂಲದ ಮಜ್ಲಿಸ್ ಬಚಾವೋ ತಹ್ರೀಕ್ ವಕ್ತಾರರು ಅರ್ಫಾತ್‌ನ ವಿಷಯವನ್ನು ಬೆಳಕಿಗೆ ತಂದಿದ್ದು, ಅವರು ಕಾಣೆಯಾದ ವಿದ್ಯಾರ್ಥಿಯ ಪಾಸ್‌ಪೋರ್ಟ್‌ನ ಪ್ರತಿಗಳನ್ನು ಮತ್ತು ಅವರ ಕುಟುಂಬವು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಬರೆದ ಪತ್ರವನ್ನು ಪೋಸ್ಟ್ ಮಾಡಿದ್ದಾರೆ. ಅವರ ಕೊನೆಯ ಸ್ಥಳವೆಂದರೆ ನಗರದಲ್ಲಿ ವಾಲ್‌ಮಾರ್ಟ್ ಅಂಗಡಿಯಾಗಿದ್ದು, ಅಲ್ಲಿ ಅವರು ಕಾಣೆಯಾದರು ಎಂದು ಹೇಳಲಾಗಿದೆ.

ಇದಾದ ನಂತರ ಅಬ್ದುಲ್ ಮೊಹಮ್ಮದ್ ಪೋಷಕರು ಯುಎಸ್‌ನಲ್ಲಿರುವ ಅವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದು ಅವರು ಕ್ಲೀವ್‌ಲ್ಯಾಂಡ್ ಪೊಲೀಸರಿಗೆ ದೂರು ನೀಡಿದ್ದಾರೆ. ನಾಪತ್ತೆಯಾದ ಮೊಹಮ್ಮದ್ ಬಿಳಿ ಟಿ-ಶರ್ಟ್, ಕೆಂಪು ಜಾಕೆಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.  ಆತನ ಪತ್ತೆಗೆ ಕುಟುಂಬಸ್ಥರು ಚಿಕಾಗೋದಲ್ಲಿರುವ ಇಂಡಿಯನ್ ಕೌನ್ಸಿಲ್‌ಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಬಿಜೆಪಿ ಟಿಕೆಟ್ ಕೈತಪ್ಪಿದರೆ ವರುಣ್​ ಗಾಂಧಿ ಸ್ವತಂತ್ರ ಸ್ಪರ್ಧೆ ಸಾಧ್ಯತೆ

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಯು ಶವವಾಗಿ ಪತ್ತೆಯಾದ ಒಂದು ವಾರದ ನಂತರ ಅಪಹರಣ ವರದಿಯಾಗಿದೆ. ಇದು ಮೂರು ತಿಂಗಳೊಳಗೆ ಒಂಬತ್ತನೇ ಘಟನೆಯಾಗಿದೆ. ಬೋಸ್ಟನ್‌ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಅಭಿಜಿತ್ ಪರುಚೂರು (20) ಮೃತದೇಹ ಕಾಡಿನಲ್ಲಿ ಕಾರಿನಲ್ಲಿ ಪತ್ತೆಯಾಗಿದೆ. ಆದರೆ ಪ್ರಾಥಮಿಕ ತನಿಖೆಯು ಅನುಮಾನಾಸ್ಪದವಾದುದನ್ನು ತಳ್ಳಿಹಾಕಿದೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು