ಜಲಾವೃತವಾದ ರಸ್ತೆಯಲ್ಲಿ ಬೈಕ್​ನಲ್ಲಿ ಬರುತ್ತಿದ್ದ ಮಹಿಳೆಗೆ ಕಿರುಕುಳ ಕೊಟ್ಟ ಪುಂಡರು

ಉತ್ತರ ಪ್ರದೇಶದಲ್ಲಿ ಭಾರಿ ಮಳೆಯಾಗಿ ರಸ್ತೆಗಳೆಲ್ಲವೂ ಜಲಾವೃತಗೊಂಡಿದೆ. ಬೈಕ್​ನಲ್ಲಿ ಬರುತ್ತಿದ್ದ ಮಹಿಳೆಗೆ ಕೆಲವು ಯುವಕರು ಕಿರುಕುಳ ನೀಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಜಲಾವೃತವಾದ ರಸ್ತೆಯಲ್ಲಿ ಬೈಕ್​ನಲ್ಲಿ ಬರುತ್ತಿದ್ದ ಮಹಿಳೆಗೆ ಕಿರುಕುಳ ಕೊಟ್ಟ ಪುಂಡರು
ಮಹಿಳೆ

Updated on: Aug 01, 2024 | 10:56 AM

ಉತ್ತರ ಪ್ರದೇಶ, ದೆಹಲಿ, ಉತ್ತರಾಖಂಡ ಸೇರಿದಂತೆ ಹಲವೆಡೆ ಭಾರಿ ಮಳೆಯಾಗುತ್ತಿದೆ. ರಸ್ತೆಗಳೆಲ್ಲವೂ ಜಲಾವೃತವಾಗಿವೆ, ಹಲವು ಮನೆಗಳಿಗೆ ನೀರು ನುಗ್ಗಿದೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಓಡಾಡುವ ಜನರ ಬಗ್ಗೆ ಅನುಕಂಪ ತೋರುವ ಬದಲು ಕೆಲವು ಪುಂಡರು ಮಹಿಳೆಗೆ ಕಿರುಕುಳ ನೀಡಿರುವ ಘಟನೆ ಲಕ್ನೋನಲ್ಲಿ ನಡೆದಿದೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಬಳಿ ಇರುವ ತಾಜ್ ಹೋಟೆಲ್ ಸೇತುವೆಯ ಕೆಳಗೆ ಈ ಘಟನೆ ನಡೆದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ. ಮಹಿಳೆಯೊಬ್ಬರು ವ್ಯಕ್ತಿಯೊಂದಿಗೆ ಜಲಾವೃತವಾದ ರಸ್ತೆಯಲ್ಲಿ ಬೈಕ್​ನಲ್ಲಿ ಹೋಗುತ್ತಿದ್ದರು.

ಕೆಲವು ಯುವಕರು ಅದೇ ನೀರಿನಲ್ಲಿ ಆಟವಾಡುತ್ತಿದ್ದರು, ಈ ಬೈಕ್​ ಆ ದಾರಿಯಲ್ಲಿ ಹೋಗುತ್ತಿದ್ದಂತೆ ನೀರನ್ನು ಬೈಕ್​ ಮೇಲೆ ಎರಚಲು ಶುರು ಮಾಡಿದ್ದರು. ಬಳಿಕ ಬೈಕ್​ ಮುಂದೆ ಹೋಗದಂತೆ ತಡೆದ ಬಳಿಕ ಬೈಕ್​ನಲ್ಲಿದ್ದ ಮಹಿಳೆ ಸೇರಿ ಇಬ್ಬರು ಸವಾರರು ಕೆಳಗೆ ನೀರಿನಲ್ಲಿ ಬಿದ್ದಿದ್ದಾರೆ.

ಆದರೂ ಅವರು ನೀರನ್ನು ಎರಚುವುದನ್ನು ಬಿಟ್ಟಿರಲಿಲ್ಲ. ಮಹಿಳೆಯನ್ನು ಕೂಡಲೇ ಅಲ್ಲಿದ್ದವರ್ಯಾರೋ ಕೆಳಗಿನಿಂದ ಮೇಲಕ್ಕೆ ಎತ್ತಿದ್ದಾರೆ. ವಿಡಿಯೋದಲ್ಲಿ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುವುದನ್ನು ಕೂಡ ಕಾಣಬಹುದಾಗಿದೆ.

ಮತ್ತಷ್ಟು ಓದಿ: ಶಿಮ್ಲಾದಲ್ಲಿ ಮೇಘಸ್ಫೋಟ: ಪ್ರವಾಹ ಸ್ಥಿತಿ ನಿರ್ಮಾಣ, 20 ಮಂದಿ ನಾಪತ್ತೆ

ವರದಿಗಳ ಪ್ರಕಾರ, ಪೊಲೀಸರು ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಕಿರುಕುಳ ನೀಡಿದವರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ.

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us