ಪ್ರಿಯಕರನ ಜತೆ ಸೇರಿ ಗಂಡನ ಕೊಲೆಗೆ ಸಂಚು, ಅಪಘಾತದಲ್ಲೂ ಸಾಯ್ಲಿಲ್ಲ ಕೊನೆಗೆ ಗುಂಡು ಹಾರಿಸಿ ಕೊಂದ ಪತ್ನಿ

ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ ಎರಡೆರಡು ಬಾರಿ ಸಂಚು ರೂಪಿಸಿ ಕೊಲೆಗೈದಿದ್ದ ಮಹಿಳೆ ಮತ್ತು ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಹರ್ಯಾಣದ ಪಾಣಿಪತ್​ನಲ್ಲಿ ಘಟನೆ ನಡೆದಿದೆ.

ಪ್ರಿಯಕರನ ಜತೆ ಸೇರಿ ಗಂಡನ ಕೊಲೆಗೆ ಸಂಚು, ಅಪಘಾತದಲ್ಲೂ ಸಾಯ್ಲಿಲ್ಲ ಕೊನೆಗೆ ಗುಂಡು ಹಾರಿಸಿ ಕೊಂದ ಪತ್ನಿ
Image Credit source: India Today

Updated on: Jun 18, 2024 | 8:01 AM

ಮಹಿಳೆ ಪ್ರಿಯಕರನ ಜತೆ ಸೇರಿ ತನ್ನ ಗಂಡನ ಕೊಲೆಗೆ ಸಂಚು ರೂಪಿಸಿದ್ದಳು, ಅಪಘಾತ ಮಾಡಿ ಸಾಯಿಸಬೇಕೆಂದರೂ ಹೇಗೋ ಬದುಕುಳಿದಿದ್ದ ಗಂಡನನ್ನು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಹರ್ಯಾಣದ ಪಾಣಿಪತ್​ನಲ್ಲಿ ನಡೆದಿದೆ. 2021ರಲ್ಲಿ ಹರ್ಯಾಣದ ಪಾಣಿಪತ್‌ನಲ್ಲಿ ಪತಿಯನ್ನು ಕೊಂದಿದ್ದಕ್ಕಾಗಿ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

2021ರ ಅಕ್ಟೋಬರ್​ 5ರಂದು ಪಂಜಾಬ್ ನೋಂದಾಯಿತ ವಾಹನವು ವಿನೋದ್ ಬರಾಡ ಅವರಿಗೆ ಡಿಕ್ಕಿ ಹೊಡೆದಿತ್ತು, ಘಟನೆಯಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡರೂ ಹೇಗೋ ಬದುಕುಳಿದಿದ್ದರು.
ಎರಡು ತಿಂಗಳ ನಂತರ ಡಿಸೆಂಬರ್​ 15ರಂದು ವಿನೋದ್​ ಅವರನ್ನು ಪಾಣಿಪತ್​ನಲ್ಲಿರುವ ಮನೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ವಿನೋದ್ ಪತ್ನಿ ನಿಧಿ ತನ್ನ ಪ್ರಿಯಕರ ಸುಮಿತ್ ಜೊತೆ ಸೇರಿ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಅಪಘಾತ ಮಾಡಿದ್ದು ಇವರೇ ಬಳಿಕವೂ ಗಂಡ ಸತ್ತಿಲ್ಲವೆನ್ನುವ ಕೋಪದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಮತ್ತಷ್ಟು ಓದಿ: ದೆಹಲಿಯಲ್ಲಿ ಮರ್ಯಾದಾ ಹತ್ಯೆ; ಬೇರೆ ಜಾತಿಯವನನ್ನು ಮದುವೆಯಾಗಿದ್ದಕ್ಕೆ ಮಗಳನ್ನೇ ಕೊಂದ ಅಪ್ಪ

2021 ರ ಡಿಸೆಂಬರ್‌ನಲ್ಲಿ ವಿನೋದ್ ಅವರ ಚಿಕ್ಕಪ್ಪ ವೀರೇಂದ್ರ ಅವರು ದೂರು ದಾಖಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ವಿನೋದ್ ಅಪಘಾತದ ನಂತರ ಚಾಲಕ ದೇವ್ ಸುನರ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿದೆ ಎಂದು ಅವರು ಪೊಲೀಸರಿಗೆ ತಿಳಿಸಿದರು.

ಡಿಸೆಂಬರ್ 15, 2021 ರಂದು, ದೇವ್ ಸುನರ್ ಪಿಸ್ತೂಲ್ ಹಿಡಿದು ವಿನೋದ್ ಮನೆಗೆ ನುಗ್ಗಿ ಒಳಗಿನಿಂದ ಬಾಗಿಲು ಹಾಕಿ ವಿನೋದ್ ನ ಸೊಂಟ ಮತ್ತು ತಲೆಗೆ ಗುಂಡು ಹಾರಿಸಿದ್ದ. ವಿನೋದ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

ದೇವ್ ಸುನರ್ ಅವರು ಸುಮಿತ್ ಎಂಬ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದು, ವಿನೋದ್ ಅವರ ಪತ್ನಿ ನಿಧಿ ಅವರೊಂದಿಗೆ ಆಗಾಗ್ಗೆ ಸಂವಹನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಜೂನ್ 7 ರಂದು, ಪೊಲೀಸರು ಸುಮಿತ್‌ನನ್ನು ಬಂಧಿಸಿದರು ಮತ್ತು ವಿಚಾರಣೆಯ ಸಮಯದಲ್ಲಿ, ವಿನೋದ್ ಅಪಘಾತಕ್ಕೆ ಸಂಚು ರೂಪಿಸಿದ್ದಾಗಿ ಮತ್ತು ನಂತರ ಗುಂಡು ಹಾರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ನಿಧಿ ಮತ್ತು ಸುಮಿತ್ ಇಬ್ಬರನ್ನೂ ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us