ಜ್ಯುವೆಲರಿ ಶಾಪ್​ ಮಾಲೀಕರಿಗೆ ಮೆಣಸಿನ ಪುಡಿ ಎರಚಿ ದರೋಡೆ ಮಾಡಲೆತ್ನಿಸಿದ ಮಹಿಳೆಗೆ 17 ಬಾರಿ ಕಪಾಳಮೋಕ್ಷ!

ಆಭರಣಗಳ ವ್ಯಾಪಾರಿಯ ಮುಖಕ್ಕೆ ಮೆಣಸಿನ ಪುಡಿ ಎರಚುವ ಮೂಲಕ ಮಹಿಳೆಯೊಬ್ಬರು ದರೋಡೆಗೆ ಯತ್ನಿಸಿದ್ದರು. ಇದರಿಂದ ಹೆದರದ ಆ ಸಿಬ್ಬಂದಿ ಆ ಮಹಿಳೆಯ ಕೈ ಹಿಡಿದು 17 ಬಾರಿ ಕೆನ್ನೆಗೆ ಹೊಡೆದಿದ್ದಾರೆ. ಮಹಿಳೆಯೊಬ್ಬರು ಜ್ಯುವೆಲರಿ ಶಾಪ್ ಮಾಲೀಕರ ಮುಖಕ್ಕೆ ಮೆಣಸಿನ ಪುಡಿ ಎರಚುವ ಮೂಲಕ ದರೋಡೆ ಮಾಡಲು ಯತ್ನಿಸಿದ್ದಾರೆ. ಆದರೆ ಅವರು ದಾಳಿಯಿಂದ ತಪ್ಪಿಸಿಕೊಂಡು ಆ ಮಹಿಳೆಗೆ 17 ಬಾರಿ ಕಪಾಳಮೋಕ್ಷ ಮಾಡಿದ್ದಾರೆ.

ಜ್ಯುವೆಲರಿ ಶಾಪ್​ ಮಾಲೀಕರಿಗೆ ಮೆಣಸಿನ ಪುಡಿ ಎರಚಿ ದರೋಡೆ ಮಾಡಲೆತ್ನಿಸಿದ ಮಹಿಳೆಗೆ 17 ಬಾರಿ ಕಪಾಳಮೋಕ್ಷ!
Jewelery Shop Robbery

Updated on: Nov 07, 2025 | 10:38 PM

ಅಹಮದಾಬಾದ್, ನವೆಂಬರ್ 7: ಗುಜರಾತ್‌ನ ಅಹಮದಾಬಾದ್‌ನಲ್ಲಿ ಜ್ಯುವೆಲರಿ ಶಾಪ್​ಗೆ ನುಗ್ಗಿ ದರೋಡೆ (Robbery) ಮಾಡಲು ಯತ್ನಿಸಿದ ಮಹಿಳೆಯೊಬ್ಬರು ಮಾಲೀಕರ ಕಣ್ಣಿಗೆ ಮೆಣಸಿನ ಪುಡಿ ಎರಚುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಂಗಡಿಯ ಮಾಲೀಕರು ತಕ್ಷಣ ಅವರನ್ನು ಕೆಳಕ್ಕೆ ತಳ್ಳಿ 17 ಬಾರಿ ಆಕೆಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಆ ಮಹಿಳೆ ಆಘಾತಕ್ಕೊಳಗಾದರು.

ಈ ಜ್ಯುವೆಲರಿ ಶಾಪ್ ಅಹಮದಾಬಾದ್‌ನ ರಾಣಿಪ್ ಪ್ರದೇಶದಲ್ಲಿದೆ. ತನ್ನ ಮುಖವನ್ನು ದುಪಟ್ಟಾದಿಂದ ಮರೆಮಾಡಿಕೊಂಡಿದ್ದ ಮಹಿಳೆ ಅಂಗಡಿಯೊಳಗೆ ಪ್ರವೇಶಿಸಿ ಮಾಲೀಕರ ಮುಂದೆ ಕುಳಿತು, ಗ್ರಾಹಕರಂತೆ ನಟಿಸಿದರು. ಈ ವೇಳೆ ಅವರು ಅಂಗಡಿಯನ್ನು ದರೋಡೆ ಮಾಡಲು ಯತ್ನಿಸಿದರು. ಈ ವೇಳೆ ಆಕೆ ಇದ್ದಕ್ಕಿದ್ದಂತೆ ಮಾಲೀಕರ ಮುಖದ ಮೇಲೆ ಮೆಣಸಿನ ಪುಡಿ ಎಸೆದಿದ್ದಾರೆ.


ಇದನ್ನೂ ಓದಿ: ಮಗಳ ಪ್ರಾಣ ಕಾಪಾಡಿದ ಅಪ್ಪ: ತಂದೆ-ಮಗಳ ಹೃದಯಸ್ಪರ್ಶಿ ವಿಡಿಯೋ ವೈರಲ್

ಈ ದಾಳಿಯಿಂದ ತಕ್ಷಣ ಚೇತರಿಸಿಕೊಂಡ ಮಾಲೀಕರು ಆ ಮಹಿಳೆಯ ಕೈಗಳನ್ನು ಹಿಡಿದುಕೊಂಡು ಅವರಿಗೆ ಕಪಾಳಮೋಕ್ಷ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಆ ಮಹಿಳೆಯನ್ನು ಅಂಗಡಿಯಿಂದ ಎಳೆದು ಹೊರಗೆ ಹಾಕಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ