AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರು ರಾತ್ರಿ ಹೊರಗೆ ಹೋಗಬಾರದು; ಟಿಎಂಸಿ ನಾಯಕನಿಂದ ವಿವಾದಾತ್ಮಕ ಹೇಳಿಕೆ

ಪಶ್ಚಿಮ ಬಂಗಾಳದ ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಇದಕ್ಕೆ ನಿನ್ನೆ ಪ್ರತಿಕ್ರಿಯಿಸಿದ್ದ ಸಿಎಂ ಮಮತಾ ಬ್ಯಾನರ್ಜಿ ರಾತ್ರಿ ವೇಳೆ ಕಾಲೇಜಿನಿಂದ ಯುವತಿಯರು ಹೊರಗೆ ಹೋಗುವುದು ಸರಿಯಲ್ಲ, ಅದು ಸುರಕ್ಷಿತವಲ್ಲ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಟಿಎಂಸಿಯ ಇನ್ನೋರ್ವ ನಾಯಕ ಇಂದು ಅದೇ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ.

ಮಹಿಳೆಯರು ರಾತ್ರಿ ಹೊರಗೆ ಹೋಗಬಾರದು; ಟಿಎಂಸಿ ನಾಯಕನಿಂದ ವಿವಾದಾತ್ಮಕ ಹೇಳಿಕೆ
Saugata Roy
ಸುಷ್ಮಾ ಚಕ್ರೆ
|

Updated on: Oct 13, 2025 | 9:42 PM

Share

ಕೋಲ್ಕತ್ತಾ, ಅಕ್ಟೋಬರ್ 13: ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ (Durgapur) ಎಂಬಿಬಿಎಸ್ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂವೇದನಾರಹಿತ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಇಂದು ಟಿಎಂಸಿ ಸಂಸದ ಸೌಗತ್ ರಾಯ್ ಮಹಿಳೆಯರು ಎಚ್ಚರಿಕೆಯಿಂದಿರಬೇಕು, ರಾತ್ರಿ ವೇಳೆ ಹೊರಗೆ ಓಡಾಡಬಾರದು ಎಂದು ಸೂಚಿಸುವ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ.

ಒಡಿಶಾದ ಬಾಲಸೋರ್ ಜಿಲ್ಲೆಯ ಜಲೇಶ್ವರ ನಿವಾಸಿ 23 ವರ್ಷದ ಸಂತ್ರಸ್ತೆ ತನ್ನ ಖಾಸಗಿ ವೈದ್ಯಕೀಯ ಕಾಲೇಜು ಬಳಿ ಸ್ನೇಹಿತನೊಂದಿಗೆ ಊಟಕ್ಕೆ ಹೋದ ನಂತರ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಳು. ಅಕ್ಟೋಬರ್ 10ರ ರಾತ್ರಿ ಒಡಿಶಾದ ವೈದ್ಯಕೀಯ ವಿದ್ಯಾರ್ಥಿನಿ ದುರ್ಗಾಪುರದ ಮಹಿಳೆಯ ಮೇಲೆ ಕೈಗಾರಿಕಾ ಪಟ್ಟಣದ ಕಾಲೇಜು ಕ್ಯಾಂಪಸ್ ಬಳಿ ಸಾಮೂಹಿಕ ಅತ್ಯಾಚಾರ ನಡೆದಿತ್ತು.

ಇದನ್ನೂ ಓದಿ: ಬಂಗಾಳ ಅತ್ಯಾಚಾರ ಪ್ರಕರಣ; ಕಠಿಣ ಕ್ರಮಕ್ಕೆ ಮಮತಾ ಸರ್ಕಾರಕ್ಕೆ ಒಡಿಶಾ ಸಿಎಂ ಒತ್ತಾಯ

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಟಿಎಂಸಿ ನಾಯಕಿ ಸೌಗತ್ ರಾಯ್, “ಇಂತಹ ಪ್ರಕರಣಗಳು ಬಂಗಾಳದಲ್ಲಿ ಅಪರೂಪ. ಬಂಗಾಳದಲ್ಲಿ ಮಹಿಳೆಯರ ಸುರಕ್ಷತೆ ಬೇರೆ ಯಾವುದೇ ಸ್ಥಳಕ್ಕಿಂತ ಉತ್ತಮವಾಗಿದೆ. ಆದರೆ ಮಹಿಳೆಯರು ತಮ್ಮ ಕಾಲೇಜುಗಳಿಂದ ತಡರಾತ್ರಿಯಲ್ಲಿ ಹೊರಗೆ ಹೋಗಬಾರದು. ಏಕೆಂದರೆ ಪೊಲೀಸರು ಎಲ್ಲೆಡೆ ಗಸ್ತು ತಿರುಗಲು ಸಾಧ್ಯವಿಲ್ಲ. ಪ್ರತಿಯೊಂದು ರಸ್ತೆಯಲ್ಲೂ ಪೊಲೀಸರು ಇರಲು ಸಾಧ್ಯವಿಲ್ಲ. ಘಟನೆ ನಡೆದ ನಂತರ ಪೊಲೀಸರು ಕ್ರಮ ಕೈಗೊಳ್ಳಬಹುದು. ಆದ್ದರಿಂದ, ಮಹಿಳೆಯರು ಸಹ ಜಾಗರೂಕರಾಗಿರಬೇಕು” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ