ಶಾಲೆಯಲ್ಲಿ ಹೆಚ್ಚಿನ ಮಹಿಳಾ ಸಿಬ್ಬಂದಿ ಇದ್ದರೆ ಜಗಳ ಜಾಸ್ತಿ, ಪ್ರಾಂಶುಪಾಲರಿಗೆ ತಲೆನೋವು: ರಾಜಸ್ಥಾನದ ಶಿಕ್ಷಣ ಸಚಿವ

| Updated By: ರಶ್ಮಿ ಕಲ್ಲಕಟ್ಟ

Updated on: Oct 13, 2021 | 1:49 PM

Govind Singh Dotasra ಜೈಪುರದಲ್ಲಿ ಸೋಮವಾರ ನಡೆದ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಹೆಚ್ಚು ಮಹಿಳಾ ಸಿಬ್ಬಂದಿಯನ್ನು ಹೊಂದಿರುವ ಶಾಲೆಗಳಲ್ಲಿ ಜಗಳಗಳು ಹೆಚ್ಚು. ಈ ತಲೆನೋವಿಗೆ ಪ್ರಾಂಶುಪಾಲರು ಅಥವಾ ಶಿಕ್ಷಕರು ಸಾರಿಡಾನ್ (ತಲೆನೋವು ನಿವಾರಕ ಔಷಧಿ) ತಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಶಾಲೆಯಲ್ಲಿ ಹೆಚ್ಚಿನ ಮಹಿಳಾ ಸಿಬ್ಬಂದಿ ಇದ್ದರೆ ಜಗಳ ಜಾಸ್ತಿ, ಪ್ರಾಂಶುಪಾಲರಿಗೆ ತಲೆನೋವು: ರಾಜಸ್ಥಾನದ ಶಿಕ್ಷಣ ಸಚಿವ
ಗೋವಿಂದ್ ಸಿಂಗ್ ಡೋಟಾಸರಾ
Follow us on

ಜೈಪುರ: ಮಹಿಳೆಯರು ಹೆಚ್ಚು ಜಗಳ ಮಾಡುತ್ತಾರೆ. ಮಹಿಳಾ ಸಿಬ್ಬಂದಿ ತಮ್ಮೊಳಗೆ ಇದಕ್ಕೆ ಪರಿಹಾರ ಕಂಡುಕೊಂಡರೆ “ಅವರು ಯಾವಾಗಲೂ ಪುರುಷರಿಗಿಂತ ಮುಂದಿರುತ್ತಾರೆ” ಎಂದು ರಾಜಸ್ಥಾನ (Rajasthan) ಶಿಕ್ಷಣ ಸಚಿವ ಗೋವಿಂದ್ ಸಿಂಗ್ ಡೋಟಾಸರಾ (Govind Singh Dotasra) ಹೇಳಿದ್ದಾರೆ. ಜೈಪುರದಲ್ಲಿ ಸೋಮವಾರ ನಡೆದ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಹೆಚ್ಚು ಮಹಿಳಾ ಸಿಬ್ಬಂದಿಯನ್ನು ಹೊಂದಿರುವ ಶಾಲೆಗಳಲ್ಲಿ ಜಗಳಗಳು ಹೆಚ್ಚು. ಈ ತಲೆನೋವಿಗೆ ಪ್ರಾಂಶುಪಾಲರು ಅಥವಾ ಶಿಕ್ಷಕರು ಸಾರಿಡಾನ್ (ತಲೆನೋವು ನಿವಾರಕ ಔಷಧಿ) ತಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

“ನನ್ನ ವಿಭಾಗದ ಮುಖ್ಯಸ್ಥನಾಗಿ ಹೇಳುತ್ತಿದ್ದೇನೆ.  ಹೆಚ್ಚು ಮಹಿಳಾ ಸಿಬ್ಬಂದಿಯನ್ನು ಹೊಂದಿರುವ ಶಾಲೆಗಳಲ್ಲಿ ವಾರೇ ನ್ಯಾರೇ ಎಂದು ಜಗಳಗಳಾಗುತ್ತವೆ . ಕೆಲವೊಮ್ಮೆ ರಜೆಗಾಗಿ ಜಗಳಗಳು ನಡೆಯುತ್ತವೆ, ಇತರ ದಿನಗಳಲ್ಲಿ ಬೇರೆ ವಿಷಯಗಳಿಗೆ ಜಗಳವಾಗುತ್ತದೆ. ಪ್ರಾಂಶುಪಾಲರು ಅಥವಾ ಇತರ ಶಿಕ್ಷಕರು ಸಾರಿಡಾನ್ ಅನ್ನು ಆಶ್ರಯಿಸಬೇಕಾಗುತ್ತದೆ “ಎಂದು ಸಚಿವರು ಹೇಳಿದ್ದಾರೆ.

ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಆಗಿರುವ ಡೋಟಾಸರಾ, ರಾಜಸ್ಥಾನ ಸರ್ಕಾರವು ಯಾವಾಗಲೂ ಮಹಿಳೆಯರ ಸುರಕ್ಷತೆ ಮತ್ತು ಸೌಕರ್ಯವನ್ನು ಖಾತ್ರಿಪಡಿಸುತ್ತದೆ ಮತ್ತು ಉದ್ಯೋಗಗಳಲ್ಲಿ ಆದ್ಯತೆಯ ಹುದ್ದೆಗಳನ್ನು ನೀಡುತ್ತದೆ ಎಂದು ಹೇಳಿದರು.

ಆದಾಗ್ಯೂ , ಮಹಿಳಾ ಸಿಬ್ಬಂದಿ ಯಾವಾಗಲೂ ತಮ್ಮಲ್ಲಿ ಸಮಸ್ಯೆಗಳನ್ನು ಹೊಂದಿರುತ್ತಾರೆ ಎಂದು ಸಚಿವರು ಹೇಳಿದ್ದಾರೆ .”ನೀವು ಈ ಸಣ್ಣ ವಿಷಯಗಳನ್ನು ಸರಿಪಡಿಸಿದರೆ, ನೀವು ಯಾವಾಗಲೂ ಪುರುಷರಿಗಿಂತ ಮುಂದಿರುತ್ತೀರಿ ಎಂದು ನಾನು ನಂಬುತ್ತೇನೆ” ಎಂದು ಮಹಿಳೆಯರನ್ನುದ್ದೇಶಿಸಿ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: PM Gatishakti ಗತಿಶಕ್ತಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಇದನ್ನೂ ಓದಿ: ಭಾರತದ ಆಧುನಿಕ ಮಹಿಳೆಯರಿಗೆ ಮದುವೆ, ಮಕ್ಕಳೇ ಬೇಡವಾಗಿದೆ; ಪಾಶ್ಚಿಮಾತ್ಯ ಸಂಸ್ಕೃತಿ ಬಗ್ಗೆ ಸಚಿವ ಸುಧಾಕರ್ ಬೇಸರ