Lord Murugan Statue: ತಮಿಳುನಾಡಿನಲ್ಲಿ ವಿಶ್ವದ ಅತಿ ಎತ್ತರದ ಮುರುಗನ್ ಪ್ರತಿಮೆ ಅನಾವರಣ

| Updated By: ಸುಷ್ಮಾ ಚಕ್ರೆ

Updated on: Apr 09, 2022 | 7:07 PM

ತಮಿಳುನಾಡಿನ ಸೇಲಂನಲ್ಲಿ ನಿರ್ಮಿಸಲಾದ ಈ ಪ್ರತಿಮೆಯು ಮಲೇಷ್ಯಾದ 140 ಅಡಿ ಎತ್ತರವಿರುವ ಪತ್ತುಮಲೈ ಮುರುಗನ್ ಪ್ರತಿಮೆಗಿಂತ ಎತ್ತರವಾಗಿದೆ.

Lord Murugan Statue: ತಮಿಳುನಾಡಿನಲ್ಲಿ ವಿಶ್ವದ ಅತಿ ಎತ್ತರದ ಮುರುಗನ್ ಪ್ರತಿಮೆ ಅನಾವರಣ
ತಮಿಳುನಾಡಿನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಮುರುಗನ್ ಪ್ರತಿಮೆ
Follow us on

ಚೆನ್ನೈ: ತಮಿಳುನಾಡಿನ ಸೇಲಂ ಜಿಲ್ಲೆಯ ಪುತಿರಗೌಂಡಂಪಾಳ್ಯಂನಲ್ಲಿ ವಿಶ್ವದ ಅತಿ ಎತ್ತರದ ಮುರುಗನ್ ಪ್ರತಿಮೆಯನ್ನು (Tallest Lord Murugan Statue) ಅನಾವರಣಗೊಳಿಸಲಾಯಿತು. ಈ ಪ್ರತಿಮೆಯು 146 ಅಡಿ ಎತ್ತರವನ್ನು ಹೊಂದಿದೆ. ಈ ಪ್ರತಿಮೆಗೆ ಕುಂಭಾಭಿಷೇಕವನ್ನು ಮಾಡಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಪುತಿರಗೌಂಡನಪಾಳ್ಯಂನಲ್ಲಿರುವ ಟ್ರಸ್ಟ್‌ನಿಂದ ನಿರ್ಮಿಸಲಾದ ಈ ಪ್ರತಿಮೆಯು ಮಲೇಷ್ಯಾದ 140 ಅಡಿ ಎತ್ತರವಿರುವ ಪತ್ತುಮಲೈ ಮುರುಗನ್ ಪ್ರತಿಮೆಗಿಂತ ಎತ್ತರವಾಗಿದೆ.

ಸೇಲಂನಲ್ಲಿ ವಿಶ್ವದ ಅತ್ಯಂತ ಎತ್ತರದ ಮುರುಗನ್ ದೇವರ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಿದ್ದಂತೆ, ಹೆಲಿಕಾಪ್ಟರ್ ಮೂಲಕ ಅದರ ಮೇಲೆ ಗುಲಾಬಿ ದಳಗಳನ್ನು ಸುರಿಸಲಾಯಿತು. ಈ ಮಹಾಮಸ್ತಕಾಭಿಷೇಕದಲ್ಲಿ ಸಾವಿರಾರು ಭಕ್ತರು ದೇವಾಲಯದ ಆವರಣಕ್ಕೆ ಬಂದು ಪೂಜೆ ಸಮಾರಂಭದಲ್ಲಿ ಪಾಲ್ಗೊಂಡರು.

ಮೇಲ್ನೋಟಕ್ಕೆ, ಮಲೇಷ್ಯಾದ ಮುರುಗನ್ ಪ್ರತಿಮೆಯು ಸೇಲಂನಲ್ಲಿ ನಿರ್ಮಾಣಕ್ಕೆ ಪ್ರೇರಣೆ ನೀಡಿದೆ ಎನ್ನಲಾಗಿದೆ. ಶ್ರೀ ಮುತ್ತುಮಲೈ ಮುರುಗನ್ ಟ್ರಸ್ಟ್‌ನ ಅಧ್ಯಕ್ಷ ಎನ್. ಶ್ರೀಧರ್ ಅವರು ತಮ್ಮ ಹುಟ್ಟೂರಾದ ಅತ್ತೂರಿನಲ್ಲಿ ಅತಿ ಎತ್ತರದ ಮುರುಗನ್ ಪ್ರತಿಮೆಯನ್ನು ನಿರ್ಮಿಸಲು ಬಯಸಿದ್ದರು. ಎಲ್ಲರೂ ಮಲೇಷ್ಯಾಕ್ಕೆ ಹೋಗಿ ಅಲ್ಲಿ ದೇವರನ್ನು ಪೂಜಿಸಲು ಸಾಧ್ಯವಿಲ್ಲ. ಆದ್ದರಿಂದ, ಸೇಲಂನಲ್ಲಿ ಮುರುಗನ್ ಪ್ರತಿಮೆ ನಿರ್ಮಿಸಲು ಶ್ರೀಧರ್ ನಿರ್ಧರಿಸಿದ್ದರು. ನಂತರ 2014ರಲ್ಲಿ, ಉದ್ಯಮಿಯೂ ಆಗಿರುವ ಶ್ರೀಧರ್ ತಮ್ಮ ಜಮೀನಿನಲ್ಲಿ ದೇವಸ್ಥಾನ ನಿರ್ಮಿಸಿ ಮುತ್ತುಮಲೈ ಮುರುಗನ್ ಪ್ರತಿಮೆಯನ್ನು ನಿರ್ಮಿಸಲು ನಿರ್ಧರಿಸಿದರು.

ಶ್ರೀಧರ್ ಅವರು ಪ್ರತಿಮೆಯನ್ನು ನಿರ್ಮಿಸಲು ಶಿಲ್ಪಿ ತಿರುವರೂರ್ ತ್ಯಾಗರಾಜನ್ ಅವರನ್ನು ನೇಮಿಸಿಕೊಂಡರು. ಕುತೂಹಲದ ಸಂಗತಿಯೆಂದರೆ, 2006ರಲ್ಲಿ ಮಲೇಷ್ಯಾದಲ್ಲಿ ಮುರುಗನ್ ಪ್ರತಿಮೆಯನ್ನು ನಿರ್ಮಿಸಿದ್ದು ಕೂಡ ಅದೇ ಶಿಲ್ಪಿ. ಈ ಪ್ರತಿಮೆಯ ನಿರ್ಮಾಣ ಪ್ರಕ್ರಿಯೆಯನ್ನು ಪ್ರಾರಂಭಿಸಲು ಶ್ರೀಧರ್ ಸುಮಾರು ಎರಡು ವರ್ಷಗಳನ್ನು ತೆಗೆದುಕೊಂಡರು.

ಮಲೇಷ್ಯಾದ ಮುರುಗನ್ ಪ್ರತಿಮೆಯು ಬಟು ಗುಹೆಗಳಲ್ಲಿದೆ. ಇದು ಭಾರತದ ಹೊರಗಿನ ಅತ್ಯಂತ ಜನಪ್ರಿಯ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಇದು ಮಲೇಷ್ಯಾದ ಅತ್ಯಂತ ಎತ್ತರದ ಹಿಂದೂ ಪ್ರತಿಮೆಯಾಗಿದೆ. ಈ ಪ್ರತಿಮೆಯನ್ನು ನಿರ್ಮಿಸಲು ಶಿಲ್ಪಿಗಳು ಮೂರು ವರ್ಷಗಳನ್ನು ತೆಗೆದುಕೊಂಡರು. ಈ ಅದ್ಭುತವಾದ ರಚನೆಯನ್ನು ನಿರ್ಮಿಸಲು 350 ಟನ್ ಉಕ್ಕಿನ ಬಾರ್​ಗಳು, 300 ಲೀಟರ್ ಚಿನ್ನದ ಬಣ್ಣವನ್ನು ಬಳಸಲಾಗಿದೆ. ಇದಲ್ಲದೆ, ಈ ಪ್ರತಿಮೆಯನ್ನು ಕೆತ್ತಲು ಭಾರತದಿಂದ 15 ಶಿಲ್ಪಿಗಳನ್ನು ಕರೆತರಲಾಯಿತು. ಈ ಪ್ರತಿಮೆಯನ್ನು ಕಾಂಕ್ರೀಟ್​ನಿಂದ ನಿರ್ಮಿಸಲಾಗಿದೆ.

ಇದನ್ನೂ ಓದಿ: ತಮಿಳುನಾಡು ನವದಂಪತಿಗೆ ವಿವಾಹ ಮಂಟಪದಲ್ಲಿ ಪೆಟ್ರೋಲ್ ಡೀಸೆಲ್ ಕೊಡುಗೆ

Viral Video: ಸಾವಿರಾರು ಅಡಿ ಎತ್ತರದಲ್ಲಿ ಆಫ್​ ಆದ ವಿಮಾನವನ್ನು ಸ್ಟಾರ್ಟ್ ಮಾಡಲು ಪೈಲಟ್ ಮಾಡಿದ್ದೇನು ಗೊತ್ತಾ..!