AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈತ್ರಿ ಮಾಡಿಕೊಳ್ಳೋಣ, ನೀವೇ ಉತ್ತರ ಪ್ರದೇಶ ಸಿಎಂ ಅಭ್ಯರ್ಥಿ ಎಂದು ಹೇಳಿದರೂ ಮಾಯಾವತಿ ಸ್ಪಂದಿಸಲೇ ಇಲ್ಲ: ರಾಹುಲ್​ ಗಾಂಧಿ

ಕಾಂಗ್ರೆಸ್ ನಾಯಕ ಕೆ.ರಾಜು ಎಂಬುವರು ಸಂಪಾದಿಸಿದ ದಿ ದಲಿತ್ ಟ್ರುತ್​ ಎಂಬ ಪುಸ್ತಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಮ್ಮ ಪ್ರಸ್ತಾಪಕ್ಕೆ ಮಾಯಾವತಿ ಸ್ಪಂದಿಸಲೇ ಇಲ್ಲ, ಪ್ರತಿಕ್ರಿಯೆಯನ್ನೂ ನೀಡಲಿಲ್ಲ ಎಂದು ಹೇಳಿದ್ದಾರೆ.

ಮೈತ್ರಿ ಮಾಡಿಕೊಳ್ಳೋಣ, ನೀವೇ ಉತ್ತರ ಪ್ರದೇಶ ಸಿಎಂ ಅಭ್ಯರ್ಥಿ ಎಂದು ಹೇಳಿದರೂ ಮಾಯಾವತಿ ಸ್ಪಂದಿಸಲೇ ಇಲ್ಲ: ರಾಹುಲ್​ ಗಾಂಧಿ
ರಾಹುಲ್ ಗಾಂಧಿ (ಫೋಟೋ ಕೃಪೆ-ಪಿಟಿಐ)
TV9 Web
| Updated By: Lakshmi Hegde|

Updated on:Apr 09, 2022 | 4:47 PM

Share

ದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ (UP Assembly Election) ಮುಗಿದು, ಅಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಸೋತು, ಬಿಜೆಪಿ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚನೆಯನ್ನೂ ಮಾಡಿದೆ. ಇದೆಲ್ಲ ಆದ ಬಳಿಕ ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ (Rahul Gandhi) ಈಗೊಂದು ಮಹತ್ವದ ವಿಚಾರ ಹೇಳಿದ್ದಾರೆ. ‘ನಾವು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಬಹುಜನ ಸಮಾಜ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯೋಜಿಸಿದ್ದೆವು. ಅದರಂತೆ ಪಕ್ಷದ ಮುಖ್ಯಸ್ಥೆ ಮಾಯಾವತಿಯವರನ್ನು ಸಂಪರ್ಕಿಸಲಾಗಿತ್ತು. ಅಷ್ಟೇ ಅಲ್ಲ, ಕಾಂಗ್ರೆಸ್​-ಬಿಎಸ್​ಪಿ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಮುಖ್ಯಮಂತ್ರಿ ಸ್ಥಾನಕ್ಕೆ ನೀವೇ ಅಭ್ಯರ್ಥಿ ಎಂದೂ ಹೇಳಿದ್ದೆವು. ಆದರೆ ಅವರು ಅದನ್ನು ಸ್ಪಂದಿಸಲೇ ಇಲ್ಲ’ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ಕೆ.ರಾಜು ಎಂಬುವರು ಸಂಪಾದಿಸಿದ ದಿ ದಲಿತ್ ಟ್ರುತ್​ ಎಂಬ ಪುಸ್ತಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಮ್ಮ ಪ್ರಸ್ತಾಪಕ್ಕೆ ಮಾಯಾವತಿ ಸ್ಪಂದಿಸಲೇ ಇಲ್ಲ, ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಮಾಯಾವತಿಯವರಿಗೆ ಸಿಬಿಐ, ಇ.ಡಿ. ಮತ್ತು ಪೆಗಾಸಸ್​ ಭಯವಿದ್ದುದರಿಂದ ಅವರು ಬಿಜೆಪಿ ವಿರುದ್ಧ ನಿಲ್ಲಲು ಬರಲಿಲ್ಲ. ಉತ್ತರ ಪ್ರದೇಶದಲ್ಲಿ ದಲಿತರ ಪರವಾಗಿ ಧ್ವನಿಯನ್ನೂ ಎತ್ತಲಿಲ್ಲ ಎಂದು ಹೇಳಿದರು. ಅಷ್ಟೇ ಅಲ್ಲ, ತನಿಖಾ ದಳಗಳ ಮೂಲಕ ಸಂವಿಧಾನವನ್ನು ಹತ್ತಿಕ್ಕಲಾಗುತ್ತಿದೆ. ಈ ಸಂವಿಧಾನವೆಂಬುದು ಡಾ. ಬಿ.ಆರ್.ಅಂಬೇಡ್ಕರ್ ಅವರು ನಮಗೆ ನೀಡಿದ ಪ್ರಬಲ ಅಸ್ತ್ರ. ಆದರೆ ಅದಕ್ಕಿಂದು ತುಕ್ಕು ಹಿಡಿಯುತ್ತಿದೆ ಎಂದು ರಾಹುಲ್​ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ಉಳಿದ ರಾಜಕಾರಣಿಗಳಂತೆ ಸದಾ ಅಧಿಕಾರದ ಅನ್ವೇಷಣೆ ಮಾಡುತ್ತಿರುವವನು ಅಲ್ಲ. ಕೆಲವರು ಇದ್ದಾರೆ ಅವರು ಬೆಳಗ್ಗೆ ಏಳುತ್ತಾರೆ..ರಾತ್ರಿ ಮಲಗುವವರೆಗೂ ಹೇಗೆ ಅಧಿಕಾರ ಹಿಡಿಯುವುದು ಎಂಬ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ನಾನೊಂದು ಶಕ್ತಿ ಕೇಂದ್ರ (ಅಧಿಕಾರ ಕೇಂದ್ರ)ದಲ್ಲಿ ಹುಟ್ಟಿದವನು. ಆದರೆ ಅಧಿಕಾರ ಹಿಡಿಯಬೇಕು ಎಂಬ ಹಪಹಪಿ ನನಗಿಲ್ಲ ಎಂದು ಎಂದೂ ಹೇಳಿದರು. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 2 ಕ್ಷೇತ್ರಗಳಲ್ಲಿ ಗೆದ್ದುಕೊಂಡಿದ್ದರೆ, ಬಹುಜನ ಸಮಾಜ ಪಾರ್ಟಿ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಪತ್ತೆಯಾದ ಅಪರೂಪದ ಬಿಳಿ ಕಾಂಗರೂ; ಇಲ್ಲಿದೆ ವೈರಲ್ ಫೋಟೋ

Published On - 4:46 pm, Sat, 9 April 22