‘ದೇಶಕ್ಕೆ ಅವರ ಅಗತ್ಯವಿದೆ’: ತನ್ನೆಲ್ಲ ಆಸ್ತಿಯನ್ನು ರಾಹುಲ್ ಗಾಂಧಿ ಹೆಸರಿಗೆ ಬರೆದುಕೊಟ್ಟ 78ರ ಹರೆಯದ ಮಹಿಳೆ

‘ದೇಶಕ್ಕೆ ಅವರ ಅಗತ್ಯವಿದೆ’: ತನ್ನೆಲ್ಲ ಆಸ್ತಿಯನ್ನು ರಾಹುಲ್ ಗಾಂಧಿ ಹೆಸರಿಗೆ ಬರೆದುಕೊಟ್ಟ 78ರ ಹರೆಯದ ಮಹಿಳೆ
ಪುಷ್ಪಾ ಮುಂಜಿಯಾಲ್

Pushpa Munjial ರಾಹುಲ್ ಗಾಂಧಿಯವರ ಆಲೋಚನೆಗಳಿಂದ ನಾನು ತುಂಬಾ ಪ್ರಭಾವಿತಳಾಗಿದ್ದೇನೆ ಮತ್ತು ಅದಕ್ಕಾಗಿಯೇ ತನ್ನ ಆಸ್ತಿಯನ್ನು ಅವರಿಗೆ ನೀಡುತ್ತಿದ್ದೇನೆ ಎಂದಿದ್ದಾರೆ ಪುಷ್ಪಾ.

TV9kannada Web Team

| Edited By: Rashmi Kallakatta

Apr 04, 2022 | 11:02 PM

ದೆಹಲಿ: ಉತ್ತರಾಖಂಡ್‌ (Uttarakhand) ಡೆಹ್ರಾಡೂನ್‌ನ 78 ವರ್ಷದ ಮಹಿಳೆಯೊಬ್ಬರು ₹50 ಲಕ್ಷ ಮೌಲ್ಯದ ಆಸ್ತಿ ಮತ್ತು 10 ತೊಲ ಚಿನ್ನ ಸೇರಿದಂತೆ ತಮ್ಮ ಎಲ್ಲಾ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೆಸರಿಗೆ ಬರೆದುಕೊಟ್ಟಿದ್ದಾರೆ. ಪುಷ್ಪಾ ಮುಂಜಿಯಾಲ್ ಅವರು ಡೆಹ್ರಾಡೂನ್ ನ್ಯಾಯಾಲಯದಲ್ಲಿ ವಿಲ್ ಸಲ್ಲಿಸಿದ್ದು, ರಾಹುಲ್ ಗಾಂಧಿಗೆ ತಮ್ಮ ಆಸ್ತಿಯನ್ನು ಬರೆದುಕೊಟ್ಟಿದ್ದಾರೆ. ರಾಹುಲ್ ಗಾಂಧಿ ಮತ್ತು ಅವರ ವಿಚಾರಗಳು ದೇಶಕ್ಕೆ ಅಗತ್ಯ ಎಂದು ಪುಷ್ಪಾ ಮುಂಜಿಯಾಲ್(Pushpa Munjial) ಹೇಳಿದ್ದಾರೆ. ರಾಹುಲ್ ಗಾಂಧಿಯವರ ಆಲೋಚನೆಗಳಿಂದ ನಾನು ತುಂಬಾ ಪ್ರಭಾವಿತಳಾಗಿದ್ದೇನೆ ಮತ್ತು ಅದಕ್ಕಾಗಿಯೇ ತನ್ನ ಆಸ್ತಿಯನ್ನು ಅವರಿಗೆ ನೀಡುತ್ತಿದ್ದೇನೆ ಎಂದಿದ್ದಾರೆ ಪುಷ್ಪಾ. ಮಾಜಿ ರಾಜ್ಯಾಧ್ಯಕ್ಷ ಪ್ರೀತಮ್ ಸಿಂಗ್ ಅವರ ನಿವಾಸದಲ್ಲಿ ಪುಷ್ಪಾ ಮುಂಜಿಯಲ್ ಅವರು ರಾಹುಲ್ ಗಾಂಧಿಗೆ ತಮ್ಮ ಆಸ್ತಿಯನ್ನು ವಿಲ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಮಹಾನಗರ ಅಧ್ಯಕ್ಷ ಲಾಲಚಂದ್ ಶರ್ಮಾ ಹೇಳಿದ್ದಾರೆ.

ಪುಷ್ಪಾ ಮುಂಜಿಯಾಲ್ ಜಿ ಅವರು ತಮ್ಮ ಸಂಪೂರ್ಣ ಆಸ್ತಿಯನ್ನು ನಮ್ಮ ನಾಯಕರಾಹುಲ್ ಗಾಂಧಿಜಿಯವರ ಹೆಸರಿಗೆ ದಾನ ಮಾಡಿದ್ದಾರೆ. ಇದಕ್ಕಾಗಿ ಅವರು ಡೆಹ್ರಾಡೂನ್ ನ್ಯಾಯಾಲಯದಲ್ಲಿ ಸಾಕ್ಷ್ಯವನ್ನು ಸಹ ಸಲ್ಲಿಸಿದ್ದಾರೆ. ಈ ವಿಶ್ವಾಸಕ್ಕಾಗಿ ತಾಯಿಗೆ ತುಂಬಾ ಧನ್ಯವಾದಗಳು ಎಂದು ಬಿಹಾರ್ ಕಾಂಗ್ರೆಸ್ ಸೇವಾದಳ ಟ್ವೀಟ್ ಮಾಡಿದೆ.

“ಈ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ದೇಶ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಇದರಿಂದ ಆಕೆ  ತುಂಬಾ ಪ್ರಭಾವಿತರಾಗಿದ್ದಾರೆ  ಎಂದು  ಲಾಲಚಂದ್ ಶರ್ಮಾ ಹೇಳಿದರು.

ಇದನ್ನೂ ಓದಿ: ನನಗೆ ಸಿಟ್ಟು ಬರುವುದಿಲ್ಲ, ನನ್ನ ಗಟ್ಟಿ ದನಿ ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟ್: ಅಮಿತ್ ಶಾ

Follow us on

Related Stories

Most Read Stories

Click on your DTH Provider to Add TV9 Kannada