ದೆಹಲಿ ಜುಲೈ 15: ಉಕ್ಕಿ ಹರಿಯುತ್ತಿರುವ ಯಮುನಾ ನದಿಯ (Yamuna River) ಪ್ರವಾಹದಿಂದಾಗಿ ನೋಯ್ಡಾದಲ್ಲಿ (Noida) ಸಿಲುಕಿರುವ ಪ್ರಾಣಿಗಳನ್ನು ವಿಪತ್ತು ನಿರ್ವಹಣಾ ತಂಡಗಳು ರಕ್ಷಿಸಿವೆ. ಹೀಗೆ ರಕ್ಷಿಸಿದ ಪ್ರಾಣಿಗಳ ಪೈಕಿ ಪ್ರೀತಂ ಎಂಬ ಗೂಳಿಯೂ ಒಂದು. ಇದರ ಬೆಲೆ ಬರೋಬ್ಬರಿ 1 ಕೋಟಿ!. ಗಾಜಿಯಾಬಾದ್‌ನಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) 8 ನೇ ಬೆಟಾಲಿಯನ್, ನಮ್ಮ ತಂಡ ನೋಯ್ಡಾದಿಂದ ಭಾರತದ ನಂ.1 ಗೂಳಿ, 1 ಕೋಟಿ ರೂಪಾಯಿ ಬೆಲೆಬಾಳುವ “ಪ್ರೀತಮ್” ಸೇರಿದಂತೆ 3 ಜಾನುವಾರುಗಳನ್ನು ರಕ್ಷಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜೀವ ಉಳಿಸಲು ನಮ್ಮ ತಂಡಗಳು ಶ್ರಮಿಸುತ್ತಿವೆ ಎಂದು ರಕ್ಷಣಾ ತಂಡ ಜಾನುವಾರು ಮತ್ತು ಮೇಕೆಗಳನ್ನು ರಕ್ಷಿಸುವ ಫೋಟೋಗಳು ಮತ್ತು ವಿಡಿಯೊಗಳನ್ನು ಟ್ವೀಟ್ ಮಾಡಿದೆ.
ಈ ತಂಡ ಪೋಸ್ಟ್ ಮಾಡಿದ ವಿಡಿಯೊಗಳಲ್ಲಿ ಎರಡು ಎಮ್ಮೆಗಳನ್ನು ರಕ್ಷಿಸುತ್ತಿರುವುದು ಕಾಣಿಸುತ್ತದೆ.
#आपदासेवासदैवसर्वत्र
Team @8NdrfGhaziabad has rescued 3 cattles including India’s No.1 Bull “PRITAM” costing 1 Cr. from Noida. NDRF teams are working hard to save lives in flood affected areas.#animalrescue @ndmaindia @NDRFHQ @noida_authority @HMOIndia @PIBHomeAffairs pic.twitter.com/MdMRikYFVz— 8th BN NDRF (@8NdrfGhaziabad) July 15, 2023
ಯಮುನಾ ನದಿಯ ನೀರು ನೋಯ್ಡಾದಲ್ಲಿ ನದಿಯ ದಡದಲ್ಲಿ ಸುಮಾರು 550 ಹೆಕ್ಟೇರ್ ಭೂಮಿಯನ್ನು ಮುಳುಗಿಸಿದೆ. 5,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ ಮತ್ತು ಎಂಟು ಹಳ್ಳಿಗಳ ಮೇಲೆ ಪರಿಣಾಮ ಬೀರಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಗುರುವಾರದಿಂದ ದನ, ನಾಯಿ, ಮೊಲ, ಬಾತುಕೋಳಿ, ಹುಂಜ ಮತ್ತು ಗಿನಿಪಿಗ್ ಸೇರಿದಂತೆ ಸುಮಾರು 6,000 ಪ್ರಾಣಿಗಳನ್ನು ಸಹ ಮುಳುಗಿರುವ ಪ್ರದೇಶಗಳಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ 45 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿರುವ ಯಮುನಾ ನದಿಯ ನೀರಿನ ಮಟ್ಟವು ಇಂದು 207.68 ಮೀಟರ್‌ಗೆ ಇಳಿದಿದ್ದರೂ ಅಪಾಯದ ಗಡಿಯಿಂದ ಇದು ಇನ್ನೂ ಎರಡು ಮೀಟರ್ ಮೇಲಿದೆ. ನೆರೆಯ ದೆಹಲಿಯಲ್ಲಿ, ಐಟಿಒ ಮತ್ತು ರಾಜ್‌ಘಾಟ್ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳು ನೀರಿನಲ್ಲಿ ಮುಳುಗಿದ್ದರಿಂದ ನಿನ್ನೆ ಸೇನಾಪಡೆಯನ್ನು ಕರೆಸಲಾಗಿತ್ತು.
ಇದನ್ನೂ ಓದಿ: Delhi Flood: ಯಮುನಾ ನದಿ ನೀರು ಮಟ್ಟ ಸ್ವಲ್ಪ ಇಳಿಕೆ; ಪರಸ್ಪರ ಕಿತ್ತಾಡದೆ ಸಹಕರಿಸಿ: ಅರವಿಂದ ಕೇಜ್ರಿವಾಲ್
ಪ್ರವಾಹದ ನೀರನ್ನು ಹೊರಹಾಕಲು ಯಮುನಾ ಬ್ಯಾರೇಜ್‌ನ ಐದು ಗೇಟ್‌ಗಳನ್ನು ತೆರೆಯುವ ಕೆಲಸ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. “ಐಟಿಒ ಬ್ಯಾರೇಜ್‌ನ ಮೊದಲ ಜಾಮ್ಡ್ ಗೇಟ್ ತೆರೆಯಲಾಗಿದೆ. ಶೀಘ್ರದಲ್ಲೇ ಎಲ್ಲಾ ಐದು ಗೇಟ್‌ಗಳನ್ನು ತೆರೆಯಲಾಗುವುದು.ಯಮುನಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ, ಮಳೆಯಾಗದಿದ್ದರೆ ಪರಿಸ್ಥಿತಿ ಶೀಘ್ರದಲ್ಲೇ ಸಾಮಾನ್ಯವಾಗಲಿದೆ, ಮಳೆಯಾದರೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ