Delhi Flood: ಯಮುನಾ ನದಿ ನೀರು ಮಟ್ಟ ಸ್ವಲ್ಪ ಇಳಿಕೆ; ಪರಸ್ಪರ ಕಿತ್ತಾಡದೆ ಸಹಕರಿಸಿ: ಅರವಿಂದ ಕೇಜ್ರಿವಾಲ್

Yamuna River: 45 ವರ್ಷಗಳ ದಾಖಲೆ ಮುರಿದಿರುವ ಯಮುನಾ ನದಿ ನೀರಿನ ಮಟ್ಟ ಇಂದು (ಶನಿವಾರ) ಬೆಳಿಗ್ಗೆ 207.68 ಮೀಟರ್‌ಗೆ ಇಳಿದಿದ್ದರೂ  ದೆಹಲಿಯ ಹಲವಾರು ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ. ಈ ವಾರದ ಆರಂಭದಲ್ಲಿ ಯಮುನೆಯ ನೀರಿನ ಮಟ್ಟ 208.66 ಮೀಟರ್‌ಗಳನ್ನು ತಲುಪಿತ್ತು, 1978 ರಲ್ಲಿ ಹಿಂದಿನ ಗರಿಷ್ಠ 207.49 ಮೀಟರ್‌ಗಳನ್ನು ಮೀರಿಸಿದೆ.

Delhi Flood: ಯಮುನಾ ನದಿ ನೀರು ಮಟ್ಟ ಸ್ವಲ್ಪ ಇಳಿಕೆ; ಪರಸ್ಪರ ಕಿತ್ತಾಡದೆ ಸಹಕರಿಸಿ: ಅರವಿಂದ ಕೇಜ್ರಿವಾಲ್
ದೆಹಲಿಯಲ್ಲಿ ಪ್ರವಾಹ
Follow us
ರಶ್ಮಿ ಕಲ್ಲಕಟ್ಟ
|

Updated on:Jul 15, 2023 | 12:55 PM

ದೆಹಲಿ ಜುಲೈ 15: ದಾಖಲೆಯ ಮಳೆಯ ನಂತರ ದೆಹಲಿಯಲ್ಲಿ ಪ್ರವಾಹ (Delhi Flood) ಸ್ಥಿತಿ ಮುಂದುವರಿದಿದೆ. ಇತ್ತ ಹರ್ಯಾಣದ ಹತ್ನಿ ಕುಂಡ್ ಬ್ಯಾರೇಜ್‌ನಿಂದ ನೀರನ್ನು ಬಿಡುಗಡೆ ಮಾಡುವುದರಿಂದ ಯಮುನಾ ನದಿಯ (Yamuna River) ನೀರಿನ ಮಟ್ಟವು ಹೆಚ್ಚುತ್ತಿದೆ. ಅದೇ ವೇಳೆ ಇಲ್ಲಿ ಹೆಚ್ಚಿನ ಮಳೆಯಾಗುವ (Delhi Rains) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಶುಕ್ರವಾರವೂ  ದೆಹಲಿಯ ಹಲವು ಭಾಗಗಳಲ್ಲಿ ಸಣ್ಣ ಪ್ರಮಾಣ ಮಳೆಯಾಗಿದೆ. ದೆಹಲಿಯಲ್ಲಿ ಮಳೆಯಾದ ನೀರು ಉಕ್ಕಿ ಹರಿಯುತ್ತದೆ ಮತ್ತು ಹೊರಹೋಗಲು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನೀರು ನಿಲ್ಲುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ತಜ್ಞರು ಹೇಳಿದ್ದಾರೆ.

45 ವರ್ಷಗಳ ದಾಖಲೆ ಮುರಿದಿರುವ ಯಮುನಾ ನದಿ ನೀರಿನ ಮಟ್ಟ ಇಂದು (ಶನಿವಾರ) ಬೆಳಿಗ್ಗೆ 207.68 ಮೀಟರ್‌ಗೆ ಇಳಿದಿದ್ದರೂ  ದೆಹಲಿಯ ಹಲವಾರು ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ. ಈ ವಾರದ ಆರಂಭದಲ್ಲಿ ಯಮುನೆಯ ನೀರಿನ ಮಟ್ಟ 208.66 ಮೀಟರ್‌ಗಳನ್ನು ತಲುಪಿತ್ತು, 1978 ರಲ್ಲಿ ಹಿಂದಿನ ಗರಿಷ್ಠ 207.49 ಮೀಟರ್‌ಗಳನ್ನು ಮೀರಿಸಿದೆ.

ಐಟಿಒ ಮತ್ತು ರಾಜ್‌ಘಾಟ್ ಸೇರಿದಂತೆ ಮಧ್ಯ ದೆಹಲಿಯ ಪ್ರಮುಖ ಪ್ರದೇಶಗಳು ನೀರಿನಲ್ಲಿ ಮುಳುಗಿದ್ದರಿಂದ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಅನ್ನು ಕರೆಸಲಾಯಿತು. ಹನುಮಾನ್ ಮಂದಿರದ ಹೊರಭಾಗದ ರಸ್ತೆ, ಯಮುನಾ ಬಜಾರ್, ಗೀತಾ ಕಾಲೋನಿ, ಸಿವಿಲ್ ಲೈನ್ಸ್‌ನಲ್ಲೂ ನೀರು ತುಂಬಿಕೊಂಡಿದೆ. ಸುಪ್ರೀಂಕೋರ್ಟ್ ಮತ್ತು ನಿಗಮ್ ಬೋಧ ಘಾಟ್ ಸೇರಿದಂತೆ ದೆಹಲಿಯ ಕೆಲವು ಸ್ಮಶಾನಗಳಲ್ಲಿಯೂ ನೀರು ತುಂಬಿದೆ.

ವಾಯುವ್ಯ ದೆಹಲಿಯ ಮುಕುಂದಪುರ ಚೌಕ್ ಪ್ರದೇಶದಲ್ಲಿ ಪ್ರವಾಹದಲ್ಲಿ ಈಜಲು ಪ್ರಯತ್ನಿಸುತ್ತಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಯಮುನಾ ನದಿ ಅಪಾಯದ ಗಡಿ ದಾಟಿದ ನಂತರ ನಗರದಲ್ಲಿ ವರದಿಯಾದ ಮೊದಲ ಸಾವು ಪ್ರಕರಣವಾಗಿದೆ ಇದು. ಯಮುನಾ ಬ್ಯಾರೇಜ್‌ನ ಐದು ಗೇಟ್‌ಗಳನ್ನು ತೆರೆದು ನೀರು ಮತ್ತೆ ಬ್ಯಾರೇಜ್‌ಗೆ ಹರಿಯುವ ಕೆಲಸ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿನ್ನೆ ಸಂಜೆ ಹೇಳಿದ್ದಾರೆ. “ಐಟಿಒ ಬ್ಯಾರೇಜ್‌ನ ಮೊದಲ ಜಾಮ್ಡ್ ಗೇಟ್ ತೆರೆಯಲಾಗಿದೆ. ಶೀಘ್ರದಲ್ಲೇ ಎಲ್ಲಾ ಐದು ಗೇಟ್‌ಗಳನ್ನು ತೆರೆಯಲಾಗುವುದು” ಎಂದಿದ್ದಾರೆ ಅವರು.

ಯಮುನಾ ನದಿ ನೀರು ನಿಧಾನವಾಗಿ ತಗ್ಗುತ್ತಿದೆ. ಮಳೆಯಾಗದೇ ಇದ್ದಲ್ಲಿ ಇನ್ನೆರಡು ದಿನಗಳಲ್ಲಿ ಪರಿಸ್ಥಿತಿ ಸಹಜವಾಗಲಿದೆ.ಮಳೆ ಬಂದರೆ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಜನರು ಜಾಗರೂಕರಾಗಿರಿ ಮತ್ತು ಪರಸ್ಪರ ಸಹಾಯ ಮಾಡುವಂತೆ ಅವರು ಮನವಿ ಮಾಡಿದ್ದಾರೆ. ರಸ್ತೆಗಳು ಪುಟ್ಟ ತೋಡುಗಳಾಗಿ ಮಾರ್ಪಟ್ಟಿದ್ದರಿಂದ ಅಧಿಕಾರಿಗಳು ರಕ್ಷಣಾ ಕಾರ್ಯ ಮುಂದುವರೆಸಿದ್ದಾರೆ. ನಾಯಿ ಮತ್ತು ಇತರ ಜಾನುವಾರುಗಳನ್ನೂ ಸ್ಥಳಾಂತರಿಸಲಾಗುತ್ತಿದೆ.

ಇದನ್ನೂ ಓದಿ: Delhi flood: ದೆಹಲಿಯಲ್ಲಿ ಪ್ರವಾಹ ಸ್ಥಿತಿ: ಮುಕುಂದಪುರದಲ್ಲಿ ನೀರಿನಲ್ಲಿ ಮುಳುಗಿ ಮೂವರು ಬಾಲಕರು ಸಾವು

ಎರಡು ಕಾರ್ಯಪಡೆಗಳನ್ನು ಮೀರತ್‌ನಿಂದ ದೆಹಲಿಗೆ ಕರೆತರಲಾಗಿದೆ.ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಪ್ರಯಾಣಿಕರಿಗೆ ಸಹಾಯ ಮಾಡಲು ಪೀಡಿತ ಪ್ರದೇಶಗಳಲ್ಲಿ 4,500 ಕ್ಕೂ ಹೆಚ್ಚು ಟ್ರಾಫಿಕ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೀರು ಎಷ್ಟು ವೇಗವಾಗಿ ಇಳಿಯುತ್ತದೆ ಎಂಬುದರ ಆಧಾರದ ಮೇಲೆ ಸಂಚಾರ ನಿರ್ಬಂಧಗಳನ್ನು ತೆಗೆದುಹಾಕಲಾಗುತ್ತದೆ. ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳನ್ನು ಭಾನುವಾರದವರೆಗೆ ಮುಚ್ಚುವಂತೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಗುರುವಾರ ನಿರ್ದೇಶನ ನೀಡಿದೆ.ಸಿಂಘು ಸೇರಿದಂತೆ ನಾಲ್ಕು ಗಡಿಗಳಿಂದ ನಗರಕ್ಕೆ ಭಾರಿ ಸರಕು ವಾಹನಗಳ ಪ್ರವೇಶವನ್ನು ನಗರ ಸರ್ಕಾರ ನಿಷೇಧಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:50 pm, Sat, 15 July 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ