Maharashtra Politics: ಚಿಕ್ಕಮ್ಮನ್ನು ನೋಡಲು ಶರದ್​ ಪವಾರ್​ ಮನೆಗೆ ಬಂದ ಬಂಡಾಯ ನಾಯಕ ಅಜಿತ್​ ಪವಾರ್

ಮಹಾರಾಷ್ಟ್ರದಲ್ಲಿ ಭಾರೀ ಭಾರೀ ರಾಜಕೀಯ ಬೆಳವಣಿಗಳ ನಡುವೆ ಉಪಮುಖ್ಯಮಂತ್ರಿ ಅಜಿತ್​ ಪವಾರ್​ ತನ್ನ ಚಿಕ್ಕಮ್ಮನ್ನು ನೋಡಲು ಬಂದಿದ್ದಾರೆ, ಅಂದರೆ ಶರದ್​​ ಪವಾರ್​ ಅವರ ಪತ್ನಿಯನ್ನು ನೋಡಲು ಶರದ್​ ಪವಾರ್​ ಅವರ ಮನೆಗೆ ಬಂದಿದ್ದಾರೆ

Maharashtra Politics: ಚಿಕ್ಕಮ್ಮನ್ನು ನೋಡಲು ಶರದ್​ ಪವಾರ್​ ಮನೆಗೆ ಬಂದ ಬಂಡಾಯ ನಾಯಕ ಅಜಿತ್​ ಪವಾರ್
ಸಾಂದರ್ಭಿಕ ಚಿತ್ರ
Follow us
|

Updated on: Jul 15, 2023 | 11:24 AM

ಮುಂಬೈ, ಜುಲೈ 15:  ರಾಜಕೀಯವೇ ಬೇರೆ, ಸಂಬಂಧಗಳೇ ಬೇರೆ, ಒಂದೇ ಕುಟುಂಬದವರು ಬೇರೆ ಬೇರೆ ಪಕ್ಷದಲ್ಲಿರುಬಹುದು, ಆದರೆ ಕುಟುಂಬದ ವಿಚಾರ ಬಂದಾಗ ಎಲ್ಲರೂ ಒಂದಾಗುತ್ತಾರೆ, ರಾಜಕೀಯ ಸಿದ್ದಾಂತಗಳೇ ಬೇರೆ, ಸಂಬಂಧಗಳ ಒಗ್ಗಟು ಬೇರೆ ಎಂಬುದಕ್ಕೆ ಮಹಾರಾಷ್ಟ್ರ ರಾಜಕಾರಣ ಉದಾಹರಣೆ, ಮಹಾರಾಷ್ಟ್ರದಲ್ಲಿ ಭಾರೀ ಭಾರೀ ರಾಜಕೀಯ ಬೆಳವಣಿಗಳ ನಡುವೆ ಉಪಮುಖ್ಯಮಂತ್ರಿ ಅಜಿತ್​ ಪವಾರ್​ ತನ್ನ ಚಿಕ್ಕಮ್ಮನ್ನು ನೋಡಲು ಬಂದಿದ್ದಾರೆ, ಅಂದರೆ ಶರದ್​​ ಪವಾರ್​ ಅವರ ಪತ್ನಿಯನ್ನು ನೋಡಲು ಶರದ್​ ಪವಾರ್​ ಅವರ ಮನೆಗೆ ಬಂದಿದ್ದಾರೆ ಎಂದು ಎನ್​​ಸಿಪಿ ಮೂಲಗಳು ತಿಳಿಸಿದೆ. ಮಹಾರಾಷ್ಟ್ರದ ರಾಜಕೀಯದಲ್ಲಿ ಮಹತ್ವ ಬೆಳವಣಿಗಳು ನಡೆದಿದೆ. ಶಿವಸೇನೆಯಲ್ಲಿಯೇ ಇದ್ದು ಏಕನಾಥ್ ಶಿಂಧೆ ಬಿಜೆಪಿ ಜತೆಗೆ ಸೇರಿ ಸರ್ಕಾರ ರಚನೆ ಮಾಡಿದರು, ನಂತರ ಇತ್ತಿಚೇಗೆ ಎನ್​​ಸಿಪಿ ಪಕ್ಷದ ನಾಯಕ ಅಜಿತ್​ ಪವಾರ್​ ತನ್ನ ಶಾಸಕರೊಂದಿಗೆ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿ, ಉಪಮುಖ್ಯಮಂತ್ರಿಯಾದರು, ಇವರು ರಾಜಕೀಯವಾಗಿ ಬಂಡಾಯವೆದ್ದರು, ಕುಟುಂಬದಲ್ಲಿ ಯಾವುದೇ ಕೋಪಗಳು ಇಲ್ಲ ಎಂಬುದನ್ನು ಅಜಿತ್​ ಪವಾರ್​ ತೋರಿದಂತಿದೆ.

ಹೌದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಂಸ್ಥಾಪಕ ಶರದ್ ಪವಾರ್ ಅವರ ಪತ್ನಿ ಪ್ರತಿಭಾ ಪವಾರ್ ಅವರು ಶುಕ್ರವಾರ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ. ಕೈಗೆ ಸಂಬಂಧಿಸಿದಂತೆ ಒಂದು ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ ಎಂದು ಶರದ್ ಪವಾರ್ ಬಣದ ಸದಸ್ಯರೊಬ್ಬರು ತಿಳಿಸಿದ್ದಾರೆ. ಶರದ್​ ಪವಾರ್​ ಅವರ ಪತ್ನಿ ಪ್ರತಿಭಾ ಪವಾರ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಉಪಮುಖ್ಯಮಂತ್ರಿ ಅಜಿತ್ ಪವಾರ್ ತನ್ನ ಚಿಕ್ಕಮ್ಮನ್ನು ನೋಡಲು ಎನ್‌ಸಿಪಿ ವರಿಷ್ಠರ ಅಧಿಕೃತ ನಿವಾಸ ಸಿಲ್ವರ್ ಓಕ್‌ಗೆ ಭೇಟಿ ನೀಡಿದ್ದಾರೆ ಎಂದು ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಊಹಾಪೋಹಗಳ ನಡುವೆ ಶಿಂದೆ, ಫಡ್ನವಿಸ್ ಮಹತ್ವದ ಚರ್ಚೆ

ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪನ ವಿರುದ್ಧ ಬಂಡಾಯವೆದ್ದು, ಎನ್‌ಸಿಪಿಯನ್ನು ಒಡೆದು ಜುಲೈ 2 ರಂದು ಏಕನಾಥ್ ಶಿಂಧೆ ಸರ್ಕಾರಕ್ಕೆ ಸೇರಿದ ನಂತರ ಸಿಲ್ವರ್ ಓಕ್‌ಗೆ ಇದು ಮೊದಲ ಭೇಟಿಯಾಗಿದೆ. ಅಜಿತ್ ಪವಾರ್ ಅವರು ಚಿಕ್ಕಮ್ಮ ಪ್ರತಿಭಾ ಅವರಿಗೆ ತುಂಬಾ ಪ್ರೀತಿ ಮಗ ಎಂದು ಹೇಳಲಾಗಿದೆ. 2019ರಲ್ಲಿ ಅಜಿತ್​ ಅವಾರ್ ​ ಮತ್ತು ದೇವೇಂದ್ರ ಫಡ್ನವಿಸ್ ಸಮ್ಮಿಶ್ರ ಸರ್ಕಾರ ರಚನೆ ಮಾಡಿದರು, ಆದರೆ ಅದು ಬಹುದಿನಗಳ ಇರಲಿಲ್ಲ, ಅಜಿತ್​ ಪವಾರ್​ ಅವರನ್ನು ಮತ್ತೆ ಎನ್​​ಸಿಪಿಗೆ ಮರಳಿ ತರುವಲ್ಲಿ ಪ್ರತಿಭಾ ಪವಾರ್​ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗಿದೆ. ಎನ್‌ಸಿಪಿ ನಾಯಕರು ಪ್ರತಿಭಾ ಪವಾರ್​ ಅವರನ್ನು ‘ಕಾಕಿ’ ಎಂದು ಪ್ರೀತಿಯಿಂದ ಕರೆಯುತ್ತಾರೆ. ಪ್ರತಿಭಾ ಪವಾರ್ ಅವರನ್ನು ಪಕ್ಷದ ಮಾತೃಪ್ರಧಾನ ಎಂದು ನೋಡಲಾಗುತ್ತದೆ ಆದರೆ ಅವರು ಯಾವತ್ತೂ ರಾಜಕೀಯದಲ್ಲಿ ಸಕ್ರಿಯವಾಗಿರಲಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು