Yasin Malik: ನ್ಯಾಯಯುತ ವಿಚಾರಣೆಗೆ ಒತ್ತಾಯಿಸಿ ತಿಹಾರ್ ಜೈಲಿನಲ್ಲಿ ಯಾಸಿನ್ ಮಲಿಕ್ ಉಪವಾಸ ಸತ್ಯಾಗ್ರಹ

ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥನಾಗಿರುವ ಯಾಸಿನ್ ಮಲಿಕ್ ಭಯೋತ್ಪಾದನೆಗೆ ಫಂಡಿಂಗ್ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ.

Yasin Malik: ನ್ಯಾಯಯುತ ವಿಚಾರಣೆಗೆ ಒತ್ತಾಯಿಸಿ ತಿಹಾರ್ ಜೈಲಿನಲ್ಲಿ ಯಾಸಿನ್ ಮಲಿಕ್ ಉಪವಾಸ ಸತ್ಯಾಗ್ರಹ
ಯಾಸಿನ್ ಮಲಿಕ್
Image Credit source: Hindustan Times
Edited By:

Updated on: Jul 23, 2022 | 11:35 AM

ಶ್ರೀನಗರ: ತಿಹಾರ್ ಜೈಲಿನಲ್ಲಿರುವ ಕಾಶ್ಮೀರಿ ನಾಯಕ ಯಾಸಿನ್ ಮಲಿಕ್ (Yasin Malik) ತನ್ನ ಪ್ರಕರಣದಲ್ಲಿ ನ್ಯಾಯಯುತ ವಿಚಾರಣೆಯನ್ನು ಕೋರಿ ದೆಹಲಿಯ ತಿಹಾರ್ ಜೈಲಿನಲ್ಲಿ (Delhi Tihar Jail) ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥನಾಗಿರುವ ಯಾಸಿನ್ ಮಲಿಕ್ ಭಯೋತ್ಪಾದನೆಗೆ ಫಂಡಿಂಗ್ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದು, ಎರಡು ಪ್ರಕರಣಗಳಲ್ಲಿ ಖುದ್ದು ಹಾಜರಾಗುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

1989ರಲ್ಲಿ ಆಗಿನ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಸಯೀದ್ ಅವರ ಅಪಹರಣ ಮತ್ತು 1990ರಲ್ಲಿ ನಾಲ್ವರು ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಗಳನ್ನು ಕೊಂದ ಪ್ರಕರಣಗಳಲ್ಲಿ ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಯಾಸಿನ್ ಮಲಿಕ್ ವಿಚಾರಣೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ತಿಹಾರ್ ಜೈಲು ಸಂಖ್ಯೆ 7ರಲ್ಲಿ ಯಾಸಿನ್ ಮಲಿಕ್; ಪಿ ಚಿದಂಬರಂ, ಡಿಕೆ ಶಿವಕುಮಾರ್ ಕೂಡಾ ಇದೇ ಜೈಲು ಸಂಖ್ಯೆ 7ರಲ್ಲಿ ಶಿಕ್ಷೆ ಅನುಭವಿಸಿದ್ದರು

56 ವರ್ಷದ ಯಾಸಿನ್ ಮಲಿಕ್ ವಿಶೇಷ ಭಯೋತ್ಪಾದಕ ಮತ್ತು ಟಾಡಾ (TADA) ಕಾಯ್ದೆಯಡಿ ನ್ಯಾಯಾಲಯದ ಮುಂದೆ ಭೌತಿಕವಾಗಿ ಹಾಜರಾಗಲು ಸರ್ಕಾರಕ್ಕೆ ಪತ್ರ ಬರೆದಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ನ್ಯಾಯಾಲಯವು ಈ ಹಿಂದೆ ಮೇ 19ರಂದು ಭಯೋತ್ಪಾದನೆ ಫಂಡಿಂಗ್ ಪ್ರಕರಣಗಳಲ್ಲಿ ಯಾಸಿನ್ ಮಲಿಕ್ ಅಪರಾಧಿ ಎಂದು ಸಾಬೀತು ಮಾಡಿತ್ತು. ಮೇ 25ರಂದು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಕಳೆದ ನ್ಯಾಯಾಲಯದ ವಿಚಾರಣೆಗೆ ಒಂದು ದಿನ ಮೊದಲು ಜುಲೈ 12ರಿಂದ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಲು ಯಾಸಿನ್ ಮಲಿಕ್ ನಿರ್ಧರಿಸಿದ್ದರು. ಆದರೆ, ಜೈಲು ಅಧಿಕಾರಿಗಳ ಮನವಿಯ ಮೇರೆಗೆ ಅವರು 10 ದಿನಗಳ ಕಾಲ ಉಪವಾಸ ಸತ್ಯಾಗ್ರಹವನ್ನು ಮುಂದೂಡಿದ್ದರು.

Web contact

TV9 Kannada

Read More
Follow Us