NO ಬ್ಯಾಂಕ್ ಆದ Yes Bank: ಫೋನ್ ಪೇ ಗ್ರಾಹಕರು ಕಂಗಾಲು!

|

Updated on: Mar 06, 2020 | 1:07 PM

ಮುಂಬೈ: ದೇಶದ ಪ್ರಮುಖ ಖಾಸಗಿ ವಾಣಿಜ್ಯ ಬ್ಯಾಂಕ್ ಆದ ಯಸ್​ ಬ್ಯಾಂಕ್ ಸೇವೆಗಳಿಗೆ ಆರ್​ಬಿಐ ನಿರ್ಬಂಧ ಹೇರಿ ಬಹುತೇಕ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇದರಿಂದ ಯಸ್​ ಬ್ಯಾಂಕ್ ಜೊತೆಗೆ ವ್ಯವಹಾರ ನಡೆಸುತ್ತಿರುವ ಪ್ರಮುಖ ಕಂಪನಿಗಳಿಗೆ ಭಾರಿ ಹೊಡೆತ ಬಿದ್ದಿದೆ. 50 ಸಾವಿರ ರೂ. ಮಾತ್ರವೇ ಟ್ರಾನ್ಸಾಕ್ಷನ್ ನಡೆಸಬೇಕು ಎಂಬ ಕಟ್ಟಾಜ್ಞೆಯನ್ನು ಆರ್​ಬಿಐ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಮುಖ ಆನ್​ಲೈನ್ ಸೇವೆಗಳನ್ನು ಒದಗಿಸುತ್ತಿದ್ದ ಫೋನ್ ಪೇ ಕಂಪನಿಗೆ ಭಾರಿ ಹೊಡೆತ ಬಿದ್ದಿದೆ. ಎಷ್ಟರಮಟ್ಟಿಗೆ ಅಂದರೆ ಫೋನ್ ಪೇ […]

NO ಬ್ಯಾಂಕ್ ಆದ Yes Bank: ಫೋನ್ ಪೇ ಗ್ರಾಹಕರು ಕಂಗಾಲು!
Follow us on

ಮುಂಬೈ: ದೇಶದ ಪ್ರಮುಖ ಖಾಸಗಿ ವಾಣಿಜ್ಯ ಬ್ಯಾಂಕ್ ಆದ ಯಸ್​ ಬ್ಯಾಂಕ್ ಸೇವೆಗಳಿಗೆ ಆರ್​ಬಿಐ ನಿರ್ಬಂಧ ಹೇರಿ ಬಹುತೇಕ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇದರಿಂದ ಯಸ್​ ಬ್ಯಾಂಕ್ ಜೊತೆಗೆ ವ್ಯವಹಾರ ನಡೆಸುತ್ತಿರುವ ಪ್ರಮುಖ ಕಂಪನಿಗಳಿಗೆ ಭಾರಿ ಹೊಡೆತ ಬಿದ್ದಿದೆ. 50 ಸಾವಿರ ರೂ. ಮಾತ್ರವೇ ಟ್ರಾನ್ಸಾಕ್ಷನ್ ನಡೆಸಬೇಕು ಎಂಬ ಕಟ್ಟಾಜ್ಞೆಯನ್ನು ಆರ್​ಬಿಐ ಜಾರಿಗೊಳಿಸಿದೆ.

ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಮುಖ ಆನ್​ಲೈನ್ ಸೇವೆಗಳನ್ನು ಒದಗಿಸುತ್ತಿದ್ದ ಫೋನ್ ಪೇ ಕಂಪನಿಗೆ ಭಾರಿ ಹೊಡೆತ ಬಿದ್ದಿದೆ. ಎಷ್ಟರಮಟ್ಟಿಗೆ ಅಂದರೆ ಫೋನ್ ಪೇ ವ್ಯವಹಾರಗಳೇ ಸ್ಥಗಿತಗೊಂಡು ಬಿಟ್ಟಿವೆ. ಇದರಿಂದ ಅನಾಯಾಸವಾಗಿ ಹಣಕಾಸು ಟ್ರಾನ್ಸಾಕ್ಷನ್ ಮಾಡುತ್ತಿದ್ದ ಫೋನ್ ಪೇ ಗ್ರಾಹಕರು ಕಂಗಾಲಾಗಿದ್ದಾರೆ.

ಯಸ್ ಬ್ಯಾಂಕ್ ವ್ಯವಹಾರಗಳಿಗೆ RBI ನಿರ್ಬಂಧ:
ಏನಾಗಿದೆಯೆಂದರೆ ಯಸ್ ಬ್ಯಾಂಕ್ ವ್ಯವಹಾರಗಳಿಗೆ ಆರ್​ಬಿಐ ನಿರ್ಬಂಧ ಹೇರಿದೆ. ಏಕೆಂದರೆ ಯಸ್ ಬ್ಯಾಂಕ್ ಮಾರುಕಟ್ಟೆ ಮೌಲ್ಯ ಸುಮಾರು 9ಸಾವಿರ ಕೋಟಿ ರೂ. ಇದ್ದು, ಅದರ NPA ಅಂದ್ರೆ ಸಾಲದ ಮೊತ್ತವೇ 10 ಸಾವಿರ ಕೋಟಿಗಿಂತ ಅಧಿಕವಾಗಿದೆ. ಇದನ್ನು ಮನಗಂಡ ಆರ್​ಬಿಐ ತಕ್ಷಣವೇ ಎಚ್ಚೆತ್ತು ಯಸ್ ಬ್ಯಾಂಕ್ ವ್ಯವಹಾರಗಳಿಗೆ ಬೀಗ ಜಡಿದಿದೆ. ಈ ಮಧ್ಯೆ, ಯಸ್ ಬ್ಯಾಂಕ್‌ ಷೇರುಗಳು ಸಹ ಶೇ.59ರಷ್ಟು ಕುಸಿದಿದೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಬ್ಯಾಂಕೊಂದು ಈ ಪ್ರಮಾಣದಲ್ಲಿ ಪಲ್ಟಿ ಹೊಡೆದಿರುವುದು ಇದೇ ಮೊದಲು.

Published On - 11:40 am, Fri, 6 March 20