Coronil Medicine: ಬಂದಿದೆ ನೋಡಿ ಪತಂಜಲಿ ‘ಕೊರೊನಿಲ್’ ಔಷಧ: ಯೋಗಗುರು ಬಾಬಾ ರಾಮ್​ದೇವ್ ಘೋಷಣೆ

Coronil Medicine: ಬಂದಿದೆ ನೋಡಿ ಪತಂಜಲಿ ‘ಕೊರೊನಿಲ್’ ಔಷಧ: ಯೋಗಗುರು ಬಾಬಾ ರಾಮ್​ದೇವ್ ಘೋಷಣೆ
ಪತಂಜಲಿ ಕೊರೊನಿಲ್ ಮೆಡಿಸಿನ್

Covid 19 Vaccine: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೋಗಗುರು ಬಾಬಾ ರಾಮ್​​ದೇವ್, ಕೊರೊನಾಗೆ ಪತಂಜಲಿ ಸಂಶೋಧನಾ ಸಂಸ್ಥೆಯಿಂದ ವೈಜ್ಞಾನಿಕ ಸಂಶೋಧನೆ ‘ಕೊರೊನಿಲ್’ ಔಷಧ ಅಭಿವೃದ್ಧಿ ಮಾಡಲಾಗಿದೆ. ಇದು ಮೊದಲ ಸಾಕ್ಷ್ಯ-ಆಧಾರಿತ ಕೊರೊನಾ ಔಷಧದ ಅಭಿವೃದ್ಧಿಯಾಗಿದೆ. ಕೊರೊನಾ ಔಷಧದಿಂದ ವಿಶ್ವದ 158 ದೇಶಗಳಿಗೆ ಪ್ರಯೋಜನವಾಗಿದೆ ಎಂದಿದ್ದಾರೆ.

shruti hegde

| Edited By: sadhu srinath

Feb 19, 2021 | 12:43 PM

ದೆಹಲಿ: ಪತಂಜಲಿ ಸಂಸ್ಥೆ ವೈಜ್ಞಾನಿಕ ಸಂಶೋಧನೆ ನಡೆಸಿ, ಕೊರೊನಾಗೆ ಔಷಧ ತಯಾರಿಸಿದೆ ಎಂದು ಪತಂಜಲಿ ಸಂಸ್ಥೆಯ ಸಂಸ್ಥಾಪಕ ಯೋಗಗುರು ಬಾಬಾ ರಾಮ್​​ದೇವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅದಕ್ಕೂ ಮುನ್ನ ‘ಕೊರೊನಿಲ್’ ಔಷಧ  ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ಕೇಂದ್ರ ಆರೋಗ್ಯ ಇಲಾಖೆ ಸಚಿವ ಡಾ.ಹರ್ಷವರ್ಧನ್‌ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೋಗಗುರು ಬಾಬಾ ರಾಮ್​​ದೇವ್, ಕೊರೊನಾಗೆ ಪತಂಜಲಿ ಸಂಶೋಧನಾ ಸಂಸ್ಥೆಯಿಂದ ವೈಜ್ಞಾನಿಕ ಸಂಶೋಧನೆ ‘ಕೊರೊನಿಲ್’ ಔಷಧ ಅಭಿವೃದ್ಧಿ ಮಾಡಲಾಗಿದೆ. ಇದು ಮೊದಲ ಸಾಕ್ಷ್ಯ-ಆಧಾರಿತ ಕೊರೊನಾ ಔಷಧದ ಅಭಿವೃದ್ಧಿಯಾಗಿದೆ. ಕೊರೊನಾ ಔಷಧದಿಂದ ವಿಶ್ವದ 158 ದೇಶಗಳಿಗೆ ಪ್ರಯೋಜನವಾಗಿದೆ ಎಂದಿದ್ದಾರೆ.

ಈ ಕುರಿತಂತೆ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಕೊರೊನಿಲ್ ಔಷಧ ಜನರಿಗೆ ವರದಾನವಾಗಲಿದೆ. ಕೊರೊನಾ ವಿರುದ್ಧ ಹೋರಾಟಕ್ಕೆ ಔಷಧ ಅಸ್ತ್ರವಾಗಲಿದೆ. ಆತ್ಮನಿರ್ಭರ ಸಂಕೇತವಾಗಿ ಔಷಧ ಅಭಿವೃದ್ಧಿಪಡಿಸಲಾಗಿದೆ. ಈ ಔಷಧದಿಂದ ವಿಶ್ವದ ಹಲವು ದೇಶಗಳಿಗೆ ಅನುಕೂಲವಾಗಲಿದೆ. ಪ್ರಯೋಗದ ಸಾಕ್ಷ್ಯಗಳ ಮೂಲಕ ಮತ್ತೆ ಕೊರೊನಿಲ್ ಬಂದಿದೆ. ಇದರಿಂದ ವಿಶ್ವದ ನಾನಾ ದೇಶಗಳಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ: ಕೊರೊನಾಗೆ ‘ರಾಮ’ ಬಾಣ: ಮದ್ದು ಕಂಡು ಹಿಡಿದೇ ಬಿಟ್ರಾ ಬಾಬಾ ರಾಮ್​​ ದೇವ್..?

Follow us on

Related Stories

Most Read Stories

Click on your DTH Provider to Add TV9 Kannada