ಲಕ್ನೋ ಜೂನ್ 25: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)ನೇತೃತ್ವದ ಸರ್ಕಾರವು ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಮತ್ತು RO-ARO ಪರೀಕ್ಷೆಯಲ್ಲಿ ಇತ್ತೀಚಿನ ಪ್ರಶ್ನೆ ಪತ್ರಿಕೆ ಸೋರಿಕೆಯ (Paper leaks) ನಂತರ ಉತ್ತರ ಪ್ರದೇಶ (Uttar pradesh), ರಾಜ್ಯದಲ್ಲಿ ಸಾರ್ವಜನಿಕ ಪರೀಕ್ಷೆಗಳ ಸುಗ್ರೀವಾಜ್ಞೆ 2024 ಅನ್ನು ಪರಿಚಯಿಸಲು ಸಿದ್ಧವಾಗಿದೆ. ಪರೀಕ್ಷಾ ಅಕ್ರಮದಲ್ಲಿ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಮತ್ತು ₹ 1 ಕೋಟಿ ವರೆಗೆ ದಂಡ ವಿಧಿಸುವ ನಿಬಂಧನೆಗಳನ್ನು ಒಳಗೊಂಡಿರುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಯುಪಿ ಪೊಲೀಸ್‌ನ 60,244 ಕಾನ್‌ಸ್ಟೆಬಲ್‌ಗಳ ಹುದ್ದೆಗಳ ಅತಿ ದೊಡ್ಡ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಫೆಬ್ರವರಿಯಲ್ಲಿ ಸೋರಿಕೆಯಾಗಿದ್ದವು. ನಂತರ, ಪರಿಶೀಲನಾ ಅಧಿಕಾರಿಗಳು ಮತ್ತು ಸಹಾಯಕ ಪರಿಶೀಲನಾ ಅಧಿಕಾರಿಗಳಿಗೆ (ROs/AROs) UPPSC ಪೂರ್ವಭಾವಿ ನೇಮಕಾತಿ ಪರೀಕ್ಷೆಯಲ್ಲಿಯೂ ಮಾರ್ಚ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ ರದ್ದುಗೊಳಿಸಲಾಯಿತು.
ಭಾರತದಾದ್ಯಂತ ಹಲವಾರು ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳು ಪರಿಶೀಲನೆಗೆ ಒಳಪಟ್ಟಿರುವ ಸಮಯದಲ್ಲಿ ಇದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಅನಿಶ್ಚಿತತೆಯನ್ನು ಉಂಟುಮಾಡುತ್ತದೆ.
ಇದನ್ನೂ ಓದಿ: ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದ ಪ್ರಧಾನಮಂತ್ರಿ ನರೇಂದ್ರ ಮೋದಿ
1. NEET-UG 2024: ಆಪಾದಿತ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ಸೇರಿದಂತೆ NEET-UG 2024 ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿನ ಲೋಪಗಳಿಗಾಗಿ NTAಯನ್ನು ಪ್ರಶ್ನಿಸಲಾಗಿದೆ
2. UGC-NET: ಜೂನ್ 18ರಂದು ನಡೆದ UGC-NET ಪರೀಕ್ಷೆಯನ್ನು ರದ್ದುಗೊಳಿಸಿದ್ದು ತನಿಖೆಯನ್ನು CBI ಗೆ ಹಸ್ತಾಂತರಿಸಲಾಯಿತು. ಇದೀಗ ಪರೀಕ್ಷಾ ಪತ್ರಿಕೆಯ ಡಾರ್ಕ್ ನೆಟ್ ಸೋರಿಕೆಯ ತನಿಖೆ ನಡೆಯುತ್ತಿದೆ.
3. CSIR-UGC NET: ವ್ಯವಸ್ಥಾಪನಾ ಸಮಸ್ಯೆಗಳಿಂದಾಗಿ ಜಂಟಿ CSIR-UGC NET ಯ ಜೂನ್ ನಲ್ಲಿ ನಡೆದ ಪರೀಕ್ಷೆ ಮುಂದೂಡಲಾಗಿದೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
4. NEET-PG: ಜೂನ್ 23 ಕ್ಕೆ ನಿಗದಿಪಡಿಸಲಾಗಿದೆ, NEET-PG ಪ್ರವೇಶ ಪರೀಕ್ಷೆಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ಪರೀಕ್ಷೆಯ ಪಾರದರ್ಶಕತೆ ಬಗ್ಗೆ ಕಳವಳ ವ್ಯಕ್ತಪಡಿಸಿ ಮುಂದೂಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:08 pm, Tue, 25 June 24