ಸೊಳ್ಳೆಗಾಗಿ ಹಚ್ಚಿದ್ದ ಬತ್ತಿಯಿಂದ ಯುವಕನ ಪ್ರಾಣವೇ ಹೋಯ್ತು

|

Updated on: Sep 02, 2024 | 9:57 AM

ಸೊಳ್ಳೆಬತ್ತಿಯು ಯುವಕನ ಪ್ರಾಣವನ್ನೇ ತೆಗೆದಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಸೊಳ್ಳೆಯ ಬತ್ತಿಯಲ್ಲಿರುವ ಕಿಡಿ ಕೆಲವು ವಸ್ತುಗಳ ಮೇಲೆ ಬಿದ್ದು ಇಡೀ ಮನೆಯ ತುಂಬಾ ಬೆಂಕಿ ವ್ಯಾಪಿಸಿತ್ತು.ಆಂಧ್ರಪ್ರದೇಶದ ಬಾಪಟಲ್​ನ ಯುವಕ ಅಭಿಷೇಕ್ ಹೈದರಾಬಾದ್​ನ ಅಮೀರ್​ಪೇಟ್​ನಲ್ಲಿ ಓದುತ್ತಿದ್ದ.

ಸೊಳ್ಳೆಗಾಗಿ ಹಚ್ಚಿದ್ದ ಬತ್ತಿಯಿಂದ ಯುವಕನ ಪ್ರಾಣವೇ ಹೋಯ್ತು
ಸೊಳ್ಳೆಬತ್ತಿ
Follow us on

ಸೊಳ್ಳೆಗಾಗಿ ಹಚ್ಚಿದ್ದ ಬತ್ತಿಯು ಯುವಕನ ಪ್ರಾಣವನ್ನೇ ತೆಗೆದಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಕಳೆದ ಆಗಸ್ಟ್​ 23ರಂದು ಮನೆಯೊಂದರಲ್ಲಿ ನಡೆದ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಬಾಪಟಲ್​ನ ಯುವಕ ಅಭಿಷೇಕ್ ಹೈದರಾಬಾದ್​ನ ಅಮೀರ್​ಪೇಟ್​ನಲ್ಲಿ ಓದುತ್ತಿದ್ದ.

ಸೊಳ್ಳೆಗಳ ಕಾಟವೆಂದು ಬತ್ತಿ ಹಚ್ಚಲಾಗಿತ್ತು, ಅದರಿಂದ ಹೊಗೆ ತುಂಬಿಕೊಂಡು ಬಳಿಕ ಬೆಂಕಿ ಹೊತ್ತಿಕೊಂಡಿತ್ತು. ಕಾಯಿಲ್​ನಿಂದ ಕಿಡಿ ಪಕ್ಕದ ವಸ್ತುಗಳಿಗೆ ತಗುಲಿ ಬೆಂಕಿ ಇಡೀ ಮನೆಯನ್ನು ಆವರಿಸಿತ್ತು. ಎಲ್ಲರೂ ಮಲಗಿದ್ದ ಸ್ವಲ್ಪ ಸಮಯದ ಬಳಿಕ ಬೆಂಕಿ ಅಡುಗೆ ಕೋಣೆಗೆ ತಲುಪಿತು, ಸಿಲಿಂಡರ್​ ಕೂಡ ಹೊತ್ತಿ ಉರಿದಿತ್ತು. ಸ್ಫೋಟದ ಬಳಿಕ ಅಭಿಷೇಕ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಕೂಡ ಸುಟ್ಟುಹೋಗಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಕಟ್‌ಪಲ್ಲಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿರುವ ಮಹಿಳೆ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ. ವಿಮಲಾ ಅವರ ಸಹೋದರ ಅಭಿಷೇಕ್ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತನ್ನ ಸಹೋದರಿ ಮತ್ತು ಕುಟುಂಬದೊಂದಿಗೆ ವಾಸಿಸಲು ನಗರಕ್ಕೆ ಬಂದಿದ್ದರು.

ಮತ್ತಷ್ಟು ಓದಿ: ಸುಟ್ಟು ಕರಕಲಾದ ಮೃತದೇಹವನ್ನು ಕೈಚೀಲದಲ್ಲಿ ಕೊಟ್ಟರು; ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಭಾರೀ ಆಕ್ರೋಶ

ಘಟನೆ ನಡೆದ ದಿನ ಮನೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದರಿಂದ ಅಲ್ಲಿಯೇ ಕಾಯಿಲ್ ಹಚ್ಚಿ ಎಲ್ಲರೂ ಮಲಗಿದ್ದರು. ಅಭಿಷೇಕ್ ತನ್ನ ತಾಯಿ ಮತ್ತು ತಂದೆಯ ಬಳಿ ಮಲಗಿದ್ದಾನೆ, ಆದರೆ ಕಾಯಿಲ್‌ನ ಕಿಡಿ ಮನೆಯ ಕೆಲವು ವಸ್ತುವಿನ ಮೇಲೆ ಬಿದ್ದಿದೆ.

ಇದರಿಂದಾಗಿ ಬೆಂಕಿಯು ಮನೆಯ ಒಂದು ಭಾಗದಲ್ಲಿ ನಿಧಾನವಾಗಿ ಹರಡಿತು. ಅಡುಗೆ ಕೋಣೆಗೆ ಬೆಂಕಿ ತಗುಲಿ ಸಿಲಿಂಡರ್ ಸ್ಫೋಟಗೊಂಡು ಅಭಿಷೇಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಅಪಘಾತದಲ್ಲಿ ಅವರ ತಾಯಿ ತೀವ್ರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಅವರ ಚಿಕಿತ್ಸೆ ಮುಂದುವರೆದಿದೆ.

ಮನೆಯಲ್ಲಿ ಬೆಂಕಿ ಹೆಚ್ಚುತ್ತಿರುವುದನ್ನು ಕಂಡ ಕುಟುಂಬಸ್ಥರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿ ಹತೋಟಿಗೆ ತಂದಿದ್ದಾರೆ.
ಈ ಘಟನೆಯಿಂದ ಸ್ವಲ್ಪ ಎಚ್ಚರ ತಪ್ಪಿದರೆ ಹೇಗೆ ಪ್ರಾಣಕ್ಕೆ ಕುತ್ತುಬರಬಹುದು ಎಂಬುದರ ಬಗ್ಗೆ ಪೊಲೀಸರು ವಿವರಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ