ಪೊಲೀಸ್ ಎಂದು ಸುಳ್ಳು ಹೇಳಿ ಮಹಿಳೆಯನ್ನು ಮದುವೆಯಾಗಿ ವಂಚಿಸಿದ ವ್ಯಕ್ತಿಯ ಬಂಧನ
ತಾನು ಪೊಲೀಸ್ ಇನ್ಸ್ಪೆಕ್ಟರ್ ಎಂದು ಸುಳ್ಳು ಹೇಳಿ ಮದುವೆಯಾಗಿ ವಂಚಿಸಿರುವ ಘಟನೆ ಭುವನೇಶ್ವರದಲ್ಲಿ ನಡೆದಿದೆ. ಆರೋಪಿ ಸುಭಾಷ್ ಚಂದ್ರ ಕನ್ಹರ್ ಎಂಬಾತ ಮಹಿಳೆಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದು, ಆಕೆ ಎಕ್ಸೆಪ್ಟ್ ಮಾಡಿದ್ದಳು, ವ್ಯಕ್ತಿ ತನ್ನನ್ನು ಮನೋಜ್ ಕುಮಾರ್ ಮಿಶ್ರಾ ಎಂದು ಪರಿಚಯಿಸಿಕೊಂಡಿದ್ದ.
ಪೊಲೀಸ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡು ಮಹಿಳೆಯನ್ನು ವಂಚಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಭುವನೇಶ್ವರದಲ್ಲಿ ನಡೆದಿದೆ. ಆರೋಪಿ ಸುಭಾಷ್ ಚಂದ್ರ ಕನ್ಹರ್ ಎಂಬಾತ ಮಹಿಳೆಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದು, ಆಕೆ ಎಕ್ಸೆಪ್ಟ್ ಮಾಡಿದ್ದಳು, ವ್ಯಕ್ತಿ ತನ್ನನ್ನು ಮನೋಜ್ ಕುಮಾರ್ ಮಿಶ್ರಾ ಎಂದು ಪರಿಚಯಿಸಿಕೊಂಡಿದ್ದ. ಆಕೆಯ ಜತೆ ಸ್ನೇಹ ಬೆಳಸಿದ್ದ, ತಾನು ಪೊಲೀಸ್ ಇನ್ಸ್ಪೆಕ್ಟರ್ ಎಂದು ಹೇಳಿದ್ದಾನೆ. ಅಂತಿಮವಾಗಿ ವಿವಾಹವಾಗಿದ್ದಾರೆ. ಕನ್ಹರ್ ಮನೆಯನ್ನು ಬಾಡಿಗೆಗೆ ಪಡೆದಿದ್ದ.
ಹಲವು ಬಾರಿ ಮನವಿ ಮಾಡಿದರೂ ಆರೋಪಿಯ ಮೂಲ ಮನೆಗೆ ಮಹಿಳೆಯನ್ನು ಕರೆದುಕೊಂಡು ಹೋಗದ ಹಿನ್ನೆಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.
ವ್ಯಕ್ತಿಯ ವಾಹನ ಸಂಖ್ಯೆಯನ್ನು ತನಿಖೆ ಮಾಡಿದ್ದು, ಅದರ ನಂತರ ಒಡಿಶಾದ ಭದ್ರಕ್‌ನಲ್ಲಿರುವ ಅವನ ಮೂಲ ವಿಳಾಸವನ್ನು ಪತ್ತೆಹಚ್ಚಲು ಸಾಧ್ಯವಾಯಿತು ಮತ್ತು ಪ್ರಕ್ರಿಯೆಯಲ್ಲಿ ಅವನ ನಿಜವಾದ ಗುರುತನ್ನು ತಿಳಿಯಲು ಸಾಧ್ಯವಾಯಿತು ಎಂದು ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ತಪಸ್ ಪ್ರಧಾನ್ ಹೇಳಿದ್ದಾರೆ.
ಮತ್ತಷ್ಟು ಓದಿ: ಪತಿಯನ್ನು ಕೊಂದು ಬಾತ್ ರೂಂನಲ್ಲಿ ಶವ ಹೂತಿಟ್ಟ ಹೆಂಡತಿ; ಕೊಲೆಯ ರಹಸ್ಯ ಬಯಲಾಗಿದ್ದು ಹೇಗೆ?
ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ತಿಳಿದು ಆಘಾತಕ್ಕೊಳಗಾದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ನಂತರ, ವ್ಯಕ್ತಿಯನ್ನು ಬಂಧಿಸಲಾಯಿತು. ಕನ್ಹರ್ ಸಂತ್ರಸ್ತೆಯನ್ನು ಮದುವೆಯಾಗುವ ಮುನ್ನ ಇತರ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಕನ್ಹರ್ ಅವರ ವಯಸ್ಸು 55 ಮತ್ತು ಅವರಿಗೆ 25 ವರ್ಷದ ಮಗನಿದ್ದಾನೆ ಎಂದು ಎಸಿಪಿ ಹೇಳಿದ್ದಾರೆ.
ಮಹಿಳೆಯ ಬಳಿ ಹೆಚ್ಚು ಹಣವಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಬಲೆಗೆ ಬೀಳಿಸಿಕೊಂಡಿದ್ದಾನೆ. ಆರೋಪಿಯು ಭದ್ರಕ್‌ಗೆ ಸೇರಿದವನಾಗಿದ್ದು, ಫೇಸ್‌ಬುಕ್‌ನಲ್ಲಿ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದ. ತನ್ನನ್ನು ರೂರ್ಕೆಲಾದಲ್ಲಿ ಪೋಸ್ಟ್ ಮಾಡಿದ ಪೊಲೀಸ್ ಇನ್ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡಿದ್ದ ಎಂಬುದಾಗಿ ಮಹಿಳೆ ತಿಳಿಸಿದ್ದಾಳೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ