ಮದುವೆಯಾಗಲು ಸಿದ್ಧತೆ ನಡೆಸಿರುವ ಕೇರಳದ ಇಬ್ಬರು ಕಿರಿಯರು; ಪಾಲಕರು ಮಾತುಕತೆ ನಡೆಸುತ್ತಿದ್ದಾರೆಂದ ಆರ್ಯಾ ರಾಜೇಂದ್ರನ್​

TV9 Digital Desk

| Edited By: Lakshmi Hegde

Updated on:Feb 16, 2022 | 6:26 PM

ಎಸ್​ಎಫ್​ಐನಲ್ಲಿದ್ದಾಗಿನಿಂದಲೂ ನಾವು ಪರಿಚಿತರು.  ಈಗಷ್ಟೇ ಮದುವೆ ಮಾತುಕತೆ ಶುರುವಾಗಿದ್ದು, ನಮ್ಮ ಪಕ್ಷದ ಗಮನಕ್ಕೂ ತಂದಿದ್ದೇವೆ ಎಂದು ಹೇಳಿದ್ದಾರೆ.

ಮದುವೆಯಾಗಲು ಸಿದ್ಧತೆ ನಡೆಸಿರುವ ಕೇರಳದ ಇಬ್ಬರು ಕಿರಿಯರು; ಪಾಲಕರು ಮಾತುಕತೆ ನಡೆಸುತ್ತಿದ್ದಾರೆಂದ ಆರ್ಯಾ ರಾಜೇಂದ್ರನ್​
ಆರ್ಯಾ ರಾಜೇಂದ್ರನ್​ ಮತ್ತು ಸಚಿನ್​ ದೇವ್​

ದೇಶದ ಅತ್ಯಂತ ಕಿರಿಯ ಮೇಯರ್ ಆಗಿರುವ ತಿರುವನಂತಪುರಂ ಮಹಾನಗರ ಪಾಲಿಕೆ ಮೇಯರ್ (Thiruvananthapuram Corporation) ಆರ್ಯಾ ರಾಜೇಂದ್ರನ್​ (Mayor Arya Rajendran) ಅವರು, ಕೇರಳ 15ನೇ ವಿಧಾನಸಭೆಯಲ್ಲಿ ಅತ್ಯಂತ ಕಿರಿಯ ಶಾಸಕನಾಗಿರುವ ಬಲುಸೆರ್ರಿ ಎಂಎಲ್​ಎ ಸಚಿನ್​ ದೇವ್​ನ್ನು ವಿವಾಹವಾಗಲಿದ್ದಾರೆ.  ಈ ಬಗ್ಗೆ ಆರ್ಯಾ ಅವರೇ ದೃಢಪಡಿಸಿದ್ದಾರೆ. ‘ಮೊದಲು ನಾನು ಮತ್ತು ಸಚಿನ್​ ದೇವ್​ ಇಬ್ಬರೂ ಮಾತನಾಡಿಕೊಂಡಿದ್ದೇವೆ. ಬಳಿಕ ನಮ್ಮ ಪಾಲಕರಿಗೆ ಹೇಳಿದೆವು. ಇದೀಗ ನಮ್ಮ ಪಾಲಕರು ಮದುವೆ ಮಾತುಕತೆ ಪ್ರಾರಂಭಿಸಿದ್ದಾರೆ. ಹಾಗಂತ ತತ್​​ಕ್ಷಣಕ್ಕೇ ಮದುವೆ ನಡೆಯುತ್ತಿಲ್ಲ. ಇನ್ನೂ ಸ್ವಲ್ಪ ಕಾಲಾವಕಾಶ ಇದೆ’ ಎಂದು ಆರ್ಯಾ ಹೇಳಿದ್ದಾರೆ.

ಆರ್ಯಾ ರಾಜೇಂದ್ರನ್​ ಅವರು 2020ರಲ್ಲಿ, ಅವರ 21ನೇ ವಯಸ್ಸಿನಲ್ಲಿ ತಿರುವನಂತಪುರಂ ಕಾರ್ಪೋರೇಶನ್​ ಮೇಯರ್​ ಹುದ್ದೆಗೆ ಏರಿದವರು. ಈ ದೇಶದ ಅತ್ಯಂತ ಕಿರಿಯ ಮೇಯರ್​ ಆಗಿದ್ದಾರೆ. ಇವರು ನೇಮೊಮ್​ ವಿಧಾನಸಭಾ ಕ್ಷೇತ್ರದ ಮುದವನ್ಮುಕಲ್​ ಎಂಬ ವಾರ್ಡ್​​ನಿಂದ ಮಹಾನಗರ ಪಾಲಿಕೆಗೆ ಆಯ್ಕೆಯಾಗಿದ್ದರು. ಸಚಿನ್ ದೇವ್ ಅವರು ಭಾರತೀಯ ವಿದ್ಯಾರ್ಥಿಗಳ ಒಕ್ಕೂಟ (SFI)ನ ರಾಜ್ಯ ಕಾರ್ಯದರ್ಶಿ ಮತ್ತು ಅಖಿಲ ಭಾರತೀಯ ಜಂಟಿ ಕಾರ್ಯದರ್ಶಿಯಾಗಿದ್ದರು. ಕೋಳಿಕ್ಕೋಡ್​ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇಂಗ್ಲಿಷ್​ ಮಾಧ್ಯಮದಲ್ಲಿ ಪದವಿ ಪಡೆದಿದ್ದಾರೆ. ನಂತರ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಎಲ್​ಎಲ್​ಬಿ ಓದಿದ್ದಾರೆ. 27ನೇ ವಯಸ್ಸಿನಲ್ಲಿ ಬುಲುಸೆರ್ರಿ ವಿಧಾನಸಭೆ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದಾರೆ.

ಇನ್ನು ಆರ್ಯಾ ಅವರೂ ಕೂಡ ಎಸ್​ಎಫ್​ಐನ ರಾಜ್ಯ ಸಮಿತಿ ಸದಸ್ಯರು. ಆರ್ಯಾ ಹಾಗೂ ಸಚಿನ್​ ಇಬ್ಬರೂ ಕೇರಳದ ಅತ್ಯಂತ ದೊಡ್ಡ ಮಕ್ಕಳ ಸಂಸ್ಥೆಯಾದ, ಸಿಪಿಎಂ  ಪಕ್ಷದ ಬಾಲ ಸಂಗಮ್​ನಲ್ಲಿ ಒಟ್ಟಿಗೇ ಕೆಲಸ ಮಾಡಿದ್ದಾರೆ. ಹಾಗಾಗಿ ಮೊದಲಿನಿಂದಲೂ ಪರಿಚಿತರೂ ಹೌದು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ಯಾ ರಾಜೇಂದ್ರನ್​, ಎಸ್​ಎಫ್​ಐನಲ್ಲಿದ್ದಾಗಿನಿಂದಲೂ ನಾವು ಪರಿಚಿತರು.  ಈಗಷ್ಟೇ ಮದುವೆ ಮಾತುಕತೆ ಶುರುವಾಗಿದ್ದು, ನಮ್ಮ ಪಕ್ಷದ ಗಮನಕ್ಕೂ ತಂದಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊವಿಡ್ ಸಾಂಕ್ರಾಮಿಕ ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಿ: ಹಾಂಗ್ ಕಾಂಗ್​​ಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸಲಹೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada