ಯುವ ಸ್ನೇಹಿತರು ದೇಶದ ಭವಿಷ್ಯ ಮಾತ್ರವಲ್ಲ, ವರ್ತಮಾನದ ಅತ್ಯಂತ ದೊಡ್ಡ ಶಕ್ತಿ: ಪ್ರಧಾನಿ ಮೋದಿ

International Youth Day: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಯುವ ದಿನದ  ಹಿನ್ನೆಲೆಯಲ್ಲಿ ದೇಶದ ಯುವಜನತೆಯನ್ನು ಉದ್ದೇಶಿಸಿ ಸಂದೇಶ ಹಂಚಿಕೊಂಡಿದ್ದು, "ಯುವ ಸ್ನೇಹಿತರು ದೇಶದ ಭವಿಷ್ಯ ಮಾತ್ರವಲ್ಲ, ಇಂದಿನ ಭಾರತದ ಅತ್ಯಂತ ದೊಡ್ಡ ಶಕ್ತಿ" ಎಂದು ಶ್ಲಾಘಿಸಿದ್ದಾರೆ. ಸಂಸ್ಕೃತ ಶ್ಲೋಕದ ಮೂಲಕ ದೃಷ್ಟಿ, ಮಾತು ಮತ್ತು ಕಾಯಕದ ಮಹತ್ವ ತಿಳಿಸಿದ್ದಾರೆ.

ಯುವ ಸ್ನೇಹಿತರು ದೇಶದ ಭವಿಷ್ಯ ಮಾತ್ರವಲ್ಲ, ವರ್ತಮಾನದ ಅತ್ಯಂತ ದೊಡ್ಡ ಶಕ್ತಿ: ಪ್ರಧಾನಿ ಮೋದಿ
ಪ್ರಧಾನಿ ಮೋದಿ
Image Credit source: PTI

Updated on: Aug 12, 2026 | 10:17 AM

ಮುಖ್ಯಾಂಶಗಳು

  • ಇಂದು ಅಂತಾರಾಷ್ಟ್ರೀಯ ಯುವ ದಿನಾಚರಣೆ ಹಿನ್ನೆಲೆ
  • ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಸಂದೇಶ
  • ಯುವಕರು ವರ್ತಮಾನದ ಅತ್ಯಂತ ದೊಡ್ಡ ಶಕ್ತಿ: ನಮೋ

ನವದೆಹಲಿ, ಆಗಸ್ಟ್​​ 12: ‘ವಿಕಸಿತ ಭಾರತ’ ನಿರ್ಮಾಣದ ಪಯಣದಲ್ಲಿ ದೇಶಕ್ಕೆ ಯುವಜನತೆಯ ಅಗತ್ಯವಿದೆ ಎಂದು ಇತ್ತೀಚೆಗಷ್ಟೇ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು (ಆಗಸ್ಟ್​​ 12) ಅಂತಾರಾಷ್ಟ್ರೀಯ ಯುವ ದಿನಾಚರಣೆ ಹಿನ್ನೆಲೆ ಯಂಗ್​​ ಜನರೇಷನ್​​ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ನಮ್ಮ ಯುವ ಸ್ನೇಹಿತರು ದೇಶದ ಭವಿಷ್ಯ ಮಾತ್ರವಲ್ಲ, ವರ್ತಮಾನದ ಅತ್ಯಂತ ದೊಡ್ಡ ಶಕ್ತಿಯೂ ಆಗಿದ್ದಾರೆ. ತಮ್ಮ ಸಂವೇದನಾಶೀಲತೆ, ಸೇವಾ ಮನೋಭಾವ ಮತ್ತು ಸಾಮರ್ಥ್ಯದ ಮೂಲಕ ಅವರು ವಿಶ್ವದಾದ್ಯಂತ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಮೋದಿ ಪೋಸ್ಟ್​​ನಲ್ಲಿ ಏನಿದೆ?

ಚಕ್ಷುಷಾ ಮನಸಾ ವಾಚಾ ಕರ್ಮಣಾ ಚ ಚತುರ್ವಿಧಮ್, ಪ್ರಸಾದಯತಿ ಯೋ ಲೋಕಂ ತಂ ಲೋಕೋಽನುಪ್ರಸೀದತಿ ಎಂಬ ಸಾಲುಗಳಿರುವ ಶ್ಲೋಕವನ್ನು ಮೋದಿ ಹಂಚಿಕೊಂಡಿದ್ದಾರೆ. ದೃಷ್ಟಿ, ಮನಸ್ಸು, ಮಾತು ಮತ್ತು ಕಾರ್ಯ ಈ ನಾಲ್ಕು ಮಾರ್ಗಗಳ ಮೂಲಕ ಜನರ ಮನ ಗೆಲ್ಲುವ ವ್ಯಕ್ತಿಗೆ ಪ್ರತಿಯಾಗಿ ಸಮಾಜವು ವಿಶ್ವಾಸ, ಗೌರವ ಮತ್ತು ಸದ್ಭಾವನೆಯನ್ನು ನೀಡುತ್ತದೆ ಎಂಬುದು ಇದರ ಅರ್ಥವಾಗಿದೆ.

ಇದನ್ನೂ ಓದಿ:  ನರೇಂದ್ರ, ನರೇಂದ್ರ, ನರೇಂದ್ರ..; ಈ ಹೆಸರು ನನಗೆ ಸ್ವಲ್ಪನೂ ಇಷ್ಟವಿಲ್ಲ ಎಂದ ಪಾಕ್ ಬಾಕ್ಸರ್

ಗುರಿ ಸಾಧಿಸಲು ದೃಢಸಂಕಲ್ಪ ಮತ್ತು ಆತ್ಮವಿಶ್ವಾಸ ಅತ್ಯಗತ್ಯ. ಯುವಕರು ತಾವು ಮಾಡುವ ಸಣ್ಣ ಕೆಲಸಗಳು ಸಹ ನಾಳೆ ದೇಶದ ಭವಿಷ್ಯವನ್ನು ನಿರ್ಣಯಿಸುತ್ತವೆ. ದೇಶದ ಯುವಶಕ್ತಿ ಇಂದು ಕೇವಲ ಕನಸು ಕಾಣುತ್ತಿಲ್ಲ, ಬದಲಿಗೆ ದೇಶವನ್ನು ಆರ್ಥಿಕ ಹಾಗೂ ತಾಂತ್ರಿಕವಾಗಿ ಸ್ವಾವಲಂಬನೆಯತ್ತ ಕೊಂಡೊಯ್ಯುವ ಮೂಲಕ ಸ್ವತಃ ನಿರ್ಮಿಸುತ್ತಿದ್ದಾರೆ. ಹೊಸ ತಂತ್ರಜ್ಞಾನ, ನಾವೀನ್ಯತೆ (Innovation) ಮತ್ತು ದೇಶದ ಆರ್ಥಿಕ ಸ್ವಾವಲಂಬನೆಯಲ್ಲಿ ಯುವಕರ ಪಾತ್ರ ನಿರ್ಣಾಯಕ ಎಂದು ಕೂಡ ಈ ಹಿಂದೆ ಪ್ರಧಾನಿ ಮೋದಿ ಹೇಳಿದ್ದರು ಎಂಬುದಿಲ್ಲಿ ಗಮನಾರ್ಹ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 10:15 am, Wed, 12 August 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us