ಕೊವಿಡ್ ಪರಿಹಾರ ಸಾಮಾಗ್ರಿ ಹಂಚಿಕೆಯಲ್ಲಿ ಅವ್ಯವಹಾರ ಆರೋಪ; ಇದಕ್ಕೆಲ್ಲಾ ಹೆದರುವುದಿಲ್ಲ ಎಂದ ಯುವ ಕಾಂಗ್ರೆಸ್ ನಾಯಕ

| Updated By: ganapathi bhat

Updated on: Aug 23, 2021 | 12:35 PM

ಶ್ರೀನಿವಾಸ್ ಮತ್ತು ತಂಡದ ವಿರುದ್ಧ ದಾಖಲಾಗಿರುವ ದೂರಿನಂತೆ, ವಿವಿಧ ಪಕ್ಷಗಳಿಗೆ ಸಂಬಂಧಪಟ್ಟ ರಾಜಕಾರಣಿಗಳು ಕೊರೊನಾ ಸೋಂಕು ಚಿಕಿತ್ಸೆಯ ಔಷಧಗಳ ಅಕ್ರಮ ಹಂಚಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕೊವಿಡ್ ಪರಿಹಾರ ಸಾಮಾಗ್ರಿ ಹಂಚಿಕೆಯಲ್ಲಿ ಅವ್ಯವಹಾರ ಆರೋಪ; ಇದಕ್ಕೆಲ್ಲಾ ಹೆದರುವುದಿಲ್ಲ ಎಂದ ಯುವ ಕಾಂಗ್ರೆಸ್ ನಾಯಕ
ಶ್ರೀನಿವಾಸ್ ಬಿ.ವಿ.
Follow us on

ದೆಹಲಿ: ಕೊರೊನಾ ಸೋಂಕಿತರಿಗೆ ವೈದ್ಯಕೀಯ ಪರಿಕರಗಳನ್ನು ಒದಗಿಸುತ್ತಿದ್ದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗೆ ಪಾತ್ರವಾಗಿದ್ದ ಭಾರತೀಯ ಯುವ ಕಾಂಗ್ರೆಸ್ ಮುಖ್ಯಸ್ಥ ಬಿ.ವಿ. ಶ್ರೀನಿವಾಸ್​ರನ್ನು ದೆಹಲಿ ಪೊಲೀಸರು ಇಂದು ವಿಚಾರಣೆ ನಡೆಸಿದ್ದಾರೆ. ಕೊರೊನಾ ಸೋಂಕಿಗೆ ಸಂಬಂಧಿಸಿದ ವೈದ್ಯಕೀಯ ಪರಿಕರಗಳನ್ನು ಅಕ್ರಮವಾಗಿ ಹಂಚುತ್ತಿದ್ದ ಆರೋಪಕ್ಕೆ ಶ್ರೀನಿವಾಸ್ ಗುರಿಯಾಗಿದ್ದರು.

ವಿಚಾರಣೆ ಎದುರಿಸಿದ ಬಳಿಕ ಮಾತನಾಡಿದ ಬಿ.ವಿ. ಶ್ರೀನಿವಾಸ್, ನಾವು ಈ ಆರೋಪಗಳಿಂದ ಹೆದರಿಲ್ಲ. ನಮ್ಮ ಕೆಲಸವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ನಾವು ಯಾವುದೇ ತಪ್ಪು ಕೆಲಸ ಮಾಡಿಲ್ಲ. ನಮ್ಮ ಸಣ್ಣ ಪ್ರಯತ್ನವೂ ಒಂದು ಜೀವವನ್ನು ಉಳಿಸುತ್ತದೆ ಎಂದಾದರೆ ನಾವು ಹೆದರುವ ಪ್ರಶ್ನೆಯೇ ಇಲ್ಲ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಶ್ರೀನಿವಾಸ್ ಮತ್ತು ತಂಡದ ವಿರುದ್ಧ ದಾಖಲಾಗಿರುವ ದೂರಿನಂತೆ, ವಿವಿಧ ಪಕ್ಷಗಳಿಗೆ ಸಂಬಂಧಪಟ್ಟ ರಾಜಕಾರಣಿಗಳು ಕೊರೊನಾ ಸೋಂಕು ಚಿಕಿತ್ಸೆಯ ಔಷಧಗಳ ಅಕ್ರಮ ಹಂಚಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕೊವಿಡ್-19 ಪರಿಹಾರ ಕಾರ್ಯಗಳಿಗೆ ದುಡಿಯುತ್ತಿರುವ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ರಾಜಕೀಯ ಲಾಭಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಕೊರೊನಾ ಸಂದರ್ಭದಲ್ಲಿ ಜನರಿಗೆ ಸೇವೆ ಸಲ್ಲಿಸುತ್ತಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.

ಕಳೆದ ವರ್ಷ ಕೊವಿಡ್ ಸಾಂಕ್ರಾಮಿಕ ರೋಗ ಭಾರತಕ್ಕೆ ಅಪ್ಪಳಿಸಿದಾಗಿನಿಂದ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಸಂದೇಶ ಸ್ಪಷ್ಟವಾಗಿದೆ ಎಂದು ಶ್ರೀನಿವಾಸ್ ಹೇಳಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೆಲಸ ಮಾಡಲು ಸೂಚನೆಗಳು ರಾಹುಲ್ ಗಾಂಧಿಯಿಂದ ಬಂದಿವೆ. ಮೂರನೇ ಅಲೆಗೆ ತಯಾರಿ ನಡೆಸಲು ಈಗಾಗಲೇ ಹೇಳಿದ್ದಾರೆ ಎಂದು ಶ್ರೀನಿವಾಸ್ ಹೇಳಿದರು.

ಇದನ್ನೂ ಓದಿ: Sputnik V: ಸ್ಪುಟ್ನಿಕ್​ ವಿ ಕೊರೊನಾ ಲಸಿಕೆ ಒಂದು ಡೋಸ್​ಗೆ 995.40 ರೂ; ಭಾರತದಲ್ಲಿ ಉತ್ಪಾದನೆ ಆರಂಭವಾದ ನಂತರ ಬೆಲೆ ತಗ್ಗುವ ಸಾಧ್ಯತೆ

Union Health Secretary PC LIVE: ದೇಶದಲ್ಲಿ ಕೊವಿಡ್ ಪರಿಸ್ಥಿತಿ ಮತ್ತು ನಿರ್ವಹಣೆ: ಕೇಂದ್ರ ಆರೋಗ್ಯ ಸಚಿವಾಲಯ ಸುದ್ದಿಗೋಷ್ಠಿಯ ಕ್ಷಣಕ್ಷಣದ ಮಾಹಿತಿ

(Youth Congress chief Srinivas BV questioned by cops over Covid Relief)

Published On - 3:57 pm, Fri, 14 May 21