Yuva Sangam Portal: ‘ಯುವ ಸಂಗಮ’ ಪೋರ್ಟಲ್ ಅನಾವರಣಗೊಳಿಸಿದ ಧರ್ಮೇಂದ್ರ ಪ್ರಧಾನ್; ಏನಿದು?

| Updated By: Digi Tech Desk

Updated on: Feb 07, 2023 | 1:00 PM

'ಏಕ್ ಭಾರತ್ ಶ್ರೇಷ್ಠ ಭಾರತ್‌' ಎಂಬ ಪ್ರಧಾನಿ ಮೋದಿಯವರ ಪರಿಕಲ್ಪನೆಯಡಿಯಲ್ಲಿ 'ಯುವ ಸಂಗಮ' ಯೋಜನೆಯನ್ನು ಪರಿಚಯಿಸಲಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ ಈಶಾನ್ಯ ಪ್ರದೇಶ ಮತ್ತು ಭಾರತದ ಉಳಿದ ಭಾಗದ ಯುವಕರ ನಡುವೆ ಸಂಪರ್ಕ ಕಲ್ಪಿಸುವುದು. 'ಯುವ ಸಂಗಮ' ಯೋಜನೆಯಡಿ 20,000 ಕ್ಕೂ ಹೆಚ್ಚು ಯುವಕರು ಭಾರತದಾದ್ಯಂತ ಪ್ರಯಾಣಿಸಲಿಸಲಿದ್ದಾರೆ ಮತ್ತು ವಿವಿಧ ಸಾಂಸ್ಕೃತಿಕ ಕಲಿಕೆಯ ಅವಕಾಶವನ್ನು ಪಡೆಯಲಿದ್ದಾರೆ

Yuva Sangam Portal: ಯುವ ಸಂಗಮ ಪೋರ್ಟಲ್ ಅನಾವರಣಗೊಳಿಸಿದ ಧರ್ಮೇಂದ್ರ ಪ್ರಧಾನ್; ಏನಿದು?
'ಯುವ ಸಂಗಮ' ಪೋರ್ಟಲ್ ಬಿಡುಗಡೆ
Image Credit source: Careers 360
Follow us on

ನವ ದೆಹಲಿ: ನವದೆಹಲಿಯ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್(IGNCA) ನಲ್ಲಿ ‘ಯುವ ಸಂಗಮ’ ನೋಂದಣಿ ಪೋರ್ಟಲ್ ಅನ್ನು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅನಾವರಣಗೊಳಿಸಿದರು. ‘ಏಕ್ ಭಾರತ್ ಶ್ರೇಷ್ಠ ಭಾರತ್‌’ ಎಂಬ ಪ್ರಧಾನಿ ಮೋದಿಯವರ ಪರಿಕಲ್ಪನೆಯಡಿಯಲ್ಲಿ ‘ಯುವ ಸಂಗಮ’ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ ಈಶಾನ್ಯ ಪ್ರದೇಶ ಮತ್ತು ಭಾರತದ ಉಳಿದ ಭಾಗದ ಯುವಕರ ನಡುವೆ ಸಂಪರ್ಕ ಕಲ್ಪಿಸುವುದು. ‘ಯುವ ಸಂಗಮ’ ಯೋಜನೆಯಡಿ 20,000 ಕ್ಕೂ ಹೆಚ್ಚು ಯುವಕರು ಭಾರತದಾದ್ಯಂತ ಪ್ರಯಾಣಿಸಲಿಸಲಿದ್ದಾರೆ ಮತ್ತು ವಿವಿಧ ಸಾಂಸ್ಕೃತಿಕ ಕಲಿಕೆಯ ಅವಕಾಶವನ್ನು ಪಡೆಯಲಿದ್ದಾರೆ ಎಂದು ಅವರು ತಿಳಿಸಿದ್ಧಾರೆ. ಧರ್ಮೇಂದ್ರ ಪ್ರಧಾನ್, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ, ಕಾನೂನು ಸಚಿವ ಕಿರಣ್ ರಿಜಿಜು ಮತ್ತು ಯುವಜನ ವ್ಯವಹಾರಗಳ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಹಲವು ಗಣ್ಯರು ಯುವ ಸಂಗಮ ಪೋರ್ಟಲ್ ಅನಾವರಣ ಸಮಾರಂಭದಲ್ಲಿ ಪಾಲ್ಗೊಂಡರು .

ಯುವ ಸಂಗಮವು ಯುವಕರಿಗೆ ಮುಖ್ಯವಾಗಿ ನಾಲ್ಕು ವಿಭಾಗಗಳಲ್ಲಿ ಬಹು ಆಯಾಮದ ಅನುಭವವನ್ನು ನೀಡುತ್ತದೆ. ಪರ್ಯಟನ್ (ಪ್ರವಾಸ), ಪರಂಪರಾ (ಪರಂಪರೆ), ಪ್ರಗತಿ (ಅಭಿವೃದ್ಧಿ) ಮತ್ತು ಪರಸ್ಪರ್ ಸಂಪರ್ಕ್ (ಜನಗಳೊಂದಿಗೆ ಸಂಪರ್ಕ). “ಏಕ ಭಾರತ ಶ್ರೇಷ್ಠ ಭಾರತ ಎಂಬ ಮಾತಿನಂತೆ ಯುವ ಸಂಗಮ(Yuva Sangam) ದೇಶದ ವಿವಿಧ ಭಾಗದ ಜನರನ್ನು ಒಂದಾಗಿಸುತ್ತದೆ. ಭಾರತದ ವಿಶಿಷ್ಟ ಸಂಸ್ಕೃತಿ ಸಂಪ್ರದಾಯವನ್ನು ಯುವಕರು ತಿಳಿದುಕೊಳ್ಳುತ್ತಾರೆ. ಜೊತೆಗೆ ಈಶಾನ್ಯ ಭಾಗದ ಯುವಕರಿಗೆ ಜ್ಞಾನ ವಿನಿಮಯಕ್ಕೆ ಅವಕಾಶಗಳು ದೊರೆಯುತ್ತವೆ. 18 ರಿಂದ 30 ವರ್ಷದ ವಯೋಮಿತಿಯುಳ್ಳ ಯುವಕರು ಈ ಯೋಜನೆಯಲ್ಲಿ ಭಾಗವಹಿಸಬಹುದುಎಂದು ಪ್ರಧಾನ್ ತಿಳಿಸಿದ್ದಾರೆ.

“ಭಾರತದ ವಿವಿಧ ಪ್ರದೇಶಗಳನ್ನು ಈಶಾನ್ಯ ಭಾಗಕ್ಕೆ ಪರಿಚಯಿಸಲು ಮೋದಿಯವರು ಈ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಯುವ ಸಂಗಮವು ಭಾರತದ ವೈವಿಧ್ಯತೆಯನ್ನು ಆಚರಿಸುತ್ತದೆ, ಏಕತೆಯ ಚೈತನ್ಯವನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಪ್ರಧಾನಿ ಮೋದಿಯವರ ಕಲ್ಪನೆಯಂತೆ ಭಾರತದ ಪ್ರಜಾಪ್ರಭುತ್ವದ ಶಕ್ತಿಯನ್ನು ಎತ್ತಿ ತೋರಿಸುತ್ತದೆಎಂದಿದ್ದಾರೆ ಪ್ರಧಾನ್.

ಇದನ್ನೂ ಓದಿ: ಬ್ರಹ್ಮೋತ್ಸವ: ಸಕಲ ಜನರ ಸಮತಾ ಕುಂಭ 2023 -ಕಣ್ಮನ ಸೆಳೆಯುವ ಹಬ್ಬದ ಚಿತ್ರಣ ಇಲ್ಲಿದೆ

‘ಯುವ ಸಂಗಮ’ ಪೋರ್ಟಲ್ ಅನಾವರಣ ಸಮಾರಂಭದಲ್ಲಿ, ಈ ಯೋಜನೆಯಡಿ ಹೆಸರನ್ನು ನೋಂದಾಯಿಸಿಕೊಂಡು ಯುವ ಸಂಗಮದ ಬಗ್ಗೆ ಸಲಹೆಗಳನ್ನು ನೀಡಲು ಸಚಿವ ಪ್ರಧಾನ್ ಯುವಕರನ್ನು ಪ್ರೋತ್ಸಾಹಿಸಿದರು. 2014 ರಲ್ಲಿ ಪ್ರಾಧನಿ ಮೋದಿ ಒಂದು ಶ್ರೇಷ್ಠ ಭಾರತದ ಕನಸನ್ನು ಕಂಡಿದ್ದರು, ಅದರನ್ನು ಪೂರ್ಣಗೊಳಿಸಲು ಮೋದಿ ಹಲವಾರು ಯೋಜನೆಗಳನ್ನು ಭಾರತದ ಜನತೆಗೆ ಪರಿಚಯಿಸಿದ್ದಾರೆ ಎಂದು ಪ್ರಧಾನ್ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು: https://tv9kannada.com/national

Published On - 12:52 pm, Tue, 7 February 23