ಬಾವಲಿಗಳನ್ನು ನೋಡುವ ನಮ್ಮ ದೃಷ್ಟಿಕೋನ ಹೇಗೆ ?

| Updated By: ಅಕ್ಷತಾ ವರ್ಕಾಡಿ

Updated on: Feb 01, 2024 | 6:49 PM

ಗ್ರಾಮೀಣ ಪ್ರದೇಶದ ಜನರ ಪ್ರಕಾರ ಬಾವಲಿ ತಿಂದು ಚಲ್ಲಿದ ಹಣ್ಣು ಖಂಡಿತ ರುಚಿಯಾಗಿದೆ ಎಂಬ ಅಭಿಪ್ರಾಯ, ಕಾರಣ ಅವುಗಳು ಸರಿಯಾಗಿ ಬಲಿತು ಪಕ್ವವಾಗಿರುತ್ತದೆ.ಆದರೆCOVID19ರ ನಂತರದ ದಿನಗಳಲ್ಲಿ ಈ ಅಭಿಪ್ರಾಯ ಬದಲಾಗಿದೆ, ಮತ್ತು ಈ ಹಕ್ಕಿಗಳ ಬಗೆಗಿನ ದೃಷ್ಟಿಕೊನವು ಬದಲಾಗಿದೆ.ಒಂದರ್ಥದಲ್ಲಿ COVID 19 ರ ನಂತರ ಬಾವಲಿ ಮತ್ತು ಮನುಷ್ಯರ ಸಂಬಂಧದಲ್ಲಿ ಗೊಂದಲ ಸೃಷ್ಟಿಯಾಗಿದೆ. ಹಾಗೂ ಸಂಶಯಾತ್ಮಕವಾಗಿದೆ. ಈ ಪರಿಸ್ಥಿತಿಯಲ್ಲಿ ಜನಸಾಮಾನ್ಯರ ವಿಚಾರ ಹೇಗಿರಬೇಕು.ಎಂಬುದರೆ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಸಂಶೋಧಕಿ ಒಬ್ಬರು ಬೆಳಕು ಚೆಲ್ಲಿದ್ದಾರೆ.

ಬಾವಲಿಗಳನ್ನು ನೋಡುವ ನಮ್ಮ ದೃಷ್ಟಿಕೋನ ಹೇಗೆ ?
Bats
Image Credit source: Pinterest
Follow us on

ಕಾಡು ಬೆಟ್ಟಗಳಲ್ಲಿ ಸಾಮಾನ್ಯವಾಗಿ ಹಳ್ಳಿಗರಿಂದ ಆಗುವ ಚರ್ಚೆ ಎಂದರೆ ಇಂದು ಅಡಿಕೆ ಸಿಕ್ಕಿತು,ಜೊತೆಗೆ ಗೋಡಂಬಿಯೂ ಸಿಕ್ಕಿತು ಎಂದು ಸೈಯಾದ್ರಿಘಟ್ಟಗಳ ಹಳ್ಳಿಯ ಜನರಿಗೆ ಇದು ಪ್ರತಿದಿನದ ಮಾತು. ಕಾಡಿಗೆ ಹೋಗಿ ಬರುವಾಗ ಅವರಿಗೆ ಗೋಡಂಬಿ ,ಅಡಿಕೆ, ಮುರುಗಲು, ಮಾವು, ಸಪೋಟ, ಅಮಟೆ ಎಂಥ ತರಹೇವಾರಿ ಪ್ರಕಾರದ ಬೀಜಗಳನ್ನು ಒಟ್ಟುಗೂಡಿಸುವುದು ಹಾಗೂ ಅರ್ಥ ತಿಂದ ಹಣ್ಣುಗಳ ಸ್ವಾದ ತೆಗೆದುಕೊಳ್ಳುವುದು.      ಹೀಗೆ ಈ ಕೆಲಸವನ್ನು ರಾತ್ರಿ ಈಡಿ ಬಾವಲಿಗಳು ರುಚಿಯಾದ ಹಣ್ಣನ್ನು ಕೆರೆದು ತಿಂದು ಅರ್ಧಂಬರ್ಧ ಬೀಜಗಳೊಂದಿಗೆ ಕಾಡಿನಲ್ಲಿ ಚೆಲ್ಲುವದು, ಅರ ಬೆಳ್ಳಂಬೆಳಗ್ಗೆ ಕಾಡಿಗೆ ಹೊಗುವ ಜನರಿಗೆ ಸಿಕ್ಕು ರುಚಿತಿಂದು ಚೆನ್ನಾಗೆ ಇರುತ್ತವೆಂದುಹೇಳುತ್ತಾರೆ. ಅಲ್ಲದೇ,ಎಲ್ಲಿಂದಲೋ ಹೆಕ್ಕಿ ತಂದಂಥ ಗೊಡಂಬಿ, ಆಡಿಕೆಯಂತಹ ಬೆಲೆಬಾಳುವ ಪದಾರ್ಥಗಳ ಲಾಭ ಜನ ತೆಗೆದುಕೊಂಡಿದ್ದಾರೆ.

ಬಾವಲಿಗಳಿ೦ದ ಆಯ್ದು ಮದುರ ಹಣ್ಣುಗಳು ಪಶ್ಚಿಮ ಘಟ್ಟಗಳಲ್ಲಿಯ ಜನರು ತಮ್ಮ ಬಾಲ್ಯದಿಂದ ಇಲ್ಲಿಯವರೆಗೆ ಸಸ್ತನಿ ಪ್ರಾಣಿ ಅರೆ ತಿಂದು ಹಾಕಿದ ಹಣ್ಣನ್ನು ಇಷ್ಟದಿಂದ ತಿಂದಿರುತ್ತಾರೆ.ಪ್ರೀತಿಯಿಂದ ತಿಂದಿರುತ್ತಾರೆ, ಕಾರಣ ಆದರ ತೀಕ್ಷ್ಣ ಪರೀಕ್ಷಕ ಬುದ್ಧಿ,ಬಾವಲಿ ಸಸ್ತನಿ ಪ್ರಾಣಿ ತಂದ ಹಣ್ಣು ಖಂಡಿತ ಬಲಿತು ಪಕ್ವ ಮತ್ತು ಮಧುರವಾಗಿರುತ್ತದೆ .ಇದರ ಕಾರಣ, ಬಾವಲಿಗಳು ರಾತ್ರಿ ಶೋಧನೆ ಮಾಡುವುದರಿಂದ ಹಣ್ಣಗಳ ಬಣ್ಣ, ಪರಿಮಳದ ಮಾಹಿತಿ ಸಿಕ್ಕಿರುತ್ತದೆ. ರಾತ್ರಿಯಲ್ಲಾ ಸುತ್ತಾಡಿರುವದರಿಂದ ಅದಕ್ಕೆ ಶಕ್ತಿಯ ಅವಶ್ಯಕತೆಯೂ ಇರುತ್ತದೆ. ಆ ಅವಶ್ಯಕತೆಯನ್ನು ಈ ಮಾಗಿದ ಹಣ್ಣುಗಳನ್ನು ತಿಂದು ನೀಗಿಸುತ್ತವೆ‌. ಹಾಗೆ ಅರೆಬರೆ ತಿಂದ ಹಣ್ಣುಗಳನ್ನು ಮುರಳಿ ಸ್ವಸ್ಥಾನಕ್ಕೆ ತರುವುದುಂಟು.ಹಾಗೆ ತರುವಾಗ ದಾರಿಮಧ್ಯೆ ಬೀಳಲೂಬಹುದು. ಸ್ವಸ್ಥಾನಕ್ಕೆಬಂದು ಮುಟ್ಟಲೂ ಬಹುದು. ಸಧ್ಯದ ವರೆಗೂ ಈ ತರದ ಹಣ್ಣುಗಳನ್ನೂ ತಿಂದು ನಮ್ಮ ಜನರಿಗೆ ಯಾವ ಅಪಾಯವು ಕಂಡುಬಂದಿಲ್ಲ. ಅಲ್ಪಸ್ವಲ್ಪ ಇದ್ದರೂ ಯಾರು ಲಕ್ಷಕ್ಕೂ ಬರುವಂತದ್ದಲ್ಲದಿರಬಹುದು. ಆದರೆ ಸದ್ಯದ ಪರಿಸ್ಥಿತಿ ಅಂದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ತರಹದ ಸಸ್ತನಿ ಪ್ರಾಣಿ ತಿಂದು ಬಿಟ್ಟ ಹಣ್ಣುಗಳನ್ನು ತಿನ್ನುವುದು ಎಷ್ಟರಮಟ್ಟಿಗೆ ಸೂಕ್ತ ?

ವೈರಾಣುಗಳ ಸಂಘರ್ಷ

ಈಗೀಗ ಕೋವಿಡ್ 19ರ ಪರಿಸ್ಥಿತಿಯಲ್ಲಿ ಬಾವಲಿಗಳು ಚರ್ಚೆಗೆ ಬಂದ ವಿಷಯವಾಗಿದೆ. ಹಕ್ಕಿಗಳಿಂದ ಹೆಸರಿಸಲ್ಪಡುವ ಪಡುವ ವೈರಾಣುಗಳು ಬಾವಲಿಗಳಿಂದ ಹರಡುತ್ತದೆ ಎಂದು ಸಂಶಯಿಸುತ್ತಿದ್ದಾರೆ.ಬರ್ಡ್ ಫ್ಲೂ ದಂತಹ ರೋಗಗಳಿಗೆ ಬಾವಲಿಯೂ ಕಾರಣವಾಗಬಹುದೆಂದು ತಪ್ಪು ತಿಳುವಳಿಕೆಯಲ್ಲಿ ಜನರಿದ್ದಾರೆ .ಹಾಗಾಗಿ ಈಗ ಬಾವಲಿಗಳ ಭಾವನೆಗಳ ಅಸ್ತಿತ್ವ ಮತ್ತು ಅವುಗಳಿಂದ ಆಗುವ ಸದುಪಯೋಗ ಕಾಡಿಗೂ ನಾಡಿಗೂ ಮಾರಕವಾಗಬಗುವ ಭೀತಿ ಎದುರಾಗಿದೆ.

ಈಗಿನ ಹೊಸ ಸಂಶೋಧನೆಯ ಪ್ರಕಾರ ಕೆಲ ಸಂದರ್ಭಗಳಲ್ಲಿ ಮಾತ್ರ ರೋಗಪ್ರಸರಣಗಳಾಗಬಹುದು, ಅದು ಪ್ರಾಣ ಘಾತಕ ಇರಲು ಅಲ್ಲದಿರಲು ಬಹುದು. ಇದಕ್ಕೂ ಕಾರಣನು ಸ್ವತಹ ಮನುಷ್ಯನೇ ಮತ್ತು ಅವನು ಪರಿಸರಕ್ಕೆ ವಿರುದ್ಧವಾಗಿ ಈ ಭೀತಿಗೆ ಬಾವಲಿಗೆ ದೋಷಿಸಲಾಗದು. ನಮ್ಮ ಪರಿಸರ ನಿಷ್ಕಾಳಜಿಯು ಒಂದು ಕಾರಣ ಮಾನವನ ಅತಿಕ್ರಮಣದಿಂದ ಪಕ್ಷಿಗಳ ವಾಸಸ್ಥಾನಕ್ಕೂ ಧಕ್ಕೆ ಆಗುತ್ತಿದೆ, ಕಾರಣ ಕಾಡು ಸಿಮೆಂಟ್ ನಾಡಾಗುತ್ತಿದೆ. ಸ್ವಾರ್ಥಕ್ಕಾಗಿ ಪ್ರಾಣಿಗಳ ಬಳಕೆಯೂ ಒಂದು ಕಾರಣ ಪ್ರಾಣಿಗಳ ಬಳಕೆಯಿಂದ ಮಾನವ ಜೊತೆಗೆ ಅವುಗಳ ಸಂಪರ್ಕವು ಬೆಳೆದಿದೆ. ಪ್ರಾಣಿಗಳಿಗೂ ಪಕ್ಷಿಗಳಿಗೂ ಸಂಪರ್ಕ ಇದೆ ಇರುತ್ತದೆ ಹಾಗಾಗಿಯೇ ದಕ್ಷಿಣ ಭಾಗದಲ್ಲಿ ನಿಫಾ ಹೆಸರಿನ ವೈರಾಣು 2019,2020,ಹಾಗೂ 2021ನೇ ಇಸ್ವಿಯಲ್ಲಿ ಅಂದರೆ ಕೋವಿಡ್ ಆಜು ಬಾಜು 2019,2020, ಮತ್ತು 2021ರಲ್ಲಿ ಕಂಡುಬಂದಿತು.

ನಿಫಾ ಈ ವೈರಾಣುವಿನ ಶೋಧ ಮೊದಲು 1998ನೇ ಇಸ್ವಿಯಲ್ಲಿ ಮಲೇಷಿಯಾದ ಒಂದು ಹಳ್ಳಿ ನಿಫಾ ಎಂಬಲ್ಲಿ ಕಂಡು ಬಂತು. ಅರ್ಧಂಬರ್ಧ ತಿಂದುಬಿಟ್ಟ ಹಣ್ಣುಗಳನ್ನು ಅಲ್ಲಿಯ ಹಂದಿಗಳು ತಿಂದು ಬಾವಲಿಯಿಂದ ವೈರಾಣುವನ್ನು ಸ್ವೀಕರಿಸಿದವು. ನಂತರ ಅದೇ ಹಂದಿಗಳಿಂದ ಮನುಷ್ಯರಿಗೆ ಈ ವೈರಾಣು ಪ್ರಸರಿಸಿತು ಮತ್ತು ಬೇಗ ಹರಡಿತು. ಬಾಂಗ್ಲಾದೇಶದಲ್ಲಿ ಶಿಂದಿ ಬೆಲ್ಲ ಅಂದರೆ ಖರ್ಜೂರಿನಿಂದ ತಯಾರು ಮಾಡುವ ಬೆಲ್ಲ ಅದಕ್ಕೆ ಬೇಕಾಗುವ ಗಿಡಗಳ ಅಂಟನ್ನು ಒಂದು ಮಾಡಲು ರೆಂಬೆಗೆ ಗಡಿಗೆಗಳನ್ನ ರಾತ್ರಿ ಇಡಿ ಜೊತ್ತು ಬಿಡುತ್ತಾರೆ ಹಾಗೆ ಜೋತುಬಿಟ್ಟ ಮಡಿಕೆಗಳಲ್ಲಿ ರಾತ್ರಿ ಆಹಾರ ಶೋಧಕಾಗಿ ಬಂದ ಬಾವಲಿಯ ಲಾಲಾ ರಸ ಮೂತ್ರಾದಿಗಳು ಬಿದ್ದು ದರ ಪರಿಣಾಮ ಅಲ್ಲಿ 2009 ರಿಂದ ನೀಫಾ ಸಂಕ್ರಾಮಿಕತೆ ಅನೇಕ ಸಾರಿ ಕಂಡು ಪ್ರಸರಿಸಿದೆ, ಇದೇ ರೀತಿ ಬೇರೆ ಎರಡು ಕ್ಷೇತ್ರಗಳಲ್ಲಿಯೂ ಬೇರೆ ಎರಡು ಕಾರಣ ಆಚಾರ ಸಂಸ್ಕೃತಿಯಿಂದಲೂ ನಿಫಾ ಸಂಕ್ರಾಮಿಕತೆ ಹರಡಿತು.

ಕೇರಳದಲ್ಲಿ ನಿಫಾ ಹರಡುವ ಮುಖ್ಯ ಕಾರಣ ಅವುಗಳು ತಿಂದು ಬಿಟ್ಟ ಹಣ್ಣನ್ನು ತಿನ್ನುವುದರಿಂದ 2018ರ ನಿಫಾ ಸಂಸರ್ಗಿಕದ ಘಟನೆಯ ಪ್ರಾಣಭೀತಿ, ನಷ್ಟಗಳ ಬಗ್ಗೆ ಅನೇಕ ವಿಜ್ಞಾನಿಗಳು ಸಂಶೋಧನೆಯನ್ನ ನಡೆಸಿದ್ದಾರೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಿರಾಲಜಿ ವಿಜ್ಞಾನಿಗಳ ಪ್ರಕಾರ ಕೇರಳದಲ್ಲಿ 52 ಪ್ರಕಾರದ ಬಾವಲಿಗಳಲ್ಲಿ ಸರಿಸುಮಾರು 20ರಷ್ಟು ಬಾವಲಿಗಳಲ್ಲಿ ವೈರಾಣು ಇರುವುದು ಪತ್ತೆಯಾಗಿದೆ ಒಂದು ವಿದೇಶಿ ಸಂಶೋಧಕರ ಪ್ರಕಾರ ನಿಫಾ ವೈರಾಣು ಒಂದು ಹಣ್ಣಿನ ಮೇಲೆ 18 ರಿಂದ 30 ತಾಸು ಇದ್ದೇ ಇರುತ್ತದೆ ಕೆಲವರಲ್ಲಿ 72 ಗಂಟೆಗಳ ಕಾಲವು ವರೆಗೂ ಜೀವಂತ ಇರುವ ಸಾಧ್ಯತೆ ಇದೆ ಆದ್ದರಿಂದ ಬಾವಲಿ ತಿಂದು ಬಿಟ್ಟ ಹಣ್ಣನ್ನು ಮರುದಿನ ತಿಂದಲ್ಲಿ ಅಥವಾ ಅವನು ಮುಟ್ಟಿದಲ್ಲಿ (ಮುಟ್ಟಿದ್ದಕ್ಕೆ ಕೈ ತೊಳೆಯದಿದ್ದಲ್ಲಿ) ಅಪಾಯ ಆಗುವ ಸಂಭವ ಇರುತ್ತದೆ.

ಬಾವಲಿಗಳ ಬಗ್ಗೆ ವ್ಯವಹಾರಿಕ ವಿಚಾರ ಮಾಡುವುದಾದರೆ ಅವು ಬೀಜ ಪ್ರಸರಣ ಹಾಗೂ ಪರಾಗ ಸ್ಪರ್ಶದ ಕ್ರಿಯೆಗಳಿಂದಾಗಿ ನಿಸರ್ಗದ ಅತ್ಯಂತ ಮಹತ್ವದ ಒಂದು ಘಟಕ ಎಂದು ಹೇಳಬಹುದು. ಆದರೆ ಈಗಿನ ಸಂದರ್ಭದಲ್ಲಿ ವೈರಾಣುಪಸರಿಸುವ ಸಾಧ್ಯತೆಯಿಂದ ಅಪಾಯಕರವು ಆಗಬಹುದು. ಹೀಗೆ ಎರಡು ವಿಷಯಗಳನ್ನು ಒಳಗೊಂಡ ಪ್ರಶ್ನೆ ಬರುವುದು ಸಹಜ ಬಾವಲಿಗಳನ್ನು ನಾವು ಹೇಗೆ ಭಾವಿಸಬೇಕು ? ಉತ್ತಮ ಗುಣಮಟ್ಟದ ಪರೀಕ್ಷಕ ದೃಷ್ಟಿಕೋನದಿಂದ ? ಬೀಜಗಳ ಪ್ರಸರಣಕ್ಕೆ ? ಅಮೂಲ್ಯ ವಸ್ತುಗಳಾದಂತಹ ಗೋಡಂಬಿ ಅಡಿಕೆ ಇತ್ಯಾದಿಗಳನ್ನ ಜನರಿಗೆ ಅನಾಯಾಸವಾಗಿ ತಲುಪಿಸುವ ಉಪಕಾರಿಯೋ ? ಅಥವಾ ವೈರಾಣು ಹರಡಿಸುವ ಅಪಾಯಕಾರಿಯೋ ? ನಿಸರ್ಗ ಮತ್ತು ಭಾವಲಿಗಳ ಸಂವರ್ಧನೆಯಾ ? ಅಥವಾ ಸಾಮಾಜಿಕ ಸ್ವಾಸ್ಥವೋ ? ಹಾಗೆ ನೋಡುವುದಾದರೆ ಎರಡು ಪ್ರಶ್ನೆಗಳೂ ಪೇಚಾಟಕ್ಕೆ ಸಿಲುಕಿಸುವಂಥವುಗಳು .ನಾನು ಕಳೆದ 14 15 ವರ್ಷಗಳಿಂದ ಬಾವಲಿಗಳನ್ನ ಅಭ್ಯಾಸಿಸುತ್ತೀದ್ದೇನೆ. ಸದ್ಯದಲ್ಲಿಯೇ ನಾನು PHD ಪೂರ್ಣ ಗೊಂಡಿದ್ದು ಈ ಸಂಶೋಧನೆಯಲ್ಲಿ ಈ ಪ್ರಶ್ನೆಗಳನ್ನ ಭೇದಿಸುವ ಪ್ರಯತ್ನ ಮಾಡಿದ್ದೇನೆ.

ಜಗತ್ತಿನಲ್ಲಿ ಹಾಗೂ ಅದರಲ್ಲೂ ಭಾರತದಲ್ಲಿ ಬಹುತೇಕ ಕಡೆಗಳಲ್ಲಿ ಮಾನವ ಮತ್ತು ಬಾವಲಿಯ ಸಂಬಂಧ ಬಹಳ ಗಟ್ಟಿಯಾಗಿದೆ ಎಂಬುದು ಕಂಡು ಬರುತ್ತದೆ. ಈ ಸಂಬಂಧದ ಕಲ್ಪನೆ ಎಲ್ಲರಿಗೂ ಇಲ್ಲದಿರುವುದು ಈ ಸಸ್ತನಿ ಪ್ರಾಣಿ ದಿನ ಬಳಕೆಯಲ್ಲಿ ಬರುವ ಸಾಂಗತ್ಯವನ್ನು ಕೆಲ ರೈತರು, ತೋಟಗಾರರು ನಮಗೆ ಸವಿಸ್ತಾರವಾಗಿ ಮಾಹಿತಿ ನೀಡಿದ್ದಾರೆ. ಆದ್ದರಿಂದ ನಾನು ನನ್ನ ಪಿ ಎಚ್ ಡಿ ಸಲುವಾಗಿ ಸಂಶೋಧನೆಗಾಗಿ ಪಶ್ಚಿಮ ಘಟ್ಟದ ಶ್ರೇಣಿಗಳಲ್ಲಿ ಬರುವ ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ತಮಿಳನಾಡು ರಾಜ್ಯಗಳಲ್ಲಿನ ರೈತರು ತೋಟಗಾರರು ಹಾಗೂ ಇವುಗಳ ಸಂಬಂಧಪಟ್ಟ ಇತರ 968 ವ್ಯಕ್ತಿಗಳ ಜೊತೆ ಸಂಭಾಷಣೆ ಮಾಡಿದ್ದೇನೆ. ಈ ಸಂಭಾಷಣೆಯ ಉದ್ದೇಶವೇನೆಂದರೆ ದಿನಂಪ್ರತಿ ಬಾವಲಿಗಳ ಸಂಪರ್ಕದಲ್ಲಿ ಬರುವುದರಿಂದ ಆಗುವ ಪ್ರಯೋಜನಗಳು ಮತ್ತು ಹಾನಿಗಳು ಏನು ? ಎಂಬುದು. ಹೊಲಗದ್ದೆ ತೋಟಗಳಲ್ಲಿ ಬಾವಲಿಗಳ ಉಪಯೋಗ ಮತ್ತು ದುರುಪಯೋಗ ಏನು ? ಎಂಬುದು ಹಾಗೆಯೇ ಅವರವರ ವಿಚಾರಗಳನ್ನು, ತಿಳುವಳಿಕೆ, ತಪ್ಪು ತಿಳುವಳಿಕೆ ,ಕಲ್ಪನೆ,ಅಂಧವಿಶ್ವಾಸ, ಮತ್ತು ಬಾವಿಗಳನ್ನು ನೋಡುವ ದೃಷ್ಟಿಕೋನ ಏನು ಎಂದು ಸ್ವತಹ ಭೇಟಿ ಮಾಡಿ ಅನೇಕ ರಾತ್ರಿ ನಾನು ಹೊಲಗದ್ದೆ, ತೋಟಗಳಲ್ಲಿ ನಿರೀಕ್ಷಣೆ ಮಾಡಿದೆ. ದಿವಸ ಅಂದರೆ ಹಗಲಲ್ಲಿ ಅವರ ಹೊಲಗದ್ದೆ ತೋಟಗಳಲ್ಲಿ ನಡೆದಾಡಿ ಬಾವಲಿಗಳು ತಿಂದು ಚೆಲ್ಲಿರುವ ಹಣ್ಣುಗಳ ಪ್ರಮಾಣವನ್ನು ಅಳೆದು ನೋಡಿದೆ ತೋಟಗಾರರಿಗೆ ಆಗಿರುವ ಉತ್ಪನ್ನಗಳ ಸರಾಸರಿ, ಲಾಭ ಹಾಗೂ ಹಾನಿಗಳ ಬಗ್ಗೆ ತಿಳಿದುಕೊಂಡೆ ಈ ಲಾಭ ಹಾನಿಗಳಲ್ಲಿ ಬಾವಲಿಗಳ ಕೊಡುಗೆಯ ಬಗ್ಗೆ ಚರ್ಚಿಸಿದೆ ಜೊತೆಗೆ ಈ ಐದು ರಾಜ್ಯಗಳಲ್ಲಿಯ ಪ್ರದೇಶದ ಮನುಷ್ಯ ಮತ್ತು ಬಾವಲಿಗಳ ಸಂಪರ್ಕದಿಂದ ಉದ್ಭವಿಸುವ ವೈರಾಣುವಿನ ಸಂಘರ್ಷದ ಸಂಭಾವನೆಯನ್ನು ಅರಿತುಕೊಂಡೆ.

ಹಾಗಾದರೆ ವೈರಾಣುವಿನ ಸಂಘರ್ಷ ಹೇಗೆ ? ತಡೆಯುವುದು ವರ್ಷಾನು ವರ್ಷಗಳಿಂದ ಬಾವಲಿಗಳು ಎಂದರೆ ನಕಾರಾತ್ಮಕ ಭಾವನೆಗಳ ಬಗ್ಗೆ ನಾವು ಜಾಸ್ತಿ ಕೇಳಿದ್ದೇವೆ ಆದರೆ ನನ್ನ ವೈಜ್ಞಾನಿಕ ಅಭ್ಯಾಸದಲ್ಲಿ ಕಂಡುಕೊಂಡಿದ್ದು ಅವುಗಳಿಗೆ ಹಾನಿಗಿಂತ ಲಾಭವೇ ಜಾಸ್ತಿ. ಈ ಎಲ್ಲಾ ಪ್ರದೇಶಗಳ ಸಂಶೋಧಕೀಯ ಪ್ರವಾಸದಲ್ಲಿ ನನಗೆ ತಿಳಿದು ಬಂದಿದ್ದೇನೆಂದರೆ ಬಾವಲಿಗಳು ಹರಡಿರುವ ಬೀಜಗಳಿಂದ ಕೆಲವು ಸಂಗ್ರಹಿಸಿದಾಗ ಅವುಗಳಲ್ಲಿ ಪ್ರತ್ಯಕ್ಷ ಅಥವಾ ಅಪ್ಪ್ರತ್ಯಕ್ಷ ಸಂಪರ್ಕದಿಂದ ಕೆಲವು ಭಾಗಗಳಿಗೆ ನೀಫಾ ವೈರಾಣುವಿನ ಹರಡುವಿಕೆಯ ತೊಂದರೆ ಧಕ್ಕೆ ಆಗಬಹುದು. ಮುಕೇತ ಭಾವಲಿಗಳ ಪ್ರಜನೆಯ ವೇಳೆ ಅಂದರೆ ಬೇಸಿಗೆಯಲ್ಲಿ ಮನುಷ್ಯರಿಗೆ ರೋಗ ಹರಡುವ ಸಾಧ್ಯತೆ ಜಾಸ್ತಿ ಇರುತ್ತದೆ ಕಾಡಿಗಿಂತಲೂ ನಾಡಿನಲ್ಲಿ ಅಂದರೆ ಹಣ್ಣು ಹಂಪಲ ತೋಟಗದ್ದೆಗಳಲ್ಲಿ ಸಂಸರ್ಗಿಕ ದ್ವಿತೀಯ ನೆಲೆ ಎನ್ನಬಹುದು ವೈರಾಣುವಿನ ಸಂಸರ್ಗಿಕತೆಯ ಈ ಕಾರಣಗಳು ಸ್ಥಳ ಕಾಲ ಸಂದರ್ಭದಲ್ಲಿ ಸಂಯೋಗದ ಪರಿಣಾಮವು ಇರಬಹುದು. ಆದರೂ ನಾನು ಕಂಡುಕೊಂಡಂತೆ ಯಾವ ಸ್ಥಳಗಳಲ್ಲಿ ಜನರು ಬಾವಲಿಗಳಿಂದ ಬೀಸಾಡಲ್ಪಟ್ಟ ಹಣ್ಣು ಹಂಪಲುಗಳ ಲಾಭ ಜಾಸ್ತಿ ತೆಗೆದುಕೊಳ್ಳುತ್ತಿದ್ದಾರೋ ಅಲ್ಲಿ ವೈರಾಣುವಿನ ಪಸರಿಸುವಿಕೆಯು ಕಡಿಮೆ ಇತ್ತು ಇದು ಒಂದು ಯೋಗಾ ಯೋಗ ಹೌದು ಆದರೆ ಕೆಲಕಡೆಗಳಲ್ಲಿ ಅಂದರೆ ಕೊಂಕಣಪಟ್ಟಿ ಕೇರಳದವರೆಗೂ ಕೆಲವು ಭಾಗದವರು ಭಾವಲಿಗಳನ್ನು ಹಿಡಿದು ತಿನ್ನುವುದು ಭೇಟೆಯಾಡುವುದು ಅವುಗಳಿಂದ ಎಣ್ಣೆ ತೆಗೆದು ಸಂದು ನೋವಿಗಳಿಗೆ ಉಪಯೋಗಿಸುವುದು.

ಯಾವುದೇ ವೈಜ್ಞಾನಿಕ ತಯಾರಿಕಾ ಆಧಾರ ಮತ್ತು ಅಭ್ಯಾಸವಿಲ್ಲದೆ ಎಣ್ಣೆ ತಯಾರಿಕೆ ಇಂತಹ ಸಂದರ್ಭಗಳಲ್ಲಿ ಬಾವಲಿಗಳಿಂದ ಮನುಷ್ಯನಿಗೆ ವೈರಾಣು ಹರಡುವ ಭೀತಿ ಇದೆ. ಕೆಳಗೆ ಬಿದ್ದ ಬಾವಲಿ ತಿಂದು ಬಿಟ್ಟ ಅಥವಾ ಪ್ರಾಣಿಗಳು ತಿಂದು ಬಿಟ್ಟ ಹಣ್ಣನ್ನು ತಿನ್ನದಿರುವುದು ಉತ್ತಮ ಅಡಿಕೆ ಗೋಡಂಬಿ ಬಾದಾಮು ಇನ್ನಿತರ ಬೀಜಗಳನ್ನು ಆರಿಸುವುದಾದಲ್ಲಿ ಕೈಗಳಿಗೆ ಕೈಗವಸು, ಕಾಲುಗಳಿಗೆ ಬೂಟು ಹಾಕಿ ಒಟ್ಟುಗೂಡಿಸಬಹುದು ಸತ್ತ ಬಾವಲಿಗಳನ್ನ ಬರಿಗೈಯಿಂದ ಮುಟ್ಟದೆ ಅವುಗಳ ಸುರಕ್ಷಿತ ಅಂತ್ಯಕ್ರಿಯೆಯನ್ನು ಕಾಳಜಿ ಪೂರ್ವಕ ಮಾಡುವುದು ಹಾಗೆ ನಾವು ಸಪೋಟ ಪೆರಳೆಹಣ್ಣು ಮುರುಗುಲದಂತ ಹಣ್ಣುಗಳನ್ನು ಅಂದಾಜಿನ ಪ್ರಕಾರ ಹದವಾಗಿ ಬಲಿತ ಕೂಡಲೇ ಮರಗಳಿಂದ ಇಳಿಸುವುದು ಸೂಕ್ತ, ಇಲ್ಲದಿದ್ದಲ್ಲಿ ಬಾವಲಿಗಳು ಹಣ್ಣಾಗುವುದನ್ನು ಕಾಯ್ದು ಅರೆ ಬರೆ ತಿಂದು ಬಿಸಾಡಬಹುದು ಅವುಗಳು ಎಂಜಲು ಮಾಡಿದ ಹಣ್ಣುಗಳಿಂದ ನೀಪ ಹರಡಬಹುದು ಇದರಿಂದ ಆಗುವ ದುಷ್ಪರಿಣಾಮಗಳನ್ನು ತಡೆಯಬಹುದು ಸಂಯೋಜಿತ ಕಾರ್ಯ ಹಾಗೂ ದೂರ ದೃಷ್ಟಿಗಳಿಂದ ನಮ್ಮ ಫಸಲನ್ನು ಸುರಕ್ಷಿತವಾಗಿಯೂ ಇರಬಹುದು ಆಗ ನಮ್ಮ ನಿಯಂತ್ರಣದಲ್ಲಿ ಇರುತ್ತದೆ.

ಒಟ್ಟಾರೆಯಾಗಿ ನೋಡುವುದಾದರೆ ಬಾವಲಿ ಮತ್ತು ಮನುಷ್ಯರ ಸಂಬಂಧ ಪೂರ್ಣ ಪ್ರಮಾಣದಲ್ಲಿ ನಿರಾಶಾದಾಯಕ ಮತ್ತು ದೋಖಾದಾಯಕವಾಗಿಲ್ಲ, ಆದರೆ ಸುಲಲಿತವಾಗಿಯೂ ಇಲ್ಲ ಜಾಗರೂಕತೆ ಮತ್ತು ವಿಚಾರವಂತ ಕಾರ್ಯಗಳಿಂದ ಬಾವಲಿಗಳ ಬದುಕುವ ಹಕ್ಕನ್ನು ಕಸಿದುಕೊಳ್ಳದೆ ನಮ್ಮ ಸಾಮಾಜಿಕ ಆರ್ಥಿಕ ಮತ್ತು ಆರೋಗ್ಯದ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬಹುದು.ಕೋವಿಡ್ 19 ಪರಿಸ್ಥಿತಿ ಮತ್ತು ಮುಂಬರುವ ಪರಿಸ್ಥಿತಿಗಳಲ್ಲಿಯು ಬಾವಲಿಗಳ ಬಗ್ಗೆ ವೈಜ್ಞಾನಿಕವಾದ ಮಾಹಿತಿ ಪಡೆಯಬೇಕು ಸುಖ ಸುಮ್ಮನೆ ಮಾಧ್ಯಮಗಳಲ್ಲಿ ಬರುವ ಕುರಿತು ಸುದ್ದಿಗಳಿಗೆ ಕಣ್ಮುಚ್ಚಿ ವಿಶ್ವಾಸ ಮಾಡದೆ ಇರುವುದೇ ಉತ್ತಮ. ಭೀತಿ ಪಡುವುದಕ್ಕಿಂತ ಸುರಕ್ಷಿತ ಕ್ರಮಗಳಿಂದ ನಿಸರ್ಗ ಮತ್ತು ನಮ್ಮ ನಡುವಿನ ಸಂವಹನೆ ವೃದ್ಧಿ ಆಗಬೇಕಿದೆ ಈ ಕಾರಣಕ್ಕೆ ಈ ಎಲ್ಲಾ ಪ್ರಯತ್ನಗಳು ನಿಜವಾದ ಪ್ರಯತ್ನ ಮತ್ತು ಮಹತ್ವದ್ದು ಎನಿಸಿಕೊಳ್ಳುತ್ತದೆ.

ಭಾರತದಲ್ಲಿ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಶುಭವೆಂದು ಭಾಗವಹಿಸಲಾಗುತ್ತದೆ. ವೈರಾಣುವಿನ ಪ್ರಸರಣದ ಮಾಹಿತಿಗಳು ರಾರಾಜಿಸಿದ್ದರು ಕೆಳಗ್ರಾಮಸ್ಥರು ಮುಂದೆ ಬಂದು ಭಾವಲಿಗಳ ಸಂರಕ್ಷಣೆ ಮಾಡುತ್ತಿದ್ದಾರೆ ಈ ರೀತಿಯ ಸಮುದಾಯಿಕ ಸಕಾರಾತ್ಮಕ ಪ್ರಯತ್ನದ ಯೋಗದಾನ ಸಾಕಾದಿತು, ಈ ಕೆಲಸಕ್ಕೆ ಜಾಸ್ತಿ ಏನು ಮಾಡಬೇಕಾಗಿಲ್ಲ ಕೇವಲ ಭಾವನೆಯು ನಮ್ಮ ಹಾಗೆ ಒಂದು ಜೀವ ಎಂದು ಅಭಯ ಹಸ್ತ ಕೊಟ್ಟು ದೂರದಿಂದಲೇ ನಮಸ್ಕಾರ ಮುಟ್ಟಿಸಬೇಕು.

ಡಾ.ಕಾದಂಬರಿ ದೇಶಪಾಂಡೆ
ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ ಅಂಡ್ ದಿ ಎನ್ವಿರಾನ್ಮೆಂಟ್ (ATREE),ಬೆಂಗಳೂರು, ಕರ್ನಾಟಕ, ಭಾರತ
ಕನ್ನಡ ಅನುವಾದ: ಶ್ರೀಮತಿ ರಕ್ಷಾ ರವಿಕಿರಣ ಪಟವರ್ಧನ ಶಿರಸಿ, ಕರ್ನಾಟಕ.