ಮೋದಿ-ಸಿದ್ದರಾಮಯ್ಯ ಸರ್ಕಾರ, ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ

|

Updated on: Jun 18, 2024 | 10:01 PM

Kodi Shree New Prediction: ಹಾಸನದ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ಮಹಾ ಸ್ವಾಮೀಜಿಗಳು ಕರ್ನಾಟಕದಲ್ಲಿ ಭವಿಷ್ಯದಲ್ಲಿ ನಡೆಯುವ ಸಂಗತಿಗಳನ್ನುಆಗ್ಗಾಗ್ಗೆ ತಿಳಿಸುತ್ತಿರುತ್ತಾರೆ. ಅದರಂತೆ ಈ ಬಾರಿ ಕೊಲೆ ಆರೋಪಿಯಾಗಿರುವ ನಟ ದರ್ಶನ್, ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ, ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗೂ ಮಳೆ-ಬೆಳೆ ಬಗ್ಗೆ ಕೋಡಿಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಮೋದಿ-ಸಿದ್ದರಾಮಯ್ಯ ಸರ್ಕಾರ, ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ
ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ
Follow us on

ಚಿಕ್ಕಬಳ್ಳಾಪುರ, (ಜೂನ್ 18): ಈಗ ದೇಶದಲ್ಲಿ ಕ್ರೋಧಿ ನಾಮ ಸಂವತ್ಸರ ಇದೆ. ಶುಭಗಳಿಗಿಂತ ಅಶುಭಗಳೇ ಹೆಚ್ಚಾಗಿ ನಡೆಯುತ್ತವೆ. ದೇಶದಲ್ಲಿ ಜಲಕಂಟಕ, ಅಗ್ನಿಕಂಟಕ, ವಾಯು ಕಂಟಕಗಳು ಹೆಚ್ಚಾಗಲಿವೆ. ರಾಜ್ಯದಲ್ಲಿ ಈ ಬಾರಿ ಅತಿವೃಷ್ಟಿ ಸಾಧ್ಯತೆ ಇದೆ ಎಂದು ಕೋಡಿಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು (Kodi Mutt Swamiji) ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಮಠದ ಶ್ರೀ, ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣು ಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ಆಪತ್ತು ಇರುವುದಿಲ್ಲ. ಶ್ರಾವಣದಲ್ಲಿ ನಾನು ಮತ್ತೊಂದು ಸ್ಫೋಟಕ ಭವಿಷ್ಯ ಹೇಳುತ್ತೇನೆ. ಕೇಂದ್ರ ಸರ್ಕಾರ ಹಾಗೂ ಮೋದಿ ಅವರ ಬಗ್ಗೆ ಶ್ರಾವಣದಲ್ಲಿ ಮಾತನಾಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Kodi Mutt Swamiji: ಕೋಡಿಶ್ರೀ ನುಡಿದ ಭವಿಷ್ಯವಾಣಿಗಳು ಯಾವುದೆಲ್ಲ ನಿಜವಾಗಿವೆ? ಇಲ್ಲಿದೆ ನೋಡಿ

ಈ ಮೂಲಕ ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ಸರ್ಕಾರ ಪತನವಾಗುತ್ತೆ ಎನ್ನುವ ಚರ್ಚೆಗಳ ಮಧ್ಯ ಏನು ಆಗುವುದಿಲ್ಲ ಎಂದು ಕೋಡಿಶ್ರೀ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇನ್ನು ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಬಹುಮತ ಬರದಿದ್ದಕ್ಕೆ ಎನ್​ಡಿಎ ಮೈತ್ರಿ ಸರ್ಕಾರ ರಚನೆ ಮಾಡಿದ್ದು, ಇದು ಬಹಳ ದಿನ ಉಳಿಯುವುದಿಲ್ಲ ಎಂದು ವಿಪಕ್ಷಗಳ ಭವಿಷ್ಯದ ನಡುವೆ ಕೋಡಿಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಪ್ರತಿಕ್ರಿಯಿಸಿ, ಸರ್ಕಾರ ಹಾಗೂ ಮೋದಿ ಅವರ ಬಗ್ಗೆ ಶ್ರಾವಣದಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ದರ್ಶನ್​-ಉಪಪತಿ ಬಗ್ಗೆ ಕೋಡಿಶ್ರೀ ಭವಿಷ್ಯ

ಇದೇ ವೇಳೆ ಕೊಲೆ ಆರೋಪಿಯಾಗಿರುವ ಸ್ಯಾಂಡಲ್​ವುಡ್ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವಿನ ವಿವಾದ ಬಗ್ಗೆ ಪ್ರತಿಕ್ರಿಯಿಸಿ, ಕೋಪ ಕಡಿಮೆ ಮಾಡಿಕೊಳ್ಳಬೇಕು, ತಂದೆ-ತಾಯಿ ಮಾತು ಕೇಳಬೇಕು. ಆ ರೀತಿ ನಡೆದುಕೊಂಡಿದ್ದರಿಂದ ಈಗ ಒಳ್ಳೆಯ ಸ್ಥಾನಮಾನದಲ್ಲಿ ಇದ್ದೇನೆ. ದರ್ಶನ್ ವಿರುದ್ಧ ಗಲಾಟೆ ನಡೆದಾಗ ನಾನು ಕೋಪ ಮಾಡಿಕೊಳ್ಳಲಿಲ್ಲ. ಕೋಪದ ಕೈಗೆ ಬುದ್ಧಿ ಕೊಟ್ಟರೆ ಈ ರೀತಿಯ ಅವಘಡಗಳು ಸಂಭವಿಸುತ್ತವೆ ಎಂದು ಉಮಾಪತಿಯೇ ಹೇಳಿದ್ದಾರೆ. ಕರೆಯದೆ ಬರುವವನು ಕೋಪ, ಬರೆಯದೆ ಓದುವವನು ಕಣ್ಣು, ಬರಿಗಾಲಲ್ಲಿ ನಡೆಯುವವನು ಮನಸ್ಸು ಎಂದು ಇಬ್ಬರ ನಡುವಿನ ಗಲಾಟೆ ಬಗ್ಗೆ ಮಾರ್ಮಿಕವಾಗಿ ನುಡಿದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ