Kodi Mutt Swamiji: ಕೋಡಿಶ್ರೀ ನುಡಿದ ಭವಿಷ್ಯವಾಣಿಗಳು ಯಾವುದೆಲ್ಲ ನಿಜವಾಗಿವೆ? ಇಲ್ಲಿದೆ ನೋಡಿ

ಹಾಸನದ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ಮಹಾ ಸ್ವಾಮೀಜಿಗಳು ಕರ್ನಾಟಕದಲ್ಲಿ ಭವಿಷ್ಯದಲ್ಲಿ ನಡೆಯುವ ಸಂಗತಿಗಳನ್ನುಆಗ್ಗಾಗ್ಗೆ ತಿಳಿಸುತ್ತಿರುತ್ತಾರೆ. ಇದರಲ್ಲಿ ಭಯಾನಕ ವಿಚಾರಗಳೇ ಹೆಚ್ಚು, ಅವರು ಹೇಳಿದ ಭವಿಷ್ಯವು ನಿಜವೂ ಆಗಿದೆ.ಇನ್ನು ಕೊರೊನಾ, ಚಂದ್ರಯಾನ, ಇಸ್ರೇಲ್‌ ಹಾಗೂ ಪ್ಯಾಲೆಸ್ತೇನ್‌ ಯುದ್ಧ ಹಾಗೂ ರಾಜಕೀಯ ಬಗ್ಗೆ ಹೀಗೆ ಅನೇಕ ಭವಿಷ್ಯಗಳು ನುಡಿದಿದ್ದರು. ಇಲ್ಲಿಯವರೆಗೆ ಅವರು ನುಡಿದ ಭವಿಷ್ಯಗಳು ಯಾವುವು? ಅವುಗಳು ಎಷ್ಟು ಪರಿಣಾಮಕಾರಿಯಾಗಿತ್ತು? ಇಲ್ಲಿದೆ ಮಾಹಿತಿ.

Kodi Mutt Swamiji: ಕೋಡಿಶ್ರೀ ನುಡಿದ ಭವಿಷ್ಯವಾಣಿಗಳು ಯಾವುದೆಲ್ಲ ನಿಜವಾಗಿವೆ? ಇಲ್ಲಿದೆ ನೋಡಿ
ಕೋಡಿಮಠ ಸ್ವಾಮೀಜಿ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 20, 2024 | 10:49 AM

ತಮ್ಮಲ್ಲರಿಗೂ ಗೊತ್ತಿರುವಂತೆ ತಮ್ಮ ಭವಿಷ್ಯವಾಣಿಯಿಂದಲೇ ಹೆಚ್ಚು ಸುದ್ದಿಯಲ್ಲಿರುವ ಹಾಸನದ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ಮಹಾ ಸ್ವಾಮೀಜಿಗಳು (Dr. Shivananda Shivayogi Maha Swamiji) ಆಗಾಗ ಭಯಾನಕ ಭವಿಷ್ಯವನ್ನು ನುಡಿಯುತ್ತಾರೆ. ಹೌದು ಈಗಾಗಲೇ ಅವರು ನುಡಿದಿದ್ದ ಕೆಲ ಭವಿಷ್ಯಗಳು ನಿಜವಾಗಿವೆ. ಕೊರೊನಾ, ಚಂದ್ರಯಾನ, ಇಸ್ರೇಲ್‌ ಹಾಗೂ ಪ್ಯಾಲೆಸ್ತೇನ್‌ ಯುದ್ಧ ಹಾಗೂ ರಾಜಕೀಯ ಬಗ್ಗೆ ಕೋಡಿಶ್ರೀ ನುಡಿ ಕೆಲ ಭವಿಷ್ಯವಾಣಿಗಳು ಸತ್ಯವಾಗಿವೆ.

ರೋಗ ರುಜಿನಗಳು ಕಾಡಲಿವೆ ಎಂದಿದ್ದ ಸ್ವಾಮೀಜಿ

ಜಗತ್ತಿನಲ್ಲಿ ವಿಶಾನಿಲ ಬೀಸುವ ಪ್ರಸಂಗ ನಡೆಯಲಿದ್ದು, ರೋಗ ರುಜಿನಗಳು ಕಾಡಲಿವೆ. ವಿಶ್ವದಾದ್ಯಂತ ಇದು ವ್ಯಾಪಿಸಲಿದೆ. ಈ ವಿಶಾನಿಲದ ದುಷ್ಪರಿಣಾಮ ನಮ್ಮ ದೇಶ ಭಾರತದ ಮೇಲೂ ಉಂಟಾಗಲಿದೆ. ಎಂದು ಕೋಡಿಶ್ರೀಗಳು ಹೇಳಿದ್ದರು. ಅದರಂತೆ ಕೊರೊನಾ ವೈರಸ್​​ ಇಡೀ ಜಗತ್ತನ್ನು ಕಟ್ಟಿ ಕಾಡಿದ್ದು ನಿಜ. ಇದರೊಂದಿಗೆ ಕೋಡಿಶ್ರೀಗಳ ಮತ್ತೊಂದು ಭವಿಷ್ಯ ನಿಜವಾದಂತಾಗಿದೆ.

ಕಾಲಜ್ಞಾನದ ಯಾವುದೇ ಭವಿಷ್ಯ ಸುಳ್ಳಾಗಿಲ್ಲವೆಂದು ಆಗಾಗ ಭವಿಷ್ಯ ನುಡಿಯುವ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಕಳೆದ ಎರಡು ತಿಂಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಶ್ರಾವಣ ಮಾಸದ ಮಧ್ಯಂತರದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಭೀತಿಯಿದೆ. ಭೂಕಂಪನಗಳು, ಸುನಾಮಿಗಳಿಂದ ಹೆಚ್ಚಿನ ಜನರ ಸಾವು ನೋವು ಸಂಭವಿಸಲಿವೆ. ವಿಷಾನೀಲ ಬೀಸುವ ಪ್ರಸಂಗವೂ ಇದೆ, ಅದು ಎಲ್ಲ ಕಡೆಯೂ ವ್ಯಾಪಿಸಲಿದೆ. ಯುದ್ಧದ ಭೀತಿಯಿಂದ ಹಾಗೂ ಮಳೆಯಿಂದ ಎರಡು ದೇಶಗಳು ಭೂಪಟದಿಂದ ಕಣ್ಮರೆಯಾಗಲಿವೆ ಎಂದು ಹೇಳಿದ್ದರು. ಕೋಡಿ ಶ್ರೀಗಳ ಭವಿಷ್ಯ ಮತ್ತೆ ನಿಜವಾಗುತ್ತಿದೆ ಎಂಬಂತೆ ಇಸ್ರೇಲ್‌- ಪ್ಯಾಲೆಸ್ತೇನ್‌ ಯುದ್ಧವಾಗಿದೆ.

ದಾರಿಯಲ್ಲಿ ಬಿದ್ದು ಸಾಯುವುದು ಹೆಚ್ಚಾಗಲಿದೆ ಎಂದಿದ್ದ ಕೋಡಿಶ್ರೀ

ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುತ್ತವೆ ಎಂದು ಈ ವರ್ಷದ ಕಡೆಯ ಕೆಲ ತಿಂಗಳ ಬಗ್ಗೆ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಇದೀಗ ಈ ಮಾತು ನಿಜವಾಗುತ್ತಿರುವಂತೆ ತೋರುತ್ತಿದೆ.

ಬಾಂಬ್‌ಗಳು, ಭೂಕಂಪ, ಯುದ್ದಭೀತಿ, ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುವುದು, ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುವುದು. ದೇಹ ಅಂಗಾಂಗಗಳ ಮೇಲೆ ಪ್ರಭಾವ ಕಳೆದುಕೊಳ್ಳುತ್ತವೆ’ ಎಂದು ಕೋಡಿಶ್ರೀ 2022ರಲ್ಲಿ ನುಡಿದಿದ್ದರು. ಇತ್ತೀಚಿನ ಪ್ರಕರಣಗಳನ್ನು ಗಮನಿಸುತ್ತಿದ್ದರೆ ಭವಿಷ್ಯ ಈಗ ನಿಜವಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಹೌದು, ಇತ್ತೀಚೆಗೆ ಎಳೆ ಪ್ರಾಯದ ಯುವಕ ಯುವತಿಯರು ನೋಡು ನೋಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ(sudden death) ಪ್ರಕರಣಗಳು ಹೆಚ್ಚಾಗಿವೆ. ಇದೆಲ್ಲದರ ಹೊರತಾಗಿಯೂ ಕೋಡಿ ಮಠ ಶ್ರೀ ಹೇಳಿದ ಭವಿಷ್ಯ ನಿಜವಾಗುತ್ತಿದೆ ಎಂಬುದು ಕೂಡಾ ಗಮನಿಸಬೇಕಾದ ಸಂಗತಿ. ನಡೆದು ಹೋಗುತ್ತಿರುವವರು ಸಾಯುವ ಬಗ್ಗೆಯಷ್ಟೇ ಅಲ್ಲದೆ, ಕಾರ್ತಿಕದವರೆಗೂ ಮಳೆ ಇರುತ್ತೆ ಎಂದು‌ ಸಹ ಭವಿಷ್ಯ ನುಡಿದಿದ್ದರು. ಅದೂ ಕೂಡಾ ನಿಜವಾಗಿದೆ.

ಇದನ್ನೂ ಓದಿ: ಯುಗಾದಿ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ-ಮಳೆ, ಧಾರ್ಮಿಕ ಮುಖಂಡನ ಸಾವಾಗಲಿದೆ: ಕೋಡಿಶ್ರೀ ಸ್ಫೋಟಕ ಭವಿಷ್ಯ

ನಿಜವಾದ ಕೋಡಿಶ್ರೀ ಭವಿಷ್ಯವಾಣಿಗಳು

ದೇಶದಲ್ಲಿ ದೊಡ್ಡ ಅವಘಡ ನಡೆಯುತ್ತದೆ ಎಂದು ಹೇಳಿದ್ರು, ಅದರಂತೆ ಒಡಿಶಾದಲ್ಲಿ ರೈಲು ದುರಂತವು ಸಂಭವಿಸಿತ್ತು. ವಿಶ್ವ ಭೂಪಟದಲ್ಲಿ ಒಂದು ದೇಶ ಅಳಿಸಿಹೋಗಲಿದೆ ಎಂದು ಹೇಳಿದ್ದರು. ಅದರಂತೆ ಅಪಘಾನಿಸ್ತಾನ ತಾಲಿಬಾನ್‌ ವಶವಾಗಿದೆ. ರಾಜ್ಯದಲ್ಲಿ ಸೂತ್ರಧಾರಿ ಸರಕಾರ ಬರಲಿದೆ ಎಂದಿದ್ದರು. ಅದರಂತೆ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಇಳಿದು ಬಸವರಾಜ ಬೊಮ್ಮಾಯಿ ಸಿಎಂ ಆದರು. ಬೊಮ್ಮಾಯಿ ಅವರು ಬುದ್ಧಿವಂತರಿರುವುದರಿಂದ ವಿವೇಕದಿಂದ ರಾಜ್ಯಭಾರ ನಡೆಸಲಿದ್ದಾರೆ ಎಂದು ಹೇಳಿದ್ದರು. ಅದರಂತೆ ಅವರು ಅವಧಿ ಮುಗಿಯುವವಗೂ ಅಧಿಕಾರ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸತ್ಯವಾಯ್ತು ಚಂದ್ರಯಾನ 3 ಬಗ್ಗೆ ಕೋಡಿಶ್ರೀ ನುಡಿದಿದ್ದ ಭವಿಷ್ಯ

ಜಗತ್ತು, ರಾಜಕಾರಣ, ಪರಿಸರ ಕುರಿತು ಕೋಡಿಮಠದ ಶ್ರಿ ಶಿವಾನಂದ ಸ್ವಾಮೀಜಿಗಳು ಭವಿಷ್ಯ ಹೇಳುತ್ತಾರೆ. ಅದರಲ್ಲಿ ಒಂದಷ್ಟು ವಿಚಾರಗಳು ನಿಜವಾಗಿವೆ. ಅದರಂತೆ ಭಾರತೀಯ ಬಾಹ್ಯಾಕಾಶ ಸಂಶೋಧಾನ ಸಂಸ್ಥೆ (ISRO) ಮತ್ತು ಚಂದ್ರಯಾನ 3 ಕುರಿತು ಕೋಡಿಮಠದ ಶ್ರೀ ಶಿವಾನಂದ ಸ್ವಾಮೀಜಿಗಳು ಹೇಳಿದ ಭವಿಷ್ಯ ನಿಜವಾಗಿದೆ.

ಚಂದ್ರನ ಮೇಲೆ ಕಾಲಿಡುತ್ತಿರುವ ಮೂರು ದೇಶಗಳ ನಂತರ 4ನೇ ದೇಶ ಹಾಗೂ ಚಂದ್ರನ ದಕ್ಷಿಣ ಭಾಗದ ಮೇಲ್ಮೈನಲ್ಲಿ ಕಾಲಿಟ್ಟ ಮೊದಲ ದೇಶ ಭಾರತ. ಚಂದ್ರಯಾನ 3 ಯಶಸ್ವಿಯಾಗಿದೆ. ಇಸ್ರೋ ವಿಜ್ಞಾನಿಗಳು ಹೊಸ ಮೈಲುಗಲ್ಲು ಸಾಧಿಸಿದ್ದಾರೆ. ಇದಕ್ಕೂ ಮೊದಲೇ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು. ಇಸ್ರೋ ಉಡಾವಣೆ ಮಾಡಿರುವ ಚಂದ್ರಯಾನ 3 ಯಶಸ್ವಿ ಆಗಲಿದೆ ಎಂದು ನುಡಿದಿದ್ದರು. ಅದರಂತೆ ಚಂದ್ರಯಾನ ಯಶಸ್ವಿಯಾಗಿದ್ದು, ಇಡೀ ದೇಶವೇ ಹೆಮ್ಮೆ ಪಡುವಂತಾಗಿದೆ. ಅಲ್ಲದೇ ಬೇರೆ-ಬೇರೆ ದೇಶಗಳಿ ಸಹ ಭಾರತದ ಸಾಧನೆಗೆ ಅಭಿನಂದನೆ ತಿಳಿಸಿವೆ.

ಮತ್ತಷ್ಟು ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:44 am, Tue, 20 February 24

ತಾಜಾ ಸುದ್ದಿ