ಇಡೀ ವಿಶ್ವಕ್ಕೆ ಅತಿದೊಡ್ಡ ದಾನಿಯಾಗಿರುವ ಭಾರತೀಯ ವ್ಯಕ್ತಿಯ ಪರಿಚಯ ಇಲ್ಲಿದೆ

Philanthropist Jamsetji Tata - ಗುಜರಾತಿನ ಬಡ ಝೋರಾಸ್ಟ್ರಿಯನ್ ಪಾರ್ಸಿ ಕುಟುಂಬದಲ್ಲಿ ಜನಿಸಿದ ಜಮ್ಷೆಡ್ ಜೀ ಅವರು ತಮ್ಮ ಕುಟುಂಬದಲ್ಲಿ ಲೋಕೋಪಕಾರ ಮತ್ತು ಸಾಮಾಜಿಕ ಜವಾಬ್ದಾರಿಯ ಸಂಸ್ಕೃತಿಯನ್ನು ಹುಟ್ಟುಹಾಕಿದರು. ಅವರ ಪುತ್ರರಾದ ದೊರಾಬ್ಜಿ ಟಾಟಾ ಮತ್ತು ರತನ್​​ ಜೀ ಟಾಟಾ ಅವರು ಈ ಪರಂಪರೆಯನ್ನು ಮುಂದುವರೆಸಿದರು, ಕೈಗಾರಿಕಾ ಪ್ರಗತಿಗೆ ಮಾತ್ರವಲ್ಲದೆ ಪ್ರಮುಖ ಸಾಮಾಜಿಕ ಯೋಜನೆಗಳಿಗೆ ಅಪಾರ ಕೊಡುಗೆ ನೀಡಿದರು. ಟಾಟಾ ಕುಟುಂಬವು ಉದಾರ/ಉದಾತ್ತ ದತ್ತಿ ಯೋಜನೆಗಳಿಗಾಗಿಯೇ ಮೀಸಲಾಗಿದೆ ಎಂಬಂತೆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ.

ಇಡೀ ವಿಶ್ವಕ್ಕೆ ಅತಿದೊಡ್ಡ ದಾನಿಯಾಗಿರುವ ಭಾರತೀಯ ವ್ಯಕ್ತಿಯ ಪರಿಚಯ ಇಲ್ಲಿದೆ
ಅತಿದೊಡ್ಡ ದಾನಿಯಾಗಿರುವ ಭಾರತೀಯ
Follow us
|

Updated on:Oct 12, 2024 | 1:27 PM

ಸಮಾಜ ಸೇವೆ, ಸಮಾಜ ಕಲ್ಯಾಣ, ಜನೋಪಯೋಗಿ, ಜನೋಪಕಾರಿ, ಲೋಕೋಪಕಾರಿ (philanthropy) ಕುರಿತು ಭಾರತದಲ್ಲಿ ಚರ್ಚಿಸುವಾಗ ಹೆಸರಾಂತ ಕೈಗಾರಿಕೋದ್ಯಮಿಗಳಾದ ಮೊನ್ನೆಯಷ್ಟೆ ಅಮರರಾದ ರತನ್ ಟಾಟಾ, ಅಜೀಂ ಪ್ರೇಮ್‌ಜಿ ಮತ್ತು ಮುಖೇಶ್ ಅಂಬಾನಿ ಅಂತಹವರು ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಾರೆ. ಆದಾಗ್ಯೂ, ದಾನಧರ್ಮದ ಕ್ಷೇತ್ರದಲ್ಲಿ (charitable) ಆಳವಾಗಿ ಅಧ್ಯಯನ ಮಾಡುವಾಗ ವಿಶ್ವದ ಅತ್ಯಂತ ಉದಾರ ದಾನಿ (donor) ಎಂಬ ಬಿರುದು ಟಾಟಾ ಗ್ರೂಪ್‌ನ ಸಂಸ್ಥಾಪಕ ಜಮ್ಷೆಡ್ ಜೀ ಟಾಟಾಗೆ (Jamsetji Nusserwanji Tata) ಸಲ್ಲುತ್ತದೆ. ತಮ್ಮ ಜೀವಿತಾವಧಿಯಲ್ಲಿ ಅವರು ₹8.29 ಲಕ್ಷಕ್ಕೂ ಹೆಚ್ಚು ದೇಣಿಗೆ ನೀಡಿದವರು ಅವರು. ಪ್ರಚಲಿತದಲ್ಲಿ ಕಾಣಬರುವ ಬಿಲಿಯನೇರ್‌ಗಳ ಕೊಡುಗೆಗಳ ಸಮ್ಮುಖದಲ್ಲಿ ಇವರ ಉದಾರ ಉದಾತ್ತ ದಾನ ಗಮನಾರ್ಹವಾಗಿ ಎದ್ದುಕಾಣುತ್ತದೆ.

ಶತಮಾನದ ಲೋಕೋಪಕಾರಿಗಳ ಕುರಿತಾದ ವರದಿಯ (2021 EdelGive Hurun Philanthropists of the Century report) ಪ್ರಕಾರ ಒಟ್ಟು ದೇಣಿಗೆ 102.4 ಶತಕೋಟಿ ಅಮೆರಿಕನ್ ಡಾಲರ್​​ (ಕಾಲಕಾಲಕ್ಕೆ ಹಣದುಬ್ಬರದ ಲೆಕ್ಕಕ್ಕೆ ಸರಿಹೊಂದಿಸಲಾಗಿದೆ) ತಲುಪುವ ಮೂಲಕ ಜಮ್ಷೆಡ್ ಜೀ ಟಾಟಾ ಅಗ್ರಗಣ್ಯರಾಗಿ ರಾರಾಜಿಸುತ್ತಾರೆ. ಬಿಲ್ ಗೇಟ್ಸ್​​ ಮತ್ತು ಮೆಲಿಂಡಾ ಗೇಟ್ಸ್ US $ 74.6 ಶತಕೋಟಿ ಮೊತ್ತದ ಕೊಡುಗೆಗಳೊಂದಿಗೆ ಎರಡನೇ ಸ್ಥಾನ ಅಲಂಕರಿಸುತ್ತಾರೆ.

ಅಗ್ರಗಣ್ಯ ಉದಾರಿ ಜಮ್ಷೆಡ್ ಜೀ ಭಾರತೀಯ ಕೈಗಾರಿಕೋದ್ಯಮದ ಪಿತಾಮಹ

ಮಾರ್ಚ್ 3, 1839 ರಂದು ಜನಿಸಿದ ಜಮ್ಷೆಡ್ ಜೀ ಟಾಟಾ ಅವರು ತಮ್ಮ ಲೋಕೋಪಕಾರಿ ದೃಷ್ಟಿಯ ಮೂಲಕ ಅಸಂಖ್ಯಾತ ಜನ ಜೀವನದ ಮೇಲೆ ಇಂದಿಗೂ ನಿರಂತರ ಪ್ರಭಾವ ಬೀರಿದ್ದಾರೆ. ಅವರ ಗಮನಾರ್ಹ ಕೊಡುಗೆಗಳು ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಭಾರತದಾದ್ಯಂತ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಿದ ಸಂಸ್ಥೆಗಳನ್ನು ಅವರು ಸ್ಥಾಪಿಸಿದ್ದಾರೆ.

ಟಾಟಾ ಅವರ ಉದಾರ/ಉದಾತ್ತ ಪ್ರಯಾಣವು 1868 ರಲ್ಲಿ ಅವರು ಟಾಟಾ ಗ್ರೂಪ್ ಅನ್ನು ಸ್ಥಾಪಿಸಿದಾಗ ಪ್ರಾರಂಭವಾಯಿತು. ಇದು ಭಾರತದ ಅತಿದೊಡ್ಡ ಮತ್ತು ಅತ್ಯಂತ ಗೌರವಾನ್ವಿತ ಸಂಘಟಿತ ಸಂಸ್ಥೆಯಾಗಿ ವಿಕಸನಗೊಂಡಿತು. ಈ ಸಮೂಹವು ಗಮನಾರ್ಹ ಜಾಗತಿಕ ಉಪಸ್ಥಿತಿಯನ್ನು ಹೊಂದಿದೆ.

ಕುಟುಂಬ ಸಂಪ್ರದಾಯದಂತೆ ಪರೋಪಕಾರ ಗುಜರಾತಿನ ಬಡ ಝೋರಾಸ್ಟ್ರಿಯನ್ ಪಾರ್ಸಿ ಕುಟುಂಬದಲ್ಲಿ (Zoroastrian Persian -Parsi) ಜನಿಸಿದ ಜಮ್ಷೆಡ್ ಜೀ ಅವರು ತಮ್ಮ ಕುಟುಂಬದಲ್ಲಿ ಲೋಕೋಪಕಾರ ಮತ್ತು ಸಾಮಾಜಿಕ ಜವಾಬ್ದಾರಿಯ ಸಂಸ್ಕೃತಿಯನ್ನು ಹುಟ್ಟುಹಾಕಿದರು. ಅವರ ಪುತ್ರರಾದ ದೊರಾಬ್ಜಿ ಟಾಟಾ ಮತ್ತು ರತನ್​​ ಜೀ ಟಾಟಾ ಅವರು ಈ ಪರಂಪರೆಯನ್ನು ಮುಂದುವರೆಸಿದರು, ಕೈಗಾರಿಕಾ ಪ್ರಗತಿಗೆ ಮಾತ್ರವಲ್ಲದೆ ಪ್ರಮುಖ ಸಾಮಾಜಿಕ ಯೋಜನೆಗಳಿಗೆ ಅಪಾರ ಕೊಡುಗೆ ನೀಡಿದರು. ಟಾಟಾ ಕುಟುಂಬವು ಉದಾರ/ಉದಾತ್ತ ದತ್ತಿ ಯೋಜನೆಗಳಿಗಾಗಿಯೇ ಮೀಸಲಾಗಿದೆ ಎಂಬಂತೆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ.

ಇದನ್ನೂ ಓದಿ: Ratan Tata death – ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ, ಪದ್ಮವಿಭೂಷಣ ರತನ್ ಟಾಟಾ ನಿಧನ

ಈ ಕ್ಷೇತ್ರಗಳಲ್ಲಿ ಜಮ್ಷೆಡ್ ಜೀ ಅವರ ಆಳವಾದ ಪ್ರಭಾವವು ಕುಟುಂಬದಲ್ಲಷ್ಟೇ ಅಲ್ಲದೆ ಇನ್ನೂ ಅಸಂಖ್ಯಾತ ವ್ಯಕ್ತಿಗಳೂ ದಾನ ಧರ್ಮದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದೆ. ಸಮಾಜದ ಉನ್ನತಿಗಾಗಿ ಸಂಪತ್ತನ್ನು ಬಳಸಿಕೊಳ್ಳುವ ಅವರ ದೂರದೃಷ್ಟಿಯ ಉದಾತ್ತ ಯೋಚನೆಯು ಭವಿಷ್ಯದ ಪೀಳಿಗೆಗಳ ಮೇಲೆ ನಿರಂತರ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಲ್ಲಿ ಟಾಟಾ ಗ್ರೂಪ್‌ನ ಖ್ಯಾತಿಯು ವ್ಯಾಪಾರದ ಯಶಸ್ಸನ್ನು ಸಾಮಾಜಿಕ ಯೋಗಕ್ಷೇಮದ ಬದ್ಧತೆಯೊಂದಿಗೆ ವಿಲೀನಗೊಳಿಸುವ ಪ್ರಸ್ತುತತೆಯನ್ನು ಒತ್ತಿಹೇಳುತ್ತದೆ.

ಸಂಪ್ರದಾಯವನ್ನು ಮುಂದುವರಿಸುವುದು ಸಂಶೋಧನಾ ಕೇಂದ್ರಗಳಿಗೆ ಹಣಕಾಸು ನೆರವು ಒದಗಿಸುವುದರಿಂದ ಹಿಡಿದು ವೈದ್ಯಕೀಯ ಸೌಲಭ್ಯಗಳನ್ನು ಸ್ಥಾಪಿಸುವವರೆಗೆ, ಟಾಟಾದ ಲೋಕೋಪಕಾರಿ ಯೋಜನೆಗಳು ಅನೇಕರ ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸಿದೆ. ಸಮಾಜದ ಒಳಿತಿಗಾಗಿ ಸಂಪತ್ತನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಅವರ ಆಳವಾದ ನಂಬಿಕೆಯು ಟಾಟಾ ಗ್ರೂಪ್‌ನ ಅಡಿಪಾಯವಾಗಿದೆ. ಇದರಿಂದಾಗಿ ಸಮಾಜ ಕಲ್ಯಾಣ ಯೋಜನೆಗಳಿಗೆ ಆದ್ಯತೆ ನೀಡುವುದನ್ನು ಮುಂದುವರೆಸಿದೆ.

ಜಮ್ಷೆಡ್ ಜೀ ಟಾಟಾ ಅವರ ಲೋಕೋಪಕಾರಿ ಕೊಡುಗೆಗಳು ಸಾಟಿಯಿಲ್ಲ. ಆದರೆ ಹಾಗಂತ ಇತರೆ ಭಾರತೀಯ ಬಿಲಿಯನೇರ್‌ಗಳು ದತ್ತಿ ನೀಡುವಲ್ಲಿ ಎತ್ತಿದ ಕೈ ಸಾಧಿಸಿದ್ದಾರೆ. ವಿಪ್ರೋ ಸಂಸ್ಥಾಪಕರಾದ ಅಜೀಂ ಪ್ರೇಮ್‌ಜಿ ಅವರು ಸರಿಸುಮಾರು US $ 22 ಶತಕೋಟಿ (ಸುಮಾರು ₹ 1.76 ಲಕ್ಷ ಕೋಟಿ) ದೇಣಿಗೆ ನೀಡಿದ್ದಾರೆ.

ಅದು ಅವರನ್ನು ವಿಶ್ವದ ಅಗ್ರ ಲೋಕೋಪಕಾರಿಗಳಲ್ಲಿ ಒಬ್ಬರನ್ನಾಗಿ ಮಾಡಿದ್ದಾರೆ. ಆದಾಗ್ಯೂ, ಜಮ್ಷೆಡ್ ಜೀ ಟಾಟಾ ಅವರ ಜೀವಮಾನದ ಕೊಡುಗೆಗಳ ಅಪಾರ ಪ್ರಮಾಣವನ್ನು ಸರಿದೂಗಿಸಲು ಬೇರೆ ಯಾವುದೇ ಉದ್ಯಮಿಯೂ ಅವರ ಹತ್ತಿರಕ್ಕೆ ಬರುವುದಿಲ್ಲ. ಭಾರತದಲ್ಲಷ್ಟೇ ಅಲ್ಲ ಜಾಗತಿಕವಾಗಿಯೂ ಲೋಕೋಪಕಾರದ ದಾರಿದೀಪವಾಗಿ ಅವರ ಸ್ಥಾನವನ್ನು ಭದ್ರಪಡಿಸುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Sat, 12 October 24

ಪಾರ್ವತಿ ಸಿದ್ದರಾಮಯ್ಯ ಕಾರಲ್ಲಿ ಕುಳಿತೇ ಚಾಮುಂಡೇಶ್ವರಿಯ ದರ್ಶನ ಪಡೆದರು
ಪಾರ್ವತಿ ಸಿದ್ದರಾಮಯ್ಯ ಕಾರಲ್ಲಿ ಕುಳಿತೇ ಚಾಮುಂಡೇಶ್ವರಿಯ ದರ್ಶನ ಪಡೆದರು
ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ
ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ
ಹತ್ತನೇ ಚಾಮರಾಜ್ ಒಡೆಯರ್ ಕಾಲದಿಂದ ಅಂಬಾರಿ ಇತಿಹಾಸ ಆರಂಭ: ಡಾ ಅಯ್ಯಂಗಾರ್
ಹತ್ತನೇ ಚಾಮರಾಜ್ ಒಡೆಯರ್ ಕಾಲದಿಂದ ಅಂಬಾರಿ ಇತಿಹಾಸ ಆರಂಭ: ಡಾ ಅಯ್ಯಂಗಾರ್
ನಿಶ್ಚಲವಾಗಿ ನಿಂತಿದ್ದ ಗೂಡ್ಸ್ ಟ್ರೈನಿಗೆ ಢಿಕ್ಕಿ, ಹಳಿಬಿಟ್ಟ ಆರು ಬೋಗಿಗಳು
ನಿಶ್ಚಲವಾಗಿ ನಿಂತಿದ್ದ ಗೂಡ್ಸ್ ಟ್ರೈನಿಗೆ ಢಿಕ್ಕಿ, ಹಳಿಬಿಟ್ಟ ಆರು ಬೋಗಿಗಳು
ಮೈಸೂರು ದಸರಾ 2024: ಜಂಬೂಸವಾರಿಗೆ ಸಿದ್ದತೆಯನ್ನು ಲೈವ್ ಆಗಿ ನೋಡಿ​
ಮೈಸೂರು ದಸರಾ 2024: ಜಂಬೂಸವಾರಿಗೆ ಸಿದ್ದತೆಯನ್ನು ಲೈವ್ ಆಗಿ ನೋಡಿ​
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್
ವಿಜಯದಶಮಿಯ ದಿನವಾದ ಇಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ವಿಜಯದಶಮಿಯ ದಿನವಾದ ಇಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
Daily Devotional: ವಿಜಯದಶಮಿ ಆಚರಣೆ ವಿಧಾನ ಹಾಗೂ ಮಹತ್ವ ತಿಳಿಯಿರಿ
Daily Devotional: ವಿಜಯದಶಮಿ ಆಚರಣೆ ವಿಧಾನ ಹಾಗೂ ಮಹತ್ವ ತಿಳಿಯಿರಿ
ಮೈಸೂರು-ದರ್ಭಾಂಗ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ: ಅಪಘಾತದ ಭಯಾನಕ ದೃಶ್ಯಗಳು
ಮೈಸೂರು-ದರ್ಭಾಂಗ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ: ಅಪಘಾತದ ಭಯಾನಕ ದೃಶ್ಯಗಳು
ಜೈಪುರದಲ್ಲಿ ಹಿಟ್ ಆ್ಯಂಡ್ ರನ್; ಮೂವರ ಸಾವಿನ ವಿಡಿಯೋ ಸಿಸಿಟಿವಿಯಲ್ಲಿ ಸೆರೆ
ಜೈಪುರದಲ್ಲಿ ಹಿಟ್ ಆ್ಯಂಡ್ ರನ್; ಮೂವರ ಸಾವಿನ ವಿಡಿಯೋ ಸಿಸಿಟಿವಿಯಲ್ಲಿ ಸೆರೆ