Tv9 Kannada Digital Live: ತಾಲಿಬಾನಿಗಳ ಮಾತೆಂದರೆ ಭೂತದ ಬಾಯಲ್ಲಿ ಭಗವದ್ಗೀತೆ; ಅವರ ಕೈಸಿಕ್ಕ ಹತ್ಯಾರದಿಂದ ಮಾನವ ಕುಲದ ಸರ್ವನಾಶ

| Updated By: guruganesh bhat

Updated on: Aug 17, 2021 | 7:30 PM

Taliban: ಸ್ತ್ರೀಯರಿಗೆ ದೊರೆಯುವ ಎಲ್ಲ ಸೌಲಭ್ಯ ಮುಂದುವರೆಸುತ್ತೇವೆ ಎಂದರೂ ತಾಲಿಬಾನಿಗಳು ಇಂದು ನಡೆದುಕೊಂಡ ರೀತಿಯೇ ನಮಗೆ ಅವರು ಮಾತು ಉಳಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಈಗಲೇ ಗೋಡೆಯ ಮೇಲಿನ ಸ್ತ್ರೀಯರ ಚಿತ್ರಗಳನ್ನು ಅಳಿಸಿಹಾಕಿದ್ದಾರೆ ಎಂದು ನಿವೃತ್ತ ಸೇನಾಧಿಕಾರಿ ಕರ್ನಲ್ ಭಂಡಾರಿ ಎಚ್ಚರಿಕೆಯ ಮಾತನಾಡಿದರು. 

Tv9 Kannada Digital Live: ತಾಲಿಬಾನಿಗಳ ಮಾತೆಂದರೆ ಭೂತದ ಬಾಯಲ್ಲಿ ಭಗವದ್ಗೀತೆ; ಅವರ ಕೈಸಿಕ್ಕ ಹತ್ಯಾರದಿಂದ ಮಾನವ ಕುಲದ ಸರ್ವನಾಶ
ತಾಲಿಬಾನಿಗಳು
Follow us on

ಸದ್ಯ ಜಾಗತಿಕ ಮಟ್ಟದಲ್ಲಿ ಅತ್ಯಂತ ತೀವ್ರ ಚರ್ಚೆಗೆ ಮೂಲ ಕಾರಣ ಅಫ್ಘಾನಿಸ್ತಾನ. ತಾಲಿಬಾನ್ ಎಂಬ ಸಂಘಟನೆ ಆಡಲಿತಾರೂಢ ಚುನಾಯಿತ ಸರ್ಕಾರವನ್ನು ಕಿತ್ತೆಸೆದು ತಮ್ಮ ಆಡಳಿತವನ್ನು ಅಫ್ಘಾನಿಸ್ತಾನದಲ್ಲಿ ಸ್ಥಾಪಿಸಿದೆ. ಈ ಕುರಿತು ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಚರ್ಚೆಯಲ್ಲಿ ನಿವೃತ್ತ ಸೇನಾಧಿಕಾರಿ ಕರ್ನಲ್‌ ಭಂಡಾರಿ ಮತ್ತು ನಿವೃತ್ತ ಸೇನಾಧಿಕಾರಿ ಏರ್‌ ಮಾರ್ಷಲ್‌ ಚೆಂಗಪ್ಪ ಭಾಗವಹಿಸಿದ್ದರು. ನಿರೂಪಕ ಚಂದ್ರಮೋಹನ್ ನಡೆಸಿಕೊಟ್ಟ ಈ ಚರ್ಚೆಯಲ್ಲಿ ಹಿರಿಯ ಪತ್ರಕರ್ತ ಸುಧೀಂದ್ರ ಕುಲಕರ್ಣಿ ಸಹ ಭಾಗವಹಿಸಿದ್ದರು. ಸುಧೀಂದ್ರ ಕುಲಕರ್ಣಿ ಅವರ ಚರ್ಚೆಯ ಸಾರವನ್ನು ಇಲ್ಲಿ ಓದಬಹುದು:  TV9 Kannada Digital Live: ಅಮೆರಿಕವೆಂಬ ವಿದೇಶಿ ಶಕ್ತಿಯನ್ನು ಓಡಿಸಿದ ತಾಲಿಬಾನಿಗಳದ್ದು ನಿಜವಾದ ದೇಶಭಕ್ತಿ; ಸುಧೀಂದ್ರ ಕುಲಕರ್ಣಿ

ತಮ್ಮ ದೇಶದ ನೆಲದಿಂದ ಅಮೆರಿಕದ ಸೇನೆಯನ್ನು ಓಡಿಸಿದ ತಾಲಿಬಾನಿಗಳು ದೇಶಭಕ್ತರು ಎಂದು ವ್ಯಾಖ್ಯಾನಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಜನರೇ ಚುನಾಯಿಸಿದ ಸರ್ಕಾರವನ್ನು ತಾಲಿಬಾನಿ ಉಗ್ರರು ನಿರ್ನಾಮ ಮಾಡಿದರು. ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯ ನಡೆಸುವ ಇವರ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಬಂದಹಾಗೆ. ಎಷ್ಟೇ ಉದಾರವಾದಿ ಆಡಳಿತ ನಡೆಸುತ್ತೇವೆ ಎಂದು ತಾಲಿಬಾನಿಗಳು ವಾದಿಸಿದರೂ ಅದು ಸಾಧ್ಯವಿಲ್ಲದ ಮಾತು. ತಾಲಿಬಾನಿಗಳು ಅಫ್ಘನ್ ದೇಶಭಕ್ತರು ಎಂದಾದಲ್ಲಿ ಅಲ್ಲಿಯ ಜನರಿಗೆ ಏಕೆ ಅವರ ಮೇಲೆ ನಂಬಿಕೆಯಿಲ್ಲ ಎಂದು ಕರ್ನಲ್ ಭಂಡಾರಿ ಪ್ರಶ್ನಿಸಿದರು.

ನಿವೃತ್ತ ಸೇನಾಧಿಕಾರಿ ಏರ್‌ ಮಾರ್ಷಲ್‌ ಚೆಂಗಪ್ಪ ಮಾತನಾಡುತ್ತಾ, ‘ಅಫ್ಘನ್ನಲ್ಲಿ ನಡೆದ ವಿದ್ಯಮಾನವನ್ನು ನಾವು ಒಪ್ಪಿಕೊಳ್ಳುವುದು ಅಥವಾ ಬಿಡುವುದು ವಿಷಯವಲ್ಲ. ಆದರೆ ಅಮೆರಿಕ 20 ವರ್ಷ ಅಲ್ಲಿಯ ಸೇನೆಗೆ ಎಂತಹ ಮತ್ತು ಯಾವ ತರಬೇತಿ ನೀಡಿದೆ ಎಂಬುದು ದೊಡ್ಡ ಪ್ರಶ್ನೆ. ಜತೆಗೆ ಕಾಶ್ಮೀರದ ಭದ್ರತೆಯೇ ಇನ್ನುಮೇಲಿನ ಸಮಸ್ಯೆ. ಷರಿಯಾ ಕಾನೂನನ್ನು ಸಡಿಲಿಸಿ ಉದಾರವಾದಿ ಆಡಳಿತ ಕೊಡುತ್ತೇವೆಂದು ಎಷ್ಟೇ ಭರವಸೆ ನೀಡಿದರೂ ಅದನ್ನು ನಂಬಲು ಸಾಧ್ಯವಿಲ್ಲ. ಅಮೆರಿಕ ಸೇನಾಪಡೆ ಬಿಟ್ಟುಹೋದ ಹತ್ಯಾರಗಳು ಮಾನವಕುಲದ ಸರ್ವನಾಶಕ್ಕೆ ಕಾರಣವಾಗಬಹುದು, ಅದರಲ್ಲೂ ಭಾರತಕ್ಕೆ ಅಪಾಯದ ಸಾಧ್ಯತೆ ಅತಿ ಹೆಚ್ಚು ಎಂದು ಅವರು ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ನಾವು ಸ್ತ್ರೀಯರಿಗೆ ದೊರೆಯುವ ಎಲ್ಲ ಸೌಲಭ್ಯ ಮುಂದುವರೆಸುತ್ತೇವೆ ಎಂದರೂ ತಾಲಿಬಾನಿಗಳು ಇಂದು ನಡೆದುಕೊಂಡ ರೀತಿಯೇ ನಮಗೆ ಅವರು ಮಾತು ಉಳಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಈಗಲೇ ಗೋಡೆಯ ಮೇಲಿನ ಸ್ತ್ರೀಯರ ಚಿತ್ರಗಳನ್ನು ಅಳಿಸಿಹಾಕಿದ್ದಾರೆ ಎಂದು ನಿವೃತ್ತ ಸೇನಾಧಿಕಾರಿ ಕರ್ನಲ್ ಭಂಡಾರಿ ಎಚ್ಚರಿಕೆಯ ಮಾತನಾಡಿದರು.

ಇದನ್ನೂ ಓದಿ:  

ಮರಳಿ ತಾಯ್ನಾಡಿಗೆ ಬರಬೇಡ, ಭಾರತದಲ್ಲೇ ಉಳಿದುಬಿಡು ಎನ್ನುತ್ತಿದ್ದಾರೆ ಪೋಷಕರು; ಮೈಸೂರಿನಲ್ಲಿರುವ ಅಪ್ಘನ್ ವಿದ್ಯಾರ್ಥಿಗಳ ಅಳಲು

Taliban and Kashmir: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚುವ ಆತಂಕ

(TV9 Kannada Digital Live special Afghanistan Crisis any nation cannot trust taliban)

Published On - 7:29 pm, Tue, 17 August 21