Realme C53: 108MP ಕ್ಯಾಮೆರಾದ ಸ್ಮಾರ್ಟ್​ಫೋನ್ ಬಿಡುಗಡೆಗೆ ಕೇವಲ ಒಂದೇ ದಿನ ಬಾಕಿ: ನಾಳೆ ರಿಯಲ್ ಮಿ C53 ರಿಲೀಸ್

|

Updated on: Jul 18, 2023 | 6:55 AM

ರಿಯಲ್ ಮಿ ಸಿ53 (Realme C53) ಮೊಬೈಲ್ ಬಿಡುಗಡೆಗೆ ಕೇವಲ ಒಂದೇ ದಿನ ಇರುವಾಗ ಇದರ ಡಿಸೈನ್, ಫೀಚರ್ಸ್ ಕುರಿತ ಕೆಲ ಮಾಹಿತಿ ಸೋರಿಕೆ ಆಗಿದೆ.

1 / 8
ರಿಯಲ್ ಮಿ ಕಂಪನಿ ಒಂದರ ಹಿಂದೆ ಒಂದರಂತೆ ಆಕರ್ಷಕ ಕ್ಯಾಮೆರಾ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೆ ಬರೋಬ್ಬರಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ರಿಯಲ್ ಮಿ 11 ಪ್ರೊ+ ಫೋನನ್ನು ಬಿಡುಗಡೆ ಮಾಡಿತ್ತು. ಇದು ಮಾರುಕಟ್ಟೆಯಲ್ಲಿ ಈಗಲೂ ಟ್ರೆಂಡಿಂಗ್​ನಲ್ಲಿದ್ದು ಭರ್ಜರಿ ಸೇಲ್ ಕಾಣುತ್ತಿದೆ.

2 / 8
ಇದೀಗ ಆಕರ್ಷಕ ಕ್ಯಾಮೆರಾ ಇರುವ ಮತ್ತೊಂದು ಮೊಬೈಲ್ ಲಾಂಚ್ ಮಾಡಲು ಮುಂದಾಗಿದೆ. ಭಾರತದಲ್ಲಿ ಜುಲೈ 19 ಕ್ಕೆ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ರಿಯಲ್ ಮಿ ಸಿ53 (Realme C53) ಮೊಬೈಲ್ ಅನಾವರಣಗೊಳ್ಳಲಿದೆ.

3 / 8
ಈ ಫೋನ್ ಬಿಡುಗಡೆಗೆ ಕೇವಲ ಒಂದೇ ದಿನ ಇರುವಾಗ ಇದರ ಡಿಸೈನ್, ಫೀಚರ್ಸ್ ಕುರಿತ ಕೆಲ ಮಾಹಿತಿ ಸೋರಿಕೆ ಆಗಿದೆ.

4 / 8
ರಿಯಲ್ ಮಿ C53 ಸ್ಮಾರ್ಟ್​ಫೋನ್ ನೋಡಲು ಥೇಟ್ ರಿಯಲ್ ಮಿ 9i ಫೋನಿನ ರೀತಿಯಲ್ಲೇ ಇದೆ. ಇದು 18W ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯನ್ನು ಒಳಗೊಂಡಿದೆ. USB-C ಚಾರ್ಜಿಂಗ್ ಪೋರ್ಟ್ ಜೊತೆಗೆ, ಆಡಿಯೋ ಫೋನ್ ಜಾಕ್ ಅನ್ನು ಒಳಗೊಂಡಿದೆ.

5 / 8
ಈ ಫೋನಿನ ಬಲಭಾಗದಲ್ಲಿ ಪವರ್ ಬಟನ್ ಜೊತೆಗೆ ವಾಲ್ಯೂಮ್ ಬಟನ್‌ಗಳನ್ನು ನೀಡಲಾಗಿದೆ. ಇದು ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಈ ಫೋನ್ 5G ಬೆಂಬಲ ಪಡೆದುಕೊಂಡಿದೆಯೆ ಎಂಬುದು ಸ್ಪಷ್ಟವಾಗಿಲ್ಲ.

6 / 8
ರಿಯಲ್ ಮಿ C53 ಸ್ಮಾರ್ಟ್​ಫೋನ್​ನ ಬೆಲೆ ಬಹಿರಂಗವಾಗಿಲ್ಲ. ಆದರೆ, ರಿಯಲ್ ಮಿ C-ಸರಣಿಯ ಹಿಂದಿನ ಫೋನ್ ಲಾಂಚ್‌ಗಳ ಆಧಾರದ ಮೇಲೆ, ರಿಯಲ್ ಮಿ C35 ಬೆಲೆ ಸುಮಾರು 12,000 ರೂಪಾಯಿ ಎಂದು ನಾವು ನಿರೀಕ್ಷಿಸಬಹುದು.

7 / 8
ಇನ್ನು ರಿಯಲ್‌ ಮಿ C55 ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್‌ ಹೆಚ್‌ಡಿ + ಎಲ್‌ಡಿಸಿ ಡಿಸ್‌ಪ್ಲೇ ಹೊಂದಿದೆ. ಮೀಡಿಯಾಟೆಕ್ ಹಿಲಿಯೋ G88 ಪ್ರೊಸೆಸರ್‌ ಅಳವಡಿಸಲಾಗಿದ್ದು, 64 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಆಯ್ಕೆ ನೀಡಲಾಗಿದೆ. ಹಾಗೆಯೇ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್‌ ಸೆನ್ಸರ್‌ ಇದೆ.

8 / 8
ರಿಯಲ್‌ ಮಿ C55 ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. 29 ನಿಮಿಷಗಳಲ್ಲಿ ಶೇ. 50 ರಷ್ಟು ಚಾರ್ಜ್ ಆಗುತ್ತದೆ.