ಕಾಫಿನಾಡಿಗೆ ಆರೇ ತಿಂಗಳಿಗೆ ಬಂದ 30 ಲಕ್ಷ ಪ್ರವಾಸಿಗರು; ಜೂನ್ ಒಂದೇ ತಿಂಗಳಿಗೆ ಲಗ್ಗೆಯಿಟ್ಟ ಟೂರಿಸ್ಟ್​ಗಳು ಎಷ್ಟು ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 22, 2023 | 7:34 AM

ಕಾಫಿನಾಡು ಚಿಕ್ಕಮಗಳೂರೆಂದರೆ ನಿಸರ್ಗ ಮಾತೆಯೇ ತವರು. ವರ್ಷಪೂರ್ತಿ ಹಚ್ಚಹಸಿರಿನಿಂದ ಕಂಗೊಳಿಸುವ ತುಂಬುಮತ್ತೈದೆ. ಜಗನ್ಮಾತೆ ಅನ್ನಪೂರ್ಣೇಶ್ವರಿ-ಶಾರದಾಂಭೆಯ ನೆಲಬೀಡು. ಕಾಫಿನಾಡು ಕೇವಲ ಜಿಲ್ಲೆಯಲ್ಲ. ಧಾರ್ಮಿಕತೆ ಜೊತೆ ಪ್ರವಾಸಿಗರಿಗೆ ಕೇಳಿದ್ದೆಲ್ಲವನ್ನೂ ನೀಡೋ ಅಕ್ಷಯಪಾತ್ರೆ. ಪ್ರವಾಸಿಗರಿಗಂತೂ ನಿಂತಲ್ಲೆ ಮೈಮರೆಸೋ ಹಾಟ್ ಸ್ಪಾಟ್. ಅದರಂತೆ ಪ್ರತಿ ವರ್ಷ ಕಾಫಿನಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತೆ. ಈ ವರ್ಷ ಆರೇ ತಿಂಗಳಿಗೆ ಬಂದ ಟೂರಿಸ್ಟ್ ಎಷ್ಟು ಗೊತ್ತಾ? ಇಲ್ಲಿದೆ ನೋಡಿ.

1 / 8
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕಲ್ಲತ್ತಿಗರಿ, ದತ್ತಪೀಠ, ಮಾಣಿಕ್ಯಧಾರ, ಶಿಶಿಲ ಗುಡ್ಡ, ದೇವರಮನೆಗುಡ್ಡ, ಶೃಂಗೇರಿ, ಹೊರನಾಡು ಹೇಳ್ತಾ ಹೋದರೆ, ಕಾಫಿನಾಡ ಪ್ರವಾಸಿ ತಾಣಗಳ ಸಂಖ್ಯೆ ಒಂದೋ ಎರಡೋ. ಧಾರ್ಮಿಕವಾಗಿ ಬಂದರಂತೂ ಒಬ್ಬಳು ಅನ್ನ ನೀಡೋ ಅನ್ನದಾತೆ. ಮತ್ತೊಬ್ಬಳು ವಿಧ್ಯೆ ನೀಡೋ ವಿದ್ಯಾದೇವತೆ.

2 / 8
ಕಾಫಿನಾಡನ್ನ ರಾಜ್ಯದ ಅತೀ ದೊಡ್ಡ ಜಿಲ್ಲೆ ಅಂತಾನೂ ಕರೆಯಲಾಗುತ್ತೆ. ಎರಡು ತಾಲೂಕುಗಳನ್ನ ಹೊರತು ಪಡಿಸಿದ್ರೆ, ಉಳಿದೆಲ್ಲಾ ತಾಲೂಕುಗಳು ಪ್ರವಾಸಿ ಹಾಗೂ ಧಾರ್ಮಿಕ ತಾಣಗಳೇ. ಕಾಫಿನಾಡ ಭೌಗೋಳಿಕತೆಯಲ್ಲಿ ಅರ್ಧಕರ್ಧ ಅರಣ್ಯವೇ ಇದ್ದು, ಅಸಂಖ್ಯಾತ ವನ್ಯ ಮೃಗಗಳ ನಾಡು ಕೂಡ.

3 / 8
ಇಲ್ಲಿನ ಪ್ರಕೃತಿ ಸೌಂದರ್ಯವನ್ನ ಸವಿಯೋಕೆಂದು ವರ್ಷಪೂರ್ತಿ ಪ್ರವಾಸಿಗರು ಹರಿದು ಬರುತ್ತಾರೆ. ಎರಡು ವರ್ಷಗಳಿಗೆ ಹೋಲಿಸಿದ್ರೆ, ಈ ವರ್ಷ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜೂನ್ ಒಂದೇ ತಿಂಗಳಿಗೆ ಜಿಲ್ಲೆಗೆ 7 ಲಕ್ಷ ಟೂರಿಸ್ಟ್​ಗಳು ಭೇಟಿ ನೀಡಿದ್ದಾರೆ.

4 / 8
 2023ರ ಜನವರಿಯಿಂದ ಜೂನ್ 30ರವರೆಗೆ ಸುಮಾರು 30 ಲಕ್ಷದಷ್ಟು ಪ್ರವಾಸಿಗರು ಭೇಟಿ ಜಿಲ್ಲೆಗೆ ನೀಡಿದ್ದಾರೆ. ಅದರಲ್ಲಿ ಗ್ಯಾರಂಟಿ ಸರ್ಕಾರದ ಶಕ್ತಿಯ ಯೋಜನೆಯ ಪಾಲು ಕೂಡ ಒಂದಷ್ಟು ಇದ್ದೇ ಇದೆ.

5 / 8
ಹೌದು, ಕಾಫಿನಾಡು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಇಷ್ಟು ದೊಡ್ಡ ಮಟ್ಟದ ಪ್ರವಾಸಿಗರು ಬರಲು ಗ್ಯಾರಂಟಿ ಸರ್ಕಾರದ ಶಕ್ತಿ ಯೋಜನೆ ಪಾಲು ಇದೆ. ಯಾಕಂದ್ರೆ, ಈ ವರ್ಷ ಜನವರಿಯಿಂದ ಜುಲೈವರೆಗೆ ಸುಮಾರು 30 ಲಕ್ಷದಷ್ಟು ಪ್ರವಾಸಿಗರ ಜಿಲ್ಲೆಗೆ ಭೇಟಿ ನೀಡಿದ್ದಾರೆ.

6 / 8
ಕಳೆದ ವರ್ಷ ಇಡೀ ವರ್ಷಕ್ಕೆ 50 ಲಕ್ಷವಿತ್ತು, 2021ರಲ್ಲಿ ಇನ್ನೂ ಕಡಿಮೆ ಇತ್ತು. ಈ ಬಾರಿ ಜನವರಿಯಿಂದ ಆರೇ ತಿಂಗಳಿಗೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿದೆ. ಆರು ತಿಂಗಳಲ್ಲಿ 30 ಲಕ್ಷ. ಜೂನ್ ಒಂದೇ ತಿಂಗಳಿಗೆ 7 ಲಕ್ಷ. ಇನ್ನು ಈ ವರ್ಷದ ಕೊನೆಗೆ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕೋಟಿ ದಾಟೋದ್ರಲ್ಲಿ ಅನುಮಾನವಿಲ್ಲ.

7 / 8
ಒಟ್ಟಾರೆ, ಚಿಕ್ಕಮಗಳೂರು ಜಿಲ್ಲೆ ದಿನದಿಂದ ದಿನಕ್ಕೆ ಹೆಚ್ಚು ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಇಲ್ಲಿಯ ಪ್ರವಾಸಿ ತಾಣಗಳು ಹಾಗೂ ಇಬ್ಬರು ಅಧಿದೇವತೆಯರನ್ನ ನಂಬಿಕೊಂಡೇ ಬದುಕುತ್ತಿರೋ ಜನಸಾಮಾನ್ಯರ ಬಾಳು ಕೂಡ ಪ್ರವಾಸಿಗರು ಹೆಚ್ಚಾದಂತೆ ಅವರ ಆರ್ಥಿಕ ಗುಣಮಟ್ಟ ಕೂಡ ಹೆಚ್ಚಿದೆ.

8 / 8
ಸರ್ಕಾರ ಕೂಡಲೇ ಇತ್ತಗಮನ ಹರಿಸಿ ಪ್ರವಾಸಿಗರಿಗೆ ಬೇಕಾದ ಮೂಲಭೂತ ಸೌಲಭ್ಯ ಕಲ್ಪಿಸಿದ್ರೆ, ಮುಂದಿನ ದಿನಗಳಲ್ಲಿ ಚಿಕ್ಕಮಗಳೂರು ತಾನಾಗೇ ಪ್ರವಾಸಿ ಜಿಲ್ಲೆಯಾಗೋದ್ರಲ್ಲಿ ಎರಡು ಮಾತಿಲ್ಲ.