- Kannada News Photo gallery A 31 foot meditating Shiva statue was dedicated on the day of Shivratri in Chitradurga
ಚಿತ್ರದುರ್ಗದಲ್ಲಿ ಶಿವರಾತ್ರಿ ದಿನವೇ ಲೋಕಾರ್ಪಣೆಗೊಂಡ 31ಅಡಿಯ ಧ್ಯಾನಮಗ್ನ ಶಿವನ ಪ್ರತಿಮೆ; ಇಲ್ಲಿದೆ ಝಲಕ್
ನಾಡಿನೆಲ್ಲೆಡೆ ಶಿವರಾತ್ರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಅದರಂತೆ ಚಿತ್ರದುರ್ಗದಲ್ಲೂ ಕೂಡ ವಿಜೃಂಭಣೆಯಿಂದ ಶಿವರಾತ್ರಿ ಆಚರಿಸಲಾಗುತ್ತಿದ್ದು, ಈ ಹಿನ್ನಲೆ 31 ಅಡಿಯ ಧ್ಯಾನಮಗ್ನ ಶಿವನ ಪ್ರತಿಮೆಯನ್ನ ಲೋಕಾರ್ಪಣೆ ಮಾಡಿದ್ದಾರೆ.
Updated on: Mar 08, 2024 | 10:20 PM

ಇಂದು ಶಿವರಾತ್ರಿ ಎಲ್ಲೆಡೆ ಮನೆ ಮಾಡಿದ್ದು, ಶಿವನಿಗೆ ನಾನಾ ರೀತಿಯ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಹಲವೆಡೆ ವಿಶಿಷ್ಟ ರೀತಿಯಲ್ಲಿ ಶಿವರಾತ್ರಿ ಆಚರಿಸಲಾಗುತ್ತದೆ. ಅದೇ ರೀತಿ ಚಿತ್ರದುರ್ಗದಲ್ಲೂ ಕೂಡ ವಿಜೃಂಭಣೆಯಿಂದ ಶಿವರಾತ್ರಿ ಆಚರಿಸಲಾಗುತ್ತಿದೆ.

ಚಿತ್ರದುರ್ಗದಲ್ಲೂ ಕೂಡ ವಿಜೃಂಭಣೆಯಿಂದ ಶಿವರಾತ್ರಿ ಆಚರಿಸಲಾಗುತ್ತಿದ್ದು, ಈ ಹಿನ್ನಲೆ 31 ಅಡಿಯ ಧ್ಯಾನಮಗ್ನ ಶಿವನ ಪ್ರತಿಮೆಯನ್ನ ಲೋಕಾರ್ಪಣೆ ಮಾಡಿದ್ದಾರೆ.

ಚಿತ್ರದುರ್ಗದ ಮುಕ್ತಿನಾಥೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಇಲ್ಲಿ ನಿರ್ಮಾಣವಾದ ಧ್ಯಾನಮಗ್ನ ಶಿವನ ಪ್ರತಿಮೆಯನ್ನ ಶಿವರಾತ್ರಿ ದಿನವೇ ಲೋಕಾರ್ಪಣೆಗೊಳಿಸಲಾಯಿತು.

ಲೋಕಾರ್ಪಣೆಗೊಂಡ ಶಿವನಮೂರ್ತಿಯನ್ನ ನೋಡಲಿಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಇಡೀ ರಾತ್ರಿ ಶಿವನ ಜಪದಲ್ಲಿಯೇ ಮುಳುಗಿ ಪರಮಾತ್ಮನ ಕೃಫೆಗೆ ಪಾತ್ರರಾಗಲಿದ್ದಾರೆ.

ಇನ್ನು 31 ಅಡಿಯ ಧ್ಯಾನಮಗ್ನ ಶಿವನು, ದೇಗುಲಕ್ಕೆ ಕಳಶದಂಥೆ ಕಂಗೊಳಿಸುತ್ತಿದೆ. ಜೊತೆಗೆ ಶಿವನ ಶಿರದ ಮೇಲಿಂದ ಗಂಗಾಮಾತೆ ಬೀಳುತ್ತಿರುವುದು ನೆರೆದಿದ್ದ ಭಕ್ತರನ್ನು ಮಂತ್ರಮುಗ್ದಗೊಳಿಸುತ್ತದೆ.

ಒಟ್ಟಾರೆ ಒಂದೊಂದು ಊರಿನಲ್ಲಿ ಒಂದೊಂದು ರೀತಿ ಮಹಾಶಿವರಾತ್ರಿ ಹಬ್ಬವನ್ನ ಆಚರಿಸಲಾಗುತ್ತದೆ. ಅದೇ ರೀತಿ ಚಿತ್ರದುರ್ಗದ ಮುಕ್ತಿನಾಥೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡು ಸಾವಿರಾರು ಭಕ್ತರು ಶಿವನ ಕೃಫೆಗೆ ಪಾತ್ರರಾದರು.

Maha Shivratri: Shanti Yatra of 108 Shivlings at Malebennur in Harihar



